ಅದ್ವಯ : ಹೆಸರಿನಂತೆಯೇ ನಂಬರ್ ಒನ್
ಬೇಸಗೆ ಕಾಲ ಪ್ರಾರಂಭವಾಗುತ್ತಿದೆ. ಚಳಿಗಾಲ ಪೂರ್ಣವಾಗಿ ಮುಗಿದೂ ಇಲ್ಲ. ಇದು ಕರ್ನಾಟಕದ ಸ್ವಿಟ್ಜರ್ಲ್ಯಾಂಡ್ ಎಂಬ ಖ್ಯಾತಿಯ ಸಕಲೇಶಪುರಕ್ಕೆ ಭೇಟಿ ನೀಡಲು ಸುಸಮಯ. ಆದರೆ ಸಕಲೇಶಪುರದಲ್ಲಿ ಸುತ್ತಾಡುವ ಮುನ್ನ ಅಲ್ಲಿ ಉಳಿದುಕೊಳ್ಳುವುದಕ್ಕೆ ಲಕ್ಸುರಿ ಸ್ಟೇ ಬೇಕು ಎನ್ನುವ ಪ್ರವಾಸಿಗರೂ ನಮ್ಮ ನಡುವೆಯೇ ಇದ್ದಾರೆ. ಅಂಥವರಿಗಾಗಿಯೇ ಎಲ್ಲಾ ಸೌಲಭ್ಯಗಳಿದ್ದು, ಬೆಸ್ಟ್ ರೇಟಿಂಗ್ ಇರುವ ಅದ್ವಯ ಲಕ್ಸುರಿ ರೆಸಾರ್ಟ್ ಸುದ್ದಿಯಲ್ಲಿದೆ.
ಲಕ್ಸುರಿ ಲೈಫ್ ಇಲ್ಲದಿದ್ದರೇನು, ಒಂದೆರಡು ದಿನಕ್ಕಾದರೂ ಲಕ್ಸುರಿ ಲೈಫ್ ಹೇಗಿದೆ ಎಂಬುದನ್ನು ನೋಡಬೇಕು ಎನ್ನುವ ಜನರೇ ನಮ್ಮ ನಡುವೆ ಹೆಚ್ಚಿನವರು. ಅಂಥವರ ಮೊದಲ ಆಯ್ಕೆ ಸಕಲೇಶಪುರ ಅದ್ವಯ ಲಕ್ಸುರಿ ರೆಸಾರ್ಟ್. ಕಡಿಮೆ ಬಜೆಟ್‌ನಲ್ಲಿ ರಿಚ್ ಲೈಫ್ ಸ್ಟೈಲ್ ನೀಡುವ ಈ ರೆಸಾರ್ಟ್ ಸದ್ಯ ಕಾಫಿ ನಾಡಿನ ಪ್ರಮುಖ ಆಕರ್ಷಣೆಯೆನಿಸಿಕೊಂಡಿದೆ.
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕಾಫಿ ತೋಟಗಳ ನಡುವೆ ರೆಸಾರ್ಟ್ ಲೈಫ್ ಎಂಜಾಯ್ ಮಾಡಬೇಕೆಂದುಕೊಂಡರೆ ಆಯ್ಕೆಗಳು ಅನೇಕವಿದೆಯಾದರೂ, ಅದ್ವಯ ಲಕ್ಸುರಿ ರೆಸಾರ್ಟ್ ಬಹು ಬೇಡಿಕೆಯನ್ನು ಹೊಂದಿದೆ. ಹೊರನೋಟಕ್ಕೆ ಬಲು ದುಬಾರಿ ರೆಸಾರ್ಟ್ ಎನಿಸಿದರೂ ಇದು ಗ್ರಾಹಕರಿಗೆ ಜೇಬಿಗೆ ಕತ್ತರಿ ಹಾಕುವುದಿಲ್ಲ. ಜನಸಾಮಾನ್ಯರ ಲಕ್ಸುರಿ ಲೈಫ್ ಕನಸನ್ನು ನನಸು ಮಾಡುವಂತಿದೆ.

