ಬೆಂಗಳೂರು ದಕ್ಷಿಣ ಭಾಗಗಳಲ್ಲಿರುವಷ್ಟು ಹೊಟೇಲ್ಸ್‌, ರೆಸ್ಟೋರೆಂಟ್ಸ್‌, ಕೆಫೆಗಳು ಹಾಗೂ ಪಬ್‌ಗಳು ಬೇರೆ ಯಾವ ಭಾಗಗಳಲ್ಲೂ ಸಿಗುವುದಿಲ್ಲವೇನೋ. ಅಷ್ಟರ ಮಟ್ಟಿಗೆ ಹೊಸತನ, ಹೊಸ ಪ್ರಯತ್ನಗಳ ಆಹಾರ ತಾಣಗಳು ಹುಟ್ಟಿಕೊಳ್ಳುತ್ತಲೇ ಇವೆ. ಅದರಲ್ಲೂ ಇಲ್ಲಿನ ರಾಜರಾಜೇಶ್ವರಿ ನಗರದಲ್ಲಂತೂ ವಿಶೇಷವಾದ ಹ್ಯಾಂಗ್‌ ಔಟ್‌ ಸೆಂಟರ್‌ಗಳು ಸದ್ದು ಮಾಡುತ್ತಿದ್ದು ಅವುಗಳಲ್ಲಿ ಪ್ರಮುಖವಾದುದು ಇಬ್ಬನಿ ಕೆಫೆ ಮತ್ತು ಬ್ರಿಸ್ಟೋ.

ಮುಂಜಾನೆ 5 ಗಂಟೆಯ ಮೊದಲೇ ನಿಮ್ಮನ್ನು ಸ್ವಾಗತಿಸುವ ಕೆಫೆ ಇದಾಗಿದ್ದು, ಬಿಸಿ ಬಿಸಿ ಹಾಗೂ ರುಚಿ ರುಚಿಯಾದ ಕಾಫಿ ಹೀರಿದರಂತೂ ದಿನವೇ ಉಲ್ಲಾಸಭರಿತವಾಗಿರುತ್ತದೆ. ಇಲ್ಲಿ ಡೆಸರ್ಟ್ಸ್ ಹಾಗೂ ವಿಭಿನ್ನವಾದ ಕಾಫಿಗಳೇ ಪ್ರಮುಖವಾಗಿದ್ದು, ಕ್ರೀಮಿ ಚಾಕೋಲೆಟ್ ಪ್ಯಾನ್‌ ಕೇಕ್‌, ಪರ್ಫೆಕ್ಟ್‌ ಕಾಫಿಗಳಿಗಂತೂ ಬಹಳ ಬೇಡಿಕೆಯಿದೆ.

ಇದನ್ನೂ ಓದಿ: ಒಡಿಸ್ಸಿ ರಿಟ್ರೀಟ್‌ ರೆಸಾರ್ಟ್...ಕನಕಪುರದಲ್ಲೊಂದು ಮಿನಿ ಬಾಲಿ

ಆಲ್‌ ಇನ್‌ ಒನ್‌ ಕೆಫೆ

ಇಬ್ಬನಿಯನ್ನು ಬರಿಯ ಕೆಫೆ ಎನ್ನುವಂತಿಲ್ಲ. ಯಾಕೆಂದರೆ ಅದಕ್ಕೂ ಮೀರಿದಂತೆ ಇದೊಂದು ವಿಶೇಷ ಮನರಂಜನಾ ತಾಣವೂ ಹೌದು. ಇಬ್ಬನಿಯೊಳಗೆ ಪ್ರವೇಶಿಸುತ್ತಿದ್ದಂತೆ ಸುತ್ತಲೂ ಕಣ್ಣು ಹಾಯಿಸಿದರೆ ಪೂರ್ತಿ ವಾತಾವರಣವೇ ನೆಮ್ಮದಿ, ಖುಷಿಯನ್ನು ನೀಡುವಂತಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಕೆಫೆಯಲ್ಲಿ ಎಲ್ಲಿ ನೋಡಿದರೂ ಗಿಡ, ಬಳ್ಳಿ ಹೂವುಗಳದ್ದೇ ಕಾರುಬಾರು. ಹಸಿರಿನ ವಾತಾವರಣದ ನಡುವೆ ವಿಭಿನ್ನವಾಗಿರುವ ಸೀಟಿಂಗ್‌ ವ್ಯವಸ್ಥೆಯಂತೂ ಗ್ರಾಹಕರು ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಸ್ನೇಹಿತರು ಅಥವಾ ಕುಟುಂಬದೊಂದಿಗೆ ಆತ್ಮೀಯ ಮಾತುಕತೆಗೆ ಇದು ಸೂಕ್ತವಾದ ತಾಣ.

