ಇಮ್ಮಿಡಿಯೇಟ್ ಟೇಕಾಫ್ ಅಂದ್ರೆ ಏನು ?
ತಕ್ಷಣದ ಹಾರಾಟಕ್ಕೆ ರನ್‌ವೇ ಜಂಕ್ಷನ್‌ಗಳನ್ನು ತ್ವರಿತವಾಗಿ ತೆರವುಗೊಳಿಸಿ, ಇನ್ನೊಂದು ರನ್‌ವೇ ಕಾರ್ಯಾಚರಣೆಗೆ ತಕ್ಷಣ ಅವಕಾಶ ನೀಡುತ್ತದೆ. ರನ್‌ವೇ ಬಳಿ ಸಾಲಾಗಿ ನಿಂತಿರುವ ವಿಮಾನಗಳ ದಟ್ಟಣೆಯನ್ನು ಕಡಿಮೆ ಮಾಡಲು ಈ ವಿಧಾನ ಸಹಕಾರಿ. ಮೊದಲ ವಿಮಾನವು ಶೀಘ್ರವಾಗಿ ಹೊರಟರೆ, ನಂತರದ ವಿಮಾನಗಳಿಗೆ ರನ್‌ವೇಗೆ ಟ್ಯಾಕ್ಸಿ ಮಾಡಲು ತಕ್ಷಣ ಅವಕಾಶ ಸಿಗುತ್ತದೆ, ಇದರಿಂದ ನೆಲದ ಮೇಲಿನ ಒಟ್ಟಾರೆ ದಟ್ಟಣೆ ಕಡಿಮೆಯಾಗುತ್ತದೆ.
ವಿಮಾನ ಪ್ರಯಾಣಿಕರಿಗೆ, ವಿಮಾನವು ರನ್‌ವೇ ಮೇಲೆ ನಿಂತು, ಎಂಜಿನ್‌ಗಳು ಅಬ್ಬರಿಸಿದ ನಂತರ ವೇಗ ಪಡೆದು ಹಾರಾಟ ಪ್ರಾರಂಭಿಸುವುದು ಸಾಮಾನ್ಯ ದೃಶ್ಯ. ಆದರೆ, ಕೆಲವೊಮ್ಮೆ, ವಿಮಾನವು ಟ್ಯಾಕ್ಸಿವೇಯಿಂದ ರನ್‌ವೇಗೆ ಪ್ರವೇಶಿಸುತ್ತಲೇ, ಒಂದೇ ಒಂದು ಕ್ಷಣವೂ ನಿಲ್ಲದೇ ನೇರವಾಗಿ ವೇಗವನ್ನು ಪಡೆದು ಟೇಕಾಫ್ ಆಗುವುದನ್ನು ನೋಡಬಹುದು.
ವಿಮಾನ ಸಂಚಾರ ನಿಯಂತ್ರಕರು (ಎಟಿಸಿ) ‘ಕ್ಲಿಯರ್ಡ್ ಫಾರ್ ಇಮ್ಮಿಡಿಯೇಟ್ ಟೇಕಾಫ್’ (ತಕ್ಷಣದ ಹಾರಾಟಕ್ಕೆ ಅನುಮತಿ ನೀಡಲಾಗಿದೆ) ಎಂಬ ನಿರ್ದೇಶನವನ್ನು ನೀಡಿದ ತಕ್ಷಣ ಟೇಕಾಫ್ ಆಗುತ್ತದೆ. ಇದು ಕೇವಲ ವೇಗದ ಆದೇಶವಲ್ಲ. ಇದು ವಿಮಾನ ನಿಲ್ದಾಣದ ದಕ್ಷತೆ, ಸುರಕ್ಷತೆ ಮತ್ತು ಸಾಮರ್ಥ್ಯವನ್ನು ಗರಿಷ್ಠಗೊಳಿಸುವ ಒಂದು ಪ್ರಮುಖ ನಿರ್ವಹಣಾ ತಂತ್ರ.

