ಆಂಧ್ರಪ್ರದೇಶದಲ್ಲಿ ಸಿಗಲಿದೆ ಅಲ್ಟ್ರಾ-ಲಕ್ಸುರಿ ಕ್ರೂಸ್ಗಳ ಸೇವೆ
ಮೊದಲ ಹಂತದಲ್ಲಿ ವಿಜಯವಾಡಾ ಸಮೀಪದ ಭವಾನಿ ದ್ವೀಪ ಹಾಗೂ ಬಾಪಟ್‌ಲಾ ಜಿಲ್ಲೆಯ ಸೂರ್ಯಲಂಕಾ ಬೀಚ್ ಪ್ರದೇಶಗಳಲ್ಲಿ ಒಟ್ಟು ಐದು ಲಕ್ಸುರಿ ಬೋಟುಗಳನ್ನು ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಈ ಬೋಟುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ವಿಶಿಷ್ಟ ಅನುಭವ ಮತ್ತು ವಿಶ್ರಾಂತಿ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಆಂಧ್ರಪ್ರದೇಶ ಸರಕಾರವು ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನದಿ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ಅಲ್ಟ್ರಾ-ಲಕ್ಸುರಿ ಬೋಟು, ಕ್ರೂಸ್ ಸೇವೆಗಳನ್ನು ಆರಂಭಿಸಲು ಮುಂದಾಗಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (APSTDC) ಈ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ನೀಡಿದ್ದು, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಮೊದಲ ಹಂತದಲ್ಲಿ ವಿಜಯವಾಡಾ ಸಮೀಪದ ಭವಾನಿ ದ್ವೀಪ ಹಾಗೂ ಬಾಪಟ್‌ಲಾ ಜಿಲ್ಲೆಯ ಸೂರ್ಯಲಂಕಾ ಬೀಚ್ ಪ್ರದೇಶಗಳಲ್ಲಿ ಒಟ್ಟು 5 ಲಕ್ಸುರಿ ಬೋಟುಗಳನ್ನು ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಈ ಬೋಟುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ವಿಶಿಷ್ಟ ಅನುಭವ ಮತ್ತು ವಿಶ್ರಾಂತಿ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಯೋಜನೆಯ ಭಾಗವಾಗಿ ಐದು ಜೆಟ್ಟಿಗಳ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು, ಕ್ರೂಸ್ ಸಂಚಾರ ಮತ್ತು ಪ್ರಯಾಣಿಕರ ಸೌಲಭ್ಯಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೋಟುಗಳಲ್ಲಿ ಐಷಾರಾಮಿ ಕೊಠಡಿಗಳು, ಭೋಜನ ವ್ಯವಸ್ಥೆ, ಸಭಾಂಗಣಗಳು ಹಾಗೂ ಮನರಂಜನಾ ಸೌಲಭ್ಯಗಳು ಇರಲಿವೆ. ಬೋಟುಗಳಲ್ಲಿ 100 ರಿಂದ 200 ಜನರು ಪ್ರಯಾಣಿಸಬಹುದಾಗಿ ತಿಳಿಸಲಾಗಿದೆ.
ಭವಿಷ್ಯದಲ್ಲಿ ಗೋದಾವರಿ ನದಿಯ ರಾಜಮಹೇಂದ್ರವರಂ, ವಿಷಾಖಪಟ್ಟಣಂ ಹಾಗೂ ನಾಗಾರ್ಜುನ ಸಾಗರ್ ಸೇರಿದಂತೆ ಇತರ ಪ್ರವಾಸಿ ತಾಣಗಳಲ್ಲಿಯೂ ಇದೇ ರೀತಿಯ ಕ್ರೂಸ್ ಸೇವೆಗಳನ್ನು ಆರಂಭಿಸುವ ಸಾಧ್ಯತೆಗಳ ಅಧ್ಯಯನ ನಡೆಸಲಾಗುತ್ತಿದೆ.