ಚಾರ್ಜ್ ವಿಧಿಸಲು ಕೋರಿ ಬೃಹತ್ ಬೆಂಗಳೂರು ಹೊಟೇಲ್ ಸಂಘಕ್ಕೆ ಪತ್ರ!
ರುಚಿಯಾದ ಆಹಾರ ಸವಿಯಲು ನಿಮ್ಮ ಆಪ್ತರ, ಸ್ನೇಹಿತರ ಜತೆಗೆ ಹೊಟೇಲ್‌ನಲ್ಲಿ ಸಮಯ ಕಳೆಯಬಹುದು. ಆದರೆ ಒಂದು ಕಾಫಿ ಕುಡಿಯಲು ಅತಿಯಾದ ಸಮಯ ತೆಗೆದುಕೊಂಡರೆ ಉಳಿದ ಗ್ರಾಹಕರಿಗೆ ತೊಂದರೆಯಾಗುವ ಜತೆಗೆ, ವ್ಯವಹಾರಕ್ಕೂ ಅಡ್ಡಿಯಾಗುತ್ತದೆ. ಹೀಗಾಗಿ ಹೊಟೇಲ್ ಮಾಲೀಕರು ಬೃಹತ್ ಬೆಂಗಳೂರು ಹೊಟೇಲ್ ಸಂಘಕ್ಕೆ ಹೊಟೇಲ್ ಮಾಲೀಕರು ದೂರು ನೀಡಿದ್ದಾರೆ.
ಹೊಟೇಲ್‌ಗಳಲ್ಲಿ ಕುಳಿತು ಮಾತನಾಡುತ್ತಾ, ಮೀಟಿಂಗ್ ಮಾಡುತ್ತಾ ಒಂದು ಕಪ್ ಕಾಫಿ ಕುಡಿಯಲು ಗಂಟೆಗಟ್ಟಲೆ ಸಮಯ ಕಳೆಯುವ ಮಂದಿ ಈ ಸುದ್ದಿಯನ್ನು ನೋಡಲೇಬೇಕು. ಇನ್ನುಮುಂದೆ ಹೊಟೇಲ್‌ಗಳಲ್ಲಿ ನೀವು ಕಾಲಹರಣ ಮಾಡಿದರೆ ಹೆಚ್ಚುವರಿ ಟೇಬಲ್ ಚಾರ್ಜ್ ನೀಡಬೇಕಾಗುತ್ತದೆ. ಹೌದು, ಕೆಲವು ಗ್ರಾಹಕರ ವರ್ತನೆಯಿಂದ ಬೇಸತ್ತ ಹೊಟೇಲ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

ರುಚಿಯಾದ ಆಹಾರ ಸವಿಯಲು ನಿಮ್ಮ ಆಪ್ತರ, ಸ್ನೇಹಿತರ ಜತೆಗೆ ಹೊಟೇಲ್‌ನಲ್ಲಿ ಸಮಯ ಕಳೆಯಬಹುದು. ಆದರೆ ಒಂದು ಕಾಫಿ ಕುಡಿಯಲು ಅತಿಯಾದ ಸಮಯ ತೆಗೆದುಕೊಂಡರೆ ಉಳಿದ ಗ್ರಾಹಕರಿಗೆ ತೊಂದರೆಯಾಗುವ ಜತೆಗೆ, ವ್ಯವಹಾರಕ್ಕೂ ಅಡ್ಡಿಯಾಗುತ್ತದೆ. ಹೀಗಾಗಿ ಬೃಹತ್ ಬೆಂಗಳೂರು ಹೊಟೇಲ್ ಸಂಘಕ್ಕೆ ಹೊಟೇಲ್ ಮಾಲೀಕರು ದೂರು ನೀಡಿದ್ದಾರೆ.
ಈ ದೂರಿನ ಅನುಸಾರ, ಹೊಟೇಲ್‌ಗಳಲ್ಲಿ ಪಾರ್ಕಿಂಗ್ ಚಾರ್ಜ್‌ನಂತೆ ಟೇಬಲ್ ಚಾರ್ಜ್ ಕೂಡಾ ವಿಧಿಸಲು ಕೋರಲಾಗಿದೆ. ಫೈ ಸ್ಟಾರ್, ತ್ರೀ ಸ್ಟಾರ್ ಮತ್ತು ಮಧ್ಯಮ ವರ್ಗದ ಹೊಟೇಲ್‌ಗಳಲ್ಲಿ ಕಾಫಿ, ಟೀ ಕುಡಿಯಲು ಸಮಯ ನಿಗದಿ ಪಡಿಸಿ, ಒಂದು ಗಂಟೆಗೂ ಅಧಿಕ ಸಮಯವಾದಲ್ಲಿ ಗಂಟೆಗೆ ಸಾವಿರ ರುಪಾಯಿ ಚಾರ್ಜ್ ಮಾಡುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಕುರಿತು ಸಂಘದ ನಿರ್ಣಯ ಏನಿದೆ ಎಂಬುದನ್ನು ಕಾದು ನೋಡಬೇಕಿದೆ.