Saturday, October 10, 2026
Saturday, October 10, 2026

ಉದ್ಯಮದಿಂದ ಸಮಾಜಸೇವೆಯ ತನಕ ಡಾ.ಪ್ರಕಾಶ್‌ ಶೆಟ್ಟಿಯವರ ಅಗಾಧ ಪ್ರಖ್ಯಾತಿ

ಮುದ್ರಣ ವ್ಯವಹಾರದಲ್ಲಿ ಸೀಮಿತ ಲಾಭ ಕಂಡ ಡಾ. ಶೆಟ್ಟಿ, ಆತಿಥ್ಯ ಮತ್ತು ಆಹಾರ ವಲಯವನ್ನು ಪ್ರವೇಶಿಸಿದರು. ಅವರು 1993ರಲ್ಲಿ ಫೈನ್‌ಡೈನ್‌ ರೆಸ್ಟೋರೆಂಟ್ ಬಂಜಾರವನ್ನು ಆರಂಭಿಸಿದರು. ಶೀಘ್ರದಲ್ಲೇ ಅದು ಯಶಸ್ವಿಯಾಯಿತು. ಗ್ರಾಹಕರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಅವರು, ಗೋಲ್ಡ್‌ ಫಿಂಚ್ ಹೊಟೇಲ್‌ಗಳ ಬ್ರ್ಯಾಂಡ್ಅನ್ನು ಪರಿಕಲ್ಪನೆಗೆ ತಂದರು. ಮೊದಲಿಗೆ ಹೊಟೇಲನ್ನು ಮಂಗಳೂರಿನಲ್ಲಿ ಪ್ರಾರಂಭಿಸಿ, ದೆಹಲಿಯ ಬಳಿಯ ಸೂರಜ್‌ಕುಂಡ್ ಸೇರಿದಂತೆ ಬೆಂಗಳೂರು, ಗೋವಾ, ಮುಂಬಯಿ ಮತ್ತು ದೆಹಲಿ ಎನ್‌ಸಿಆರ್‌ಗೆ ಗೋಲ್ಡ್‌ ಫಿಂಚ್ ಹೊಟೇಲ್‌ಗಳು ವಿಸ್ತರಿಸಿದರು.

ಕೈಗಾರಿಕೋದ್ಯಮವನ್ನು ನಡೆಸುವ ಕಲೆಯು ಉದ್ಯಮಿಗಳಿಗೆ ಹುಟ್ಟಿನಿಂದಲೇ ಒಲಿದಿರುತ್ತದೆ ಮತ್ತು ಅದು ಕಲಿಕೆಯಿಂದ ಬರುವುದಿಲ್ಲವೆಂದು ಹಲವರ ನಂಬಿಕೆ. ಹಾಗಾಗಿ, ವ್ಯಾಪಾರ ಕುಟುಂಬಗಳಲ್ಲಿ ಜನಿಸಿದವರು ಮಾತ್ರ ಉದ್ಯಮಿಗಳಾಗಿ ಯಶಸ್ವಿಯಾಗಬಹುದೆಂದು ಅವರು ನಂಬುತ್ತಾರೆ. ಆದರೆ, ದೃಢನಿಶ್ಚಯ ಮತ್ತು ಉತ್ಸಾಹದೊಂದಿಗೆ ಎಂಥ ಅಡೆತಡೆಗಳನ್ನೂ ದಾಟಿಕೊಂಡು ಮುಂದೆ ಸಾಗಬಹುದೆಂಬುದಕ್ಕೆ ಡಾ. ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿಯವರೇ ನಿದರ್ಶನ.

ಈ ಮಾತನ್ನು ಕರ್ನಾಟಕದ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಪ್ರಕಾಶ್ ಶೆಟ್ಟಿಯವರು ಹೊಟೇಲ್‌ ರಂಗದಲ್ಲಿ ತಾವು ಮಾಡಿದ ಅದ್ಭುತ ಸಾಧನೆಗಳೊಂದಿಗೆ ನಿರೂಪಿಸಿದ್ದಾರೆ. ಈ ಅಪ್ರತಿಮ ಸಾಧಕರ ಬಗ್ಗೆ ಇಲ್ಲಿ ತಿಳಿಯೋಣ.

