ವಿಮಾನ ನಿಲ್ದಾಣ ಕೋಡ್
ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಮತ್ತು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ (ICAO). ಈ ಕೋಡ್‌ಗಳು ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಸುಲಭ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ. ಇಂಟರ್ ನ್ಯಾಷನಲ್ IATA ಸಂಸ್ಥೆಯು ಏರ್‌ಲೈನ್‌ಗಳು, ಪ್ರಯಾಣ ಏಜೆಂಟರು ಮತ್ತು ಇತರ ಸಂಬಂಧಿತ ವ್ಯಾಪಾರಗಳಿಗೆ ಜಾಗತಿಕ ಗುಣಮಟ್ಟಗಳನ್ನು ರೂಪಿಸುವ ಖಾಸಗಿ ಸಂಸ್ಥೆಯಾಗಿದೆ.
ಪ್ರತಿ ವಿಮಾನ ನಿಲ್ದಾಣಕ್ಕೂ ಅದರದ್ದೇ ಆದ ಒಂದು ಕೋಡ್ ಇರುವುದು ಗೊತ್ತಿರಲಿಕ್ಕೆ ಸಾಕು. ಹಾಗಾದರೆ ಯಾರು ಈ ಕೋಡ್ ಗಳನ್ನು ನೀಡುತ್ತಾರೆ? ಈ ಕೋಡ್‌ಗಳನ್ನು 2 ಪ್ರಮುಖ ಸಂಸ್ಥೆಗಳು ನಿರ್ಧರಿಸುತ್ತವೆ- ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ( IATA ) ಮತ್ತು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ ( ICAO). ಈ ಕೋಡ್‌ಗಳು ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಸುಲಭ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ. ಇಂಟರ್ ನ್ಯಾಷನಲ್ IATA ಸಂಸ್ಥೆಯು ಏರ್‌ಲೈನ್‌ಗಳು, ಪ್ರಯಾಣ ಏಜೆಂಟರು ಮತ್ತು ಇತರ ಸಂಬಂಧಿತ ವ್ಯಾಪಾರಗಳಿಗೆ ಜಾಗತಿಕ ಗುಣಮಟ್ಟಗಳನ್ನು ರೂಪಿಸುವ ಖಾಸಗಿ ಸಂಸ್ಥೆಯಾಗಿದೆ. ಸಾಮಾನ್ಯವಾಗಿ, ವಿಮಾನ ನಿಲ್ದಾಣದ ಹೆಸರು ಅಥವಾ ಅದು ಇರುವ ನಗರದ ಹೆಸರಿನ ಮೊದಲ 3 ಅಕ್ಷರಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಬೆಂಗಳೂರಿನ ವಿಮಾನ ನಿಲ್ದಾಣದ ಕೋಡ್ BLR (Bengaluru), ಮುಂಬೈನದ್ದು BOM (Bombay - ಹಳೆಯ ಹೆಸರು), ದಿಲ್ಲಿಯದ್ದು DEL (Delhi ).
ಕೆಲವು ಕೋಡ್‌ಗಳು ನಿಲ್ದಾಣದ ಹಿಂದಿನ ಹೆಸರನ್ನು ಆಧರಿಸಿರಬಹುದು ಅಥವಾ ವಿಶಿಷ್ಟ ಕಾರಣಗಳಿಗಾಗಿ ಬೇರೆ ಅಕ್ಷರಗಳನ್ನು ಬಳಸಬಹುದು. ಸಾಮಾನ್ಯವಾಗಿ, ನಗರದ ಹೆಸರಿನ ಮೊದಲ 3 ಅಕ್ಷರಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, BOM (Bombay), DEL (Delhi ). ಒಂದೇ ನಗರ ದಲ್ಲಿ ೨ ಅಥವಾ ಹೆಚ್ಚು ನಿಲ್ದಾಣಗಳಿದ್ದರೆ, ಕೋಡ್‌ಗಳು ಅವುಗಳ ಹೆಸರುಗಳನ್ನು ಆಧರಿಸಿರುತ್ತವೆ.
