ಸೂಪರ್ ಸ್ಟಾರ್ ರಜನೀಕಾಂತ್ ರ ಶಿವಾಜಿ ಸಿನಿಮಾದ ಒಂದು ಡೈಲಾಗ್ ಬಹಳ ಫೇಮಸ್ ಆಗಿತ್ತು. ಕಣ್ಣಾ...ಪನ್ನಿಂಗ ದಾ ಕೂಟಮಾ ವರುಮ್, ಸಿಂಗಂ ಸಿಂಗಲ್ಲಾ ದ ವರುಮ್’! ಅಂದ್ರೆ, ಹಂದಿಗಳು ಹಿಂಡುಹಿಂಡಾಗಿ ಬರೋದು. ಸಿಂಹ ಯಾವಾಗ್ಲೂ ಸಿಂಗಲ್ಲಾಗೇ ಬರೋದು ಅಂತ. ಅದು ಕೇವಲ ಸಿನಿಮಾ ಡೈಲಾಗ್ ಅಲ್ಲ. ವಾಸ್ತವವೂ ಹೌದು. ಸಿಂಹ ಬೇಟೆ ಆಡೋದು ಏಕಾಂಗಿಯಾಗಿಯೇ. ಬೇಟೆ ಮುಗಿದಮೇಲೆ ಬೇಕಾದ್ರೆ ತಿನ್ನೋಕೆ ಬೇರೆ ಸಿಂಹ ಸಿಂಹಿಣಿ ಮರಿಸಿಂಹಗಳು ಸೇರಿಕೊಳ್ಳಬಹುದು. ಆದರೆ ಇಂಥದ್ದೊಂದು ಪ್ರಾಕೃತಿಕ ಸತ್ಯವೇ ಬ್ಯಾಂಕಾಕ್ ನಲ್ಲಿ ಉಲ್ಟಾ ಆಗಿ ಹೋಗಿದೆ.

lion

ಇಪ್ಪತ್ತು ಸಿಂಹಗಳು ಹಿಂಡುಹಿಂಡಾಗಿ ಬಂದು ಒಬ್ಬ ವ್ಯಕ್ತಿಯನ್ನು ಸಿಗಿದು ಹಾಕಿವೆ. ಅದರಲ್ಲೂ ದಿನ ಬೆಳಗಾದರೆ ತಮಗೆ ಊಟ ತಿಂಡಿ ಹಾಕುವವನನ್ನೇ ತಿಂದು ಮುಗಿಸಿವೆ. ಬೊಗಳೋ ನಾಯಿ ಕಚ್ಚೋದಿಲ್ಲ ಎಂಬ ಸುಳ್ಳನ್ನು ಮನುಷ್ಯ ನಂಬಿದರೂ ಅಷ್ಟೇನೂ ಹಾನಿ ಇಲ್ಲ. ಆದರೆ ಸಿಂಹಗಳು ಗುಂಪಾಗಿ ಬಂದು ಅಟ್ಯಾಕ್ ಮಾಡೋದಿಲ್ಲ ಎಂಬ ತಲೈವಾ ಮಾತನ್ನು ನಂಬಿದರೆ ಮಾತ್ರ ತಲೆದಂಡ ಪಕ್ಕಾ. ತಲೆ ಮಾಂಸ ಛಿದ್ರ!

ಅಂದಹಾಗೆ ಇದನ್ನು ಸಿಂಹಗಳ ಒಗ್ಗಟ್ಟು ಅನ್ನಬಹುದಾ ಅಥವಾ ಒಂದು ಊಟಕ್ಕೋಸ್ಕರ ಇಪ್ಪತ್ತು ಸಿಂಹಗಳ ಕಚ್ಚಾಟ ಅನ್ನಬಹುದಾ? ಒಗ್ಗಟ್ಟು ಅನ್ನುವುದೇ ಆದರೆ ಇದು ನಿಜವಾದ ಲಯನ್ಸ್ ಕ್ಲಬ್. ಶೇರ್ ಗಳು ಕೂಡ ಶೇರ್ ಮಾಡ್ಕೊಂಡು ತಿನ್ನುವ ಗುಣ ಹೊಂದಿವೆ ಅನ್ನಬಹುದು. ಆದರೂ ಅದರಲ್ಲೊಂದು ಸಿಂಹ, ನನಗೆ ಸಿಂಹಪಾಲು ಬೇಕು ಎಂದು ಗುಡುಗಿದರೆ, ಮಿಕ್ಕ ಸಿಂಹಗಳೆಲ್ಲ ’ನೀನು ಸಿಂಹ ಆದರೆ ನಾವೆಲ್ಲ ಏನು ನಾಯಿನರೀನಾ’ ಎಂದು ಸಾಧುಕೋಕಿಲಾ ಥರ ಕೌಂಟರ್ ಕೊಡಬಹುದೇನೋ! ಏನೇ ಇರಲಿ ನೀನೇ ಸಾಕಿದಾ ಗಿಣಿ ಹಾಡಿನಂತೆ, ಸಿಂಹಗಳು ಈ ರೀತಿ ಮಾಡಬಾರದಿತ್ತು ಬಿಡಿ.