ವಿಮಾನದಲ್ಲಿ ಸುರಕ್ಷತಾ ಪ್ರದರ್ಶನ
ಮನರಂಜನಾ ವ್ಯವಸ್ಥೆಯಲ್ಲಿ ಮೊದಲೇ ರೆಕಾರ್ಡ್ ಮಾಡಿ ತೋರಿಸಲಿ ಅಥವಾ ಸಿಬ್ಬಂದಿ ಸಾಂಪ್ರದಾಯಿಕ ‘ಮೈಮ್ ಶೈಲಿ’ಯಲ್ಲಿ ಪ್ರದರ್ಶಿಸಲಿ, ಈ ಸುರಕ್ಷತಾ ಪ್ರದರ್ಶನವು ಅತ್ಯಂತ ಅಗತ್ಯ ಪ್ರಕ್ರಿಯೆ. ಇದು ಅನಗತ್ಯ ಸೂಚನೆಗಳು ಮತ್ತು ಪುನರಾವರ್ತಿತ ಪದಗಳಿಂದ ಕೂಡಿರುತ್ತವೆ.
ವಿಮಾನಯಾನ ಕ್ಷೇತ್ರಕ್ಕೆ, ಸರಳವಾದ ವಿಚಾರಗಳನ್ನು ಕೂಡ ಸಾಧ್ಯವಾದಷ್ಟು ಗೊಂದಲಮಯ ಭಾಷೆಯಲ್ಲಿ ಮಂಡಿಸುವ ಒಂದು ಪ್ರವೃತ್ತಿ ಇದೆ. ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಎಂದರೆ ವಿಮಾನದ ಸುರಕ್ಷತಾ ಪ್ರದರ್ಶನ (Safety Briefing)- ಒಂದು ನಿಮಿಷದಲ್ಲಿ ಮುಗಿಸಬಹುದಾದ ಉಪಯುಕ್ತ ಮಾಹಿತಿಯನ್ನು ಅನಗತ್ಯ ಪದಗಳಿಂದ ತುಂಬಿ, ಸಿಬ್ಬಂದಿ ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾರೋ ಅಥವಾ ಗುಪ್ತ ಭಾಷೆಯಲ್ಲಿ ಮಾತನಾಡುತ್ತಿದ್ದಾರೋ ಎಂಬಂತೆ ಏಳು ನಿಮಿಷಗಳ ಸುದೀರ್ಘ ಪ್ರಕ್ರಿಯೆಯಾಗಿ ಪರಿವರ್ತಿಸಿರುವುದು ವಿಪರ್ಯಾಸವೇ ಸರಿ.
ಮನರಂಜನಾ ವ್ಯವಸ್ಥೆಯಲ್ಲಿ ಮೊದಲೇ ರೆಕಾರ್ಡ್ ಮಾಡಿ ತೋರಿಸಲಿ ಅಥವಾ ಸಿಬ್ಬಂದಿ ಸಾಂಪ್ರದಾಯಿಕ ‘ಮೈಮ್ ಶೈಲಿ’ಯಲ್ಲಿ ಪ್ರದರ್ಶಿಸಲಿ, ಈ ಸುರಕ್ಷತಾ ಪ್ರದರ್ಶನವು ಅತ್ಯಂತ ಅಗತ್ಯ ಪ್ರಕ್ರಿಯೆ. ಇದು ಅನಗತ್ಯ ಸೂಚನೆಗಳು ಮತ್ತು ಪುನರಾವರ್ತಿತ ಪದಗಳಿಂದ ಕೂಡಿರುತ್ತವೆ.
ಇದನ್ನೂ ಓದಿ: ವಿಮಾನದ ಬಿಡಿಭಾಗಗಳು
ಉದಾಹರಣೆಗೆ, ‘ಈ ಸಮಯದಲ್ಲಿ, ದಯವಿಟ್ಟು ನಿಮ್ಮ ಆಸನಗಳ ಹಿಂಭಾಗವನ್ನು ಸಂಪೂರ್ಣ ಮತ್ತು ನೇರವಾದ ಸ್ಥಾನಕ್ಕೆ ಮರಳಿಸುವಂತೆ ನಾವು ಕೇಳಿಕೊಳ್ಳುತ್ತೇವೆ’ ಎಂದು ಹೇಳುವ ಬದಲು, ‘ದಯವಿಟ್ಟು ನಿಮ್ಮ ಸೀಟ್‌ಗಳನ್ನು ನೇರಗೊಳಿಸಿ’ ಎಂದು ಏಕೆ ಹೇಳಬಾರದು? ಇನ್ನೊಂದು ಉದಾಹರಣೆ, ‘ಫೆಡರಲ್ ಕಾನೂನು ಯಾವುದೇ ಶೌಚಾಲಯದ ಹೊಗೆ ಪತ್ತೆಕಾರಕವನ್ನು ದುರುಪಯೋಗಪಡಿಸುವುದನ್ನು, ನಿಷ್ಕ್ರಿಯಗೊಳಿಸುವುದನ್ನು ಅಥವಾ ನಾಶಪಡಿಸುವುದನ್ನು ನಿಷೇಧಿಸುತ್ತದೆ’. ಇವೆಲ್ಲವೂ ಒಂದೇ ವಿಷಯಗಳಲ್ಲವೇ? ‘ದುರುಪಯೋಗಪಡಿಸುವುದು’ ಎಂಬ ಪದವೇ ಎಲ್ಲವನ್ನೂ ಒಳಗೊಳ್ಳುವುದಿಲ್ಲವೇ? ಇತ್ತೀಚೆಗೆ ವಿಮಾನಯಾನ ಸಂಸ್ಥೆಗಳು ತಮ್ಮ ಸುರಕ್ಷತಾ ಪ್ರದರ್ಶನಗಳನ್ನು ಸಂಗೀತ, ಅನಿಮೇಷನ್‌ಗಳು ಮತ್ತು ಸೆಲೆಬ್ರಿಟಿಗಳನ್ನು ಬಳಸಿ ಹೆಚ್ಚು ‘ಕ್ಯೂಟ್’ ಮಾಡಲು ಸ್ಪರ್ಧಿಸುತ್ತಿವೆ.

ಇದು ಜನರನ್ನು ರಂಜಿಸಲು ಅಥವಾ ಗಮನ ಸೆಳೆಯಲು ಇರಬಹುದು, ಆದರೆ ಇದು ಪ್ರಯಾಣಿಕರಿಗೆ ಕಿರಿಕಿರಿ ನೀಡುತ್ತದೆ. ಈ ಅಲಂಕಾರಿಕ ಅಸಂಬದ್ಧತೆಯನ್ನು ಸಂಗೀತಕ್ಕೆ ಹೊಂದಿಸುವುದರಿಂದ ಪ್ರಚಾರ ಸಿಗಬಹುದಾದರೂ, ಇದು ವಿಷಯವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವುದಿಲ್ಲ. ಮುಖ್ಯವಾಗಿ, ಇದು ಸುರಕ್ಷತೆಯ ಉದ್ದೇಶವನ್ನೇ ಹಾಳು ಮಾಡುತ್ತದೆ. ಸುರಕ್ಷತೆಯೇ ಮುಖ್ಯವಾಗಿದ್ದರೆ, ಪ್ರದರ್ಶನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಸೀಟಿನ ಹಿಂಭಾಗದಲ್ಲಿರುವ ಸುರಕ್ಷತಾ ಕಾರ್ಡ್ ಕೂಡ ಅಷ್ಟೇ ಕಿರಿಕಿರಿ ನೀಡುತ್ತದೆ. ಕಾರ್ಡ್‌ಗಳಲ್ಲಿನ ಚಿತ್ರಗಳು ಈಜಿಪ್ಟಿನ ಚಿತ್ರಲಿಪಿಗಳ ಅಗ್ಗದ ಪ್ರತಿಗಳಂತೆ ಕಾಣುತ್ತವೆ. ಇನ್ನೂ ವಿಚಿತ್ರ ಅಂದ್ರೆ, ತುರ್ತು ನಿರ್ಗಮನದ (Exit Row) ಆಸನಗಳ ಅವಶ್ಯಕತೆಗಳನ್ನು ವಿವರಿಸುವ ಕಾರ್ಡ್‌ಗಳು. ಪ್ರಯಾಣಿಕರನ್ನು ವಿಮಾನ ಹಾರಾಟಕ್ಕೆ ಮೊದಲು ಈ ಮಾಹಿತಿ ಯನ್ನು ಪರಿಶೀಲಿಸುವಂತೆ ಕೇಳಲಾಗುತ್ತದೆ, ಇದು ಅವರನ್ನು ‘ಹನ್ನೆರಡು ನಿಮಿಷಗಳಲ್ಲಿ ಹಂಗೇರಿಯನ್ ಭಾಷೆ ಕಲಿಯಿರಿ’ ಎಂದು ಹೇಳಿದಂತೆ!