ಅಷ್ಟಕ್ಕೂ ತಕ್ಷಣದ ಹಾರಾಟ ಎಂದರೇನು? ವಿಮಾನವು ರನ್‌ವೇಯ ಆರಂಭದ ಸ್ಥಳ ತಲುಪಿದಾಗ, ಅಲ್ಲಿ ನಿಲ್ಲದೇ, ಚಲನೆಯಲ್ಲಿರುವಾಗಲೇ ರನ್ ವೇಯ ಮಧ್ಯರೇಖೆಯ ಮೇಲೆ ಸರಿಯಾಗಿ ನಿಲ್ಲಿಸಿ ಕೊಂಡು, ಎಂಜಿನ್‌ನ ಸಂಪೂರ್ಣ ಶಕ್ತಿಯನ್ನು ಅನ್ವಯಿಸಿ, ವಿಳಂಬವಿಲ್ಲದೇ ಹಾರಾಟವನ್ನು ಪ್ರಾರಂಭಿಸುವುದು. ಸಾಮಾನ್ಯವಾಗಿ, ಪೈಲಟ್‌ಗಳು ರನ್‌ವೇ ಪ್ರವೇಶಿಸುವ ಮೊದಲು ನಿಂತು, ಅಂತಿಮ ಚೆಕ್‌ಲಿಸ್ಟ್‌ಗಳನ್ನು ಪರಿಶೀಲಿಸುತ್ತಾರೆ,
ಇದನ್ನೂ ಓದಿ: ಎಒಜಿ ಅಂದ್ರೆ ಏನು ?
ಎಂಜಿನ್ ಥ್ರಸ್ಟ್ ಅನ್ನು ಪರೀಕ್ಷಿಸುತ್ತಾರೆ ಮತ್ತು ಹಾರಾಟಕ್ಕೆ ಸಂಪೂರ್ಣ ಸಿದ್ಧರಾಗುತ್ತಾರೆ. ಆದರೆ, ಹಠಾತ್ ಟೇಕಾಫ್ ಆದೇಶದಲ್ಲಿ, ಈ ಎಲ್ಲ ಪ್ರಕ್ರಿಯೆಗಳನ್ನು ಚಲನೆಯಲ್ಲಿರುವಾಗಲೇ ನಿರ್ವಹಿಸಿ, ಸಮಯವನ್ನು ಉಳಿಸಲಾಗುತ್ತದೆ. ಈ ನಿರ್ದಿಷ್ಟ ಕಾರ್ಯವಿಧಾನವನ್ನು ಹೆಚ್ಚಾಗಿ ವಿಶ್ವದ ಅತಿ ನಿಬಿಡ ಅಥವಾ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ.
ಪ್ರತಿ ಕೆಲವು ನಿಮಿಷಗಳಿಗೊಮ್ಮೆ ವಿಮಾನಗಳು ಟೇಕಾಫ್ ಆಗಿ, ಲ್ಯಾಂಡ್ ಆಗಬೇಕಾದ ಸಂದರ್ಭದಲ್ಲಿ, ಸಮಯದ ಪ್ರತಿಯೊಂದು ಸೆಕೆಂಡ್ ಸಹ ಅಮೂಲ್ಯವಾಗಿರುತ್ತದೆ. ತಕ್ಷಣದ ಹಾರಾಟದ ಬಳಕೆಗೆ ಇದು ಪ್ರಮುಖ ಕಾರಣ. ಒಂದು ವಿಮಾನವು ಇಳಿಯುವಿಕೆಗಾಗಿ ಅಂತಿಮ ಹಂತದಲ್ಲಿರುವಾಗ, ಅದರ ಮುಂದೆ ಹೊರಡಬೇಕಾದ ವಿಮಾನವು ರನ್‌ವೇ ಮೇಲೆ ಹೆಚ್ಚು ಸಮಯ ನಿಲ್ಲುವಂತಿಲ್ಲ. ರನ್‌ವೇಯಿಂದ ಹೊರಡುವ ವಿಮಾನವು ತಡಮಾಡಿದರೆ, ಹಿಂದೆ ಬರುತ್ತಿರುವ ವಿಮಾನವು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ.
ಇದರಿಂದಾಗಿ, ನಿಯಂತ್ರಕರು ಆಗಮಿಸುತ್ತಿರುವ ವಿಮಾನಕ್ಕೆ ‘ಗೋ-ಅರೌಂಡ್’ ಅಂದರೆ, ಇಳಿಯುವಿಕೆಯನ್ನು ರದ್ದುಗೊಳಿಸಿ, ಮತ್ತೆ ಹಾರಾಟ ಮುಂದುವರಿಸಿ, ಮತ್ತೊಂದು ಸುತ್ತು ಬಂದು ಇಳಿಯಲು ಪ್ರಯತ್ನಿಸುವಂತೆ ಆದೇಶಿಸಬೇಕಾಗುತ್ತದೆ. ಗೋ-ಅರೌಂಡ್ ಎಂದರೆ ಇಂಧನ ಮತ್ತು ಸಮಯದ ವ್ಯರ್ಥ, ಜತೆಗೆ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಅನಗತ್ಯ ಒತ್ತಡ.
