ಸಾಮಾನ್ಯವಾಗಿ ವಾರಾಂತ್ಯ ಬಂದರೆ ಮನೆಯಲ್ಲೇ ಸುಮ್ಮನೇ ಕೂರುವ ಬದಲು ಬೆಂಗಳೂರಿಗೆ ಸಮೀಪದಲ್ಲೇ ಮನೋರಂಜನೆ, ಶುಚಿರುಚಿಯಾದ ಆಹಾರ, ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡಾ ಚಟುವಟಿಕೆಗಳು ಇರುವ ತಾಣಗಳಲ್ಲಿ ಖುಷಿಯಿಂದ ದಿನ ಕಳೆಯಬೇಕು ಎಂದುಕೊಳ್ಳುವವರು ನಮ್ಮಲ್ಲಿ ಅನೇಕರು. ಆದರೆ ಇವೆಲ್ಲವೂ ಒಂದೇ ಕಡೆ ಸಿಗುವುದಾದರೂ ಹೇಗೆ? ಮನೋರಂಜನೆಯಿದ್ದರೆ ಆಹಾರ ಆರೋಗ್ಯಕರವೆನಿಸುವುದಿಲ್ಲ, ಆಹಾರ ಅದ್ಭುತವೆನಿಸಿದರೆ ಇನ್ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಎಲ್ಲವೂ ಸರಿ ಹೊಂದಿದರೆ ಬೆಂಗಳೂರಿಗೆ ಅವು ಸಮೀಪದಲ್ಲಿ ಇರುವುದಿಲ್ಲ. ಹೀಗೆ ಒಂದಿಲ್ಲೊಂದು ಕೊರತೆಗಳಿರುವ ರೆಸಾರ್ಟ್‌ಗಳ ನಡುವೆ ಆಲ್‌ ಇನ್‌ ಒನ್‌ ಎಂಬಂಥ ದಿ ಬೆಸ್ಟ್‌ ರೆಸಾರ್ಟ್‌ ಸದ್ಯ ಸುದ್ದಿಯಲ್ಲಿದೆ.

ಇದನ್ನೂ ಓದಿ: ರೆಸಾರ್ಟ್‌ ಉದ್ಯಮದಲ್ಲಿ ಹೊಸ ʼಸೃಷ್ಟಿʼ.. ಪಕ್ಕಾ ವಿಲೇಜ್‌ ವೈಬ್!

ಒಡಿಸ್ಸಿ ರಿಟ್ರೀಟ್‌ ರೆಸಾರ್ಟ್.‌ ಇದು ಬೆಂಗಳೂರಿನಿಂದ 30-38ಕಿಮೀ ದೂರ ಅಂದರೆ ಸುಮಾರು ಒಂದೂವರೆ ಗಂಟೆಯ ಪ್ರಯಾಣದಲ್ಲಿ ಸಿಗುತ್ತದೆ. ಕಗ್ಗಲೀಪುರದಿಂದ 16ಕಿಮೀ ಅಂತರದಲ್ಲಿ 12 ಎಕರೆಗಳಷ್ಟು ಜಾಗದಲ್ಲಿ ಹರಡಿಕೊಂಡಿರುವ ವಿಶಾಲವಾದ ಪ್ರಾಪರ್ಟಿ. ಈ ಜಾಗಕ್ಕೆ ಬರುತ್ತಲೇ ಇಲ್ಲಿನ ಸ್ಟೇ ಏರಿಯಾಗಳನ್ನು ನೋಡಿದರೆ ಇಂಡೋನೇಷ್ಯಾದ ಬಾಲಿಯಲ್ಲಿರುವ ಅನುಭವ ನೀಡುತ್ತದೆ.

Untitled design (74)

ಲೈವ್‌ ಕೌಂಟರ್‌ಗಳಿಗೆ ಬಲು ಬೇಡಿಕೆ

ಇಲ್ಲಿಗೆ ಮುಂಚಿತವಾಗಿಯೇ ಬುಕಿಂಗ್‌ ಮಾಡಿ ಬರುವ ಗ್ರಾಹಕರು ಅನ್‌ ಲಿಮಿಟೆಡ್‌ ವೆಜ್‌ ಹಾಗೂ ನಾನ್‌ ವೆಜ್‌ ಆಹಾರದ ಬಗ್ಗೆ ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಮನೆಯೂಟದಷ್ಟೇ ಆರೋಗ್ಯಕರವಷ್ಟೇ ಅಲ್ಲದೆ ರುಚಿಕರವಾಗಿರುವ ವಿಭಿನ್ನ ಆಯ್ಕೆಗಳೂ ಇವೆ. ಬರಿಯ ಲಂಚ್‌ ಒಂದರಲ್ಲೇ 20ಕ್ಕೂ ಹೆಚ್ಚು ತಿನಿಸುಗಳಿದು ಇದು ಆಹಾರ ಪ್ರಿಯರ ಮನ ಗೆದ್ದಿದೆ. ಇಲ್ಲಿ ಆಹಾರಕ್ಕಾಗಿ ವಿಶೇಷ ಲೈವ್‌ ಕೌಂಟರ್‌ ಗಳಿದ್ದು, ಚಾಟ್ಸ್‌, ತವಾ ಫ್ರೈ, ಜಿಲೇಬಿ, ಪಾಸ್ತಾ, ಬಾರ್ಬೆಕ್ಯೂ ಹೀಗೆ ಎಲ್ಲವನ್ನೂ ಬಿಸಿ ಬಿಸಿಯಾಗಿಯೇ ಸವಿಯಬಹುದು.

ರೆಸಾರ್ಟ್‌ಗಳಲ್ಲಿ ಸಾಮಾನ್ಯವಾಗಿ 2-3 ಬಗೆಯ ರೂಮ್‌ ಫೆಸಿಲಿಟೀಸ್‌ ಇರುವುದಿದೆ. ಆದರೆ ಒಡಿಸ್ಸಿ ರಿಟ್ರೀಟ್‌ ರೆಸಾರ್ಟ್‌ನಲ್ಲಿ ಹಿಲ್‌ ಸೈಡ್‌ ರೂಮ್‌, ಬ್ಯಾಂಬೂ ಕಾಟೇಜ್‌, ಇಕೋ ಕಾಟೇಜ್‌, ವುಡ್‌ ಆಂಡ್‌ ಹಟ್‌ ಮಾತ್ರವಲ್ಲದೆ ದೊಡ್ಡ ಫ್ಯಾಮಿಲಿ, ಸ್ನೇಹಿತರ ಜತೆಗೆ ಬರುವವರಿಗಾಗಿ ಫ್ಯಾಮಿಲಿ ಡಾರ್ಮೆಟ್ರಿ ಸಹ ಇಲ್ಲಿ ಲಭ್ಯವಿದೆ.

ಮನಸೇ ರಿಲ್ಯಾಕ್ಸ್‌ ಪ್ಲೀಸ್‌

ಒತ್ತಡದ ಜೀವನದಿಂದ ಹೊರಬರುವುದಕ್ಕಾಗಿ ಎಲ್ಲರೂ ರೆಸಾರ್ಟ್‌ಗಳ ಮೊರೆ ಹೊಗುತ್ತಾರೆ. ಒಂದು ದಿನವಾದರೂ ಮನೆ ಕೆಲಸ, ಆಫೀಸ್‌ ಕೆಲಸಗಳಿಂದ ದೂರ ಉಳಿದು ಆರಾಮಾಗಿ ಕಾಲ ಕಳೆಯಬೇಕು ಎಂದುಕೊಳ್ಳುತ್ತಾರೆ. ಅಂಥವರಿಗಾಗಿ ಇಲ್ಲಿ ರಿಲ್ಯಾಕ್ಸ್‌ ಮಾಡುವುದಕ್ಕೂ ಅವಕಾಶವಿದೆ. ಕಾಲಿನ ಆರೋಗ್ಯ, ಸೌಂದರ್ಯಕ್ಕಾಗಿ ಫಿಶ್‌ ಸ್ಪಾ ಮಾಡಿಸಿಕೊಳ್ಳಬಹುದು. ಅಲ್ಲದೆ ಸಾಮಾನ್ಯ ಈಜುಕೊಳದಲ್ಲಿ ಒಂದಷ್ಟು ಹೊತ್ತು, ವೇವ್‌ ಪೂಲ್‌ನಲ್ಲೂ ಅಲೆಗಳ ನಡುವೆ ಹಾಯಾಗಿ ಕಾಲ ಕಳೆಯಬಹುದು. ಇಲ್ಲಿನ ರೇನ್‌ ಡ್ಯಾನ್ಸ್‌ ಮಜವೇ ಬೇರೆ. ಹಾಡಿಗೆ ತಕ್ಕಂತೆ ಸುರಿಯುವ ಮಳೆಯ ನಡುವೆ ಹೆಜ್ಜೆ ಹಾಕುವುದೇ ವಿಶೇಷ ಅನುಭವ ನೀಡುತ್ತದೆ.

Untitled design (75)

ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳು:

ಇನ್ನು ಇಂಡೋರ್‌ ಹಾಗೂ ಔಟ್‌ ಡೋರ್‌ ಆಕ್ಟಿವಿಟೀಸ್‌ ಇಲ್ಲಿನ ಪ್ರಮುಖ ಆಕರ್ಷಣೆ. ಯಾಕೆಂದರೆ ಇಲ್ಲಿ 20ಕ್ಕೂ ಹೆಚ್ಚು ಬಗೆಯ ಕ್ರೀಡೆಗಳಿಗೂ ಅವಕಾಶವಿದ್ದು, ಕ್ರಿಕೆಟ್‌, ವಾಲಿಬಾಲ್‌, ಶಟಲ್‌ ಕಾಕ್‌ ನಂಥ ಔಟ್‌ ಡೋರ್‌ ಗೇಮ್ಸ್‌ಗೆ ಬಹು ಬೇಡಿಕೆಯಿದೆ. ಆಕಾಶದೆತ್ತರದಲ್ಲಿ ಸ್ಕೈ ಸೈಕ್ಲಿಂಗ್, ಮರಹತ್ತಿ ಕೋತಿಯಂತೆ ಚೇಷ್ಟೆಗೂ ಅವಕಾಶವಿದ್ದು, ಲಾಂಗೆಸ್ಟ್‌ ಜಿಪ್ ಲೈನ್‌ನಲ್ಲಿ ಮಜಾ ಮಾಡಬಹುದು. ರೋಪ್‌ ಗೇಮ್ಸ್‌, ಝೋರ್ಬಲ್‌ ಫೈಟ್‌, ಆರ್ಚರಿ, ಹೀಗೆ ಸಾಕಷ್ಟು ಬಗೆಯ ಗೇಮ್ಸ್‌ಗಳನ್ನು ಆಡುತ್ತಿದ್ದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ.

ಇಲ್ಲಿ ಡೇ ಔಟ್‌ ಪ್ಯಾಕೇಜಸ್‌ 1699 ರು. ಗೆ ಪ್ರಾರಂಭವಾಗುತ್ತದೆ. ಜೋಡಿಗೆ ಸ್ಟೇ ಪ್ಯಾಕೇಜ್‌ ಆಹಾರ ಹಾಗೂ ಜಿಎಸ್‌ಟಿ ಸೇರಿ 6500 ರು. ಗೆ ಲಭ್ಯವಿದೆ.

ಏನೆಲ್ಲಾ ಇವೆ ಗೊತ್ತಾ?

ಸ್ವಿಮ್ಮಿಂಗ್‌ ಪೂಲ್‌, ಫ್ಲೈಯಿಂಗ್‌ ಫಾಕ್ಸ್‌, ಜಿಪ್‌ ಲೈನ್‌, ಇನ್ ಡೋರ್‌ ಪ್ಲೇ ಏರಿಯಾ, ಕ್ರಿಕೆಟ್‌ ಗ್ರೌಂಡ್‌, ರೋಪ್‌ ಆಕ್ಟಿವಿಟೀಸ್‌, ಸ್ಕೈ ಸೈಕ್ಲಿಂಗ್‌

Untitled design (77)

ರೂಮ್ಸ್‌ ಆಯ್ಕೆ ನಿಮ್ಮದು

ಹಿಲ್‌ ಸೈಡ್‌ ರೂಮ್‌

ಬ್ಯಾಂಬೂ ಕಾಟೇಜ್‌

ಇಕೋ ಕಾಟೇಜ್‌,

ವುಡ್‌ ಆಂಡ್‌ ಹಟ್‌

ಫ್ಯಾಮಿಲಿ ಡಾರ್ಮೆಟ್ರಿ

ವಿಳಾಸ:

ದಿ ಒಡಿಸ್ಸಿ ರಿಟ್ರೀಟ್‌

ನಂ.92/1, 92/2, 92/3, ಎಡಮಡು ಗ್ರಾಮ ಕನಕಪುರ ರಸ್ತೆ, ಅಡ್ಡ, ಕಗ್ಗಲಹಳ್ಳಿ, ಕರ್ನಾಟಕ 56211

ಮೊ: 7065002340