ದಿ ರಿಟ್ಜ್-ಕಾರ್ಲ್ಟನ್: ಜಾಯ್‌ದೀಪ್ ಆಚಾರ್ಯ ನೇಮಕ
ಆತಿಥ್ಯ ಕ್ಷೇತ್ರದಲ್ಲಿ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಅವರು, ಹೊಟೇಲ್‌ನ ರೂಮ್ಸ್ ಡಿವಿಷನ್, ಹೌಸ್‌ಕೀಪಿಂಗ್ ಹಾಗೂ ಅತಿಥಿ ಸೇವೆಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ನಗರದ ಐಷಾರಾಮಿ ಹೊಟೇಲ್ ದಿ ರಿಟ್ಜ್- ಕಾರ್ಲ್ಟನ್, ಬೆಂಗಳೂರು ತನ್ನ ಹೊಸ ಡೈರೆಕ್ಟರ್ ಆಫ್ ಸರ್ವಿಸಸ್ ಆಗಿ ಜಾಯ್‌ದೀಪ್ ಆಚಾರ್ಯ ಅವರನ್ನು ನೇಮಕ ಮಾಡಿದೆ. ಆತಿಥ್ಯ ಕ್ಷೇತ್ರದಲ್ಲಿ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಅವರು, ಹೊಟೇಲ್‌ನ ರೂಮ್ಸ್ ಡಿವಿಷನ್, ಹೌಸ್‌ಕೀಪಿಂಗ್ ಹಾಗೂ ಅತಿಥಿ ಸೇವೆಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಆಚಾರ್ಯ ಅವರು ಈ ಹಿಂದೆ ಮ್ಯಾರಿಯಟ್ ಇಂಟರ್‌ನ್ಯಾಷನಲ್, ಇಂಡಿಯನ್ ಹೊಟೇಲ್ಸ್ ಕಂಪನಿ ಲಿಮಿಟೆಡ್ (IHCL), ಅಕೋರ್, ಇಂಟರ್‌ಕಾಂಟಿನೆಂಟಲ್ ಹೊಟೇಲ್ಸ್ ಗ್ರೂಪ್ (IHG), ಐಟಿಸಿ ಹೊಟೇಲ್ಸ್, ಸ್ಟಾರ್‌ವುಡ್ ಹಾಗೂ ಒಬೆರಾಯ್ ಹೊಟೇಲ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ನಾಯಕತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ದಿ ರಿಟ್ಜ್- ಕಾರ್ಲ್ಟನ್ ಬೆಂಗಳೂರಿನಲ್ಲಿಯೂ ಹಿಂದೆ ಕಾರ್ಯನಿರ್ವಹಿಸಿದ್ದ ಅನುಭವ ಅವರಿಗಿದೆ.
ನೇಮಕದ ಕುರಿತು ಪ್ರತಿಕ್ರಿಯಿಸಿದ ಆಚಾರ್ಯ, ಅತಿಥಿಗಳಿಗೆ ವಿಶ್ವಮಟ್ಟದ ಸೇವೆ ಒದಗಿಸುವುದು ಹಾಗೂ ಕಾರ್ಯಾಚರಣೆಯಲ್ಲಿ ಶ್ರೇಷ್ಠತೆಯನ್ನು ಮತ್ತಷ್ಟು ಬಲಪಡಿಸುವುದೇ ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಹೊಟೇಲ್‌ನ ಜನರಲ್ ಮ್ಯಾನೇಜರ್ ರೂಬೆನ್ ಕಟಾರಿಯಾ, ಆಚಾರ್ಯ ಅವರ ಅನುಭವ ಮತ್ತು ನಾಯಕತ್ವದಿಂದ ಹೊಟೇಲ್ ಸೇವಾ ಗುಣಮಟ್ಟ ಇನ್ನಷ್ಟು ಉತ್ತಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