ಬಾಲಿ ಬಾಲಿ... ಎಲ್ಲ ಜಾಲಿ ಜಾಲಿ...!
ಜೀವನದಲ್ಲಿ ಒಮ್ಮೆಯಾದರೂ ಬಾಲಿಗೆ ಹೋಗಬೇಕೆಂಬುದು ಎಷ್ಟೋ ಮಂದಿಯ ಕನಸು. ಬಾಲಿಗೆ ಹೋದರಷ್ಟೇ ಸಾಲದು, ಅಲ್ಲಿನ ಫುಡ್ ಟೇಸ್ಟ್ ಮಾಡದಿದ್ದರೆ ಪ್ರವಾಸ ಪೂರ್ಣವಾಗುವುದೂ ಇಲ್ಲ. ಆದರೆ ಅದಕ್ಕೆ ಬೇಕಾದಷ್ಟು ದುಡ್ಡು ಹೊಂದಿಸುವುದು ಹೇಗೆ? ಇದು ಅನೇಕರಿಗಿರುವ ಸವಾಲು. ಬಾಲಿಗೆ ಹೋಗಿಲ್ಲವಾದರೂ ಬಾಲಿಯ ವಾತಾವರಣದಲ್ಲಿಯೇ ಅಲ್ಲಿನ ಆಹಾರವನ್ನು ಸವಿಯಬೇಕೆಂದುಕೊಳ್ಳುವವರಿಗಾಗಿ ಸಿಲಿಕಾನ್ ಸಿಟಿಯಲ್ಲೇ ಬಾಲಿ ಬೆಲ್ಸ್ ಎನ್ನುವ ಹೊಸ ರೆಸ್ಟೋರೆಂಟ್ ಇತ್ತೀಚೆಗಷ್ಟೇ ಶುಭಾರಂಭಗೊಂಡಿದೆ.
ಈಗಂತೂ ಎಲ್ಲರ ಬಾಯಲ್ಲೂ ಬಾಲಿಯದ್ದೇ ಮಾತು. ಬಾಲಿಯ ಅದ್ಭುತ ನೋಟವನ್ನು ಕಣ್ತುಂಬಿಕೊಂಡು, ಅಲ್ಲಿನ ಸಂಸ್ಕೃತಿಯನ್ನು ತಿಳಿಯುವ ಜತೆಗೆ ರುಚಿಕರವಾದ ಆಹಾರವನ್ನು ಸವಿಯಬೇಕೆಂಬುದು ಅನೇಕರ ಆಸೆ. ಆದರೆ ಆಸೆಪಟ್ಟರೆ ಸಾಲದು, ಕೈಯಲ್ಲಿ ದುಡ್ಡಿರಬೇಕಲ್ಲ. ಹೀಗೆ ಚಿಂತಿಸುವವರಿಗಾಗಿಯೇ ನಗರದ ಬೆಂಗಳೂರು ಉತ್ತರ ಭಾಗದ ಹೆಸರುಘಟ್ಟ ಮುಖ್ಯರಸ್ತೆಯ ಚಿಕ್ಕಬೈಲಕೆರೆಯಲ್ಲಿ ವಿಶೇಷವಾದ ಬಾಲಿ ಥೀಮ್ ರೆಸ್ಟೋರೆಂಟ್ ಸಿದ್ಧವಾಗಿದೆ.
ಬೆಂಗಳೂರ ಬಾಲಿ !