Untitled design - 2026-03-05T190008.359

ಗುಡ್‌ ವೈಬ್ಸ್ ನೀಡುವ ವಾತಾವರಣದಲ್ಲಿ ಕಾಲ ಕಳೆಯುವುದೇ ಖುಷಿಯ ವಿಚಾರ. ಅದರಲ್ಲೂ ಮನಸ್ಸಿಗೆ ಇನ್ನಷ್ಟು ಖುಷಿ ನೀಡಲು ವಿಶೇಷವಾದ ಮೈಂಡ್‌ ಗೇಮ್ಸ್‌ ಹಾಗೂ ಪುಟ್ಟದಾದ ಗ್ರಂಥಾಲಯದಲ್ಲಿರುವ ಒಂದಷ್ಟು ಪುಸ್ತಕಗಳು ಟ್ರೆಂಡ್‌ಗೆ ತಕ್ಕಂಥ ನಿರ್ಮಾಣವಾಗಿರುವ ಕೆಫೆ ಇದು ಎನ್ನುವುದನ್ನು ಮತ್ತೊಮ್ಮೆ ಸಾಬೀತುಮಾಡುತ್ತದೆ.

ಇಲ್ಲಿ ಏನುಂಟು.. ಏನಿಲ್ಲ ?

ಇಲ್ಲಿನ ಮೆನುವನ್ನು ನೋಡಿದರೆ ಬೆರಗಾಗದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಅತ್ಯುತ್ತಮ ಆಯ್ಕೆಗಳೊಂದಿಗೆ ಸಿದ್ಧವಾದ ಈ ಮೆನು, ಬಗೆಬಗೆಯ ತಂದೂರಿ, ಕಾಂಟಿನೆಂಟಲ್‌ ಹಾಗೂ ಪ್ಯಾನ್-ಏಷ್ಯನ್ ಡಿಶ್‌ಗಳನ್ನು ಉಣಬಡಿಸುತ್ತದೆ. ಮನಸ್ಸಿಗೆ ಹಿತವೆನಿಸುವ ಕಾಫಿಗಳು, ರುಚಿಕರವಾದ ಡೆಸರ್ಟ್ಸ್‌, ರಿಫ್ರೆಶಿಂಗ್ ಮಾಕ್‌ಟೇಲ್‌ಗಳಿಂದ ತೊಡಗಿ ಎಲ್ಲವೂ ಇಲ್ಲಿ ಲಭ್ಯವಿದೆ. ಇದಷ್ಟೇ ಅಲ್ಲದೆ ಇಂಗ್ಲಿಷ್ ಬ್ರೇಕ್‌ ಫಾಸ್ಟ್‌, ಬಹು ಬಗೆಯ ಪಿಜ್ಜಾಗಳು, ಪಾಸ್ತಾ, ಡೋನಟ್ಸ್, ಪೇಸ್ಟ್ರಿಗಳು ಮತ್ತು ಕೊರಿಯನ್ ಬನ್‌, ಸುವಾಸನೆಯ ಮೂಲಕವೇ ಬೇಡಿಕೆ ಹೆಚ್ಚಿಸಿಕೊಂಡಿರುವ ಚಿಕನ್ ಫ್ರೈಡ್ ರೈಸ್ಗಂತೂ ಮುಗಿಬೀಳುವ ಗ್ರಾಹಕರೇ ಹೆಚ್ಚು.

ಲೈವ್‌ ಮ್ಯೂಸಿಕ್‌ನೊಂದಿಗೆ ಸುಂದರ ಸಂಜೆ

ಬೆಳಗ್ಗೆಯಿಂದ ರಾತ್ರಿಯವರೆಗೂ ಇಲ್ಲಿ ಹಿತಕರವೆನಿಸುವ ಹಾಡುಗಳನ್ನು ಕೇಳುತ್ತಲೇ ಇರಬಹುದು. ಟ್ರೆಂಡಿಂಗ್‌ ಹಾಡುಗಳಷ್ಟೇ ಅಲ್ಲದೆ ಹಳೆಯ ಹಾಡುಗಳನ್ನೂ ಇಂದಿನ ತಲೆಮಾರಿಗೆ ಪರಿಚಯಿಸುವ ಈ ಕೆಫೆಯ ಪ್ರಯತ್ನವನ್ನು ಮೆಚ್ಚಿಕೊಳ್ಳದವರಿಲ್ಲ. ಇನ್ನೊಂದು ವಿಶೇಷ ಅಂಶವೆಂದರೆ ಇಲ್ಲಿ ಲೈವ್‌ ಕಾನ್ಸರ್ಟ್‌ಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ವಿಶೇಷ ದಿನಗಳಂದು ಅಥವಾ ವಾರಾಂತ್ಯಗಳಂದು ಇಲ್ಲಿ ಹೆಸರಾಂತ ಹಾಡುಗಾರರಿಂದ ಅಥವಾ ಸ್ಥಳೀಯ ಕಲಾವಿದರಿಂದಲೂ ಲೈವ್‌ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ನೆಚ್ಚಿನ ಹಾಡುಗಳ ಜತೆಗೆ ರುಚಿಕರ ಆಹಾರ ಸೇವಿಸುತ್ತಿದ್ದರೆ ಆಹಾ! ಎಂಬ ಉದ್ಗಾರದ ವಿನಾ ಬೇರ್ಯಾವ ಪದವನ್ನು ಹೇಳುವುದಕ್ಕೂ ಸಾಧ್ಯವೇ ಇಲ್ಲ.

