ನೋ ವೈಫೈ...ಎಂಜಾಯ್ ರಿಯಲ್ ಲೈಫ್
ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಪರೀಕ್ಷೆಯ ಹೊರೆ ಮುಗಿದು ಬೇಸಗೆ ರಜೆ ಸಿಕ್ಕಿದೆ. ಮನೆಯಲ್ಲಿದ್ದರೆ ಬರಿಯ ಟಿವಿ, ಟ್ಯಾಬ್, ಕಂಪ್ಯೂಟರ್, ಮೊಬೈಲ್ ಹೀಗೆ ಸ್ಕ್ರೀನ್ ಟೈಮ್ ಹೆಚ್ಚಾಗುವುದರಿಂದ ಒಳ್ಳೆಯ ಬೇಸಗೆ ಶಿಬಿರಕ್ಕೆ ಸೇರಿಸುವ ತರಾತುರಿ ಹೆತ್ತವರದ್ದಾಗಿರುತ್ತದೆ. ಆದರೆ ಮನೆಬಿಟ್ಟು ಕೂರದ ಮಕ್ಕಳಿಗಾಗಿ ವಿಶೇಷ ಶಿಬಿರವಿದ್ದರೇನೇ ಚಂದ ಎನ್ನುವ ಪೋಷಕರಿಗಾಗಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಯಶ್ ಫಾರ್ಮ್ ಸ್ಟೇ ಸಜ್ಜಾಗಿದೆ.
ಇಂದಿನ ಮಕ್ಕಳಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡುವ ವಿಧಾನ ಗೊತ್ತಿದೆ. ಆದರೆ ಸಾಮಾನ್ಯವಾಗಿ ತರಕಾರಿಗಳನ್ನು ಬೆಳೆಸುವ ಬಗೆ ಹೇಗೆ ಎಂಬುದರ ಬಗ್ಗೆ ಬರಿಯ ಪಠ್ಯ ಪುಸ್ತಕದಲ್ಲಿ ನೀಡಿರುವ ಮಾಹಿತಿಯಷ್ಟೇ ಗೊತ್ತು. ಮಣ್ಣು, ಪರಿಸರದೊಂದಿಗೆ ಬೆಳೆಯಬೇಕಾದ ಮಕ್ಕಳು ಇಂದು ಸ್ಕ್ರೀನ್ ಟೈಮ್‌ನಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ತರಕಾರಿ, ದವಸಧಾನ್ಯಗಳೆಂದರೆ ಶಾಪಿಂಗ್ ಮಾರ್ಟ್‌ಗಳು, ದಿನಸಿ ಅಂಗಡಿಗಳು ಇಲ್ಲವೇ ಆಪ್‌ಗಳ ಮೂಲಕ 10 ನಿಮಿಷಗಲ್ಲಿ ಮನೆ ಬಾಗಿಲಿಗೇ ತಲುಪುವ ಉತ್ಪನ್ನಗಳಾಗಿ ಅಷ್ಟೇ ಪರಿಚಯವಿರುತ್ತದೆ. ಆದರೆ ಮಣ್ಣಿನೊಳಗೆ ಇಳಿವ ಬೀಜಗಳು ಮೊಳಕೆಯೊಡೆದು, ಗಿಡವಾಗಿ, ಹೂಬಿಟ್ಟು, ಕಾಯಿ, ಹಣ್ಣುಗಳಾಗುವ ಪ್ರಕೃತಿಯೇ ಪ್ರಕೃತಿಯ ಅದ್ಭುತಗಳಲ್ಲೊಂದು. ಮಣ್ಣು, ನೀರು ಹಾಗೂ ಸೂರ್ಯನ ಬೆಳಕು ಇವು ಪ್ರತಿ ಗಿಡ, ಬಳ್ಳಿ, ಮರಗಳಗಳ ಮೂಲಕ ಹೂವು-ತರಕಾರಿ-ಹಣ್ಣುಗಳನ್ನು ಸೇರುವ ಪ್ರಕೃತಿಯೆಯೇ ವಿಶೇಷವಾದುದು. ಇದರ ಬಗೆಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸಿದರೆ ಹೇಗೆ? ಪಠ್ಯಕ್ಕಷ್ಟೇ ಸೀಮಿತವಾಗಿದ್ದ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರೆ? ಹೀಗೊಂದು ಯೋಜನೆಯ ಮೂಲಕ ಹುಟ್ಟಿಕೊಂಡಿದ್ದೇ ಯಶ್ ಫಾರ್ಮ್ ಸ್ಟೇ ಹಾಗೂ ಯಶ್ ಫಾರ್ಮ್- ಸೆಂಟರ್ ಫಾರ್ ಸಸ್ಟೇನೆಬಲ್ ಲಿವಿಂಗ್.
