- ಶ್ರೀನಿವಾಸ ಮೂರ್ತಿ ಎನ್ ಎಸ್

ಬೆಂಗಳೂರು ಸಮೀಪದಲ್ಲಿಯೇ ಹಲವು ಚಾರಣ ಸ್ಥಳಗಳಿವೆ. ಆದರ ಸಮೀಪದಲ್ಲಿ ಚಾರಣಪ್ರಿಯರು ಮತ್ತು ಪ್ರಕೃತಿ ಪ್ರಿಯರಿಗೆ ಕಾಡುವ ಮತ್ತೊಂದು ಸ್ಥಳವೇ ಕೇರಳದ ವಯನಾಡು. ಕರ್ನಾಟಕಕ್ಕೆ ಹೊಂದಿಕೊಂಡಂತೆ ಇರುವ ಇಲ್ಲಿ ಹಲವು ಸುಂದರ ಸ್ಥಳಗಳಲ್ಲಿ ಚಾರಣಿಗರು, ಪ್ರಕೃತಿ ಪ್ರಿಯರ ಜತೆಯಲ್ಲಿ ಇತಿಹಾಸವನ್ನು ಒಡಲಲ್ಲಿ ಇಟ್ಟುಕೊಂಡ ಸ್ಥಳ ಎಡಕಲ್ಲು ಗುಡ್ಡ.

ಹಲವು ಸಲ ವಯನಾಡಿಗೆ ಹೋದಗಲೂ ಕಾರಣದಿಂದ ಎಡಕಲ್ಲು ಗುಡ್ಡ ಮರೀಚಿಕೆಯಾಗೆ ಕಾಣುತ್ತಿತ್ತು. ಈ ಬಾರಿ ಅದರ ಪಯಣದ ಕನಸಿಗೆ ನನಸು ಮಾಡಲು ಬೆಂಗಳೂರು ಬಿಟ್ಟಾಗ ದಟ್ಟ ಇರುಳಿನ ಮೇಲೆ ಹೊಂಗಿರಣಗಳು ಇನ್ನು ಬಿದ್ದರಲಿಲ್ಲ. ಹೊಂಗಿರಣದ ಸಮಯದಲ್ಲಿ ನಾವು ನಂಜನಗೂಡಿನಿಂದ ಸುಲ್ತಾನ ಬತೇರಿ ಮೂಲಕ ವಯನಾಡು ರಸ್ತೆಯಲ್ಲಿ ಇದ್ದೆವು. ಬೆಳಕಿನ ಕಿರಣಗಳು ಬಂಡೀಪುರದ ಅರಣ್ಯ ಭಾಗದಲ್ಲಿ ಹೊಕ್ಕಂತೆ ಹೊಸ ಲೋಕ. ಛಾಯಚಿತ್ರಕ್ಕೆ ಹೇಳಿ ಮಾಡಿಸಿದ ಪಯಣ. ಕೇರಳದ ಗಡಿ ಪ್ರವೇಶ ಮಾಡಿ ಎಡಕಲ್ಲು ಗುಡ್ಡದ ತಂಗುದಾಣ ತಲುಪಿದಾಗ ಮುಂಜಾನೆ ಹತ್ತರ ಸಮಯ.

edakal cave 2

ಸುಲ್ತಾನ ಬತೇರಿಯಿಂದ ಸುಮಾರು 14 ಕಿ ಮೀ ಇರುವ ಎಡಕಲ್ಲು ಗುಡ್ಡದ ಪ್ರವೇಶ ಪಡೆದು ಹೊರಟರೆ ಸುಮಾರು 700 ಮೀ ಚಾರಣದ ಪಯಣ ಸುಮಾರು 45 ನಿಮಿಷದ ಚಾರಣದ ಮಾರ್ಗ ಕಠಿಣವಾಗಿದ್ದರೂ ಮೆಟ್ಟಿಲುಗಳು ಮತ್ತು ಉಕ್ಕಿನ ಕಂಬಿಗಳು ಹಾದಿಯನ್ನು ಸುಗಮ ಮಾಡುತ್ತದೆ. ಅಲ್ಲಲ್ಲಿ ಬಂಡೆಗಳ ಮೂಲಕ ಸಾಗ ಬೇಕಾದರೂ ಆರಂಭದಲ್ಲಿ ಸಿಗುವ ಕಾಫಿ ತೋಟಗಳು ಮತ್ತು ಹಸಿರಿನ ಸಿರಿ ಆಯಾಸವನ್ನು ಮರೆಮಾಚುತ್ತದೆ.