ಇದನ್ನೂ ಓದಿ: ಎಡದಿಂದ ಏರಿಳಿಯುತ್ತಾರೆ ಏಕೆ?
ಉದಾಹರಣೆಗೆ, ಲಂಡನ್‌ನಲ್ಲಿ LHR - ಲಂಡನ್ ಹೀಥ್ರೂ (London Heathrow), LGW - ಲಂಡನ್ ಗ್ಯಾಟ್ವಿಕ್ (London Gatwick) ಮತ್ತು LCY - ಲಂಡನ್ ಸಿಟಿ ಏರ್ ಪೋರ್ಟ್ (London City Airport). ಕೆಲವೊಮ್ಮೆ, ಕೋಡ್‌ಗಳು ನಿಲ್ದಾಣದ ಹಳೆಯ ಅಥವಾ ಐತಿಹಾಸಿಕ ಹೆಸರನ್ನು ಆಧರಿಸಿರಬಹುದು.
ಉದಾಹರಣೆಗೆ, ಕೋಲ್ಕತ್ತಾ (ಕಲ್ಕತ್ತಾ) ನಿಲ್ದಾಣದ ಕೋಡ್ CCU (Calcutta ). ಈ ಕೋಡ್‌ಗಳ ಮಹತ್ವವೇನು? ಇವು ಪ್ರಯಾಣಿಕರಿಗೆ, ಏರ್‌ಲೈನ್‌ಗಳಿಗೆ ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ಬಹಳ ಮುಖ್ಯ. ಇವನ್ನು ವಿಮಾನದ ಟಿಕೆಟ್‌ಗಳಲ್ಲಿ, ಬ್ಯಾಗೇಜ್ ಟ್ಯಾಗ್‌ಗಳಲ್ಲಿ, ಬೋರ್ಡಿಂಗ್ ಪಾಸ್ ಗಳಲ್ಲಿ ಮತ್ತು ಪ್ರಯಾಣಿಕರ ಮಾಹಿತಿ ಫಲಕಗಳಲ್ಲಿ ಬಳಸಲಾಗುತ್ತದೆ.
ಇದರಿಂದ, ವಿಮಾನ ಪ್ರಯಾಣದ ಪ್ರಕ್ರಿಯೆ ಸರಳ ಮತ್ತು ಗೊಂದಲ ರಹಿತವಾಗಿರುತ್ತದೆ. ಇಂಟರ್ ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ ( ICAO) ಸಂಸ್ಥೆ ವಿಶ್ವಸಂಸ್ಥೆಯ ಒಂದು ವಿಭಾಗವಾಗಿದ್ದು, ಅದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ನಿಯಮಗಳು ಮತ್ತು ಗುಣಮಟ್ಟಗಳನ್ನು ನಿರ್ಧರಿಸುತ್ತದೆ. ಇದು ನೀಡುವ ಕೋಡ್ 4 ಅಕ್ಷರಗಳನ್ನು ಹೊಂದಿರುತ್ತವೆ.

ಅದು ಹೇಗೆ ಕೋಡ್‌ಗಳನ್ನು ನಿರ್ಧರಿಸುತ್ತದೆ? ಈ ಕೋಡ್‌ಗಳನ್ನು ಹೆಚ್ಚು ತಾಂತ್ರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಮೊದಲ 2 ಅಕ್ಷರಗಳು ವಿಮಾನ ನಿಲ್ದಾಣವಿರುವ ದೇಶದ ಹೆಸರನ್ನು ಸೂಚಿಸಿದರೆ, ನಂತರದ 2 ಅಕ್ಷರಗಳು ಆ ನಿರ್ದಿಷ್ಟ ವಿಮಾನ ನಿಲ್ದಾಣವನ್ನು ಸೂಚಿಸುತ್ತವೆ.