ತಕ್ಷಣದ ಹಾರಾಟವು ಕೆಲವೇ ಸೆಕೆಂಡುಗಳಲ್ಲಿ ವಿಮಾನವನ್ನು ಮೇಲಕ್ಕೆ ಕಳುಹಿಸಿ, ಈ ಗೋ-ಅರೌಂಡ್ ಗಳನ್ನು ತಪ್ಪಿಸುತ್ತದೆ. ಯಾವುದೇ ವಿಮಾನ ನಿಲ್ದಾಣದಲ್ಲಿ ರನ್‌ವೇ ಸಾಮರ್ಥ್ಯವು ನಿರ್ಣಾಯಕವಾಗಿರುತ್ತದೆ. ಒಂದು ರನ್‌ವೇ ಮಾತ್ರ ಇರುವ ವಿಮಾನ ನಿಲ್ದಾಣಗಳಲ್ಲಿ, ರನ್‌ವೇ ಬಳಕೆಗಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್ ಗಳನ್ನು ಸತತವಾಗಿ ಪರ್ಯಾಯವಾಗಿ ಇಟ್ಟಿರಬೇಕಾಗುತ್ತದೆ.

ಇಲ್ಲಿ ನಿರಂತರ ಚಲನೆಯನ್ನು ಕಾಪಾಡಲು ತಕ್ಷಣದ ಹಾರಾಟ ಅತ್ಯಗತ್ಯ. ಕೆಲವು ವಿಮಾನ ನಿಲ್ದಾಣಗಳಲ್ಲಿ ರನ್‌ವೇಗಳು ಒಂದಕ್ಕೊಂದು ಛೇದಿಸುತ್ತವೆ. ಒಂದು ವಿಮಾನವು ಒಂದು ರನ್‌ವೇ ಯಿಂದ ಹಾರಾಟ ಪ್ರಾರಂಭಿಸುವಾಗ, ಮತ್ತೊಂದು ವಿಮಾನಕ್ಕೆ ಅದೇ ಸಮಯದಲ್ಲಿ ಛೇದಕ ಬಿಂದುವಿನ ಬಳಿ ಕಾಯಲು ಅವಕಾಶವಿಲ್ಲ.
ತಕ್ಷಣದ ಹಾರಾಟಕ್ಕೆ ರನ್‌ವೇ ಜಂಕ್ಷನ್‌ಗಳನ್ನು ತ್ವರಿತವಾಗಿ ತೆರವುಗೊಳಿಸಿ, ಇನ್ನೊಂದು ರನ್‌ವೇ ಕಾರ್ಯಾಚರಣೆಗೆ ತಕ್ಷಣ ಅವಕಾಶ ನೀಡುತ್ತದೆ. ರನ್‌ವೇ ಬಳಿ ಸಾಲಾಗಿ ನಿಂತಿರುವ ವಿಮಾನಗಳ ದಟ್ಟಣೆಯನ್ನು ಕಡಿಮೆ ಮಾಡಲು ಈ ವಿಧಾನ ಸಹಕಾರಿ. ಮೊದಲ ವಿಮಾನವು ಶೀಘ್ರವಾಗಿ ಹೊರಟರೆ, ನಂತರದ ವಿಮಾನಗಳಿಗೆ ರನ್‌ವೇಗೆ ಟ್ಯಾಕ್ಸಿ ಮಾಡಲು ತಕ್ಷಣ ಅವಕಾಶ ಸಿಗುತ್ತದೆ, ಇದರಿಂದ ನೆಲದ ಮೇಲಿನ ಒಟ್ಟಾರೆ ದಟ್ಟಣೆ ಕಡಿಮೆಯಾಗುತ್ತದೆ. ಹಾರಾಟಕ್ಕೆ ಮುನ್ನ ಚೆಕ್‌ಲಿಸ್ಟ್ ಗಳು ಸಂಪೂರ್ಣಗೊಂಡಿರಬೇಕು. ರೆಕ್ಕೆಗಳ -ಪ್‌ಗಳು, ಟ್ರಿಮ್ ಸೆಟ್ಟಿಂಗ್‌ಗಳು, ಹವಾಮಾನ ರೇಡಾರ್ ಮತ್ತು ವಿಮಾನ ನಿಯಂತ್ರಣಗಳ ಮುಕ್ತ ಚಲನೆಯ ಪರಿಶೀಲನೆ ಇವೆಲ್ಲವೂ ಆಗಿರಬೇಕು.