ಕಟ್ಟೋಕೆ ನಾನಾ ದಿನ ಕೆಡವೋಕೆ ಮೂರೇ ದಿನ!
ದುಬೈಯಂಥ ದುಬೈಯೇ ಬೆಚ್ಚಿಬಿದ್ದಿದೆ. ಏಕಾಏಕಿ ಅದರ ಪ್ರವಾಸೋದ್ಯಮಕ್ಕೆ ಭರ್ಜರಿ ಏಟು ಬಿದ್ದು ತಾಣಗಳು ಬಿಕೋ ಅನ್ನಲಾರಂಭಿಸಿವೆ. ದುಬೈ ಸ್ಟಾಕ್ ಮಾರುಕಟ್ಟೆ, ರಿಯಲ್ ಎಸ್ಟೇಟ್ ಎಲ್ಲವೂ ಕುಸಿತ ಕಂಡಿವೆ. ಪೆಟ್ರೋಲ್ ಡೀಸೆಲ್ ಗ್ಯಾಸ್ ಎಲ್ಲವುಗಳ ಬೆಲೆಯೂ ಜಗತ್ತಿನೆಲ್ಲೆಡೆ ಯದ್ವಾತದ್ವಾ ಏರಿಕೆಯಾಗಿದೆ. ಇದರ ಅಡ್ಡಪರಿಣಾಮವೇನು? ಕೇವಲ ವಿದೇಶ ಪ್ರವಾಸ ಮಾತ್ರವಲ್ಲ ದೇಶೀಯ ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೂ ಇದು ಬರೆಯೇ. ಎಲ್ಲ ಟ್ರಾವೆಲ್ ಕಂಪೆನಿಗಳು ವಿದೇಶ ಪ್ರವಾಸಕ್ಕೆ ಆಕರ್ಷಕ ಆಫರ್, ಇನ್ಶೂರೆನ್ಸ್ ಪ್ಲಾನ್ ಜತೆಗೆ ನಿಮ್ಮ ಸುರಕ್ಷತೆಯ ಜವಾಬ್ದಾರಿ ನಮ್ಮದು ಎಂದು ಕೂಗಿ ಕರೆಯುತ್ತಿದ್ದರೂ ಪ್ರವಾಸಿಯು ರಿಸ್ಕ್‌ಗೆ ಸಿದ್ಧನಿಲ್ಲ.
ದುರಿತ ಕಾಲ ಅಂದರೇನು ಎಂಬುದು ಪ್ರತಿ ದಶಕಕ್ಕೊಮ್ಮೆ ಜಗತ್ತು ಅರ್ಥ ಮಾಡಿಸುತ್ತದಂತೆ. ಆ ಪ್ರಕಾರವಾಗಿ ಈ ದಶಕದ ದುರಿತ ಕಾಲವಿದು. ಇರಾನ್ ಮತ್ತು ಇಸ್ರೇಲ್ ನಡುವಣ ಕದನಕ್ಕೆ ಜಗತ್ತು ತತ್ತರಿಸುತ್ತಿದೆ. ಹಲವು ದೇಶಗಳ ಆರ್ಥಿಕತೆಯ ಬುಡ ಅಲುಗಾಡುತ್ತಿದೆ. ಆಮದು ರಫ್ತುಗಳ ಮೇಲೆ ಭೀಕರ ಪರಿಣಾಮವನ್ನು ಬೀರುತ್ತಿದೆ. ಆದರೆ ಈ ಯುದ್ಧ ಅಷ್ಟು ಸುಲಭವಾಗಿ ಮುಗಿಯುವಂತೆಯೂ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಪ್ರವಾಸೋದ್ಯಮದ ಬಗ್ಗೆ ಮಾತನಾಡುವುದು ವಿಚಿತ್ರವಾಗಿ ಕಾಣಬಹುದೇನೋ. ಆದರೆ ಜಾಗತಿಕ ಮಟ್ಟದಲ್ಲಿ ಯುದ್ಧ ಅಥವಾ ಅಶಾಂತಿ ಏರ್ಪಟ್ಟಾಗ ಮೊತ್ತಮೊದಲ ಏಟು ಬೀಳುವುದೇ ಪ್ರವಾಸೋದ್ಯಮದ ಮೇಲೆ. ಯುದ್ಧದ ಸಂದರ್ಭದಲ್ಲಿ ಎಲ್ಲದರ ಬೆಲೆ ಏರುತ್ತದೆ. ಆದರೆ ಪ್ರವಾಸೋದ್ಯಮದ ಉತ್ಪನ್ನಗಳ ಬೆಲೆ ಇಳಿಯುತ್ತದೆ. ಈ ಸಂದರ್ಭದಲ್ಲಿ ಉಚಿತವಾಗಿ ಕರೆದೊಯ್ಯುತ್ತೇವೆ ಬನ್ನಿ ಅಂದರೂ ಯಾರೂ ಇರಾನ್ ಗಾಗಲೀ, ಇಸ್ರೇಲ್ ಗಾಗಲೀ ಹೋಗುವ ಧೈರ್ಯ ತೋರುವುದಿಲ್ಲ.
