ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್‌ಸಿಟಿಸಿ) ಮಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಮಂಗಳೂರಿನಲ್ಲಿ ಆರಂಭವಾಗುವ ಅಥವಾ ಮಂಗಳೂರಿನ ಮೂಲಕ ಹೋಗುವ ರೈಲು ಹಾಗೂ ವಿಮಾನ ಉತ್ತಮ ಪ್ಯಾಕೇಜ್‌ಗಳನ್ನು ನೀಡಲಿದೆ ಎಂದು ಐಆರ್‌ಸಿಟಿಸಿ ಯ ಜಂಟಿ ಜನರಲ್ ಮ್ಯಾನೇಜರ್ (ಟೂರಿಸಂ) ಜೋಸೆಫ್ ಪಿ ತಿಳಿಸಿದ್ದಾರೆ.

IRCTC Plane packages

ದೇಶೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ರೂಪಿಸಿರುವ ಈ ಯೋಜನೆಗಳಲ್ಲಿ ಕಾಶಿ, ಪ್ರಯಾಗ್‌ರಾಜ್, ಅಯೋಧ್ಯೆ, ಊಟಿ ಸೇರಿದಂತೆ ಹಲವು ತಾಣಗಳು ಸೇರಿವೆ. ಈ ಪ್ಯಾಕೇಜ್‌ನ ಅಡಿಯಲ್ಲಿ ವಿಮಾನವು ನವೆಂಬರ್ 25 ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ನವೆಂಬರ್ 29 ರಂದು ಮರಳಿ ಬರುತ್ತದೆ.

ಈ ಯೋಜನೆ ಅಡಿಯಲ್ಲಿ ‘ಭಾರತ ಗೌರವ’ ಪ್ರವಾಸ ರೈಲು, ಪಂಚ ಜ್ಯೋತಿರ್ಲಿಂಗ ಯಾತ್ರೆ, ಕಾಶಿ, ಪ್ರಯಾಗ್‌ರಾಜ್, ಅಯೋಧ್ಯೆ ಮತ್ತು ಊಟಿ ಮುಂತಾದ ತಾಣಗಳಿಗೆ ಪಯಣಿಸುತ್ತದೆ. ಮಂಗಳೂರು, ಕೊಯಂಬತ್ತೂರು, ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ಮೂಲಕ ವಾರಾಂತ್ಯ ಪ್ಯಾಕೇಜ್‌ಗಳೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ www.irctctourism.com ವೆಬ್‌ಸೈಟ್ ಅನ್ನು ಸಂಪರ್ಕಿಸಲು ಅಧಿಕಾರಿಗಳು ತಿಳಿಸಿದ್ದಾರೆ.