ಇದನ್ನೂ ಓದಿ: ಆರ್‌ಜಿ ಫಾರ್ಮ್ ಹೌಸ್: ದುಬಾರಿಯಲ್ಲ ಈ ಕುಬೇರನ ಅರಮನೆ
ಮಕ್ಕಳು ಕೈ ಕೊಳೆ ಮಾಡಿಕೊಳ್ಳಲಿ ಬಿಡಿ
ಸಿಲಿಕಾನ್ ಸಿಟಿಯ ಐಟಿ ಹಬ್ ಎನಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿಯಿಂದ ಸುಮಾರು 6ಕಿಮೀ ದೂರದಲ್ಲೇ ಇರುವ ಈ ಫಾರ್ಮ್ ಹೌಸ್‌ಗೆ ಬಂದರೆ ಮಕ್ಕಳು ಕೈಯಲ್ಲಿರುವ ಗ್ಯಾಜೆಟ್ಸ್ ದೂರವಿರಿಸಿ ಮಣ್ಣಿನ ಮಕ್ಕಳಾಗಿಬಿಡುತ್ತಾರೆ. ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಜೇನು ಕೃಷಿ ಹೀಗೆ ನೇರವಾಗಿ ಪ್ರಕೃತಿಯ ಜತೆಗೆ ಬಂಧವನ್ನು ಬೆಸೆದುಕೊಂಡು, ಮಣ್ಣಿನಲ್ಲಿ ಆಡುತ್ತಾ, ಕೈಗಳನ್ನು ಕೊಳೆ ಮಾಡಿಕೊಳ್ಳಬಹುದು. ಸಾಕು ಪ್ರಾಣಿಗಳ ಜತೆಗೂ ಸುಂದರವಾದ ಕ್ಷಣಗಳನ್ನು ಕಳೆಯಬಹುದು.

ಇದು ಫಾರ್ಮ್ ಹೌಸ್ ಆಗಿರುವುದರಿಂದ ಇಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆಯನ್ನೇ ನೀಡಲಾಗಿದೆ. ಇಲ್ಲಿ ಬೆಳೆಯುವ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳನ್ನೇ ಇಲ್ಲಿಗೆ ಬರುವ ಅತಿಥಿಗಳಿಗಾಗಿ ಸಿದ್ದಪಡಿಸುವ ಅಡುಗೆಯಲ್ಲಿ ಉಪಯೋಗ ಮಾಡಲಾಗುತ್ತದೆ. ಬೆಳೆಗಳ ಕೊಯಿಲು, ಸಾಕು ಪ್ರಾಣಿಗಳೊಂದಿಗೆ ಮುಕ್ತವಾಗಿ ಬೆರೆಯುವುದು, ಆಹಾರ ಚಕ್ರದಲ್ಲಷ್ಟೇ ಅಲ್ಲದೆ ಆಹಾರ ತಯಾರಿಕೆಯ ನೈಸರ್ಗಿಕ ಹಂತಗಳ ಬಗೆಗೂ ಇಂಚಿಂಚೂ ಮಾಹಿತಿಗಳನ್ನು ಪ್ರಾಯೋಗಿಕವಾಗಿಯೇ ಇಲ್ಲಿ ತಿಳಿಯುವುದಕ್ಕೆ ಸಾಧ್ಯ.
