• ಇಂಚರ ಗೌಡ ,ಪುತ್ತೂರು

ಚಳಿಗಾಲ ಎಂದಾಗ ಮೈಯಲ್ಲಿರೋ ಕೂದಲು ಮೇಲೆದ್ದು ನಿಲ್ಲುತ್ತದೆ. ಆದರೂ ನಮ್ಮಂಥ ಫೊಟೋಗ್ರಫಿ ಕ್ರೇಜ್ ಇರುವವರಿಗೆ ಪ್ರವಾಸ ಹೋಗೋದೇ ಒಂದು ಹುಚ್ಚು ನೋಡಿ… ನಂಗೊಂದು ಆಸೆ ಇತ್ತು ಕಾಶ್ಮೀರಕ್ಕೆ ಹೋಗಬೇಕು ಮತ್ತು ಫೊಟೋಗ್ರಫಿ ಮಾಡಬೇಕು ಅಂತ. ಆದರೆ ಈ ನನ್ನ ಆಸೆ ದೇವರಿಗೆ ಕೇಳಿಸ್ತೋ ಏನೂ ಗೊತ್ತಿಲ್ಲ ತಥಾಸ್ತು ಹೇಳಿಬಿಟ್ಟರು ಅನಿಸುತ್ತೆ.

ಕಾಶ್ಮೀರಕ್ಕೆ ಹೋಗೋ ಅದೃಷ್ಟ ನನ್ನ ಅಕ್ಕ ಭಾವನ ಜತೆ ಹೋಗೋಕೆ ಸಿಕ್ತು… ಅವರದ್ದು ಹನಿಮೂನ್ ಟ್ರಿಪ್ .. ನಿಮಗೆ ಅನಿಸಬಹುದಲ್ವ ಶಿವ ಪೂಜೆಲಿ ಕರಡಿ ಯಾಕೆ ಅಂತ? Actually ಮಜ ಇರೋದೆ ಅಲ್ಲಿ… ಅವರಿಬ್ಬರಿಗೆ ಹೋಗೋಕೆ ಧೈರ್ಯ ಇಲ್ಲ. ಅದರ ಜತೆ ಅವರಿಗೂ ಫೊಟೋಗ್ರಫಿ ಹುಚ್ಚು. ನನಗೂ ಫೊಟೋಗ್ರಫಿ ಕ್ರೇಜ್ ಅಲ್ವಾ.. ಸೋ ನಾನು ಬರ್ತೀನಿ ಅಕ್ಕ ನಿಮ್ ಫೊಟೋ ತೆಗೆಯೋಕೆ ಹೆಂಗೂ ನಾನಿರುವಾಗ ಯಾಕೆ ಫೊಟೋಗ್ರಫಿ ಚಿಂತೆ ಅಂತ ಹೇಳಿ ನೈಟ್ ಫ್ಲೈಟ್ ಮಾಡಿ ನೆಕ್ಸ್ಟ್ ಡೇ ಹೊರಟ್ವಿ … ಅಂತು ಇಂತು ಏನೋ ಕಾಶ್ಮೀರಕ್ಕೆ ಬಂದು ತಲುಪಿದೆವು.

Kashmir

ಅದರ ಜತೆಗೆ ಅವರಿಬ್ಬರು ಹೇಗಿದ್ರು ರೊಮ್ಯಾನ್ಸ್ ಕಪಲ್ಸ್ ಬಿಡಿ… ನಂಗ್ಯಾರಪ್ಪ ಇದ್ದಾರೆ ರೊಮ್ಯಾನ್ಸ್ ಮಾಡೋಕೆ ಅಂತ ಚಿಂತೆ ಮಾಡ್ತಾ ಇರುವಾಗ ನನಗೆ ನೆನಪಾಗಿದ್ದು ನನ್ನ ಲೈಫ್ ಪಾರ್ಟ್ನರ್ ಅಂದ್ರೆ ಕ್ಯಾಮೆರಾ ಹಾಗೂ ಬೆಚ್ಚಗಿನ ಕೋಟ್… ಮೊದಲೇ ನಾನಿರೋದು ಸಪೂರ ಅದರ ಜತೆ ನನ್ನ ಲೈಫ್ ಪಾರ್ಟ್ನರ್ ನಾ ಎತ್ಕೊಂಡು ಹೋಗೋದು ಬೇಕ ಗುರು ಅಂತ ಅನ್ಸಿದು ಫಸ್ಟ್ ಡೇ ನಿಜ… ಆದ್ರೂ ಸಂಜೆ ಹೊತ್ತಿಗೆ ಏನೋ ಖುಷಿ ಯಾಕೆ ಗೊತ್ತಾ ರೊಮ್ಯಾಂಟಿಕ್ ಆಗಿರೋ ಅಕ್ಕ ಭಾವನ ಫೊಟೋ ತೆಗಿವಾಗ ನಂಗೂ ಹಿಂಗೆ ಜೀವನ ಇರ್ಬಾರ್ದ ಅಂತ ಮನಸಲ್ಲೇ ಏನೋ ಖುಷಿ. ಅದು ಬಿಡಿ ಆ ಖುಷಿಯಲ್ಲಿ ನನ್ನ ಅನುಭವ ಹೇಳ್ತಿನಿ ಕೇಳಿ… ಏನೇ ಆದ್ರೂ ಕಾಶ್ಮೀರ ಒಂತರ ಚಂದ ಕಣ್ರಿ ಯಾಕಂದ್ರೆ ಒಂಟಿಯಾಗಿ ಹೋಗಿ ಅಕ್ಕ ಭಾವನಾ ಫೊಟೋ ಚಳಿಯಲ್ಲಿ… ಚಳಿ ಚಳಿ ತಾಳೆನು ಈ ಚಳಿಯ ಸಾಂಗ್ ಹೇಳ್ತಾ ಫೊಟೋಶೂಟ್ ಮಾಡೋ ಮಜಾ ಮಾತ್ರ ಸಖತ್ ಅನ್ಸಿತ್ತು… ಅದರ ಜತೆಗೆ ಈ ಚಳಿಗಾಲಕ್ಕೂ ಥ್ಯಾಂಕ್ಯೂ ಹೇಳ್ಬೇಕು ಕಣ್ರೀ.. ಯಾಕಂದ್ರೆ ಈ ಚಳಿಗಾಲದಲ್ಲಿನೇ ಒಂಟಿಯಾಗಿದ್ದ ನಾನು ಜಂಟಿಯಾದ ಕ್ಷಣ… ಥಾಂಕ್ಯೂ ಸೋ! ಮಚ್ ಚಳಿಗಾಲ.