ಡಿಜಿಟಲ್‌ ಡಿಟಾಕ್ಸ್‌ ಎಂದರೇನು ಅಂತ ಸರಳವಾಗಿ ಅರಿತುಕೊಳ್ಳಬೇಕಾದರೆ ಅದನ್ನು ಅನುಭವಿಸಬೇಕು. ಮೈಮರೆತು ಒಂದು ಸ್ಥಳದಲ್ಲಿ ಇರಬಹುದು. ಆದರೆ, ನಿಮ್ಮನ್ನು ಹಾಗೆ ಮಾಡಿಸಬಲ್ಲ ಒಂದು ಸ್ಥಳಬೇಕು. ಅಂಥ ಸ್ಥಳಗಳ ಪಟ್ಟಿಯಲ್ಲಿ ಸುಂದರ ಪ್ರವಾಸಿ ತಾಣಗಳು, ಸಾಹಸ ಕ್ಷಣಗಳನ್ನು ಕಟ್ಟಿಕೊಡುವ ನದಿ, ಸಮುದ್ರ, ಬೆಟ್ಟ-ಗುಡ್ಡಗಳು, ಈಜು-ಮೋಜು ಇರುವ ತಾಣಗಳೇ ಹೆಚ್ಚಾಗಿ ಮೊದಲಿಗೆ ನೆನಪಿಗೆ ಬರುತ್ತವೆ. ಆದರೆ, ಒಂದು ವಾಸ್ತವ್ಯ ಈ ಡಿಜಿಟಲ್‌ ಡಿಟಾಕ್ಸ್‌ಗೆ ಅವಕಾಶ ಮಾತ್ರವಲ್ಲ, ಅದರ ಗ್ಯಾರಂಟಿಯನ್ನೂ ನೀಡುತ್ತಿದೆ ಎಂದರೆ ಅಚ್ಚರಿಯಾಗುತ್ತದೆ. ಅಲ್ಲವೇ? ಹೌದು, ಹೆಚ್ಚು ಯೋಚಿಸಬೇಡಿ. ಇಂಥದ್ದೇ ಒಂದು ಸ್ಥಳ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಜಿಡ್ಡಿಗೆರೆ ಹಳ್ಳಿಯಲ್ಲಿ ಇರುವ ʻಅಭೀಷ್ಟ ಅಗ್ರಿ ಫಾರ್ಮ್‌ ಸ್ಟೇʼ.

ಹಳ್ಳಿ ಹಾಡು ತಂದಾನಾನಾ

ಅಭೀಷ್ಟ ಸ್ಟೇನಲ್ಲಿನ ಒಟ್ಟು ವಾತಾವರಣವೇ ಒಂದು ಹಳ್ಳಿಯ ಫೀಲ್‌ ನೀಡುತ್ತದೆ. ನಗರದ ಎಲ್ಲಾ ಜಂಜಡಗಳನ್ನು ಮರೆತು ಒಂದು ಪಕ್ಕ ಹಳ್ಳಿ ಜೀವನವನ್ನು ನಡೆಸುತ್ತೀರಿ. ದನ-ಕರುಗಳನ್ನು ಮೇಯಿಸುತ್ತೀರಿ. ಅದರಲ್ಲೂ ಇಲ್ಲಿ ಕಾಂಕ್ರೇಜ್‌, ಹಳ್ಳಿಕಾರ್‌, ಅಮೃತ್‌ ಮಹಲ್‌, ಗಿರ್‌, ಪುಂಗನೂರ್‌, ಸಾಯಿವಾಲ್‌, ಜೆರ್ಸಿ, ಎಚ್‌ಎಫ್‌ ಹೀಗೆ ಹಲವು ಜಾತಿಯ ದನ-ಕರುಗಳಿವೆ. ಕರುಗಳೊಂದಿಗೆ ಆಟವಾಡಬಹುದು. ಎತ್ತಿನ ಬಂಡಿಯಲ್ಲಿ ಸವಾರಿಯನ್ನೂ ಮಾಡಬಹುದು. ಕೋಳಿ- ಬಾತು ಕೋಳಿಗಳಂತೂ ನಿಮ್ಮ ಮುಂದೆಯೇ ಫುಲ್‌ ಪರಿಚಿತರಂತೆ ತಿರುಗಾಡುತ್ತಿರುತ್ತವೆ. ನೀವು ಅವುಗಳಿಗೆ ಆಹಾರ ನೀಡಬಹುದು. ತೆಂಗು-ಕಂಗಿನ ತೋಟಗಳ ನಡುವೆ ಓಡಾಡಬಹುದು. ಕೃಷಿ ಜಮೀನಿಗೆ ಬಂದು ಬೇಕೆನಿಸಿದರೆ ಕೆಲಸ ಮಾಡಬಹುದು. ಇಲ್ಲವಾದರೆ ಮರದ ನೆರಳಿನಲ್ಲೇ ಕುಳಿತು ಊಟ ಮಾಡಬಹುದು. ನೀವಿಲ್ಲಿ ಸವಿಯುವ ಆಹಾರವೂ ಥೇಟ್‌ ಹಳ್ಳಿ ಶೈಲಿಯಲ್ಲೇ ಇರುತ್ತದೆ.

