Tuesday, February 24, 2026
Tuesday, February 24, 2026

ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ನಗದು ನಿಷೇಧ

ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು, ಡಿಜಿಟಲ್ ಪಾವತಿಯಿಂದ ಪಾರದರ್ಶಕ ವಹಿವಾಟು ತರುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲು ಮುಂದಾಗಿದ್ದು, ದೇಶಾದ್ಯಂತ ಹೆದ್ದಾರಿ ಪ್ರಯಾಣವನ್ನು ಡಿಜಿಟಲ್ ರೂಪಕ್ಕಿಳಿಸುವುದು ಸಾರಿಗೆ ಇಲಾಖೆ ಯೋಜನೆಯಾಗಿದೆ.

ಹೆಚ್ಚುತ್ತಿರುವ ವಾಹನಗಳ ಪ್ರಮಾಣದಿಂದಾಗುವ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪ್ರಯಾಣಿಕರು ಹೆದ್ದಾರಿಯಲ್ಲಿ ಟೋಲ್‌ಗಳನ್ನು ಪಾವತಿಸಲು FASTag ಅಥವಾ UPI ಬಳಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಪ್ರಯಾಣಿಕರು ಪೂರ್ತಿಯಾಗಿ ಡಿಜಿಟಲ್ ಬದಲಾವಣೆಗೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

toll

ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು, ಡಿಜಿಟಲ್ ಪಾವತಿಯಿಂದ ಪಾರದರ್ಶಕ ವಹಿವಾಟು ತರುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ. ಯಾವುದೇ ಭೌತಿಕ ಅಡೆತಡೆಗಳಿಲ್ಲದೆ ಹೆದ್ದಾರಿ ವೇಗದಲ್ಲಿ ಕಾರುಗಳು ಟೋಲ್ ಗೇಟ್ ನಲ್ಲೂ ಓಡಿಸಲು ಅನುವಾಗುವಂತೆ ತಂತ್ರಜ್ಞಾನ ಚಾಲ್ತಿಗೆ ತರಲು ಪರಿಶೀಲನೆ ನಡೆದಿದೆ. 'ನೋ-ಸ್ನಾಪ್ ವ್ಯವಸ್ಥೆಯನ್ನು ಈಗಾಗಲೇ ದೇಶದಾದ್ಯಂತ 25 ಟೋಲ್ ಪ್ಲಾಜಾಗಳಲ್ಲಿ ಪರೀಕ್ಷಿಸಲಾಗುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat