ಕಾಂಗಾರೂಗಳ ನಾಡಾಗಿರುವ ಆಸ್ಟ್ರೇಲಿಯಾದ ಸೊಬಗು, ಆತಿಥ್ಯವನ್ನು ಸವಿಯಲು ಪ್ರವಾಸ ಮಾಡಬೇಕೆಂದುಕೊಂಡಿದ್ದರೆ ರಾಜ್ಯದ ಪ್ರತಿಷ್ಠಿತ ಟ್ರಾವೆಲ್‌ ಸಂಸ್ಥೆಯಾದ ಅಡಿಗಾಸ್‌ ಯಾತ್ರಾ ಅದ್ಭುತ ಪ್ಯಾಕೇಜ್‌ ಅನ್ನು ಸಿದ್ಧಪಡಿಸಿದೆ. ಒಟ್ಟು 13 ದಿನಗಳ ಆಸ್ಟ್ರೇಲಿಯಾ ಪ್ರವಾಸವನ್ನು ಅಡಿಗಾಸ್‌ ಯಾತ್ರಾ ಕಲ್ಪಿಸಿದ್ದು, ಇದರಲ್ಲಿ ಹೆಲಿಕಾಪ್ಟರ್‌ ನಲ್ಲಿ ಹಾರಾಟ, ಹಡಗಿನಲ್ಲಿ ಡಿನ್ನರ್‌, ಸಿಡ್ನಿ ನಗರದ ಸುತ್ತಾಟ, ವಿಶ್ವವಿಖ್ಯಾತ ಒಪೆರಾ ಹೌಸ್‌ನಲ್ಲಿ ವಾಕಿಂಗ್‌, ಬ್ಲೂ ಮೌಂಟೇನ್‌ ನ ಸೌಂದರ್ಯ ವೀಕ್ಷಣೆಯಷ್ಟೇ ಅಲ್ಲದೆ ಬೀಚ್‌ಗಳಲ್ಲೂ ಕಾಲ ಕಳೆಯಬಹುದು. ಮೆಲ್ಬೋರ್ನ್‌ನ ಸಂಸ್ಕೃತಿ ಮತ್ತು ಕಲೆಗಳ ಕೇಂದ್ರ, ಗೋಲ್ಡ್‌ ಕಾಸ್ಟ್‌ನ ಸುಂದರ ಕಡಲ ತೀರಗಳನ್ನು ಎಂಜಾಯ್‌ ಮಾಡಬಹುದು.

ಇದನ್ನೂ ಓದಿ: ಅಡಿಗಾಸ್‌ ಯಾತ್ರಾದಿಂದ ಪ್ರವಾಸಿಗರಿಗೆ ಸಿಹಿ ಸುದ್ದಿ

ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಸಿಡ್ನಿ ಹಾರ್ಬರ್‌ನ ಹಡಗಿನಲ್ಲಿ ಆತಿಥ್ಯದ ಜತೆಗೆ ಸುಂದರ ಸೂರ್ಯಾಸ್ತದ ದೃಶ್ಯವನ್ನು ಆನಂದಿಸಬಹುದು. ವಿಶ್ವ ಪ್ರಸಿದ್ಧ ಸಿಡ್ನಿ ಹಾರ್ಬರ್‌ ಬ್ರಿಡ್ಜ್‌ , ಸೀ ಲೈಫ್‌ ಅಕ್ವೇರಿಯಂ, ಸಿಡ್ನಿ ಟವರ್‌, ವೈಲ್ಡ್‌ ಲೈಫ್‌ ಝೂ, ಮಡಾಮ್‌ ತುಸ್ಸಾಡ್ಸ್‌ ಮ್ಯೂಸಿಯಂ ವೀಕ್ಷಿಸಬಹುದು. ಕೇಬಲ್‌ ವೇ, ಸ್ಕೈವೇ ಮತ್ತು ರೈಲ್ವೆಯಲ್ಲಿ ಪ್ರವಾಸದ ಮಜಾ ಅನುಭವಿಸಬಹುದು. ಆಸ್ಟ್ರೇಲಿಯಾದ ನಾರ್ತ್‌ ಕ್ವೀನ್ಸ್‌ಲ್ಯಾಂಡ್‌ ವಲಯದ ಕುರಾಂಡದಿಂದ ಕೈರ್ನ್ಸ್‌ ತನಕ ಇಡೀ ದಿನದ ಪ್ರಯಾಣವು ಆಸ್ಟ್ರೇಲಿಯಾದ ಅದ್ಭುತ ಮಳೆ ಕಾಡುಗಳ, ಗ್ರಾಮೀಣ ಭಾಗದ ದರ್ಶನ ಮಾಡಿಸುತ್ತದೆ. ಗೋಲ್ಡ್‌ ಕಾಸ್ಟ್‌ನಲ್ಲಿ ಸಮುದ್ರ ಜೀವಿಗಳ ದರ್ಶನ ಪಡೆಯಬಹುದು. ಮನರಂಜನೆ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆಯ ಅರಿವೂ ಆಗುತ್ತದೆ. ಫಿಲಿಪ್‌ ದ್ವೀಪದಲ್ಲಿ ಪೆಂಗ್ವೀನ್‌ ಗಳ ಪರೇಡ್‌ ವೀಕ್ಷಿಸಬಹುದು.

4 ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ, ಅತ್ಯುತ್ತಮ ಊಟೋಪಚಾರ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವೀಸಾ ವ್ಯವಸ್ಥೆ, ವಿಮೆ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಅಡಿಗಾಸ್‌ ಯಾತ್ರಾ ಮಾಡಿಕೊಡುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ:

080-26616678 / 7022259008 / 9449478944

Website: www. adigasyatra.com