ಇದನ್ನೂ ಓದಿ: ಥೈಲ್ಯಾಂಡ್ ಪ್ರವಾಸೋದ್ಯಮ ಬಿಕ್ಕಟ್ಟು
ಏರ್ ಟಿಕೆಟ್ ಗಳ ಮೇಲೆ ರಿಯಾಯಿತಿ ಘೋಷಿಸಿದರೂ ಅದು ಆಕರ್ಷಣೆ ಅನಿಸುವುದಿಲ್ಲ. ಯುದ್ಧದೇಶಗಳ ನೆರೆಯವರು ನಮ್ಮ ದೇಶ ಪ್ರವಾಸಿಗರಿಗೆ ಸುರಕ್ಷಿತವಿದೆ ಬನ್ನಿ ಎಂದರೂ ಯಾರೂ ನಂಬುವುದಿಲ್ಲ. ದುಬೈಯಂಥ ತಟಸ್ಥ ಪ್ರವಾಸಿ ತಾಣದ ಮೇಲೂ ಕ್ಷಿಪಣಿ, ಬಾಂಬುಗಳು ಬೀಳಬಹುದು ಎಂಬುದು ಈ ಬಾರಿಯ ಯುದ್ಧ ನಿರೂಪಿಸಿದೆ.

ದುಬೈಯಂಥ ದುಬೈಯೇ ಬೆಚ್ಚಿಬಿದ್ದಿದೆ. ಏಕಾಏಕಿ ಅದರ ಪ್ರವಾಸೋದ್ಯಮಕ್ಕೆ ಭರ್ಜರಿ ಏಟು ಬಿದ್ದು ತಾಣಗಳು ಬಿಕೋ ಅನ್ನಲಾರಂಭಿಸಿವೆ. ದುಬೈ ಸ್ಟಾಕ್ ಮಾರುಕಟ್ಟೆ, ರಿಯಲ್ ಎಸ್ಟೇಟ್ ಎಲ್ಲವೂ ಕುಸಿತ ಕಂಡಿವೆ. ಪೆಟ್ರೋಲ್ ಡೀಸೆಲ್ ಗ್ಯಾಸ್ ಎಲ್ಲವುಗಳ ಬೆಲೆಯೂ ಜಗತ್ತಿನೆಲ್ಲೆಡೆ ಯದ್ವಾತದ್ವಾ ಏರಿಕೆಯಾಗಿದೆ. ಇದರ ಅಡ್ಡಪರಿಣಾಮವೇನು? ಕೇವಲ ವಿದೇಶ ಪ್ರವಾಸ ಮಾತ್ರವಲ್ಲ ದೇಶೀಯ ಮತ್ತು ಸ್ಥಳೀಯ ಪ್ರವಾಸೋದ್ಯಮಕ್ಕೂ ಇದು ಬರೆಯೇ. ಎಲ್ಲ ಟ್ರಾವೆಲ್ ಕಂಪೆನಿಗಳು ವಿದೇಶ ಪ್ರವಾಸಕ್ಕೆ ಆಕರ್ಷಕ ಆಫರ್, ಇನ್ಶೂರೆನ್ಸ್ ಪ್ಲಾನ್ ಜತೆಗೆ ನಿಮ್ಮ ಸುರಕ್ಷತೆಯ ಜವಾಬ್ದಾರಿ ನಮ್ಮದು ಎಂದು ಕೂಗಿ ಕರೆಯುತ್ತಿದ್ದರೂ ಪ್ರವಾಸಿಯು ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿಲ್ಲ.
ಬೆಲೆ ಏರಿಕೆಯ ಬಿಸಿ, ಡಾಲರ್ ಮೌಲ್ಯದೆದುರು ರುಪಾಯಿಯ ಕುಸಿತ ಇವೆಲ್ಲವೂ ಮನುಷ್ಯನ ಬದುಕಿನ ಮೇಲೆ ಪರಿಣಾಮ ಬೀರುವುದರಿಂದ ಆತ ಈ ಹೊತ್ತಿನಲ್ಲಿ ಪ್ರವಾಸವನ್ನು ರಿಸ್ಕಿ ಅನ್ನುವುದರ ಜತೆಗೆ ದುಬಾರಿ ಎಂದೂ ಭಾವಿಸುತ್ತಾನೆ. ಹಮಾಸ್-ಇಸ್ರೇಲ್ ಸಂಘರ್ಷದಿಂದ ಇಸ್ರೇಲ್ ಪ್ರವಾಸೋದ್ಯಮ ಹೇಗೆ ಕುಸಿದಿತ್ತು. ಅದನ್ನು ಮತ್ತೆ ಎದ್ದೇಳಿಸಲು ಇಸ್ರೇಲ್ ಏನೆಲ್ಲ ಪ್ರಯತ್ನ ಮಾಡಿತ್ತು. ಆದರೆ ಅವೆಲ್ಲವೂ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ. ಇಸ್ರೇಲ್ ಇರಾನ್ ಯುದ್ಧದಲ್ಲಿ ನೇರ ಪಾಲ್ಗೊಂಡಿರವವರು, ಅವರಿಗೆ ಇದು ಆಗಬೇಕಾದ್ದೇ. ಆದರೆ ಜಗತ್ತಿನ ಇತರ ದೇಶಗಳು ಮಾಡಿರುವ ತಪ್ಪಾದರೂ ಏನು? ವ್ಯಾಪಾರ ಮತ್ತಿತರ ರಾಜತಾಂತ್ರಿಕ ಸಂಬಂಧ ಹೊಂದುವುದೇ ತಪ್ಪಾ? ದೇಶ ದೇಶಗಳು ಪರಸ್ಪರ ಅವಲಂಬಿತವಿದ್ದಾಗ ಯುದ್ಧಗಳು ಮಾಡುವ ಹಾನಿ ಸಣ್ಣಪ್ರಮಾಣದ್ದಲ್ಲ. ಈ ಸಮಯದಲ್ಲಿ ಪ್ರವಾಸೋದ್ಯಮ ನಲುಗಿದರೂ ಅದನ್ನು ತಾತ್ಕಾಲಿಕ ಹಿನ್ನಡೆಯೆಂದು ತಿಳಿದು, ಶಾಂತಿಗಾಗಿ ಪ್ರಾರ್ಥಿಸುವುದೊಂದೇ ದಾರಿ.