ವಾಸ್ತವ್ಯ ಇಲ್ಲಿ ಉದ್ಯಮಕ್ಕಲ್ಲ; ಆರೈಕೆಗೆ

New Project (35)

ಒಬ್ಬ ಪ್ರಬುದ್ಧ ಪ್ರವಾಸಿಗ ತಾನು ಪ್ರವಾಸದಲ್ಲಿ ಖರ್ಚು ಮಾಡುವ ಹಣ ಯಾರಿಗೆ ತಲುಪುತ್ತಿದೆ? ಅಲ್ಲಿನ ತಾಣಕ್ಕೆ ಅದರಿಂದ ಲಾಭವಾಗುತ್ತಿದೆಯಾ? ಹೀಗಂತ ಯೋಚಿಸುವುದು ಸಹಜ. ಅಂಥ ಪ್ರಬುದ್ಧ ಪ್ರವಾಸಿಗೆ ಈ ಅಭೀಷ್ಟ ಸ್ಟೇ ಹೇಳಿ ಮಾಡಿಸಿದ್ದು ಎನ್ನಬಹುದು. ಇಲ್ಲಿ ವಾಸ್ತವ್ಯದಿಂದ ಗಳಿಕೆ ಆಗುವ ಹಣವನ್ನು ಪ್ರಾಣಿ-ಪಕ್ಷಿಗಳ ಆಹಾರ, ಆರೈಕೆ, ತೋಟ ಮತ್ತು ಪ್ರಾಪರ್ಟಿಯ ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವುದು ಇಲ್ಲಿನ ನಿಯಮದಂತೆ ಪಾಲಿಸುತ್ತಿದ್ದಾರೆ.

ಈಜು-ಮೋಜಿಗೆ

New Project (39)

ಇಲ್ಲಿನ ಈಜುಕೊಳ ಸದಾ ಸ್ವಚ್ಛವಾಗಿರುತ್ತದೆ. ಇಲ್ಲಿಂದಲೂ ಸುತ್ತಲಿನ ಹಚ್ಚಹಸಿರು ಪರಿಸರದ ನೋಟವನ್ನು ಆನಂದಿಸಬಹುದು. ಬೆಳಗಿನ ಚಳಿಯಲ್ಲಿ ಈಜಾಡುತ್ತ ವಾತಾವರಣವನ್ನು ಆಸ್ವಾದಿಸುವುದರಲ್ಲಿ ಮಜವಿದೆ. ರಾತ್ರಿ ಹೊತ್ತಿಗೆ ಬಾನ್‌ ಫೈರ್‌ನಲ್ಲಿ ಚಳಿ ಕಾಯಿಸಬಹುದು. ಲೈಟ್‌ ಮ್ಯೂಸಿಕ್‌ ಹಾಕಿರುತ್ತಾರೆ. ಹಾಗಾಗಿ ಮ್ಯೂಸಿಕ್‌ ಆಲಿಸುತ್ತಲೇ ಫೈರ್‌ನ ಬಿಸಿಗೆ ಮೈಯೊಡ್ಡಿ ಕುಣಿದು ಎಂಜಾಯ್‌ ಮಾಡುವುದು ಮುದ ನೀಡುತ್ತದೆ.

ಆಂಬೀಷಿಯಸ್‌ ಆಂಪಿ ಥಿಯೇಟರ್‌

New Project (38)

ಹಳ್ಳಿಗಾಡಿನ ವಾತಾವರಣದಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮನಸು ಹಲವರಿಗಿರುತ್ತದೆ. ಆವರಿಗಾಗಿಯೇ ಇಲ್ಲಿ ಒಂದು ಪುಟ್ಟ ಮತ್ತು ಸುಂದರ ಹಳ್ಳಿ ಸೊಗಡಿನ ವೇದಿಕೆ ಇದೆ. ನೂರಾರು ಜನರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶವೂ ಇಲ್ಲಿದೆ. ಮದುವೆ ಫಂಕ್ಷನ್‌, ಹುಟ್ಟು ಹಬ್ಬದ ಸೆಲೆಬ್ರೇಷನ್‌, ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಂತೂ ಇದು ಉತ್ತಮ ಸ್ಥಳ ಎಂದರೆ ತಪ್ಪಾಗದು.

ಆಟಕ್ಕುಂಟು

ನೀವು ಇಲ್ಲಿ ಉಳಿಯುವ ಅಷ್ಟೂ ಸಮಯವೂ ಗಂಟೆಗೆ ಒಂದು ಆಟವಾಡಿ. ದಿನದ ಸಮಯಗಳು ಮುಗಿಯಬಹುದು. ಆದರೆ, ಆಟಗಳ ಪಟ್ಟಿ ಮುಗಿಯುವುದಿಲ್ಲ. ಇಲ್ಲಿ ಆಟಗಳ ಸಂಖ್ಯೆ ಅಷ್ಟಿದೆ. ಕ್ರಿಕೆಟ್‌, ಥ್ರೋ ಬಾಲ್‌, ಶಟಲ್‌, ಒಳಾಂಗಣ ಆಟಗಳು ಮತ್ತು ಹಳ್ಳಿಯ ಸೊಗಡಿನ ಲಗೋರಿ, ಗಿಲ್ಲಿ-ದಾಂಡು, ಹಾಪ್‌ಸ್ಕಾಚ್‌ ಹೀಗೆ ಸಾಕಷ್ಟು ಆಟಗಳಿಗೆ ಅವಕಾಶಗಳು ಇಲ್ಲಿವೆ. ಅಗತ್ಯ ಸಲಕರಣೆಗಳನ್ನು ಅಭೀಷ್ಟ ಅಗ್ರಿ ಫಾರ್ಮ್‌ ಸ್ಟೇ ನಿಂದಲೇ ಪಡೆಯಬಹುದು.

ಕೊಠಡಿ ಆಯ್ಕೆಗಳು

ಇಲ್ಲಿ ಒಟ್ಟು ನಲವತ್ತು ಕೊಠಡಿಗಳಿವೆ. ತೊಟ್ಟಿಮನೆ, ಡಬಲ್‌ ಬೆಡ್‌ರೂಮ್‌ ಕಾಟೇಜ್‌, ಸಿಂಗಲ್‌ ಬೆಡ್‌ರೂಮ್‌ ಕಾಟೇಜ್‌, ಡಾರ್ಮೆಟರಿ ಸೇರಿ ಹಲವು ಆಯ್ಕೆಗಳಿವೆ. ಒಟ್ಟು ನೂರೈವತ್ತು ಜನರನ್ನು ನಿರ್ವಹಿಸಬಲ್ಲ ವಸತಿ ಸೌಲಭ್ಯವಿದೆ. ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಬೇರೆಬೇರೆ ಕೊಠಡಿಗಳಲ್ಲಿ ತಯಾರಿಸಿ ಬಡಿಸಲಾಗುತ್ತಿದೆ. ಹಾಗಾಗಿ ನಿಮ್ಮ ಯಾವ ಆಹಾರ ಪಥ್ಯವೂ ಇಲ್ಲಿ ಭಂಗವಾಗುವುದಿಲ್ಲ.

ಶೈಕ್ಷಣಿಕ ಪ್ರವಾಸ

New Project (37)

ರಾಜ್ಯದ ಹಲವೆಡೆಗಳಿಂದ ಕೃಷಿ ಅದ್ಯಯನಕ್ಕಾಗಿ ಪ್ರವಾಸ ಬರುತ್ತಾರೆ. ಅವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಶು ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚು. ಇಲ್ಲಿ ಅವರು ಪಶು ಸಂಗೋಪನೆ, ಕೃಷಿ ಉಪಕರಣಗಳು, ಕೃಷಿ ಚಟುವಟಿಕೆಗಳನ್ನು ಸ್ವತಃ ಅನುಭವಿಸಿ ಕಲಿಯುತ್ತಾರೆ.

ಒಟ್ಟಾರೆ ಅಭೀಷ್ಟ ಎಂದರೆ ಒಂದು ವಾಸ್ತವ್ಯ ಹಲವು ವೈಶಿಷ್ಟ್ಯಗಳು ಎಂದರೆ ತಪ್ಪಾಗದು. ಹಳ್ಳಿ ಜೀವನ, ಕೃಷಿ ಶಿಕ್ಷಣ, ಪ್ರಕೃತಿಯ ಜತೆಗೆ ಸಾಂಗತ್ಯ ಇಲ್ಲಿ ಸದಾ ಸಿಗುತ್ತದೆ. ಒಮ್ಮೆ ನಿಮ್ಮ ನಗರ ಜೀವನಕ್ಕೆ ರಜೆ ನೀಡಿ ಅಭೀಷ್ಟ ಫಾರ್ಮ್‌ಗೆ ಭೇಟಿ ನೀಡಿ ನಿಜಕ್ಕೂ ಎಂಜಾಯ್‌ ಮಾಡುತ್ತೀರಿ…

ದಾರಿ ಹೇಗೆ?

ಕುಣಿಗಲ್‌ಗೆ ರಾಜ್ಯದ ವಿವಿಧೆಡೆಯಿಂದ ರೈಲು ಮತ್ತು ಬಸ್‌ ಸಂಪರ್ಕ ಉತ್ತಮವಾಗಿದೆ. ಕುಣಿಗಲ್‌ನಿಂದ ಅಭೀಷ್ಟ ಅಗ್ರಿ ಫಾರ್ಮ್‌ ಸ್ಟೇ ಕೇವಲ 31 ಕಿಮೀ ದೂರದಲ್ಲಿದ್ದು, ಸ್ಥಳೀಯ ಟ್ಯಾಕ್ಸಿ ಅಥವಾ ಕ್ಯಾಬ್‌ ಮೂಲಕ ಫಾರ್ಮ್‌ ತಲುಪಬಹುದು.

PHONE: +91 9379196300

EMAIL: abhishtaagrifarmstay@gmai.com

ಜಿಡ್ಡಿಗೆರೆ ಗ್ರಾಮ, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ, ಕರ್ನಾಟಕ 572134