ಇಂಥ ವಿಭಿನ್ನ ವಾತಾವರಣದಲ್ಲಿ ವಾರಾಂತ್ಯಗಳನ್ನು ಕಳೆಯಬೇಕು, ಇಲ್ಲವೇ ನಿಮ್ಮ ಬಿಡುವಿನ ವೇಳೆಯನ್ನು ಕಳೆಯಬೇಕು ಅಂದುಕೊಂಡರೆ ಅದಕ್ಕೂ ಇಲ್ಲಿ ಅವಕಾಶವಿದೆ. ಒಂದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ತೋಟದ ನಡುವೆ ವಾಸ್ತವ್ಯವನ್ನೂ ಮಾಡಬಹುದಾಗಿದ್ದು, ಪ್ರಕೃತಿ ನಡಿಗೆ, ಕೃಷಿ ಅನುಭವಗಳನ್ನೂ ಪಡೆದುಕೊಳ್ಳಬಹುದು.

ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಬೆಸ್ಟ್ ಆಯ್ಕೆ
2019 ರಿಂದಲೇ ಕಾರ್ಯಾರಂಭವಾಗಿರುವ ಈ ಫಾರ್ಮ್ ಹೌಸ್‌ನಲ್ಲಿ ಈಗಾಗಲೇ 3,500 ಕ್ಕೂ ಹೆಚ್ಚು ಅತಿಥಿಗಳು ಬಂದು, ಜೀವನದಲ್ಲಿ ಹೊಸ ಅನುಭವಗಳಿಗೆ ಸಾಕ್ಷಿಯಾಗಿದ್ದಾರೆ. ವಿಶೇಷವೆಂದರೆ ಈ ತೋಟದ ಮನೆಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್, ಅರಿಶಿಣ ಶಾಸ್ತ್ರ, ನಾಮಕರಣ, ಮುಂಜಿ, ಸೀಮಂತ ಹೀಗೆ ಅನೇಕ ಕಾರ್ಯಕ್ರಮಗಳಿಗೂ ಅನುವು ಮಾಡಿಕೊಡಲಾಗುತ್ತದೆ. ಆದರೆ ಪ್ರತಿಯೊಂದರ ದರವೂ ಭಿನ್ನವಾಗಿರುತ್ತದೆ.
ಒಟ್ಟಿನಲ್ಲಿ ಮಕ್ಕಳಿಗೆ ರಜೆಯನ್ನು ಪ್ರಕೃತಿಯೊಂದಿಗೆ ಕಳೆಯುವುದಕ್ಕೆ ಸೂಕ್ತ ತಾಣವಾಗಿರುವ ಯಶ್ ಫಾರ್ಮ್ ಹೌಸ್, ಎಲ್ಲ ವಯಸ್ಸಿನವರಿಗೂ ನೆಮ್ಮದಿಯ ಕ್ಷಣಗಳನ್ನು ಕಳೆಯಲಿರುವ ತಾಣವೂ ಹೌದು. ಬೆಸ್ಟ್ ಚೈಲ್ಡ್‌ಹುಡ್ ಮೆಮೊರಿ ಸ್ಕ್ರೀನ್ ಟೈಮ್‌ನಲ್ಲಿ ಸಿಗುವುದಲ್ಲ, ಬದಲಾಗಿ ಅದು ಪ್ರಕೃತಿಯೊಂದಿಗೆ ಮಾತ್ರ ಸಿಗಲು ಸಾಧ್ಯ ಎಂಬ ಸಂದೇಶವನ್ನು ಈ ಫಾರ್ಮ್ ಹೌಸ್ ಸಾರಿ ಹೇಳುವಂತಿದೆ.
ಮಕ್ಕಳಿಗಾಗಿ ಕೃಷಿ ಪ್ರವಾಸ
ಏಪ್ರಿಲ್ ತಿಂಗಳಿನಲ್ಲಿ
ಬ್ಯಾಚ್ 1: ಏಪ್ರಿಲ್ 10-12
ಬ್ಯಾಚ್ 2: ಏಪ್ರಿಲ್ 17-19
ಮಕ್ಕಳೊಂದಿಗೆ ಪೋಷಕರು ಇರಲೇಬೇಕು.
ವಿಳಾಸ:
ಯಶ್ ಫಾರ್ಮ್ ಸ್ಟೇ
ಚಂದ್ರಾಪುರ - ದೊಮ್ಮನಸಂದ್ರ ರಸ್ತೆ, ಬೆಂಗಳೂರು
ಮೊ: 7676773750