Saturday, May 9, 2026
Saturday, May 9, 2026

ಕ್ಲೆಪ್ಟೋಮೇನಿಯಾ ಎಂಬ ಕದಿಯುವ ಚಾಳಿ

ಊಟಕ್ಕೆ ಹೋದಾಗ ಸೋಂಪ್ ಇಟ್ಟಿರುವ ಇಡೀ ಬಟ್ಟಲನ್ನೇ ಬಗ್ಗಿಸಿ ಟಿಶ್ಯ ಪೇಪರ್ ಒಳಗೆ ಪೊಟ್ಟಣ ಕಟ್ಟಿ ಮನೆಗೆ ತರುವ ಮಹಾಶಯರೂ ಇದ್ದಾರೆ. ಇದ್ಯಾವುದರಿಂದಲೂ ಇವರು ಬಂಗಲೆ ಕಟ್ಟಿಸೋದಿಲ್ಲ. ಇವರ ಆಸ್ತಿ ಹೆಚ್ಚಾಗುವುದಿಲ್ಲ. ಮನೆಗೆ ತಂದಮೇಲೆ ಅವರು ಅದನ್ನು ಮೂಸಿಯೂ ನೋಡುವುದಿಲ್ಲ. ಯಾವಾಗ ಎಲ್ಲಿ ಹೋಯ್ತೆಂದೂ ಗೊತ್ತಿರುವುದಿಲ್ಲ. ಆದರೂ ಕದ್ದುತಂದೆ ಎಂಬ ಕೆಟ್ಟ ಹೆಮ್ಮೆ.

ಇತ್ತೀಚೆಗೆ ಅದನ್ನು ಕ್ಲೆಪ್ಟೋಮೇನಿಯಾ ಅಂತ ಹೆಮ್ಮೆಯಿಂದ ಹೇಳ್ಕೋತಾರೆ. ತಮ್ಮ ಸ್ಪೆಷಲ್ ಕ್ವಾಲಿಟಿ ಎಂಬಂತೆ! ನಂಗೇನೂ ಆ ವಸ್ತುವಿನ ಅಗತ್ಯ ಇಲ್ಲ, ಅದನ್ನು ಕೊಂಡುಕೊಳ್ಳೋ ತಾಕತ್ತೂ ಇದೆ. ಆದರೆ ನಂಗೆ ಕದಿಯೋದರಲ್ಲಿ ಒಂದು ಥ್ರಿಲ್ ಇದೆ, ಖುಷಿ ಇದೆ, ಸುಖ ಇದೆ ಅಂತ. ಆನೆ ಕದ್ದರೂ ಕಳ್ಳನೇ ಅಡಿಕೆ ಕದ್ದರೂ ಕಳ್ಳನೇ. ಅದೇ ರೀತಿ ತಮಾಷೆಗೆ ಕದ್ದರೂ ಕಳ್ಳನೇ, ಥ್ರಿಲ್ಲು ಖುಷಿಗಾಗಿ ಕದ್ದರೂ ಕಳ್ಳನೇ. ಕ್ಲೆಪ್ಟೋಮೇನಿಯಾ ಎಂಬ ಕಾಯಿಲೆ ಅಥವಾ ಡಿಸ್ ಆರ್ಡರ್ ಹೆಸರಲ್ಲಿ ಬಚಾವಾಗಲಾಗುವುದಿಲ್ಲವಲ್ಲ.

Untitled design - 2026-05-09T121605.515

ಆ ಲೆಕ್ಕದಲ್ಲಿ ನೋಡುವುದಾದರೆ ನಮ್ಮಲ್ಲಿ ಪ್ರವಾಸ ಹೋಗುವ ತೊಂಬತ್ತು ಪರ್ಸೆಂಟ್ ಮಂದಿಗೆ ಕ್ಲೆಪ್ಟೋಮೇನಿಯಾ ಇದೆ ಅನ್ನಬಹುದು. ಯಾಕಂದ್ರೆ, ಪ್ರವಾಸಕ್ಕೆ ಹೋದಾಗ, ರೆಸಾರ್ಟು, ಹೊಟೇಲುಗಳಲ್ಲಿ ಸುಖಾಸುಮ್ಮನೆ ಇವರಿಗೆ ಕದಿಯುವ ಚಟ ಜಾಗೃತವಾಗುತ್ತದೆ. ರೂಮ್ ಖಾಲಿ ಮಾಡಿ ಬರುತ್ತಾ ಏನೇನು ಲಪಟಾಯಿಸಬಹುದು ಎಂದು ಇವರ ಮನಸು ಹೊಂಚು ಹಾಕತೊಡಗುತ್ತದೆ. ಆ ಕಳ್ಳ ಮನಸಿಗೆ ನಾವು ಅಷ್ಟೊಂದು ದೊಡ್ಡು ಕೊಟ್ಟಿಲ್ವಾ ಎಂಬ ಡಿಫೆನ್ಸು ಜಸ್ಟಿಫಿಕೇಷನ್ ಬೇರೆ ಇರುತ್ತೆ. ತಂಗಿದ್ದ ಹೊಟೇಲ್ ನಲ್ಲಿ ಉಚಿತ ಮತ್ತು ಕೊಂಡೊಯ್ಯಬಹುದಾದ ವಸ್ತುಗಳು ಕೆಲವಿರುತ್ತದೆ. ಆದರೆ ಜನಕ್ಕೆ ಅದನ್ನು ಬಿಟ್ಟು ಬೇರೇದನ್ನೋ ಕದ್ದೊಯ್ಯೋ ಹಂಬಲ.

ಟವಲ್, ಶಾಂಪೂ ಬಾಟಲ್, ಚಪ್ಪಲಿ, ಸ್ಪೂನು, ಕಪ್, ಕಾಫಿ ಮೇಕರ್ ಹೀಗೆ ಏನೇನೋ ಬ್ಯಾಗಲ್ಲಿ ಎತ್ತಿಕೊಂಡು ಬಂದುಬಿಡುತ್ತಾರೆ. ಅದ್ಯಾವುದನ್ನೂ ಬಳಸದೇ ಇದ್ದರೂ ಕದ್ದು ತಂದೆವೆಂಬ ಹೆಮ್ಮೆ, ದುಬಾರಿ ಬಿಲ್ ಕಾಂಪೆನ್ಸೇಟ್ ಮಾಡಿಕೊಂಡೆ ಎಂಬ ಹುಸಿ ಸಮಾಧಾನ. ಕೆಲವರಂತೂ ಮನೆಯಲ್ಲಿ ಎಕ್ಸಿಬಿಷನ್ನೇ ಇಟ್ಟುಬಿಡುತ್ತಾರೆ. ಇದು ಆ ದೇಶದ ಆ ಹೊಟೇಲ್ ಗೆ ಹೋದಾಗ ಕದ್ದು ತಂದಿದ್ದು ಅಂತ. ಹೊಟೇಲ್ ನಲ್ಲಿ ತಿಂಡಿ ತಿನ್ತಾ ಇರುವಾಗಲೇ ಚಮಚಗಳನ್ನು ಕದ್ದು ಜೇಬಲ್ಲಿಟ್ಟುಕೊಳ್ಳುವ ಚತುರ ಕಳ್ಳರೂ ಇಲ್ಲಿದ್ದಾರೆ. ಊಟಕ್ಕೆ ಹೋದಾಗ ಸೋಂಪ್ ಇಟ್ಟಿರುವ ಇಡೀ ಬಟ್ಟಲನ್ನೇ ಬಗ್ಗಿಸಿ ಟಿಶ್ಯ ಪೇಪರ್ ಒಳಗೆ ಪೊಟ್ಟಣ ಕಟ್ಟಿ ಮನೆಗೆ ತರುವ ಮಹಾಶಯರೂ ಇದ್ದಾರೆ. ಇದ್ಯಾವುದರಿಂದಲೂ ಇವರು ಬಂಗಲೆ ಕಟ್ಟಿಸೋದಿಲ್ಲ. ಇವರ ಆಸ್ತಿ ಹೆಚ್ಚಾಗುವುದಿಲ್ಲ. ಮನೆಗೆ ತಂದಮೇಲೆ ಅವರು ಅದನ್ನು ಮೂಸಿಯೂ ನೋಡುವುದಿಲ್ಲ. ಯಾವಾಗ ಎಲ್ಲಿ ಹೋಯ್ತೆಂದೂ ಗೊತ್ತಿರುವುದಿಲ್ಲ. ಆದರೂ ಕದ್ದುತಂದೆ ಎಂಬ ಕೆಟ್ಟ ಹೆಮ್ಮೆ.

Untitled design - 2026-05-09T121559.535

ಸಿಸಿಟಿವಿ ಕಣ್ಣು ಕೂಡ ತಪ್ಪಿಸಿ ಕದ್ದುತಂದೆ ಎಂದು ಯುದ್ಧ ಗೆದ್ದವರ ಥರ ಹೇಳಿಕೊಳ್ಳುವ ಸ್ಟೀಲಿಂಗ್ ಸ್ಟಾರ್ ಗಳಿಗೂ ಇಲ್ಲಿ ಕಮ್ಮಿ ಇಲ್ಲ.

ಅದರೆ ಇದು ಬೂತಯ್ಯನ ಮಗ ಚಿತ್ರದಂತೆ. ಒಂದು ಗ್ಯಾಂಗ್ ಫುಲ್ ಮೀಲ್ಸ್ ದುರುಪಯೋಗ ಮಾಡಿಕೊಂಡ ಪರಿಣಾಮ ಪ್ಲೇಟ್ ಮೀಲ್ಸ್ ಜಾರಿಯಾದಂತೆ, ಕಳ್ಳ ಗ್ರಾಹಕರಿಂದಾಗಿ ಪ್ರಾಮಾಣಿಕ ಗ್ರಾಹಕರನ್ನು ಅನುಮಾನದ ಕಣ್ಣುಗಳಿಂದ ನೋಡಬೇಕಾಗುತ್ತದೆ. ಜತೆಗೆ ಇಂಥ ನಷ್ಟಗಳಿಗೆ ಭವಿಷ್ಯದ ಗ್ರಾಹಕರು ತೆರಿಗೆ ಕಟ್ಟಬೇಕಾಗುತ್ತದೆ. ಪ್ರವಾಸಕ್ಕೆ ಹೋದಾಗ ನೆನಪುಗಳನ್ನು ಉಚಿತವಾಗಿ ತನ್ನಿ. ಮಿಕ್ಕಿದ್ದನ್ನು ಕೊಂಡು ತನ್ನಿ. ಇಲ್ಲವಾದಲ್ಲಿ ರೆಸಾರ್ಟ್ ಹೊಟೇಲ್ ಗಳಿಗೆ ಅತಿಥಿಯಾದವರು ಪೊಲೀಸರಿಗೂ ಅತಿಥಿಯಾಗಬೇಕಾದೀತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!