ಇದನ್ನೂ ಓದಿ: ಆತಿಥ್ಯಕ್ಕೆ ಹೊಸ ಭಾಷ್ಯ ಬರೆದ ಗೋಲ್ಡ್ ಫಿಂಚ್ ಹೊಟೇಲ್ ಬೆಂಗಳೂರು

ರೈತಾಪಿ ಕುಟುಂಬದಲ್ಲಿ ಆರಂಭಗೊಂಡ ಡಾ. ಶೆಟ್ಟಿಯವರ ಬದುಕಿನ ಮಹತ್ವಾಕಾಂಕ್ಷೆಯ ಪಯಣ 400 ಕೋಟಿ ರುಪಾಯಿಗಳ ವ್ಯಾಪಾರ ಸಾಮ್ರಾಜ್ಯದ ಸ್ಥಾಪನೆಯೆಡೆಗೆ ಸಾಗಿತು. ಇಂದು, ಅವರ ಉದ್ಯಮಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 4,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿವೆ.

Untitled design - 2026-10-10T174315.242

ಉಡುಪಿ ಜಿಲ್ಲೆಯ ಕೊರಂಗ್ರಪಾಡಿಯಲ್ಲಿ ಜುಲೈ 21, 1959ರಂದು ಪ್ರಕಾಶ್ ಶೆಟ್ಟಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪೂರ್ಣಗೊಳಿಸಿದರು. ಅನಂತರ ಉನ್ನತ ವ್ಯಾಸಂಗಕ್ಕಾಗಿ ಉಡುಪಿಗೆ ತೆರಳಿದರು. ಪೂರ್ಣಪ್ರಜ್ಞಾ ಕಾಲೇಜಿನಿಂದ ಬಿಬಿಎಂ ಪದವಿ ಶಿಕ್ಷಣ ಪಡೆದರು. ಪದವಿಯ ನಂತರ, ಅವರು ಬೆಂಗಳೂರಿನಲ್ಲಿ ಉದ್ಯೋಗವನ್ನಾಶ್ರಯಿಸಿದರು. ಆದರೆ, ಅವರ ಮನಸು ಸದಾಕಾಲ ಉದ್ಯಮಶೀಲತೆಯತ್ತ ಕೇಂದ್ರೀ‍ಕೃತವಾಗಿತ್ತು. ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಡಾ.ಶೆಟ್ಟಿ 50,000 ರುಪಾಯಿ ಸಾಲ ಪಡೆದು ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಅವರ ಉದ್ಯಮಶೀಲ ಪ್ರಯಾಣದ ಆರಂಭದ ಹೆಜ್ಜೆ ಇದಾಗಿತ್ತು.

ಡಾ. ಶೆಟ್ಟಿಯವರ ವಿವಾಹ ಆಶಾ ಶೆಟ್ಟಿ ಅವರೊಂದಿಗೆ ನೆರವೇರಿತು. ದಂಪತಿಗೆ ಗಂಡು ಮಗು ಹುಟ್ಟಿದಾಗ ಆತನಿಗೆ ಗೌರವ್ ಎಂದು ನಾಮಕರಣ ಮಾಡಿದರು. ಆನಂತರ ಡಾ. ಪ್ರಕಾಶ್‌ ಶೆಟ್ಟಿ ಎಂಆರ್‌ಜಿ ಗ್ರೂಪ್ಅನ್ನು ಸ್ಥಾಪಿಸಿದರು. ಅದರ ಹೆಸರಿಗಾಗಿ ತಮ್ಮ ಪ್ರೀತಿಪಾತ್ರರಾದ ತಂದೆ ಮಾಧವ್, ತಾಯಿ ರತ್ನ, ಮತ್ತು ಮಗ ಗೌರವ್‌ರ ಹೆಸರುಗಳ ಆಂಗ್ಲ ಮೊದಲಾಕ್ಷರವನ್ನಾಯ್ದುಕೊಂಡು MRG(ಎಂಆರ್‌ಜಿ) ಗ್ರೂಪ್‌ಅನ್ನು ಆರಂಭಿಸಿದರು.

ಮುದ್ರಣ ವ್ಯವಹಾರದಲ್ಲಿ ಸೀಮಿತ ಲಾಭ ಕಂಡ ಡಾ. ಶೆಟ್ಟಿ, ಆತಿಥ್ಯ ಮತ್ತು ಆಹಾರ ವಲಯವನ್ನು ಪ್ರವೇಶಿಸಿದರು. ಅವರು 1993ರಲ್ಲಿ ಫೈನ್‌ಡೈನ್‌ ರೆಸ್ಟೋರೆಂಟ್ ಬಂಜಾರವನ್ನು ಆರಂಭಿಸಿದರು. ಶೀಘ್ರದಲ್ಲೇ ಅದು ಯಶಸ್ವಿಯಾಯಿತು. ಗ್ರಾಹಕರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಅವರು, ಗೋಲ್ಡ್‌ ಫಿಂಚ್ ಹೊಟೇಲ್‌ಗಳ ಬ್ರ್ಯಾಂಡ್ಅನ್ನು ಪರಿಕಲ್ಪನೆಗೆ ತಂದರು. ಮೊದಲಿಗೆ ಹೊಟೇಲನ್ನು ಮಂಗಳೂರಿನಲ್ಲಿ ಪ್ರಾರಂಭಿಸಿ, ದೆಹಲಿಯ ಬಳಿಯ ಸೂರಜ್‌ಕುಂಡ್ ಸೇರಿದಂತೆ ಬೆಂಗಳೂರು, ಗೋವಾ, ಮುಂಬಯಿ ಮತ್ತು ದೆಹಲಿ ಎನ್‌ಸಿಆರ್‌ಗೆ ಗೋಲ್ಡ್‌ ಫಿಂಚ್ ಹೊಟೇಲ್‌ಗಳು ವಿಸ್ತರಿಸಿದರು.

ಕರ್ನಾಟಕದಲ್ಲಿ 1997ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಊಟದ ವ್ಯವಸ್ಥೆಗಾಗಿ ಬಂಜಾರ ರೆಸ್ಟೋರೆಂಟ್‌ ಅಧಿಕೃತವಾಗಿ ಆಯ್ಕೆಯಾಯಿತು. ಈ ಸಂದರ್ಭದಲ್ಲಿ ಡಾ. ಶೆಟ್ಟಿಯವರು ನೀಡಿದ ಐಷಾರಾಮಿ ಆತಿಥ್ಯವು ಅವರ ಖ್ಯಾತಿಯನ್ನು ಉತ್ತುಂಗಕ್ಕೇರಿಸಿತು. ಅವರ ಅದ್ಭುತ ಆತಿಥ್ಯಕ್ಕೆ ಮಾರುಹೋಗಿ 1999ರಲ್ಲಿ ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಊಟದ ವ್ಯವಸ್ಥೆ ಒದಗಿಸುವುದಕ್ಕಾಗಿ ಬಂಜಾರ ರೆಸ್ಟೋರೆಂಟ್‌ ಅಧಿಕೃತವಾಗಿ ಆಯ್ಕೆಯಾಯಿತು. ಆನಂತರ ಅವರಿಗೆ ಆತಿಥ್ಯ ಉದ್ಯಮದಲ್ಲಿ ರಾಷ್ಟ್ರವ್ಯಾಪಿ ಮನ್ನಣೆ ದೊರೆಯತೊಡಗಿತು.

