ಮೊದಲೆಲ್ಲಾ ರೈಲು ಪ್ರಯಾಣವೆಂದರೆ ಸಾಮಾನ್ಯ ವರ್ಗದ ಜನರಿಗಷ್ಟೇ ಸೀಮಿತ ಎಂಬಂಥ ಪರಿಸ್ಥಿತಿಯಿತ್ತು. ಅಂದರೆ ಶ್ರೀಮಂತರು ವಿಮಾನ ಯಾನವನ್ನ ಮಾಡುವ ವೇಳೆ, ಸಾಮಾನ್ಯರು ಬಸ್‌ ಅಥವಾ ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ರೈಲ್ವೇ ಇಲಾಖೆ ಅಷ್ಟಾಗಿ ಉತ್ತಮ ಸೌಲಭ್ಯವನ್ನು ಒದಗಿಸದಿದ್ದರೂ ರೈಲು ಪ್ರವಾಣವನ್ನೇ ನೆಚ್ಚಿಕೊಳ್ಳಬೇಕಾಗಿತ್ತು..ಆದರೆ ಇಂದು ಕಾಲ ಬದಲಾಗಿದೆ. ರೈಲು ಸಂಪರ್ಕ ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದೆ ಎಂದರೆ ವಿಶ್ವದ ಅತ್ಯುತ್ತಮ ಸಾರಿಗೆ ವ್ಯವಸ್ಥೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೊದಲ ರೈಲು ಪ್ರಯಾಣ 18 ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ, ರೈಲಿನಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬಂದಿದೆ. ಅಂತಹ ರೈಲುಗಳ ಪೈಕಿ ಪ್ರಮುಖವಾದುದು ಜಪಾನ್‌ನ ಬುಲೆಟ್ ಟ್ರೈನ್.‌ ಹೈ ಸ್ಪೀಡ್‌ ಗೆ ಹೆಸರಾಗಿರುವ ಈ ಟ್ರೈನ್‌ ನಲ್ಲಿ ಪ್ರಯಾಣಿಕರಿಗಾಗಿ ಏನೇನು ಸೌಲಭ್ಯಗಳಿವೆ ಎಂಬ ಮಾಹಿತಿ ನಿಮಗಾಗಿ ಇಲ್ಲಿದೆ.

tokyo-japan-september-japanese-shinkansen-train-interior-connects-to-nagasaki-osaka-kyoto-103551799

ಇನ್‌ಸ್ಟಾಗ್ರಾಮ್‌ನಲ್ಲಿ ವ್ಲಾಗರ್ ಹೈ ಸ್ಪೀಡ್‌ ಬುಲೆಟ್ ಟ್ರೈನ್ ಬಗ್ಗೆ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. 10,500 ಯೆನ್‌ಗಳನ್ನು (ರೂ. 6300) ಕೊಟ್ಟು ಟೋಕಿಯೊದಿಂದ ಸೆಂಡೈಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿರುವುದಾಗಿ ಹೇಳಿರುವ ವ್ಲಾಗರ್‌, ಬುಲೆಟ್ ರೈಲಿನಲ್ಲಿ ಸೀಟು ಕಾಯ್ದಿರಿಸುವಿಕೆಗಾಗಿ ಅವರು 4800 ಯೆನ್ (2800 ರೂಪಾಯಿ) ಹೆಚ್ಚುವರಿಯಾಗಿ ಪಾವತಿಸಬೇಕಾಯಿತು ಎಂಬ ಮಾಹಿತಿ ನೀಡಿದ್ದಾರೆ.

ಟೈಮ್‌ ಗೆ ಬಂದರಷ್ಟೇ ಬುಲೆಟ್‌ ಟ್ರೈನ್‌ ಪ್ರಯಾಣ ಸಾಧ್ಯ

ಸಮಯಪಾಲನೆಯಲ್ಲಿ ಜಪಾನ್‌ನ ಬುಲೆಟ್ ರೈಲುಗಳು ನಂಬರ್‌ ಒನ್‌ ಸ್ಥಾನದಲ್ಲಿವೆ. ರೈಲುಗಳು ಸಮಯಕ್ಕೆ ಸರಿಯಾಗಿ ಪ್ಲಾಟ್‌ಫಾರ್ಮ್‌ಗೆ ಬರುವುದರಿಂದ ನೀವು ಒಂದು ಸೆಕೆಂಡ್ ತಡವಾಗಿ ಬಂದರೂ ಮುಂದಿನ ರೈಲಿನವರೆಗೂ ಕಾಯಲೇಬೇಕು. ಈ ಕಾರಣದಿಂದ ಪ್ರಯಾಣಿಕರು ಅದೆಷ್ಟೋ ಬಾರಿ ತೋದರೆಗೀಡಾಗಿರುವ ಉದಾಹರಣೆಗಳು ಅನೇಕವಿದೆಯಂತೆ.

ಟ್ರಾವೆಲ್‌ ವ್ಲಾಗರ್ ಹೇಳುವಂತೆ, ನೀವು ಬುಲೆಟ್ ರೈಲಿನಲ್ಲಿ ರಿಸರ್ವೇಶನ್‌ ಬುಕ್ ಮಾಡಬಹುದು. ಆದರೆ ಒಂದು ವೇಳೆ ರಿಸರ್ವೇಶನ್‌ ಮಾಡಿಸಿದರು ಆ ರೈಲು ಪ್ರಯಾಣ ತಪ್ಪಿತೆಂದರೆ ಅದೇ ಟಿಕೆಟ್‌ನಲ್ಲಿ ಮತ್ತೊಂದು ರೈಲಿನಲ್ಲಿ ಪ್ರಯಾಣಿಸುವ ಆಯ್ಕೆ ನಿಮಗೆ ಇರುತ್ತದೆ.

ಬುಲೆಟ್‌ ಟ್ರೈನ್‌ ಒಳಗಿನಿಂದ ಹೇಗಿದೆ ಗೊತ್ತಾ?

ತಂತ್ರಜ್ಞಾನದ ವಿಚಾರದಲ್ಲಿ ಸಾಕಷ್ಟು ಮುಂದಿರುವ ಜಪಾನ್‌ ರೈಲ್ವೇ ಪ್ರಯಾಣಿಕರಿಗಾಗಿಯೂ ವಿಶೇಷ ಸೌಲಭ್ಯಗಳನ್ನು ನೀಡಿದೆ. ‌ಜಪಾನ್‌ನ ಬುಲೆಟ್ ಟ್ರೈನ್ ಒಳಗಿನಿಂದ ನೋಡಲು ಫೈವ್‌ ಸ್ಟಾರ್‌ ಹೊಟೇಲ್‌ನಂತೆ ಕಾಣುತ್ತಿದ್ದು, ಪ್ರಯಾಣಿಕರನ್ನು ಬೆರಗುಗೊಳಿಸುತ್ತವೆ. ರೈಲಿನಲ್ಲಿ ನಿಮಗೆ ಆರಾಮದಾಯಕ ಆಸನಗಳು ಮತ್ತು ಉಚಿತ ವೈ-ಫೈ ಸೌಲಭ್ಯಗಳನ್ನು ಒದಗಿಸಲಾಗಿದೆ.

1280px-GREEN_CAR(FIRST_CLASS)INSIDE_VIEW_KYUSHU_JR_WEST_SHINKANSEN_SERIES_700_BULLET_TRAIN_JAPAN_JUNE_2012_(7419031422)

ಅದ್ಭುತವಾಗಿದೆ ಈ ರೈಲಿನ ಶೌಚಾಲಯ !

ಜಪಾನ್‌ನ ಬುಲೆಟ್ ರೈಲಿನ ಶೌಚಾಲಯ ಎಷ್ಟು ಅದ್ಭುತವಾಗಿದೆ ಎಂದರೆ ಇಡೀ ಪ್ರಯಾಣವನ್ನು ಶೌಚಾಲಯದಲ್ಲಿ ಕುಳಿತು ಕಳೆದುಬಿಟ್ಟರೆ ಹೇಗೆ ಎನಿಸಿಬಿಡುವಂತಿದೆ. ಶೌಚಾಲಯದ ಬಾಗಿಲು ಸ್ವಯಂಚಾಲಿತವಾಗಿದೆ. ಶೌಚಾಲಯದಲ್ಲಿ ಅಗತ್ಯವಿರುವವರಿಗಾಗಿ ವೀಲ್‌ಚೇರ್‌ ಸೌಲಭ್ಯವೂ ಇದ್ದು, ಶಿಶುಪಾಲನೆಗೂ ಪ್ರತ್ಯೇಕ ಕೊಠಡಿಯಿದೆ. ಅಲ್ಲದೆ ಟ್ರೈನ್‌ ನಲ್ಲೇ ಬ್ಯುಸಿನೆಸ್‌ ಸಂಬಂಧಿತ ಸಭೆಯೋ ಇಲ್ಲವೇ, ಫೋನ್‌ ಮಾತುಕತೆಗೆ ಖಾಸಗಿಯಾಗಿ ಸ್ಥಳಾವಕಾಶ ಬೇಕೆನ್ನುವವರಿಗೆ ಬಹು ಉಪಯೋಗಿ ಪ್ರತ್ಯೇಕ ಕೊಠಡಿ ಇಲ್ಲಿದೆ. ಒಟ್ಟಾರೆಯಾಗಿ, ಈ ಕೊಠಡಿಯನ್ನು ಪ್ರಯಾಣಿಕರ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

travel-vlogger-gives-information-about-the-facilities-of-japan-s-bullet-train-inside-120661460

ಇಷ್ಟೆಲ್ಲಾ ಸೌಲಭ್ಯಗಳಿರುವ ಈ ಬುಲೆಟ್‌ ಟ್ರೈನ್‌ ನಲ್ಲಿ ನೀವು ಒಮ್ಮೆಯಾದರೂ ಪ್ರಯಾಣಿಸಿ ನೋಡಿ. ವಿಶೇಷ ಅನುಭವವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ.