ಸುತ್ತಲೂ ಅಡಿಕೆ ತೋಟ..ತೋಟದ ನಡುವೆ ಅದ್ದೂರಿಯಾಗಿ ನಿರ್ಮಾಣವಾಗಿರುವ ಸುವ್ಯವಸ್ಥಿತ ಮನೆ. ಮನೆಯೊಳಗೆ ಬರುತ್ತಿದ್ದರೆ ತೊಟ್ಟಿ ಮನೆ ಶೈಲಿಯೇ ಪ್ರಮುಖ ಆಕರ್ಷಣೆಯಂತಿದ್ದು, ನಡುವೆ ಇರುವ ಬಸವನ ಮೂರ್ತಿ ಸ್ವಾಗತಿಸುವಂತೆ ಭಾಸವಾಗುತ್ತದೆ. ಬಿಸಿಲು ಬಂದರೆ ಮನೆಯ ತುಂಬಾ ನೆರಳು ಬೆಳಕಿನ ಹಬ್ಬ, ಮಳೆ ಬಂದರಂತೂ ತೊಟ್ಟಿಯ ಸುತ್ತಲೂ ಕುಳಿತು ಮಳೆಯನ್ನು ಸಂಭ್ರಮಿಸುವ ಅವಕಾಶ. ಇಂಥ ಅನುಭವ ಪಡೆಯುವುದಕ್ಕೆ ನೀವು ಗಂಟೆಗಟ್ಟಲೆ ಪ್ರಯಾಣಿಸಬೇಕಿಲ್ಲ. ಬೆಂಗಳೂರಿನಿಂದ ಕೇವಲ 40 ಕಿಮೀ ದೂರದಲ್ಲಿರುವ ಆರ್‌ಜಿ ಫಾರ್ಮ್‌ ಹೌಸ್‌ಗೆ ಭೇಟಿ ನೀಡಿದರೆ ಸಾಕು.

ಒಂದೆರಡು ದಿನ ಬಿಡುವಾದರೆ ನಗರದ ಜೀವನದಿಂದಾಚೆ ಹೋಗಬೇಕು... ಹಳ್ಳಿಯ ವಾತಾವರಣವಿರಬೇಕು ಆದರೆ ಲಾಡ್ಜ್‌, ಹೊಟೇಲ್‌, ರೆಸಾರ್ಟ್‌ಗಳ ಗದ್ದಲ, ಅಲ್ಲಿನ ಆಹಾರ ಇವೆಲ್ಲ ಬೇಕಿಲ್ಲ. ಮನೆಯಲ್ಲಿಯೇ ಇದ್ದೇವೆ ಎನ್ನುವ ಅನುಭವ ನೀಡುವ ಪ್ರೈವೆಟ್‌ ಸ್ಟೇ ಹುಡುಕುವವರು ನೀವಾದರೆ ನಿಮಗಿದು ಬಹಳ ಒಳ್ಳೆಯ ಆಯ್ಕೆ. ಬೆಂಗಳೂರಿನ ನೆಲಮಂಗಲದಲ್ಲಿರುವ ಆರ್‌ಜಿ ಫಾರ್ಮ್‌ ಹೌಸ್‌ ಸುಮಾರು 3 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ತೋಟದ ನಡುವೆ ಇರುವ ಲಕ್ಸುರಿ ಮನೆಯಂತೂ ಮೊದಲನೋಟದಲ್ಲೇ ಎಲ್ಲರನ್ನೂ ಆಕರ್ಷಿಸುತ್ತದೆ. 6 ಬೆಡ್‌ರೂಮುಗಳಿರುವ ಈ ಮನೆಯಲ್ಲಿ ಡೈನಿಂಗ್‌ ಏರಿಯಾ, ಓಪನ್‌ ಕಿಚನ್‌, ಟಿವಿ ಹಾಲ್‌ ಸೇರಿದಂತೆ ಸಕಲ ಸೌಕರ್ಯಗಳೂ ಇದ್ದು ನಡುವೆ ಇರುವ ತೊಟ್ಟಿ ಮನೆ ವಿನ್ಯಾಸವಂತೂ ಮನೆಯ ತುಂಬೆಲ್ಲಾ ನೈಸರ್ಗಿಕ ಬೆಳಕನ್ನು ಚೆಲ್ಲುತ್ತದೆ.

ಖಾಸಗಿ ಪಾರ್ಟಿ, ವಿಶೇಷ ಕಾರ್ಯಕ್ರಮಕ್ಕೂ ಸೈ!

rg (3)

ಬರ್ತ್‌ ಡೇ ಪಾರ್ಟಿ, ಪೂಲ್‌ ಪಾರ್ಟಿ, ಕಾರ್ಪೊರೆಟ್‌ ಪಾರ್ಟಿಗಳು ಮಾತ್ರವಲ್ಲದೇ ಡೆಸ್ಟಿನೇಷನ್‌ ವೆಡ್ಡಿಂಗ್‌ನಂಥ ಅದ್ದೂರಿ ಕಾರ್ಯಕ್ರಮಗಳಿಗೂ ಈ ಫಾರ್ಮ್‌ ಹೌಸ್‌ನಲ್ಲಿ ಅವಕಾಶವಿದೆ. ವಿಶಾಲವಾದ ಲಾನ್‌ ಏರಿಯಾ, ಪಕ್ಕದಲ್ಲೇ ಸ್ಟೇಜ್‌, ದೊಡ್ಡದಾದ ಪೂಲ್‌ ಸಹ ಯಾವುದೇ ಕಾರ್ಯಕ್ರಮಗಳಿಗೂ ಒಪ್ಪುವಂತಿವೆ.

ಫಾರ್ಮ್‌ ಹೌಸ್‌ ಅಂದರೆ ಇಲ್ಲಿ ವಿಶ್ರಾಂತಿಗಷ್ಟೇ ಅವಕಾಶವಲ್ಲ. ಬದಲಾಗಿ ಇಂಡೋರ್‌ ಹಾಗೂ ಔಟ್‌ ಡೋರ್‌ ಚಟುವಟಿಕೆಗಳಿಗೂ ಇಲ್ಲಿ ಆಯ್ದ ಅವಕಾಶಗಳಿವೆ. ಸ್ನೂಕರ್‌ ಹಾಗೂ ಟೇಬಲ್‌ ಟೆನಿಸ್‌ ಆಡುತ್ತಾ, ಪೂಲ್‌ನಲ್ಲೂ ಎಂಜಾಯ್‌ ಮಾಡಬಹುದು.

ಇನ್ನು ನಾಲ್ಕೈದು ಕುಟುಂಬಗಳು ಜತೆಯಾಗಿ ಇಲ್ಲಿ ಭೇಟಿ ನೀಡುವುದಾದರೆ ಹೆಚ್ಚಿನ ಬೆಡ್‌ರೂಮುಗಳ ಅಗತ್ಯವಿದೆಯೆಂದರೂ ಫಾರ್ಮ್‌ ಹೌಸ್‌ನ ಹಿಂಭಾಗದಲ್ಲಿ ಎಲ್ಲಾ ಸೌಕರ್ಯಗಳೂ ಇರುವ ಹೆಚ್ಚುವರಿ 5 ಬೆಡ್‌ ರೂಮ್‌ಗಳಿವೆ. ಸಂಜೆ ಕಾಫಿ ಹೀರುತ್ತಾ, ಅಡಿಕೆ ತೋಟದಲ್ಲಿ ವಾಕ್‌ ಮಾಡಿದರಂತೂ ನೆಮ್ಮದಿ ನೀಡುವ ಗ್ರಾಮೀಣ ಬದುಕಿನ ಅನುಭವ ನಿಮಗಾಗುವುದರಲ್ಲಿ ಸಂದೇಹವಿಲ್ಲ.

rg (2)
ನಾನು ಬೆಂಗಳೂರಿನ ಬಸವೇಶ್ವರ ನಗರ ಮೂಲದವನು.ತೊಟ್ಟಿ ಮನೆ ವಿನ್ಯಾಸದಲ್ಲಿ ಮನೆ ನಿರ್ಮಿಸಿ ಅಲ್ಲೇ ಉಳಿದುಕೊಳ್ಳಬೇಕೆಂದು ನನ್ನ ಕನಸಾಗಿತ್ತು. ನೆಲಮಂಗಲದ ಬಳಿ ಇಂಥ ಮನೆ ನಿರ್ಮಾಣ ಮಾಡಿದ್ದೆ. ಆದರೆ ಸದ್ಯ ಅಲ್ಲಿ ಉಳಿದುಕೊಳ್ಳಲಾಗದ ಕಾರಣ ಕಳೆದ 7 ತಿಂಗಳಿನಿಂದಲೂ ಅದನ್ನು ಇವೆಂಟ್‌ಗಳಿಗೆ ಹಾಗೂ ಗ್ರಾಹಕರಿಗಾಗಿ ಬಾಡಿಗೆಗೆ ನೀಡುತ್ತಲೇ ಬಂದಿದ್ದೇನೆ. ಈಗಾಗಲೇ ಅನೇಕ ಕಾರ್ಯಕ್ರಮಗಳು ನಮ್ಮ ಫಾರ್ಮ್‌ ಹೌಸ್‌ನಲ್ಲಿ ನಡೆದಿವೆ. ದೊಡ್ಡ ಫ್ಯಾಮಿಲಿಗಳು ವೀಕ್‌ಎಂಡ್‌ ಸ್ಟೇಗೂ ಬರುವುದಿದೆ. ಪ್ರೈವೇಟ್‌ ಲೈಫ್‌ ಬೇಕೆನ್ನುವವರು ಇಲ್ಲಿಗೆ ಬಂದು ಉಳಿದುಕೊಳ್ಳುವುದೂ ಇದೆ. ಆಹಾರವೂ ಸೇರಿ ಪ್ರತಿ ವ್ಯಕ್ತಿಗೆ 4000 ರುಪಾಯಿಯಾಗುತ್ತದೆ. ಲಕ್ಸುರಿ ಜೀವನದ ಅನುಭವ ಪಡೆಯುವುದಕ್ಕೆ ಇದು ಕಡಿಮೆ ಮೊತ್ತವೇ ಆದರೂ, ಗ್ರಾಹಕ ಸ್ನೇಹಿಯಾಗಿದೆ.
ಅಕ್ಷಯ್‌, ಮಾಲೀಕರು

ವಿಳಾಸ:

ಆರ್‌ಜಿ ಫಾರ್ಮ್ ಹೌಸ್‌, ಗಿರಿಜಾಪುರ, ಮಾಗಡಿ

ಮೊ: 9886021314 / 8553021314