ಭಾರತದಿಂದ ಸೌತ್ ಆಫ್ರಿಕಾಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೌತ್ ಆಫ್ರಿಕನ್ ಪ್ರವಾಸೋದ್ಯಮ ಮಂಡಳಿ ಪುಣೆಯಲ್ಲಿ ಪ್ರವಾಸೋದ್ಯಮ ವಹಿವಾಟುದಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ‘ಲರ್ನ್ ಸೌತ್ ಆಫ್ರಿಕಾ’ ಕಾರ್ಯಾಗಾರದ 11ನೇ ಸರಣಿಯ ಈ ಕಾರ್ಯಕ್ರಮದಲ್ಲಿ 85ಕ್ಕೂ ಹೆಚ್ಚು ಟ್ರಾವೆಲ್ ಟ್ರೇಡ್ ಪಾಲುದಾರರು ಭಾಗವಹಿಸಿದ್ದರು.

South Africa Tourism

ಕಾರ್ಯಾಗಾರದಲ್ಲಿ ಸೌತ್ ಆಫ್ರಿಕಾದ ಪ್ರಮುಖ ಪ್ರವಾಸಿ ತಾಣಗಳು, ಕಲ್ಚರಲ್‌ ಟೂರಿಸಂ, ಅಡ್ವೆಂಚರ್‌ ಟೂರಿಸಂ ಮತ್ತು ಕೇಪ್ ಟೌನ್ ಹಾಗೂ ಜೋಹಾನ್ಸ್‌ಬರ್ಗ್‌ನ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡಲಾಯಿತು. ಭಾರತೀಯ ಪ್ರವಾಸಿಗರ ಆಸಕ್ತಿಗೆ ಅನುಗುಣವಾಗಿ ವೈಯಕ್ತಿಕ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು.

ಟೈರ್–2 ನಗರಗಳಿಂದ ವಿದೇಶ ಪ್ರವಾಸದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆಯನ್ನು ಪ್ರಮುಖ ಬೆಳವಣಿಗೆ ಮಾರುಕಟ್ಟೆಯಾಗಿ ಗುರುತಿಸಲಾಗಿದೆ. ಯುವ ವೃತ್ತಿಪರರು, ಕುಟುಂಬ ಪ್ರವಾಸಿಗರು ಹಾಗೂ ಕಾರ್ಪೊರೇಟ್ ಮತ್ತು MICE ವಿಭಾಗದ ಪ್ರವಾಸಿಗರ ಅಗತ್ಯಗಳಿಗೆ ತಕ್ಕಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.