Monday, June 30, 2025
Monday, June 30, 2025

ವಿಮಾನದಲ್ಲಿ ಧ್ವನಿವರ್ಧಕ ವ್ಯವಸ್ಥೆ

ವಿಮಾನದಲ್ಲಿ ಪ್ರಯಾಣ ಮಾಡುವಾಗ ನಾವು ವಿವಿಧ ರೀತಿಯ ಧ್ವನಿಗಳನ್ನು ಕೇಳುತ್ತೇವೆ. ಆ ಪೈಕಿ ಪೈಲಟ್ ಉದ್ಘೋಷ, ಗಗನಸಖಿಯರ (ಕ್ಯಾಬಿನ್ ಕ್ರ್ಯೂ) ಸೂಚನೆಗಳು, ಮೃದು ಸಂಗೀತ ಮತ್ತು ಕೆಲ ವೊಮ್ಮೆ ತುರ್ತು ಸೂಚನೆಗಳು ಸೇರಿರುತ್ತವೆ. ಈ ಎಲ್ಲದಕ್ಕೂ ಅಡಿಪಾಯವಾದ ವ್ಯವಸ್ಥೆಯೇ ವಿಮಾನದಲ್ಲಿನ ಧ್ವನಿವರ್ಧಕ ವ್ಯವಸ್ಥೆ (ಸೌಂಡ್ ಸಿಸ್ಟಮ್). ಇದು ವಿಮಾನದ ಸಂವಹನ, ಸುರಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿದ್ದು, ಹಲವಾರು ತಾಂತ್ರಿಕ ಘಟಕಗಳ ಸಮೂಹವಾಗಿದೆ.

ವಿಮಾನ ಪ್ರಯಾಣದಲ್ಲಿ ಹಲವು ಶಿಷ್ಟಾಚಾರಗಳಿವೆ. ಆ ಪೈಕಿ ಧ್ವನಿ ಶಿಷ್ಟಾಚಾರವೂ ಒಂದು. ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ವಿಮಾನದ ಧ್ವನಿವರ್ಧಕದ ಮೂಲಕ ಹೇಳಲಾಗುವ ಪ್ರತಿ ಶಬ್ದವೂ ರೆಕಾರ್ಡ್ ಆಗುತ್ತದೆ ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ.

ವಿಮಾನದಲ್ಲಿ ಪ್ರಯಾಣ ಮಾಡುವಾಗ ನಾವು ವಿವಿಧ ರೀತಿಯ ಧ್ವನಿಗಳನ್ನು ಕೇಳುತ್ತೇವೆ. ಆ ಪೈಕಿ ಪೈಲಟ್ ಉದ್ಘೋಷ, ಗಗನಸಖಿಯರ (ಕ್ಯಾಬಿನ್ ಕ್ರ್ಯೂ) ಸೂಚನೆಗಳು, ಮೃದು ಸಂಗೀತ ಮತ್ತು ಕೆಲವೊಮ್ಮೆ ತುರ್ತು ಸೂಚನೆಗಳು ಸೇರಿರುತ್ತವೆ. ಈ ಎಲ್ಲದಕ್ಕೂ ಅಡಿಪಾಯವಾದ ವ್ಯವಸ್ಥೆಯೇ ವಿಮಾನದಲ್ಲಿನ ಧ್ವನಿವರ್ಧಕ ವ್ಯವಸ್ಥೆ (ಸೌಂಡ್ ಸಿಸ್ಟಮ್). ಇದು ವಿಮಾನದ ಸಂವಹನ, ಸುರಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿದ್ದು, ಹಲವಾರು ತಾಂತ್ರಿಕ ಘಟಕಗಳ ಸಮೂಹವಾಗಿದೆ. ಅಷ್ಟಕ್ಕೂ ವಿಮಾನದ ಸೌಂಡ್ ಸಿಸ್ಟಮ್ ಎಂದರೇನು? ಪೈಲಟ್, ಕ್ಯಾಬಿನ್ ಕ್ರ್ಯೂ ಹಾಗೂ ಪ್ರಯಾಣಿಕರ ನಡುವೆ ಧ್ವನಿ ಮೂಲಕ ಸಂವಹನ ನಡೆಸಲು ಅನುಕೂಲ ವಾಗುವ ಆಡಿಯೋ ವ್ಯವಸ್ಥೆ.