ಇಲ್ಲಿ ಉಳಿದುಕೊಳ್ಳಬೇಕಾದರೆ ಮುಂಗಡವಾಗಿ ಬುಕಿಂಗ್ ಮಾಡಿಕೊಂಡು ಬರುವುದಂತೂ ಕಡ್ಡಾಯ. ರೆಸಾರ್ಟ್ ಒಳಗೆ ಪ್ರವೇಶಿಸುತ್ತಲೇ ಆದರದಿಂದ ಬರಮಾಡಿಕೊಳ್ಳುವ ಇಲ್ಲಿನ ಸಿಬ್ಬಂದಿ ಮೊದಲಿಗೆ ವೆಲ್‌ಕಮ್ ಡ್ರಿಂಕ್ ನೀಡಿ ಸ್ವಾಗತಿಸುತ್ತಾರೆ. ನಂತರ ಕಾಯ್ದಿರಿಸಿದ ರೂಮುಗಳಲ್ಲಿ ಲಗೇಜ್ ಇಳಿಸಿಕೊಂಡು ಹೊರಬಂದರೆ ಔಟ್‌ಡೋರ್ ಆಕ್ಟಿವಿಟಿಗಳಲ್ಲೇ ದಿನ ಕಳೆದುಬಿಡುತ್ತದೆ.
ಇಲ್ಲಿ ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್ ಪ್ರಿಯರಿಗಾಗಿ ದೊಡ್ಡದಾದ ಗ್ರೌಂಡ್ ಇದ್ದು, ಇಂಡೋರ್ ಗೇಮ್ಸ್ ಬಯಸುವವರಿಗೆ ಅಚ್ಚುಕಟ್ಟಾದ ಸ್ಡೇಡಿಯಂ ನಿರ್ಮಿಸಿದ್ದಾರೆ. ಕೇರಂ, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ಇನ್ನು ಫಿಟ್‌ನೆಸ್ ಬಗ್ಗೆ ಹೆಚ್ಚಿನ ಒತ್ತುಕೊಡುವವರು ನೀವಾದರೆ ಅದನ್ನು ನೀವಿಲ್ಲಿ ಮಿಸ್ ಮಾಡಿಕೊಳ್ಳಲೇಬಾರದು.
ಫ್ಲೋಟಿಂಗ್ ರೆಸ್ಟೋರೆಂಟ್

ಈ ಲಕ್ಸುರಿ ರೆಸ್ಟೋರೆಂಟ್‌ನಲ್ಲಿ ಪ್ರಮುಖ ಆಕರ್ಷಣೆಯೇ ಫ್ಲೋಟಿಂಗ್ ರೆಸ್ಟೋರೆಂಟ್. ದೊಡ್ಡದಾದ ಪೂಲ್ ನಡುವೆ ನಿರ್ಮಾಣವಾಗಿರುವ ಸುಂದರವಾದ ರೆಸ್ಟೋರೆಂಟ್ ನಲ್ಲಿ ಕುಳಿತು ಆಹಾರ ಸೇವಿಸುವ ಖುಷಿಯೇ ಬೇರೆ. ಬ್ರೇಕ್‌ಫಾಸ್ಟ್‌ನಲ್ಲಿ ಸೌತ್ ಇಂಡಿಯನ್ ಮಾತ್ರವಲ್ಲದೇ ಇಂಗ್ಲಿಷ್ ಬ್ರೇಕ್ ಫಾಸ್ಟ್ ಸಹ ಲಭ್ಯವಿದ್ದು ವೆಜ್ ಮಾತ್ರವಲ್ಲದೆ ನಾನ್ ವೆಜ್ ಆಯ್ಕೆಯೂ ಇಲ್ಲಿದೆ.
ಪೂಲ್ ಬೋಟಿಂಗ್

ಇನ್ನು ಈ ಪೂಲ್ ನಲ್ಲಿ ಬೋಟಿಂಗ್ ಮಾಡುವ ಅವಕಾಶವೂ ಇದ್ದು ಬೇಕೆನಿಸಿದಾಗೆಲ್ಲಾ ಒಂದು ಸುತ್ತು ಸುತ್ತಾಡಿ ಬರಬಹುದು. ಆಫ್ ರೋಡ್ ಕ್ರೇಜ್ ನಿಮಗಿದ್ದರೆ ವಿಲ್ಲೀಸ್ ಜೀಪ್ ನಿಮಗಾಗಿ ಕಾದಿರುತ್ತದೆ. ರೆಸಾರ್ಟ್ ದಾಟಿ ಹೊರಗೆಲ್ಲೂ ಹೋಗುವುದಿಲ್ಲವೆಂದುಕೊಂಡರೆ ಎಟಿವಿ ಬೈಕ್ ರೈಡ್, ಸೈಕಲ್ ಸವಾರಿಗೂ ಇಲ್ಲಿ ಅವಕಾಶವಿದೆ.
ಕಣ್ಮನ ತಣಿಸುವ ಸುಂದರವಾದರ ಕಾಫಿ ತೋಟದ ನಡುವೆ ರುಚಿಕರ ಆಹಾರ, ಜತೆಗೊಂದಷ್ಟು ವಿಹಾರ, ಮನಸ್ಸಿಗೆ, ದೇಹಕ್ಕೆ ಕೆಲಸ ನೀಡಲು ಅನೇಕ ಚಟುವಟಿಕೆಗಳು ಹಾಗೂ ನೆಮ್ಮದಿಯ ನಿದ್ರೆ ಆಲ್ ಇನ್ ಒನ್ ಎಂಬಂತಿದೆ ಈ ರೆಸಾರ್ಟ್ ಸೌಲಭ್ಯಗಳು.
ಒಟ್ಟಿನಲ್ಲಿ ಬೆಂಗಳೂರಿನಿಂದ ಕೇವಲ ನಾಲ್ಕು ಗಂಟೆಗಳ ಪ್ರಯಾಣ, ಹಾಸನದಿಂದ ಕೇವಲ ಅರ್ಧ ಗಂಟೆಯ ದೂರದಲ್ಲೇ ಇರುವ ಈ ರೆಸಾರ್ಟ್ ಸಾಮಾನ್ಯ ಜನರಿಗೂ ಲಕ್ಸುರಿ ಲೈಫ್ ಹೇಗಿದೆ ಎಂಬುದನ್ನು ಪರಿಚಯಿಸುತ್ತಿದೆ. ಅದ್ವಯ ಲಕ್ಸುರಿ ರೆಸಾರ್ಟ್‌ಗೆ ನೀವೂ ಒಮ್ಮೆ ಭೇಟಿ ನೀಡಿ.
ಸಕತ್ತಾಗಿವೆ ರೂಮ್ಸ್

ರಾಯಲ್ ಕೆನೊಪಿ
ಕ್ಲಬ್ ರೂಮ್ಸ್
ಕ್ಲಬ್ ಪ್ರೀಮಿಯಂ ರೂಮ್ಸ್
ರಾಯಲ್ ಕೆನೋಪಿ ಸೂಟ್ಸ್
ವಿಲೇಜ್ ಹೆರಿಟೇಜ್ ಹೌಸ್
ನೀವು ಕೊಡುವ ದರದಲ್ಲಿ ಇವೆಲ್ಲವೂ ಲಭ್ಯ
ವೆಲ್‌ಕಮ್ ಡ್ರಿಂಕ್
ಬ್ರೇಕ್‌ಫಾಸ್ಟ್
ಲಂಚ್
ಹೈ ಟೀ
ಡಿನ್ನರ್ (ವೆಜ್ ಹಾಗೂ ನಾನ್ ವೆಜ್)
ಇನ್ಫಿನಿಟಿ ಪೂಲ್
ಫೊಟೋ ಸ್ಪಾಟ್ಸ್
ಜೀಪ್ ರೈಡ್
ಜಿಪ್ ಲೈನ್
ರೋಪ್ ವಾಕ್ಸ್
ಬ್ಯಾಂಬೂ ವಾಕ್
ವಿಳಾಸ:
ಬಾಳ್ಳುಪೇಟೆ, ಸಕಲೇಶಪುರ, ಕರ್ನಾಟಕ 573214
ಮೊ: +91 6360729090