ಬಿಬಿ ಗ್ರೂಪ್ಸ್‌ನವರು ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯಲ್ಲಿ ನಿರ್ಮಿಸಿರುವ ಈ ರೆಸ್ಟೋರೆಂಟನ್ನು ಸಂಪೂರ್ಣವಾಗಿ ಬಾಲಿ ವಾತಾವರಣದಂತೆಯೇ ನಿರ್ಮಾಣ ಮಾಡಲಾಗಿದ್ದು, ಶುಚಿ ಹಾಗೂ ರುಚಿಯಲ್ಲೂ ಸೈ ಎನಿಸಿಕೊಂಡಿದೆ. ಬಾಲಿಯ ಚಿತ್ರಣವನ್ನು ಕಟ್ಟಿಕೊಡುವ ಪುಟ್ಟ ಪುಟ್ಟ ಕುಟೀರಗಳಂತೂ ಸಂಜೆಯ ವೇಳೆಗೆ ಇನ್ನಷ್ಟು ಕಲರ್ ಫುಲ್ ಎನಿಸಿಬಿಡುತ್ತದೆ. ರೆಸ್ಟೋರೆಂಟ್ ಪ್ರವೇಶಿಸುತ್ತಲೇ ಕಾಣಸಿಗುವ ಆಂಬಿಯೆನ್ಸ್ ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡುತ್ತಿರಬೇಕೆನಿಸುವಂತೆ ಮಾಡುತ್ತದೆ. ಚಿಕ್ಕದಾದರೂ ಇಲ್ಲಿರುವ ನೀರಿನ ಕೊಳಗಳು, ಫೌಂಟೇನ್ ಹಾಗೂ ಬ್ಯಾಂಬೂ ಹಟ್ಸ್ ಸೇರಿದಂತೆ ಇಲ್ಲಿನ ಕೋಜಿ ಆಂಬಿಯನ್ಸ್ ಕಿಕ್ ಕೊಡದೇ ಇರಲಾರದು.

ಫುಡ್ ಟೇಸ್ಟ್ ಮಾಡಿದರೆ ಫಿದಾ!
ಆಂಬಿಯನ್ಸ್ ಮಸ್ತ್ ಆಗಿದ್ದರೆ ಸಾಲದು, ಫುಡ್ ಬಗ್ಗೆ ಹೇಳಿ ಅಂತೀರಾ? ಇಲ್ಲಿ ಸಿಗುವ ಫುಡ್ ನೆಕ್ಸ್ಟ್ ಲೆವೆಲ್ ಅನುಭವವನ್ನು ನೀಡುತ್ತದೆ. ಪ್ಯೂರ್ ನಾಟಿ ಸ್ಟೈಲ್ ನಲ್ಲಿ ಸಿಗುವ ಬಂಡಿ ಬಿರಿಯಾನಿ, ಟಾಕೋಸ್, ಬಟರ್ ಗಾರ್ಲಿಕ್ ನಾನ್ ಗೆ ಬಾಲಿ ಬೆಲ್ಸ್ ಸ್ಪೆಷಲ್ ಕರಿ ಹೀಗೆ ಹೇಳುತ್ತಾ ಹೋದರೆ ಇಲ್ಲಿ ಸಿಗುವ ಆಹಾರವಂತೂ ದಿ ಬೆಸ್ಟ್ ಎನಿಸಿಕೊಂಡಿದೆ. ಫುಡ್ ಪ್ರಸೆಂಟೇಷನ್ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ವಿಶೇಷವೆಂದರೆ ಇಲ್ಲಿ ಏಕಕಾಲಕ್ಕೆ 400ಕ್ಕೂ ಹೆಚ್ಚು ಮಂದಿ ಕುಳಿತು ಆಹಾರ ಸವಿಯಲು ಅವಕಾಶವಿದ್ದು, ಆರ್ಟಿಫಿಶಿಯಲ್ ಕಲರ್ ಹಾಗೂ ಟೇಸ್ಟಿಂಗ್ ಪೌಡರ್ ಬಳಕೆ ಮಾಡದೇ ತಾಜಾ ಆಹಾರವನ್ನು ತಯಾರಿಸಿ, ಉಣಬಡಿಸಲಾಗುತ್ತದೆ. ವೆಜ್ ಹಾಗೂ ನಾನ್ ವೆಜ್ ಪ್ರಿಯರಿಗೂ ಇಲ್ಲಿ ಆಯ್ಕೆಗಳು ಹಲವಿದ್ದು, ಕಾಕ್‌ಟೇಲ್ಸ್ ಆಂಡ್ ಮಾಕ್‌ಟೇಲ್ಸ್ ಕೂಡಾ ಲಭ್ಯವಿದೆ.
ಇಲ್ಲಿ ಸ್ನೇಹಿತರು, ಕುಟುಂಬದವರೊಂದಿಗೆ ಬಂದು ಆಹಾರವನ್ನು ಟೇಸ್ಟ್ ಮಾಡುವುದಕ್ಕಷ್ಟೇ ಅವಕಾಶವಿರುವುದು ಎಂದುಕೊಳ್ಳಬೇಡಿ. ಫ್ಯಾಮಿಲಿ ಆಂಡ್ ಫ್ರೆಂಡ್ಸ್ ಗೆಟ್ ಟುಗೆದರ್, ಕಿಟಿ ಪಾರ್ಟಿ, ಬರ್ತ್ ಡೇ ಸೆಲೆಬ್ರೇಷನ್ ಹೀಗೆ ಯಾವುದೇ ಸಂಭ್ರಮದ ಕ್ಷಣಗಳನ್ನೂ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳುವ ಮೂಲಕ ಅತ್ಯದ್ಭುತವಾಗಿ ಆಚರಿಸಿಕೊಳ್ಳಬಹುದು.