ತಾಂತ್ರಿಕ ಪದಗಳ ರಾಶಿಯೇ ಅಲ್ಲಿರುತ್ತದೆ. ಇಂಥ ಸಂದರ್ಭದಲ್ಲಿ ಮೊದಲ ಬಾರಿಗೆ ಪ್ರಯಾಣಿಕನನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವನ್ನೂ ಬಳಸಿರುವುದಿಲ್ಲ. ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಕರು ಇಷ್ಟೆಲ್ಲ ಸಣ್ಣಪುಟ್ಟ ವಿಷಯಗಳ ಬಗ್ಗೆ ಪ್ರಯಾಣಿಕರಿಗೆ ತಿಳಿವಳಿಕೆ ನೀಡಲು ಪ್ರಯತ್ನಿಸಿದರೂ, ಅತ್ಯಂತ ಮುಖ್ಯವಾದ ಒಂದು ವಿಷಯವನ್ನು ಕಡೆಗಣಿಸುವುದು.
ತುರ್ತು ಸ್ಥಳಾಂತರದ ಸಮಯದಲ್ಲಿ ಏನು ಮಾಡಬೇಕು- ಅಥವಾ ಹೆಚ್ಚು ನಿಖರವಾಗಿ, ಏನು ಮಾಡಬಾರದು ಎಂಬ ವಿಷಯದಲ್ಲಿ ಸ್ಪಷ್ಟತೆ ನೀಡದಿರುವುದು. ಇತ್ತೀಚಿನ ಹಲವಾರು ತುರ್ತು ಪರಿಸ್ಥಿತಿಗಳಲ್ಲಿ, ವಿಮಾನಕ್ಕೆ ಬೆಂಕಿ ಹತ್ತಿದ ಕನಿಷ್ಠ ಮೂರು ಸಂದರ್ಭ ಗಳಲ್ಲಿ, ಅನೇಕ ಪ್ರಯಾಣಿಕರು ತಮ್ಮ ಭಾರವಾದ ಲಗೇಜ್‌ಗಳೊಂದಿಗೆ ಹೊರಹೋಗು ತ್ತಿರುವ ದೃಶ್ಯಗಳನ್ನು ನೋಡಿರಬಹುದು. ಇದು ಅತ್ಯಂತ ಅಪಾಯಕಾರಿ ಅಭ್ಯಾಸ. ಪ್ರಯಾಣಿಕರು ವಿಮಾನದಿಂದ ವೇಗವಾಗಿ ಹೊರಬರಲು ಲಗೇಜ್ ಅಡ್ಡಿಪಡಿಸುತ್ತದೆ. ಇದು ತುರ್ತುಪರಿಸ್ಥಿತಿಯಲ್ಲಿ ಪಾರು ಮಾಡುವ ಸ್ಲೈಡ್‌ಗಳಲ್ಲಿ ಮಾರಣಾಂತಿಕ ಅಡಚಣೆಗಳಾಗ ಬಹುದು. ಟೊರೊಂಟೊ, ಲಾಸ್ ವೇಗಾಸ್, ಶಿಕಾಗೋ ಮತ್ತು ದುಬೈನಲ್ಲಿ ಇಂಥ ಘಟನೆ ಗಳು ನಡೆದಿವೆ. ಗಗನಸಖಿಯರು ‘ನಿಮ್ಮ ವಸ್ತುಗಳನ್ನು ಬಿಟ್ಟು ಹೊರಡಿ’ ಎಂದು ಕೂಗಿದರೂ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ತೆಗೆದುಕೊಂಡು ಬರುವುದು ಅಪಾಯಕಾರಿಯೇ.