ಇದನ್ನೂ ಓದಿ: ದುರಂತವೂ, ಭಾಷಾ ಸಮಸ್ಯೆಯೂ

ಇದರಲ್ಲಿ ಸ್ಪೀಕರ್‌ಗಳು, ಮೈಕ್ರೋಫೋನ್‌ಗಳು, ಆಂಪ್ಲಿಫೈಯರ್‌ ಗಳು, ಸ್ವಿಚ್‌ಗಳು, ಕಮ್ಯೂನಿಕೇ ಶನ್ ಪ್ಯಾನೆಲ್‌ಗಳು ಸೇರಿರುತ್ತವೆ. ಇದರಲ್ಲಿ ಎರಡು ಪ್ರಮುಖ ವಿಭಾಗಗಳನ್ನು ಗಮನಿಸಬಹುದು. ಮೊದಲನೆಯದು, ಪಿಎ ಸಿಸ್ಟಮ್ ( Public Address System) ಹಾಗೂ ಎರಡನೆಯದು, ಇಂಟರ್‌ ಕಾಮ್ ಸಿಸ್ಟಮ್ ( ICS Intercommunication System). ಪಿಎ ಸಿಸ್ಟಮ್ ಅಂದರೆ ಏನು? ಇದು ಪೈಲಟ್ ಅಥವಾ ಕ್ಯಾಬಿನ್ ಕ್ರ್ಯೂ ಎಲ್ಲ ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಸೂಚನೆ, ಘೋಷಣೆ ನೀಡಲು ಬಳಸುವ ವ್ಯವಸ್ಥೆ. ಉದಾಹರಣೆಗೆ, ಟೇಕಾಫ್ ಸಮಯದ ಮಾಹಿತಿ, ಹವಾಮಾನ ಕುರಿತ ಎಚ್ಚರಿಕೆ, ತುರ್ತು ಸಂದರ್ಭಗಳು, ಸ್ಥಳೀಯ ಸಮಯ,‌ ಉಷ್ಣತೆ, ಪ್ರವಾಸಿ ಮಾಹಿತಿ, ಗಮ್ಯಸ್ಥಾನ ಪ್ರಕಟಣೆ ಇತ್ಯಾದಿ.

ಇದರ ಅಂಗವಾಗಿ ಮೈಕ್ರೋಫೋನ್, ಧ್ವನಿಯನ್ನು ಹೆಚ್ಚಿಸುವ ಉಪಕರಣವಾದ ಆಂಪ್ಲಿಫೈಯರ್, ಕ್ಯಾಬಿನ್, ಶೌಚಾಲಯ ಮತ್ತು ಪೈಲಟ್ ಕಾಕ್‌ಪಿಟ್ ನಲ್ಲಿರುವ ಸ್ಪೀಕರ್ಸ್, ಘೋಷಣೆ ಮಾಡುವುದು ಯಾವ ಭಾಗಕ್ಕೆ ಎಂಬುದನ್ನು ಆಯ್ಕೆ ಮಾಡಲು ಅನುವಾಗುವ ಕಂಟ್ರೋಲ್ ಪ್ಯಾನಲ್ ಗಳಿರುತ್ತವೆ. ಪೈಲಟ್ ಅಥವಾ ಕ್ಯಾಬಿನ್ ಕ್ರ್ಯೂ ಸ್ವಿಚ್ ಆನ್ ಮಾಡಿ ಮೈಕ್ ಬಳಸಿ ಮಾತನಾಡುತ್ತಾರೆ.

loudspeaker1

ಆ ಧ್ವನಿ ಆಂಪ್ಲಿಫೈ ಆಗಿ ಸ್ಪೀಕರ್‌ಗಳ ಮೂಲಕ ಕೇಳಿಸುತ್ತದೆ. ಪೈಲಟ್ ಮತ್ತು ಕ್ಯಾಬಿನ್ ಕ್ರ್ಯೂ ನಡುವೆ ಅಥವಾ ವಿಮಾನದ ಮುಂದಿರುವ ಸಿಬ್ಬಂದಿಯಿಂದ ಹಿಂಬದಿಯಲ್ಲಿರುವ ಸಿಬ್ಬಂದಿಗೆ ಧ್ವನಿ ಸಂವಹನಕ್ಕೆ ಇಂಟರಕಾಮ್ ವ್ಯವಸ್ಥೆ ಸಹಾಯಕ. ಒಂದು ವೇಳೆ ರೇಡಿಯೋ ಸಂಪರ್ಕ ಕಡಿತವಾದರೂ ಇಂಟರ್ ಕಾಮ್ ಕಾರ್ಯನಿರ್ವಹಿಸುತ್ತದೆ.

ಸಾಫ್ಟ್‌ ಮ್ಯೂಸಿಕ್ ಮತ್ತು ಮನರಂಜನಾ ಧ್ವನಿ ವ್ಯವಸ್ಥೆಯೂ ಇದರ ಭಾಗವೇ. ಆಧುನಿಕ ವಿಮಾನಗಳಲ್ಲಿ ಹೆಚ್ಚಿನ ಪ್ರಯಾಣಿಕರು ತಮ್ಮ ಸೀಟ್‌ಗಳಲ್ಲಿ ಎಂಟರ್‌ಟೈನ್‌ಮೆಂಟ್ ಸಿಸ್ಟಮ್ ಹೊಂದಿರುತ್ತಾರೆ. ಇದರಲ್ಲಿ ಸಿನಿಮಾ, ಹಾಡು, ಸಂಗೀತ, ವಿಡಿಯೋ ಗೇಮ್ ಗಳ ಧ್ವನಿ, ನ್ಯಾವಿಗೇಶನ್ ಮಾಹಿತಿ (ಪೈಲಟ್‌ನಿಂದ ನೇರವಾಗಿ)ಯನ್ನು ಪಡೆಯಬಹುದು.

ಈ ಧ್ವನಿಗಳನ್ನು ಪ್ರಯಾಣಿಕರು ತಮ್ಮ ಸೀಟ್‌ನಲ್ಲಿ ಒದಗಿಸಲಾದ ಹೆಡ್ ಫೋನ್ ಅಥವಾ ಇಯರ್‌ ಬಡ್ ಮೂಲಕ ಕೇಳುತ್ತಾರೆ. ವಿಮಾನದಲ್ಲಿ ತುರ್ತು ಪರಿಸ್ಥಿತಿ ತಲೆದೋರಿದಾಗ, ಸ್ಪಷ್ಟ ಧ್ವನಿಯ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ತರಬೇತಿ ಪಡೆದ ಕ್ಯಾಬಿನ್ ಕ್ರ್ಯೂ ಧ್ವನಿ ಮೂಲಕ ಸೂಚನೆ ನೀಡುತ್ತಾರೆ.

ಕೆಲವು ತುರ್ತು ಸಂದರ್ಭಗಳಲ್ಲಿ ಮೊದಲೇ ರೆಕಾರ್ಡ್ ಮಾಡಿಟ್ಟ (Pre&recorded announce-ments) ಸೂಚನೆಗಳನ್ನು ಹೇಳಲಾಗುತ್ತದೆ. ಪೈಲಟ್ ಮೂರು ವಿಧಾನಗಳಲ್ಲಿ ಧ್ವನಿ ಸಂಪರ್ಕವನ್ನು ಬಳಸುತ್ತಾರೆ. 1.ವಿಮಾನ ಒಳಗಿನ ಇಂಟರ್‌ಕಾಮ್ 2. ಎಟಿಸಿ ( Air Traffic Control ) ರೇಡಿಯೋ ಧ್ವನಿ ಸಂಪರ್ಕ ಹಾಗೂ 3.ವಿಮಾನ ತಂತ್ರಜ್ಞರು ಮತ್ತು ಮೈಂಟೆನ ಸಿಬ್ಬಂದಿ ಜತೆ ಗ್ರೌಂಡ್ ಕಮ್ಯುನಿ ಕೇಶನ್. ವಿಮಾನದಲ್ಲಿ ಒಟ್ಟು 2 ಅಥವಾ ಹೆಚ್ಚು VHF (Very High Frequency ) ಮತ್ತು UHF (Ultra High Frequency ) ರೇಡಿಯೋ ಚಾನಲ್ ಇರುತ್ತವೆ.

ಕೆಲವು ವಿಮಾನಗಳಲ್ಲಿ HF (High Frequency) ಲಾಂಗ್ ಡಿಸ್ಟನ್ಸ್ ರೇಡಿಯೋ ಸಹ ಇರುತ್ತದೆ. ಧ್ವನಿ ವ್ಯವಸ್ಥೆಯ ವಿನ್ಯಾಸದಲ್ಲಿ ICAO (International Civil Aviation Organization ) ಹಾಗೂ FAA (Federal Aviation Administration) ನಿಗದಿಪಡಿಸಿದ ಮಾನದಂಡಗಳು ಮತ್ತು ನಿಯಮಗಳನ್ನು ಅನುಸರಿಸಬೇಕು.

ಈ ನಿಯಮಗಳಲ್ಲಿ ಧ್ವನಿ ಸ್ಪಷ್ಟತೆ (80 ಡೆಸಿಬೆಲ್ ಒಳಗೆ), ತುರ್ತು ಸಮಯದ ಘೋಷಣೆಯ ಸಿಸ್ಟಮ, ಡುಪ್ಲಿಕೇಟ್ ವ್ಯವಸ್ಥೆ, EMI (Electromagnetic Interference) ತಡೆಯುವ ವ್ಯವಸ್ಥೆ ಇರಲೇಬೇಕು.

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!