ಚಿಕ್ಕಾಕ್ಷರ ಸತ್ಯ - ದೊಡ್ಡಾಕ್ಷರ ಮಿಥ್ಯ!
ಹೊಟೇಲ್‌ಗಳಲ್ಲಿ ಬಾರ್‌ಗಳಲ್ಲಂತೂ ಇನ್ನೂ ಮೋಸ. ಫುಲ್ ಮೀಲ್ಸ್ ಅಂತ ಬೋರ್ಡೇನೋ ಹಾಕ್ತಾರೆ. ಆದರೆ ಆ ಫುಲ್ ಮೀಲ್ಸಲ್ಲಿ ಅವರ ಆಯ್ಕೆಯ ಐಟಮ್ ಮಾತ್ರ ಅನ್‌ಲಿಮಿಟೆಡ್. ಬಾರ್ ಎದುರು ದೊಡ್ಡದಾಗಿ ಹಾಕಿರ್ತಾರೆ- ಅನ್ ಲಿಮಿಟೆಡ್ ಬಿಯರ್- ಕೇವಲ 1699 ರುಪಾಯಿಗೆ ಅಂತ. ಇವತ್ತು ಹಿಗ್ಗಾಮುಗ್ಗ ಕುಡಿದು ಮಜಾ ಮಾಡೋಣ ಅಂತ, ಬೋರ್ಡ್ ಸರಿಯಾಗಿ ಓದದೇ ಒಳಹೊಕ್ಕಿರಿ ಅಂದ್ರೆ ಸೇವಿಂಗ್ ಬದಲು ಶೇವಿಂಗ್ ಪಕ್ಕಾ!
ಪ್ರವಾಸದಲ್ಲಾಗಲೀ ಮಾಮೂಲಿ ಸಮಯದಲ್ಲಾಗಲೀ ನಾವು ಆಫರ್‌ಗಳಿಗೆ ಮರುಳಾಗುವ ಜನ. ಎಲ್ಲದಕ್ಕೂ ಟ್ಯಾಕ್ಸ್ ಸೇರಿಸುವ ಯುಗದಲ್ಲಿ, ಎಂಆರ್‌ಪಿ ಎಂಬ ಬೋರ್ಡ್ ಕೂಡ ನಮಗೆ ಡಿಸ್ಕೌಂಟ್ ಆಫರ್‌ನಂತೆ ಕಾಣುತ್ತದೆ. ಶೇ.50 ಕಡಿತ ಎಂಬ ಬೋರ್ಡ್ ಕಾಣಿಸಿ ಬಟ್ಟೆ ಖರೀದಿಸಲು ಹೋದರೆ ಅದು ಜೇಬಿನ ಕಡಿತವಾಗಿರುತ್ತದೆಯೇ ಹೊರತು ಬಟ್ಟೆಯ ದರದ ಮೇಲಲ್ಲ. ಎಲ್ಲ ಆಫರ್ ಬೋರ್ಡ್‌ಗಳೂ ಹೀಗೆಯೇ; ಮೇಲ್ಗಡೆ ಉಚಿತ, ಡಿಸ್ಕೌಂಟ್, ಹೀಗೆ ಆಕರ್ಷಕ ಪದಗಳನ್ನು ದೊಡ್ಡದಾಗಿ ಬರೆದಿರುತ್ತಾರೆ. ಕೆಳಗಡೆ ಮೈಕ್ರೋಸ್ಕೋಪ್‌ನಲ್ಲಿ ಮಾತ್ರ ಕಾಣಿಸುವಂತೆ ಕಂಡಿಷನ್ಸ್ ಅಪ್ಲೈ ಅಂತ ಬರೆದಿರುತ್ತಾರೆ. ವಾಸ್ತವ ಏನೆಂದರೆ, ಆ ಕಂಡಿಷನ್ಸ್ ಅಪ್ಲೈ ಅನ್ನೋದೇ ಸತ್ಯ. ಮೇಲೆ ದೊಡ್ಡದಾಗಿ ಕಾಣುವ ಆಫರ್ ಸುಳ್ಳೇಸುಳ್ಳು.
ಇದನ್ನೂ ಓದಿ: ಮಾಂಸಾಹಾರ- ಸಸ್ಯಾಹಾರ-ಹಿಂಸಾಚಾರ!