Untitled design - 2026-10-10T184824.197

ರಿಯಲ್ ಎಸ್ಟೇಟ್ ಉದ್ಯಮವು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಅಹಿಕಾ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದೊಂದಿಗೆ ಎಂಆರ್‌ಜಿ ಗ್ರೂಪ್ ಈ ವಲಯಕ್ಕೆ ಕಾಲಿಟ್ಟಿತು. ಇಂದು, ಪ್ರೆಸ್ಟೀಜ್ ಗ್ರೂಪ್ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ಎಂಆರ್‌ಜಿ ದೊಡ್ಡ ಪ್ರಮಾಣದ ಯೋಜನೆಗಳನ್ನು ನಿರ್ವಹಿಸುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಗೆ ಎಂಆರ್‌ಜಿ ಗ್ರೂಪ್‌ನ ವಹಿವಾಟು ವ್ಯಾಪಿಸಿದೆ. ಇಂದು 1,000 ಎಕರೆಗಳಿಗಿಂತ ಹೆಚ್ಚು ಭೂ ಮಾಲೀಕತ್ವ ಹೊಂದಿರುವ ಎಂಆರ್‌ಜಿ ಗ್ರೂಪ್‌ ಪ್ರಸ್ತುತ ಮಂಗಳೂರಿನಲ್ಲಿ ಗೋಲ್ಡ್‌ಫಿಂಚ್ ಸಿಟಿ ಎಂಬ ಹೆಸರಿನ 104 ಎಕರೆಗಳ ಬೃಹತ್ ಸಮಗ್ರ ಟೌನ್‌ಶಿಪ್ಅನ್ನು ಅಭಿವೃದ್ಧಿಪಡಿಸುತ್ತಿದೆ. ಅಲ್ಲಿ ವಸತಿ ಅಪಾರ್ಟ್‌ಮೆಂಟ್‌ಗಳು, ಶಾಲೆಗಳು, ಆಸ್ಪತ್ರೆಗಳು, ಹೈಪರ್‌ಮಾರ್ಕೆಟ್‌ಗಳು, ಮಾಲ್‌ಗಳು, ಹೊಟೇಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಮತ್ತು ಔತಣಕೂಟ ಸೌಲಭ್ಯಗಳೂ ಲಭ್ಯವಿವೆ.

ಡಾ. ಶೆಟ್ಟಿಯವರು ಸಮಾಜಸೇವೆಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. COVID-19 ಸಾಂಕ್ರಾಮಿಕದ ಸಮಯದಲ್ಲಿ, ಎಂಆರ್‌ಜಿ ಗ್ರೂಪ್ 20,000ಕ್ಕೂ ಹೆಚ್ಚು ಕುಟುಂಬಗಳಿಗೆ ಊಟವನ್ನೊದಗಿಸಿತ್ತು. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತ ದೀನದಲಿತರಿಗೆ ಆರ್ಥಿಕ ಸಹಾಯವನ್ನೂ ಈ ಸಂಸ್ಥೆ ಒದಗಿಸುತ್ತಿದೆ.

ಡಾ. ಶೆಟ್ಟಿಯವರ ಸಾಧನೆಗಳನ್ನು ಗುರುತಿಸಿ, ಮಂಗಳೂರು ವಿಶ್ವವಿದ್ಯಾನಿಲಯವು ತನ್ನ 42ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ನೆರವೇರಿತು.

ಆತಿಥ್ಯ, ರಿಯಲ್ ಎಸ್ಟೇಟ್ ಮತ್ತು ಸಮಾಜಸೇವೆಯ ರಂಗಗಳಲ್ಲಿ ಅವಿರತ ಪರಿಶ್ರಮದ ಮೂಲಕ, ವ್ಯಾಪಾರ ಪ್ರಪಂಚ ಮತ್ತು ಸಮಾಜದ ಮೇಲೆ ಶಾಶ್ವತ ಪ್ರಭಾವ ಬೀರುತ್ತಿದ್ದಾರೆ

ಡಾ. ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat