ಎಆರ್‌ಆರ್ ಗ್ರಾಂಡ್ನಲ್ಲಿ ಭರ್ಜರಿ ಭೋಜನ
ಬಾಳೆ ಎಲೆಯಲ್ಲಿ ಅನ್ ಲಿಮಿಟೆಡ್ ಆಗಿ ಊಟ ಮಾಡಬೇಕು, ಮದುವೆ ಮನೆಯಲ್ಲಿ ಸಿಗುವ ಊಟದಂತೆ ಬಾಳೆ ಎಲೆಯ ತುಂಬ ವಿಭಿನ್ನ ಬಗೆಯ ಖಾದ್ಯಗಳು ತುಂಬಿಕೊಂಡಿರಬೇಕು. ಇಂಥ ಹೊಟೇಲ್ ಬೆಂಗಳೂರು ದಕ್ಷಿಣ ಭಾಗದಲ್ಲಿ ಎಲ್ಲಾದರೂ ಇದೆಯಾ..? ಹೀಗೆ ಹುಡುಕುತ್ತಾ ಹೋದ ನನಗೆ ಸಿಕ್ಕಿದ್ದು ಆರ್ಆರ್ ನಗರದ ಎಆರ್‌ಆರ್ ಗ್ರಾಂಡ್.
ಅದೆಷ್ಟು ಬಗೆಯ ಬಟ್ಟಲುಗಳಲ್ಲಿ ಉಂಡರೂ ಬಾಳೆ ಎಲೆಯಲ್ಲಿ ಊಟ ಮಾಡುವ ರುಚಿಯೇ ಬೇರೆ. ಬಿಸಿಬಿಸಿ ಅನ್ನ, ಸಾರು,ತುಪ್ಪ, ವಿಶೇಷ ಖಾದ್ಯಗಳು ಬಾಳೆ ಎಲೆಗೆ ಬೀಳುತ್ತಲೇ ಅದರ ರುಚಿ ಇಮ್ಮಡಿಯಾಗುತ್ತದೆ. ಆರೋಗ್ಯಕರವೂ ಹೌದೆಂಬ ಅಧ್ಯಯನಗಳನ್ನು ಓದಿದಮೇಲಂತೂ ತಿಂಗಳಿಗೆ ಒಂದೆರಡು ಬಾರಿಯಾದರೂ ಬಾಳೆ ಎಲೆ ಊಟವನ್ನೇ ಹುಡುಕಾಡುವುದು ನನಗೆ ಕೆಲಸವಾಗಿಬಿಟ್ಟಿದೆ. ಹೀಗೆ ಹುಡುಕಿದವಳಿಗೆ ರೀಲ್ಸ್ ಮೂಲಕ ಸಿಕ್ಕಿದ ಜಾಗವೇ ರಾಜರಾಜೇಶ್ವರಿ ನಗರ.
ಇಲ್ಲಿನ ಕೆಂಪೇಗೌಡ ರಸ್ತೆಯಲ್ಲಿರುವ ಎಆರ್‌ಆರ್ ಗ್ರಾಂಡ್ ಭರ್ಜರಿ ಭೋಜನಕ್ಕಾಗಿಯೇ ಹೆಸರು ಮಾಡಿದೆ. ಅದರಲ್ಲೂ ಬಾಳೆ ಎಲೆಯಲ್ಲಿ ಅನ್ ಲಿಮಿಟೆಡ್ ಊಟ ಮಾಡುವ ಖುಷಿಯನ್ನು ವರ್ಣಿಸುವುದೇ ಅಸಾಧ್ಯ. ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್ ಮಾತ್ರವಲ್ಲದೆ ತಂದೂರ್ ವೆರೈಟಿ ಆಹಾರವನ್ನೂ ಇಲ್ಲಿ ಸವಿಯುವುದಕ್ಕೆ ಅವಕಾಶಗಳಿವೆ. ಇತ್ತೀಚೆಗಷ್ಟೇ ಡಿಸೆಂಬರ್ ತಿಂಗಳಿನಲ್ಲಿ ಗ್ರಾಹಕರಿಗೆ ಮುಕ್ತವಾದ ಈ ರೆಸ್ಟೋರೆಂಟ್ ಅಶ್ವಿನಿ ಜೋಶಿ ಅವರ ಮಾಲೀಕತ್ವದಲ್ಲಿದೆ.
ಪಕ್ಕಾ ಸಸ್ಯಾಹಾರಿ ರೆಸ್ಟೋರೆಂಟ್

ಬೆಂಗಳೂರಿನಲ್ಲಿ ಪಕ್ಕಾ ಸಸ್ಯಾಹಾರಿ ಹೊಟೇಲ್‌ಗಾಗಿ ಹುಡುಕಾಡುವುದೇ ಕಷ್ಟದ ಕೆಲಸ. ಅದರಲ್ಲೂ ಸಸ್ಯಾಹಾರಿಗಳಿಗಾಗಿಯೇ ಬಾಳೆ ಎಲೆಯಲ್ಲಿ ಅನ್‌ಲಿಮಿಟೆಡ್ ಊಟ ಸಿಕ್ಕುವುದೆಂದರೆ ಸಸ್ಯಾಹಾರಿಗಳಿಗದು ಸ್ವರ್ಗವೇ ಸರಿ. ವಿಶೇಷವಾದ ಆಂಬಿಯೆನ್ಸ್‌ನಲ್ಲಿ ಕುಳಿತು ನಮಗಿಷ್ಟವಾದ ಆಹಾರವನ್ನು ಸವಿಯುವ ಖುಷಿ ಬೇರೆ ಎಲ್ಲೂ ಸಿಗಲಾರದು.
297 ರುಪಾಯಿಗೆ 27 ಬಗೆಯ ಖಾದ್ಯಗಳು
ಬಾಳೆ ಎಲೆ ಊಟವೆಂದರೆ ಈಗಂತೂ ಬಲು ದುಬಾರಿಯಾಗಿದೆ. ಅದರಲ್ಲೂ 27 ಬಗೆಯ ಖಾದ್ಯಗಳನ್ನು ಅನ್ ಲಿಮಿಟೆಡ್ ಆಗಿ ಬರಿಯ 297 ರುಪಾಯಿಗೆ ಸವಿಯಬಹುದೆಂದರೆ ನಂಬಲೇಬೇಕು. ಪೂರಿ-ಸಾಗು, ದೋಸೆ, ರೈಸ್ ಐಟಂ, ವೆರೈಟಿ ಸಿಹಿತಿನಿಸುಗಳು, ಪಲ್ಯ, ಕೋಸಂಬರಿ ಹೀಗೆ ರುಚಿಕರ ಖಾದ್ಯಗಳೇ ಬಾಳೆ ಎಲೆಯನ್ನು ತುಂಬಿಕೊಂಡಿರುತ್ತದೆ. ವೆಲ್‌ಕಮ್ ಡ್ರಿಂಕ್, ಹೋಳಿಗೆ ಮತ್ತು ಐಸ್ ಕ್ರೀಮ್ ಹೊರತಾಗಿ ಉಳಿದೆಲ್ಲವೂ ಅನ್ ಲಿಮಿಟೆಡ್ ಆಗಿ ಸವಿಯಬಹುದು.

ಎಆರ್‌ಆರ್ ಗ್ರಾಂಡ್ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದಲ್ಲಿ ಭರ್ಜರಿ ಭೋಜನಕ್ಕಾಗಿಯೇ ಹೆಸರು ಮಾಡಿದರೂ ಆಹಾರಪ್ರಿಯರಿಗೆ ಇಲ್ಲಿ ರುಚಿಕರವಾದ ಉಪಾಹಾರವೂ ಲಭ್ಯವಿರುತ್ತದೆ. ಕಿಕ್ ನೀಡುವ ಫಿಲ್ಟರ್ ಕಾಫಿ ಹಾಗೂ ವಿಶೇಷವಾದ ಮಸಾಲೆ ಚಹಾ ಇಲ್ಲಿನ ಗ್ರಾಹಕರಿಗೆ ಅಚ್ಚುಮೆಚ್ಚು.
ಈ ರೆಸ್ಟೋರೆಂಟ್‌ನಲ್ಲಿ ಪ್ರೈವೇಟ್ ಎಸಿ ರೂಮುಗಳ ಸೌಲಭ್ಯವಿದ್ದು, ಮೊದಲ ಮಹಡಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸೇರಬಲ್ಲ ಎಆರ್‌ಆರ್ ಬಾಂಕ್ವೆಟ್ ಪಾರ್ಟಿ ಹಾಲ್ ಕೂಡ ಇದೆ. ಫ್ಯಾಮಿಲಿ ಫಂಕ್ಷನ್, ಬರ್ತ್ ಡೇ ಪಾರ್ಟಿ, ಕಾರ್ಪೊರೇಟ್ ಗ್ಯಾದರಿಂಗ್ ಮಾಡಬೇಕೆನ್ನುವವರಿಗೆ ಸ್ಥಳದ ಜತೆಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಯನ್ನೂ ಇಲ್ಲಿ ಮಾಡಿಕೊಡಲಾಗುತ್ತದೆ.
ಯಾವುದಕ್ಕೆಲ್ಲ ಅವಕಾಶ
ಬಾಂಕ್ವೆಟ್ ಹಾಲ್
ಮದುವೆ- ರಿಸೆಪ್ಶನ್
ಬರ್ತ್‌ಡೇ ಪಾರ್ಟಿ
ನಿಶ್ಚಿತಾರ್ಥ- ವಾರ್ಷಿಕೋತ್ಸವಗಳು
ನಾಮಕರಣ
ಕಾರ್ಪೊರೇಟ್ ಮೀಟಿಂಗ್- ಗ್ಯಾದರಿಂಗ್ಸ್
ಫ್ಯಾಮಿಲಿ ಫಂಕ್ಷನ್ - ಸೋಷಿಯಲ್ ಇವೆಂಟ್ಸ್
ವಿಳಾಸ:
ಎಆರ್‌ಆರ್ ಗ್ರಾಂಡ್, ಕೆಂಪೇಗೌಡ ರಸ್ತೆ, 4ನೇ ಹಂತ, ರಾಜರಾಜೇಶ್ವರಿನಗರ, ಬೆಂಗಳೂರು,ಕರ್ನಾಟಕ 560098
ಮೊಬೈಲ್: 99000 16603 / 99000 16607