ಆರಂಭದಲ್ಲಿ ಸಿಗುವ ಮಾರ್ಗದಲ್ಲಿ ಸಾಗಿದರೆ ಬಂಡೆಯ ಪಯಣ ಆರಂಭ. ಸ್ವಲ್ಪ ಪ್ರಯಾಸ ಮಾಡಿ ಹತ್ತಿದರೆ ಸಿಗುವದೇ ಮೊದಲ ನೈಸರ್ಗಿಕ ಗುಹೆಗಳು. ಇದನ್ನು ಬಳಸಿ ಮುಂದೇ ಪಯಣ ಸಾಗಿದರೆ ಕಡಿದಾದ ಬೆಟ್ಟದ ಶ್ರೇಣಿ ಇದ್ದರೂ ಸುಸುಜ್ಜಿತ ಮೆಟ್ಟಿಲುಗಳು ಪುರಾತನ ಶಿಲಾಯುಗದ ಗುಹೆಗಳು ಕರೆದೊಯ್ಯುತ್ತದೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರವನ್ನು ನೆನಪಿಸುವ ಈ ಗುಹೆ ತನ್ನ ಒಡಲಲ್ಲಿ ಹಲವು ಇತಿಹಾಸವನ್ನೆ ಹೊತ್ತು ನಿಂತಿದೆ. ಸಮುದ್ರ ಮಟ್ಟದಿಂದ ಸುಮಾರು 3900 ಅಡಿ ಎತ್ತರವಿರುವ ಈ ಬೆಟ್ಟದ ಗುಹೆಗಳು ಸುಮಾರು ಕ್ರಿಸ್ತ ಪೂರ್ವ 6000 ವರ್ಷದ್ದು ಎಂಬ ಅನಿಸಿಕೆ. ಇಲ್ಲಿನ ನವಶಿಲಾಯುಗದ ಚಿತ್ರಗಳು ಸುಮಾರು 8000 ವರ್ಷದ ಹಿಂದಿನದು ಎಂಬುದು ಇತಿಹಾಸಕಾರರ ಅನಿಸಿಕೆ. ಸುಮಾರು 29 ಅಡಿ ಎತ್ತರದ ಎರಡು ಬಂಡೆಗಳ ನಡುವೆ ಇರುವ ಈ ಗುಹೆಗಳು ನೈಸರ್ಗಿಕವಾಗಿ ನಿರ್ಮಾಣವಾಗಿದೆ. ಇಲ್ಲಿ ಮೂರು ವಿಧದ ಶಿಲಾಲಿಪಿಗಳಿದ್ದು ಇದರಲ್ಲಿ ಜಾರ್ ಕಪ್ ಹೊಂದಿದ ಮನುಷ್ಯನದು ಒಂದು ಎಂದು ಕೇರಳ ಹಿರಿಯ ಇತಿಹಾಸಕಾರ ರಾಘವ ವಾರಿಯಾರ್ ಅವರ ಅನಿಸಿಕೆ.

edacal cave 1

ಬಹುತೇಕ ಪ್ರಕೃತಿಯ ಮಡಿಲಲ್ಲಿ ಮರೆಯಾಗಿದ್ದ ಈ ಗುಹೆಯನ್ನು 1890 ರಲ್ಲಿ ಮಲಬಾರ್ ರಾಜ್ಯದ ಪೋಲಿಸ್ ಅಧಿಕಾರಿಯಾಗಿದ್ದ ಫ್ರೆಡ್ ಫಾಸೆಟ್ ಅವರ ಗಮನಕ್ಕೆ ಈ ಬಗ್ಗೆ ಲೇಖನ ಪ್ರಕಟಣೆ ಮಾಡಿ ಇತಿಹಾಸಕಾರರ ಗಮನ ಸೆಳೆದರು. ಇಲ್ಲಿ ಬ್ರಾಹ್ಮಿ ಮತ್ತು ತಮಿಳು ಲಿಪಿಗಳು ಬಹುಕಾಲ ಜನವಸತಿಗಳು ಬೆಳೆದು ಬಂದ ಬಗ್ಗೆ ಸಾಕ್ಷಿಯಾಗಿದೆ.