ಉದಾಹರಣೆಗೆ, ಬೆಂಗಳೂರು ವಿಮಾನ ನಿಲ್ದಾಣದ ಕೋಡ್ VOBL. ಇಲ್ಲಿ VOBL (ಬೆಂಗಳೂರು) - V (ದಕ್ಷಿಣ ಏಷ್ಯಾ), O (ಭಾರತ- ದಕ್ಷಿಣ ಭಾಗ), BL (ಬೆಂಗಳೂರು) ಬೆಂಗಳೂರು ವಿಮಾನ ನಿಲ್ದಾಣ ವನ್ನು ಸೂಚಿಸುತ್ತದೆ. ICAO ಕೋಡ್‌ಗಳನ್ನು ಪ್ರಮುಖವಾಗಿ ವಿಮಾನಗಳ ಸಂಚಾರ ನಿಯಂತ್ರಣ (Air Traffic Control ), ವಿಮಾನದ ಹಾರಾಟ ಯೋಜನೆ (Flight Planning) ಮತ್ತು ಹವಾಮಾನ ವರದಿಗಳಂಥ ತಾಂತ್ರಿಕ ಕಾರ್ಯಗಳಿಗೆ ಬಳಸಲಾಗುತ್ತದೆ.
ಈ ಕೋಡ್‌ಗಳು ಪ್ರಪಂಚದಾದ್ಯಂತ ಏಕರೂಪವಾಗಿರುವುದರಿಂದ, ಪೈಲಟ್ ಗಳು ಮತ್ತು ವಾಯು ಸಂಚಾರ ನಿಯಂತ್ರಕರಿಗೆ ಸಂವಹನ ಸುಲಭವಾಗುತ್ತದೆ. IATA ಕೋಡ್‌ಗಳು ಪ್ರಮುಖವಾಗಿ ವಾಣಿಜ್ಯ ಮತ್ತು ಪ್ರಯಾಣಿಕರ ಬಳಕೆಗೆ ಇದ್ದರೆ, ICAO ಕೋಡ್‌ಗಳು ಪ್ರಮುಖವಾಗಿ ತಾಂತ್ರಿಕ ಮತ್ತು ವೈಮಾನಿಕ ಕಾರ್ಯಾಚರಣೆಗಳಿಗೆ ಬಳಕೆಯಾಗುತ್ತವೆ.
ಎರಡೂ ಕೋಡ್‌ಗಳು ವಿಮಾನದಲ್ಲಿನ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅತ್ಯಗತ್ಯವಾಗಿವೆ. ಎರಡೂ ಕೋಡ್‌ಗಳ ನಡುವಿನ ವ್ಯತ್ಯಾಸವೇನು? IATA ಕೋಡ್ ಮುಖ್ಯವಾಗಿ ವಾಣಿಜ್ಯ ಮತ್ತು ಪ್ರಯಾಣಿಕರ ಬಳಕೆಗೆ ಸೀಮಿತವಾಗಿದ್ದು, ಅದು 3 ಅಕ್ಷರಗಳನ್ನು ಹೊಂದಿದೆ. ICAO ಕೋಡ್ ಮುಖ್ಯವಾಗಿ ತಾಂತ್ರಿಕ ಮತ್ತು ಕಾರ್ಯಾಚರಣೆಯ ಬಳಕೆಗೆ ಸೀಮಿತವಾಗಿದ್ದು 4 ಅಕ್ಷರಗಳನ್ನು ಹೊಂದಿದೆ. ಈ ಕೋಡ್‌ಗಳು ಇಲ್ಲದೇ, ಆಧುನಿಕ ವಿಮಾನಯಾನ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ.
ಇವು ಜಾಗತಿಕವಾಗಿ ಪ್ರತಿದಿನ ಲಕ್ಷಾಂತರ ವಿಮಾನಗಳು ಮತ್ತು ಪ್ರಯಾಣಿಕರ ಸಂಚಾರವನ್ನು ಸುಗಮ ಮತ್ತು ಸುರಕ್ಷಿತವಾಗಿ ನಿರ್ವಹಿಸಲು ಸಹಾಯಕ.