ಏರ್ ಪೋರ್ಟ್ ಲೌಂಜ್ನಲ್ಲಿ ಉಚಿತ ಊಟ! ಇಲ್ಲಿದೆ ಸುಲಭೋಪಾಯ
ವಿಮಾನದಲ್ಲಿ ನಿಮಗೆ ಕಿಟಕಿ ಬಳಿ ಸೀಟ್ ಬೇಕಿದ್ದರೆ ಅದಕ್ಕಾಗಿ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಇದನ್ನೂ ಉಳಿತಾಯ ಮಾಡಬಹುದು. ಚೆಕ್ ಇನ್ ಮಾಡುವಾಗ ಅಲ್ಲಿನ ಸಿಬ್ಬಂದಿಯವರೊಡನೆ ಸೌಜನ್ಯದಿಂದ ಮಾತನಾಡಿ ವಿಂಡೋ ಸೀಟ್ ಪ್ಲೀಸ್ ಎಂದು ಕೇಳಿ. ಖಾಲಿ ವಿಂಡೋ ಸೀಟ್ ಇದ್ದರೆ ಕೊಡುತ್ತಾರೆ.
- ಲಕ್ಷ್ಮಣ್ ಗೊರ್ಲಕಟ್ಟೆ
ನೀವು ಪ್ರಯಾಣ ಮಾಡುವ ಊರಿಗೆ ವಿಮಾನ ವೇಳಾಪಟ್ಟಿ ಟಿಕೆಟ್ ದರ, ತಂಗಲು ಹೊಟೇಲ್, ಇತ್ಯಾದಿ ವಿವರಗಳನ್ನು ತಿಳಿಯಲು ಜಾಲತಾಣದಲ್ಲಿ ಹುಡುಕುವಾಗ ಆ ಮಾಹಿತಿ ಸಂಬಂಧಪಟ್ಟ ಕಂಪನಿಯವರಿಗೆ ನೀವು ಹುಡುಕುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ನಿಮ್ಮ ರೀತಿ ಇನ್ನೂ ಬೇರೆಯವರೂ ಅದೇ ಮಾಹಿತಿಯನ್ನು ಹುಡುಕುತ್ತಿದ್ದರೆ ಒಟ್ಟು ಎಷ್ಟು ಜನರು ಬುಕ್ ಮಾಡಲು ಬಯಸುತ್ತಿದ್ದಾರೆ ಎಂದೂ ತಿಳಿಯುತ್ತದೆ. ಹೆಚ್ಚು ಜನ ಹುಡುಕಾಟ ಮಾಡುತ್ತಿದ್ದರೆ ಡಿಮ್ಯಾಂಡ್ ಗೆ ಅನುಸಾರ ದರವನ್ನು ಹೆಚ್ಚು ಮಾಡಿ ಹೆಚ್ಚುವರಿ ಲಾಭ ಮಾಡುವ ಸಾಧ್ಯತೆ ಇರುತ್ತದೆ.
ಮಾಹಿತಿಯನ್ನು ಕ್ರೋಮ್ ನಲ್ಲಿ Incognito tab ( ಗೌಪ್ಯವಾಗಿ ಜಾಲತಾಣದಲ್ಲಿ ಹುಡುಕುವಿಕೆ) ಬಳಸಿ ಮಾಹಿತಿ ಪಡೆಯಿರಿ. ಇದರಿಂದ ಕಂಪನಿಗಳಿಗೆ ಡಿಮ್ಯಾಂಡ್ ವಿವರ ತಿಳಿಯುವುದಿಲ್ಲ. ಹಾಗಾಗಿ ಡಿಮ್ಯಾಂಡ್ ಅನುಸಾರ ದರಗಳನ್ನು ಹೆಚ್ಚು ಮಾಡಲು ಸಾಧ್ಯವಾಗದು.

ವಿಮಾನ ಪ್ರಯಾಣದ ಟಿಕೆಟ್ ಅನ್ನು ವಿಮಾನ ನಿಲ್ದಾಣದಲ್ಲಿ (ಪ್ರವೇಶ ದ್ವಾರದ ಬಳಿ) ಟಿಕೆಟ್ ಕೌಂಟರ್ ನಲ್ಲಿಯೂ ಪಡೆಯಬಹುದು. ಆದರೆ ಆನ್ ಲೈನ್ ದರಕ್ಕಿಂತ ಹೆಚ್ಚುವರಿ ಟ್ಯಾಕ್ಸ್ ತಗಲುತ್ತದೆ. ವಿಮಾನ ಕಂಪನಿಗಳು ವಿಮಾನ ನಿಲ್ದಾಣದ ಸೌಲಭ್ಯ ಬಳಸಲು ತೆರಬೇಕಾದ ತೆರಿಗೆ ಅಥವಾ ಲೆವಿ ಸೇರಿಸುತ್ತದಾದ್ದರಿಂದ ಇದು ಹೆಚ್ಚಾಗುತ್ತದೆ.. ಆದ್ದರಿಂದ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿ ಮಾಡಿ ಹಣ ಉಳಿಸಬಹುದು.
ಸೆಕ್ಯೂರಿಟಿ ಚೆಕ್ ಆದ ಮೇಲೆ ಲೌಂಜ್ ನಲ್ಲಿ ಹೊಟ್ಟೆ ತುಂಬ ತಿನ್ನಬಹುದು. ಲೌಂಜ್ ಪ್ರವೇಶ ಮಾಡಲು ನಿಮ್ಮ ಬಳಿ ಪ್ಲಾಟಿನಂ ದರ್ಜೆಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇರಬೇಕು. ಕೇವಲ ಒಂದು ಅಥವಾ ಎರಡು ರೂಪಾಯಿ ಕಾರ್ಡ್ ಮೂಲಕ ಪಾವತಿಸಿ ಮತ್ತು ವಿಮಾನ ಯಾನದ ಬೋರ್ಡಿಂಗ್ ಪಾಸ್ ತೋರಿಸಿ ಒಳ ಹೋಗಿ ಬೇಕಾದ ತಿಂಡಿ ತಿನ್ನಿ ರಿಲ್ಯಾಕ್ಸ್ ಆಗಿ. ಒಮ್ಮೆ ಬಳಸಿದ ಕಾರ್ಡ್ ಅನ್ನು ಇನ್ನೊಂದು ಸಲ ಲೌಂಜ್ ಪ್ರವೇಶ ಮಾಡಲು ಮೂರು ಅಥವಾ ಆರು ತಿಂಗಳ ಅಂತರ ಇರುತ್ತದೆ. ಒಂದಕ್ಕಿಂತ ಹೆಚ್ಚು ಕಾರ್ಡ್ ಇದ್ದರೆ ಉತ್ತಮ.
ವಿಮಾನದಲ್ಲಿ ನಿಮಗೆ ಕಿಟಕಿ ಬಳಿ ಸೀಟ್ ಬೇಕಿದ್ದರೆ ಅದಕ್ಕಾಗಿ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಇದನ್ನೂ ಉಳಿತಾಯ ಮಾಡಬಹುದು. ಚೆಕ್ ಇನ್ ಮಾಡುವಾಗ ಅಲ್ಲಿನ ಸಿಬ್ಬಂದಿಯವರೊಡನೆ ಸೌಜನ್ಯದಿಂದ ಮಾತನಾಡಿ ವಿಂಡೋ ಸೀಟ್ ಪ್ಲೀಸ್ ಎಂದು ಕೇಳಿ. ಖಾಲಿ ವಿಂಡೋ ಸೀಟ್ ಇದ್ದರೆ ಕೊಡುತ್ತಾರೆ.