Untitled design - 2026-03-05T185947.925

ಇನ್ನು ಯಾವುದೇ ಆಹಾರ ತಾಣಗಳು ಹೆಸರು ಮಾಡಬೇಕಾದರೆ ಜನಮನ್ನಣೆ ಗಳಿಸಬೇಕಾದರೆ ಬರಿಯ ವಿಭಿನ್ನ ಹಾಗೂ ಗ್ರಾಹಕರ ಬೇಡಿಕೆಗೆ ಒಪ್ಪುವಂಥ ಆಹಾರವನ್ನು ನೀಡಿದರೆ ಸಾಲದು. ಬದಲಾಗಿ ಅದನ್ನು ಶುಚಿತ್ವದ ಬಗ್ಗೆ ಸರಿಯಾಗಿ ಗಮನಹರಿಸಿ, ಗ್ರಾಹಕರಿಗೆ ಒಪ್ಪುವಂತೆ ಆಹಾರವನ್ನು ಉಣಬಡಿಸುವ ಸಿಬ್ಬಂದಿ ವರ್ಗದ ಪಾತ್ರವಂತೂ ಬಹಳ ಮುಖ್ಯವೆನಿಸುತ್ತದೆ. ಆ ವಿಚಾರದಲ್ಲಿ ಇಬ್ಬನಿ ಕೆಫೆ ಮತ್ತು ಬ್ರಿಸ್ಟೋ ಬಗೆಗೆ ಹೇಳಲೇಬೇಕು. ಇಲ್ಲಿಗೆ ಭೇಟಿ ನೀಡುವವರನ್ನು ನಗುಮೊಗದಿಂದಲೇ ಸ್ವಾಗತಿಸುವ ಇಲ್ಲಿನ ಸಿಬ್ಬಂದಿ ಗ್ರಾಹಕರ ಬೇಕು ಬೇಡಗಳನ್ನು ಆಗಾಗ ವಿಚಾರಿಸುತ್ತಲೇ ಉತ್ತಮ ಸೇವೆಯನ್ನು ಒದಗಿಸುತ್ತಾರೆ.

ಒಟ್ಟನಲ್ಲಿ ಇತ್ತೀಚೆಗಷ್ಟೇ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ತಲೆ ಎತ್ತಿರುವ ಈ ಮೋಡಿ ಮಾಡುವ ಕೆಫೆ ಗುಡ್‌ ವೈಬ್‌, ಗುಡ್‌ ಫುಡ್‌ ಆಂಡ್‌ ಗುಡ್‌ ಕಂಪನಿ ಮೀಟ್ಸ್‌ ಎನ್ನುತ್ತಾರಲ್ಲ ಹಾಗೆ, ಗ್ರಾಹಕನಿಗೆ ಎಲ್ಲವನ್ನೂ ಏಕಕಾಲಕ್ಕೆ ಒದಗಿಸುವ ಮೂಲಕ ರಾಜರಾಜೇಶ್ವರಿ ನಗರದಲ್ಲಿಯೇ ದಿ ಬೆಸ್ಟ್‌ ಕೆಫೆ ಎನಿಸಿಕೊಂಡಿದೆ.

ವಿಳಾಸ

ಅಪಾರ್ಟ್ಮೆಂಟ್ ಬನಶಂಕರಿ, 5 ನೇ ಹಂತ, ಮಂತ್ರಿ ಆಲ್ಪೈನ್, ಉತ್ತರಹಳ್ಳಿ ಮುಖ್ಯ ರಸ್ತೆ, ಸುಬ್ರಹ್ಮಣ್ಯಪುರ, ಬೆಂಗಳೂರು, ಕರ್ನಾಟಕ 560061

ದೂರವಾಣಿ: 091086 23339