ಮೊದಲ ಬಾರಿಗೆ ಭೇಟಿ ನೀಡುವವರು ನೀವಾದರೆ ಇಲ್ಲಿ 10% ರಿಯಾಯಿತಿ ಲಭ್ಯವಿದೆ. ವಿದ್ಯಾರ್ಥಿಗಳಿಗೂ ಈ ಆಫರ್ ಅನ್ವಯಿಸುತ್ತದೆ.
ನಾನು ಇಳಕಲ್‌ನವನು. ಅಲ್ಲಿದ್ದಾಗಲೆಲ್ಲಾ ಢಾಬಾಗಳಿಗೆ ಹೋಗಿ ಊಟ ಮಾಡಿ ಅಭ್ಯಾಸ ನನಗೆ. ಅದನ್ನು ಇತ್ತೀಚಿನ ದಿನಗಳಲ್ಲಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ. ಮೊದ ಮೊದಲು ಬೆಂಗಳೂರಿಗೆ ಬಂದಾಗಲೆಲ್ಲ ಇಲ್ಲಿ ಢಾಬಾ ಇಲ್ಲವಲ್ಲಾ ಅಂದುಕೊಳ್ಳುತ್ತಿದ್ದೆ. ಆದರೆ ಈ ರೆಸ್ಟೋರೆಂಟ್ ಹಳ್ಳಿ ಗ್ರಾಮೀಣ ಭಾಗದಿಂದ ಬಂದು ಬದುಕು ಕಟ್ಟಿಕೊಂಡವರನ್ನಷ್ಟೇ ಅಲ್ಲದೆ ಸಿಟಿ ಮಂದಿಯನ್ನೂ ಮೆಚ್ಚಿಸುವಂತಿದೆ.
-ನವೀನ್ ಶಂಕರ್, ನಟ

ಎಲ್ಲರಿಗೂ ಬಾಲಿಗೆ ಹೋಗಲಾಗುವುದಿಲ್ಲ. ಅದಕ್ಕಾಗಿ ಲೋಕಲ್ ನಲ್ಲೇ ಬಾಲಿ ಥೀಮ್‌ನೊಂದಿಗೆ ಆಹಾರ ಸವಿಯುವ ಅವಕಾಶ ಗ್ರಾಹಕರಿಗೆ ಸಿಗುವಂತಾಗಲಿ ಎಂದು ಇಂಥ ವಿಭಿನ್ನ ಥೀಮ್ ರೆಸ್ಟೋರೆಂಟ್ ಮಾಡಿದ್ದೇವೆ.
-ಭರತ್, ಮಾಲೀಕರು
ಫಿಲ್ಮ್ ನೋಡುವ ಮುನ್ನ ಟ್ರೇಲರ್ ನೋಡುವಂತೆ ಬಾಲಿಗೆ ಹೋಗುವ ಮುನ್ನ ಅಲ್ಲಿನ ಅನುಭವ ಹೇಗಿರುತ್ತೆ, ಆಹಾರ ಹೇಗಿರಲಿದೆ ಎಂಬುದನ್ನು ತಿಳಿಯಬೇಕು. ಅದಕ್ಕಾಗಿಯೇ ನಾವು ಪ್ರಯತ್ನ ಪಟ್ಟಿದ್ದೇವೆ. ಶುಚಿ ಹಾಗೂ ರುಚಿಗೆ ನಮ್ಮಲ್ಲಿ ಮೊದಲ ಆದ್ಯತೆಯನ್ನು ಕೊಟ್ಟಿದ್ದೇವೆ.
-ಮದನ್, ಮಾಲೀಕರು
ಇಲ್ಲಿದೆ ವಿಳಾಸ:
ನಂ.102, ಬೈಲಕೆರೆ, ಯಲಹಂಕ, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು, ಕರ್ನಾಟಕ – 560089
ಮೊ: 9036354006, 9036354008