ಮೈಸೂರು ತಾಲೂಕಿನ ಇಲವಾಲ ಠಾಣಾ ಸರಹದ್ದಿನ ಕಾವೇರಿ ಹಿನ್ನೀರು ಪ್ರದೇಶಕ್ಕೆ 6 ತಿಂಗಳವರೆಗೆ ಸ್ಥಳೀಯರು ಹಾಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟೆ ತುಂಬಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಇಲವಾಲ ಠಾಣಾ ಕಾವೇರಿ ಸರಹದ್ದಿನ ಹಿನ್ನೀರು ಪ್ರದೇಶಕ್ಕೆ ಒಳಪಡುವ ಗ್ರಾಮಗಳಾದ ಮೀನಾಕ್ಷಿಪುರ, ಆನಂದೂರು, ಹಳೇ ಉಂಡವಾಡಿ, ಯಡಹಳ್ಳಿ ಸಾಗರಕಟ್ಟೆ, ರಾಮೇನಹಳ್ಳಿ ಮಲ್ಲೇ ಗೌಡನ ಕೊಪ್ಪಲು, ಚೋಳೇನಹಳ್ಳಿ, ಯಾಚೇಗೌಡನ ಹಳ್ಳಿ ಎಸ್.ಹೆಮ್ಮನಹಳ್ಳಿ ಹೊಸಕೋಟೆ, ಕಲ್ಲೂರು ನಾಗನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಹಿನ್ನೀರಿನ ಪ್ರದೇಶಕ್ಕೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಠಿಯಿಂದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮುಂದಿನ 6 ತಿಂಗಳವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.