ಸ್ಥಳಪುರಾಣದ ಪ್ರಕಾರ ಕುಟ್ಟಿ ಚಾಥನ್ ಮತ್ತು ಮುಡಯಂಪಿಲ್ಲಿ ದೇವಿಯೊಂದಿ ಸೇರಿಕೊಂಡಿದ್ದು ದೇವಿಯನ್ನು ಗೌರವಿಸಲು ಸ್ಥಳಿಯರು ಇಲ್ಲಿಗೆ ತೀರ್ಥಯಾತ್ರೆ ಮಾಡುತ್ತಿದ್ದರು. ದಂತಕಥೆಯ ಪ್ರಕಾರ ಲವ ಮತ್ತು ಕುಶ ಎಸೆದ ಬಾಣದಿಂದ ಗುಹೆ ಹುಟ್ಟಿಕೊಂಡಿತು ಎನ್ನಲಾಗಿದೆ.

ಚಾರಣ ಮಾಡಲು ಬೆಳಿಗ್ಗೆ ಅಥವಾ ಸಂಜೆಯ ಸಮಯ ಸೂಕ್ತ ಸಂಜೆ 4.00 ಘಂಟೆಗೆ ಪ್ರವೇಶ ಮುಚ್ಚುವ ಕಾರಣ ಬೆಳಿಗ್ಗೆ ಸಮಯ ಆರಸಿಕೊಳ್ಳುವುದು ಸೂಕ್ತ. ಸುಮಾರು 1.5 ಕಿಮೀ ದೂರದ ಪಯಣದಲ್ಲಿ 700 ಮೀ ಬಂಡೆಯ ಮಾರ್ಗವಿದೆ. ಉಳಿದಂತೆ ದಾರಿಯಲ್ಲಿ ಸಿಗುವ ಸ್ಥಳೀಯ ಮಸಾಲ ಪದಾರ್ಥಗಳು, ಕರಕುಶಲ ವಸ್ತುಗಳ ಅಂಗಡಿಗಳು ನಿಮ್ಮನ ಕೈ ಬೀಸಿ ಕರೆಯುತ್ತದೆ. ಮಾರ್ಗದಲ್ಲಿ ಸಿಗುವ ಕಾಫಿ ತೋಟಗಳು ನಿಮ್ಮ ಮನ ತಣಿಸುತ್ತವೆ ಮತ್ತು ಛಾಯಚಿತ್ರ ತೆಗೆಯುವ ಬಯುಸವವರಿಗೆ ಸುಂದರ ಸ್ಥಳಗಳು. ಬೆಟ್ಟದ ಮೇಲೆ ಸಿಗುವ ಪ್ರಕೃತಿಯ ಸುಂದರ ಚಿತ್ರಣ ಮರೆಯಬೇಡಿ.

edakal cave (1)

ಸೋಮವಾರ ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ ಒಂಬತ್ತರಿಂದ ಸಂಜೆ ನಾಲ್ಕರವೆರೆಗೆ ಮಾತ್ರ ಪ್ರವೇಶವಿದ್ದು ವಯಸ್ಕರಿಗೆ ರು. 20 ಮತ್ತು ಕ್ಯಾಮೆರಕ್ಕೆ ರು. 30 ದರವಿದೆ. ಸೂಚಿಪರ ಜಲಪಾತದಿಂದ ಸುಮಾರು 40 ಕಿಮೀ ದೂರದಲ್ಲಿದ್ದು ಪ್ರಶಾಂತ ಜಲಪಾತಕ್ಕೆ 30 ಕಿ ಮೀ ದೂರದಲ್ಲಿರುವ ಕಾಂತಾಪರ ಜಲಪಾತ, ಸಮೀಪದ ಗಾಜಿನ ಸೇತುವೆ ಮನ ಸೆಳೆಯುತ್ತದೆ. ಇಲ್ಲಿನ ಮಾರ್ಗ ಕಠಿಣವಾಗಿದ್ದರೂ ಅತ್ಯುತ್ತಮ ಸ್ಥಳ. ಸಮೀಪದಲ್ಲಿಯೇ ಸೂಚಿಪರ ಜಲಪಾತವಿದೆ. ಒಂದು ಸೂಕ್ತ ಸ್ಥಳಗಳಾಗಿದ್ದು ಸಮಯವಿದ್ದಲ್ಲಿ ಮಾರನೇ ದಿನ ಅಪುರೂಪದ ಫ್ಯಾಂಟಮ್ ಶಿಲೆಗಳು, ಮ್ಯೂಸಿಯಂ ನೋಡಿಕೊಂಡು ಉಳಿದ ಸ್ಥಳಗಳಿಗೆ ಹೋಗಬಹುದು.