ಬಯ್ ಒನ್ ಗೆಟ್ ಥ್ರೀ ಫ್ರೀ ಅಂತ ಬರೆದು ಕೆಳಗಡೆ ಷರತ್ತುಗಳು ಅನ್ವಯ ಅಂತ ಹಾಕಿರ್ತಾರೆ. ನೀವು ಬಿಲ್ ಮಾಡಿಸುವಾಗಲೇ ಗೊತ್ತಾಗೋದು, ನಾಲ್ಕು ಬಟ್ಟೆಗಾಗೋಷ್ಟು ದುಡ್ಡನ್ನು ವಸೂಲಿ ಮಾಡಿದ್ದಾರೆಂದು. ಷರ್ಟಿಗೆ 70% ಆಫ್ ಅಂತ ಹಾಕಿರ್ತಾರೆ. ಆದರೆ ನಾವು ಆಯ್ಕೆ ಮಾಡುವ ಷರ್ಟಿಗಲ್ಲ, ಅಲ್ಲಿ ಮೂಲೆಯಲ್ಲಿರುವ ಕಳೆದ ವರ್ಷದ ಖಾಲಿಯಾಗದ ಬಟನ್ ಕಿತ್ತೋಗಿರುವ ಹೊಲಿಗೆ ಬಿಟ್ಟೋಗಿರುವ, ಸರಿಹೊಂದದ ಸೈಜಿನ ಷರ್ಟಿಗೆ! ಬರ್ಗರ್ ಕೆಫೆಗೆ ಹೋಗಿ ಒಂದಕ್ಕೊಂದು ಫ್ರೀ ಇದೆಯಲ್ಲ ಅಂತ ಬರ್ಗರ್ ಆರ್ಡರ್ ಮಾಡ್ತೀರಿ. 500 ರುಪಾಯಿ ಬಿಲ್ ಬರುತ್ತದೆ. ಇದೇನಿದು ಅಂತ ಕೇಳಿದ್ರೆ, ಸಾರ್ ನೀವು ಒಂದು ಸಾವಿರ ರುಪಾಯಿ ವ್ಯಾಪಾರ ಮಾಡಿದರೆ ಮಾತ್ರ ಈ ಆಫರ್. ಅದು ಕೂಡ ಸೋಮವಾರದ ದಿನ ಮಾತ್ರ. ಇವತ್ತು ಶುಕ್ರವಾರ ಅಲ್ವೇ? ನೀವು ಬೋರ್ಡ್ ಸರಿಯಾಗಿ ಓದಿಲ್ಲ ಅನ್ಸತ್ತೆ ಅಂತಾರೆ!
ಮೊಬೈಲ್ ಕೊಳ್ಳೋಕೆ ಹೋದಾಗ್ಲೂ ಹೀಗೆಯೇ. 9999 ರುಪಾಯಿಗೆ ಸ್ಮಾರ್ಟ್ ಫೋನ್ ಅಂತ ದೊಡ್ಡದಾಗಿ ಬರೆದಿರ್ತಾರೆ. ಒಳಗೆ ಹೋದಮೇಲೆ ಗೊತ್ತಾಗೋದು. ಇದು ಎಕ್ಸ್‌ಚೇಂಜ್ ಆಫರ್ ಅಂತ. ಅದರ ಜತೆಗೆ, ನಿಮ್ಮ ಹತ್ರ ಕ್ರೆಡಿಟ್ ಕಾರ್ಡ್ ಇರ್ಬೇಕು, ಪ್ರೀಮಿಯಂ ಕಸ್ಟಮರ್ ಆಗಿರ್ಬೇಕು ಹೀಗೆ ಹತ್ತು ಹಲವು ಷರತ್ತುಗಳು ಶುರುವಾಗುತ್ತವೆ. ಒಂದೋ ನಿರಾಶೆಯಲ್ಲಿ ಹೊರಬರ್ತೀರಿ ಅಥವಾ ಒನ್ ಟು ಡಬಲ್ ಕೊಟ್ಟು ಖರೀದಿ ಮಾಡಿ ಬರ್ತೀರಿ. ಹೊಟೇಲ್‌ಗಳಲ್ಲಿ ಬಾರ್‌ಗಳಲ್ಲಂತೂ ಇನ್ನೂ ಮೋಸ. ಫುಲ್ ಮೀಲ್ಸ್ ಅಂತ ಬೋರ್ಡೇನೋ ಹಾಕ್ತಾರೆ. ಆದರೆ ಆ ಫುಲ್ ಮೀಲ್ಸಲ್ಲಿ ಅವರ ಆಯ್ಕೆಯ ಐಟಮ್ ಮಾತ್ರ ಅನ್‌ಲಿಮಿಟೆಡ್. ಬಾರ್ ಎದುರು ದೊಡ್ಡದಾಗಿ ಹಾಕಿರ್ತಾರೆ- ಅನ್ ಲಿಮಿಟೆಡ್ ಬಿಯರ್- ಕೇವಲ 1699 ರುಪಾಯಿಗೆ ಅಂತ. ಇವತ್ತು ಹಿಗ್ಗಾಮುಗ್ಗ ಕುಡಿದು ಮಜಾ ಮಾಡೋಣ ಅಂತ, ಬೋರ್ಡ್ ಸರಿಯಾಗಿ ಓದದೇ ಒಳಹೊಕ್ಕಿರಿ ಅಂದ್ರೆ ಸೇವಿಂಗ್ ಬದಲು ಶೇವಿಂಗ್ ಪಕ್ಕಾ! ಚಿಕ್ಕ ಅಕ್ಷರಗಳಲ್ಲಿ ಬರೆದಿರ್ತದೆ- ಓನ್ಲಿ ಫಾರ್ ಒನ್ ಅವರ್; ಸಿಂಗಲ್ ಪರ್ಸನ್ ಓನ್ಲಿ ಅಂತ. ಒಂದು ಗಂಟೆಯೊಳಗೆ ಎಷ್ಟು ಬಿಯರ್ ಕುಡಿಯಬಲ್ಲಿರಿ? ಒಬ್ಬರೇ ಹೋದರೆ ಇನ್ನೆಷ್ಟು ಗಿಟ್ಟಬಹುದು? So, ಕಂಡಿಷನ್ಸ್ ಅಪ್ಲೈ ಎಂಬುದೇ ಪರಮಸತ್ಯ. ಏನಂತೀರಿ?