ಮಳೆಯ ದಿನಗಳಲ್ಲಿ ಬೆಂಗಳೂರಿನಿಂದ ಸ್ವಲ್ಪವೇ ದೂರದಲ್ಲಿರುವ ಯಾವುದಾದರೊಂದು ರೆಸಾರ್ಟ್‌ಗೆ ಹೋಗಬೇಕು. ಅಂತ ಅಥವಾ ರಾಜ್ಯದ ಯಾವುದೇ ಸ್ಥಳದಿಂದವಾದರೂ ಇರಲಿ ಕಾಡಿನ ಮಧ್ಯೆ, ಕಾಡಿನಲ್ಲಿ ವಿಸ್ಮಯದ ಕ್ಷಣಗಳನ್ನು ಕಳೆಯಬೇಕು. ಜೀವನ ತುಂಬ ಏಕತಾನತೆಯೆಡೆಗೆ ಹೊರಟಿದೆ ಅಂತಲೋ ಅಥವಾ ಕೆಲ ಸಮಯ ಬೆಂಗಳೂರಿನ ಸುತ್ತಮುತ್ತ, ಅದರ ವಾತಾವರಣವನ್ನು ಸವಿಯುತ್ತ ಕಾಲ ಕಳೆಯೋಣ ಅಂತೇನಾದರೂ ಇದ್ದರೆ, ಅದಕ್ಕೆ ನಮ್ಮ ಬಳಿ ಒಂದು ಉಪಾಯ ಇದೆ.

ಅದೇ ಜೆಎಲ್‌ಆರ್‌ ರವರ ಬನ್ನೇರುಘಟ್ಟ ನೇಚರ್ ಕ್ಯಾಂಪ್!

ಬೆಂಗಳೂರು ಮೈಸೂರು ಹೈವೇ ನಡುವೆ, ಬೆಂಗಳೂರಿನಿಂದ ಬರೀ 22 ಕಿಮೀ ದೂರದ ಬನ್ನೇರುಘಟ್ಟದಲ್ಲಿರುವ ಈ ರೆಸಾರ್ಟ್ ಹಲವಾರು ವರ್ಷಗಳಿಂದ ತನ್ನ ಆತಿಥ್ಯದಿಂದ ಜನರ ಪ್ರೀತಿಗೆ ಹತ್ತಿರವಾಗಿದೆ. ಮನೆಯವರ ರೀತಿಯಲ್ಲೇ ಆತಿಥ್ಯ ನೀಡುವ ಸಿಬ್ಬಂದಿ ವರ್ಗ, ಶುಚಿ ರುಚಿಯಾದ ಊಟ ಇನ್ನಿತರ ಸೇವೆಗಳು, ಆರಾಮದಾಯಕ ರೂಮುಗಳು, ಆಹ್ಲಾದಕರ ವಾತಾವರಣ, ಪ್ರವಾಸಸುಖಕ್ಕೆ ಬೇಕಾಗಿರುವ ಎಲ್ಲ ರೀತಿಯ ಸೌಲಭ್ಯಗಳು... ಒಂದು ರೆಸಾರ್ಟ್ನಲ್ಲಿ ಮತ್ತಿನ್ನೇನು ಬೇಕು ಹೇಳಿ?

ಬನ್ನೇರುಘಟ್ಟ ಅಂದ್ರೆ ಅದು ಕೆಲವು ಚದರ ಅಡಿ ಉದ್ದಗಲದ ಉದ್ಯಾನವನವಲ್ಲ, ಬರೋಬ್ಬರಿ 25 ಸಾವಿರ ಎಕರೆಗಳಲ್ಲಿ ಹರಡಿರುವ ದಟ್ಟ ಕಾಡು. ಜೀವವೈವಿಧ್ಯದಿಂದ ತುಂಬಿದ ಗೊಂಡಾರಣ್ಯ, ನಾವ್ಯಾರೂ ಊಹಿಸದ ಮರ, ಸಸ್ಯರಾಶಿ, ಎಂದೂ ಕಂಡಿರದ ಕೇಳಿರದ ಪ್ರಾಣಿ ಪಕ್ಷಿಗಳ ಗುಂಪು ಜೊತೆಗೆ ನೆಮ್ಮದಿಯ ವಾತಾವರಣ ಇಲ್ಲಿ ಸಿಗುತ್ತದೆ.

ಪ್ರಕೃತಿಯ ಮಡಿಲಲ್ಲಿ ಶಾಂತಿ ಮತ್ತು ಸಾಹಸದ ಅನ್ವೇಷಣೆಗೆ ಬನ್ನೇರುಘಟ್ಟ ನೇಚರ್ ಕ್ಯಾಂಪ್ ಒಂದು ಒಳ್ಳೆಯ ಆಯ್ಕೆ. ಬೆಂಗಳೂರಿನಿಂದ ಕೇವಲ 22 ಕಿಲೋಮೀಟರ್ ದೂರದಲ್ಲಿರುವ ಈ ಕ್ಯಾಂಪ್, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಡೆಸಿಕೊಂಡು ಬರುವ ಒಂದು ವಿಶೇಷ ಪರ್ಯಟನಾ ತಾಣ. ಇಲ್ಲಿ ನೀವು ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದು, ಕಾಡಿನ ಸೌಂದರ್ಯವನ್ನು ಅನುಭವಿಸಬಹುದು ಮತ್ತು ನೆಮ್ಮದಿಯ ಕ್ಷಣಗಳನ್ನು ಕಳೆಯಬಹುದು.

jlr

ಬೆಂಗಳೂರಿನ ಫ್ಲೈಓವರ್ಗಳು, ಟ್ರಾಫಿಕ್ನಿಂದ ಗಿಜಿಗಿಜಿಗೊಂಡ ಜೀವನದಿಂದ ಬೇಸತ್ತಿದ್ದರೆ, ಬನ್ನೇರುಘಟ್ಟ ನೇಚರ್ ಕ್ಯಾಂಪ್ ಮೂಲಕ ನಿಜವಾಗಿಯೂ ನಿಮ್ಮ ಬೇಜಾರುಗಳಿಗೆ ಒಂದು ವಿರಾಮವನ್ನು ಕೊಡಬಹುದು. ಇಲ್ಲಿ ನಿಮ್ಮ ಮಕ್ಕಳ ಜತೆ ಪ್ರೀತಿ ಪಾತ್ರರ ಜತೆ ಸಮಯವನ್ನು ಕಳೆದು, ಮಕ್ಕಳ ಜತೆ ನೀವೂ ಮಕ್ಕಳಾಗಬಹುದು.

ಬನ್ನೇರುಘಟ್ಟದಲ್ಲಿರುವ ಪ್ರಾಣಿಗಳು ಸುಮ್ಮನೆ ಅಲ್ಲ, ಅವೆಲ್ಲ ಸರ್ಕಸ್ಗಳಿಂದ ರಕ್ಷಿಸಲಾದ ಹುಲಿ ಮತ್ತು ಸಿಂಹಗಳು. ಬನ್ನೇರುಘಟ್ಟ ಆ ಎಲ್ಲ ಪ್ರಾಣಿಗಳ ಪುನರ್ವಸತಿ ಕೇಂದ್ರವಾಗಿಯೂ ಅವುಗಳಿಗೆ ಆಶ್ರಯವನ್ನು ನೀಡಿದೆ. ಹಾಗೇ ಇಲ್ಲಿನ ಸಫಾರಿ ಸಾದಾ ಸಫಾರಿಯಲ್ಲ, ಭಾರತದ ಮೊದಲ ಸಿಂಹ ಮತ್ತು ಹುಲಿ ಸಫಾರಿ. ಅಂಥ ಹಲವಾರು ಪ್ರಾಣಿಗಳ ಮನೆಯ ಹತ್ತಿರ ನಿಮ್ಮನ್ನು ಜೀಪ್ನಲ್ಲಿ ಕರೆದುಕೊಂಡು ಹೋದಾಗ ಯಾವುದೇ ಭಯವಿಲ್ಲದೇ ಅವುಗಳನ್ನು ನೋಡಿ, ನಿಮ್ಮ ಮೊಬೈಲ್ ಅಥವಾ ಕ್ಯಾಮೆರಾದಲ್ಲಿ ಅವುಗಳನ್ನು ಚಿತ್ರೀಕರಿಸುತ್ತೀರಲ್ಲ ಅದೇ ಬನ್ನೇರುಘಟ್ಟ!

ನಗರದ ಎಲ್ಲ ಜಂಜಾಟಗಳಿಂದ ಮುಕ್ತವಾಗಿ, ಶಾಂತತೆಯನ್ನು ಹುಡುಕಲು ನೀವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಬೇಕು, ಅಲ್ಲಿ ನೀವು ಬರೀ ಶಾಂತತೆಯಿಂದ ಕಾಲಕಳೆಯುವುದಲ್ಲದೇ ಈ ಉದ್ಯಾನವನದಲ್ಲಿ ಕರಡಿ, ಕಾಡಾನೆ, ಜಿಂಕೆ, ಮುಳ್ಳುಹಂದಿ, ಕೋಗಿಲೆ ಕೋತಿ ಮತ್ತು ಅನೇಕ ಪಕ್ಷಿ ಪ್ರಭೇದಗಳ ಸಂಪತ್ತು ನಿಮ್ಮ ಜೀವನದ ಅತ್ಯಂತ ಮರೆಯಲಾಗದ ಸಂತಸವನ್ನು ನೋಟಗಳನ್ನು ತಂದಿಡುತ್ತದೆ. ಅದನ್ನು ಗಮನಿಸುವುದಕ್ಕಾದರೂ ನೀವು ಅಲ್ಲಿಗೆ ಹೋಗಬೇಕು

ಗೋಲ್ ಘರ್ ದುಂಡುಮೇಜಿನ ಸಭೆ!

ಮನಸ್ಸಿಲ್ಲದೇ ಕಚೇರಿಗೆ ಹೋಗಿ ಕೆಲಸ ಮಾಡುವುದು ಅಥವಾ ಮೊನೊಟನಸ್ ಜೀವನದಲ್ಲಿ ಕಳೆದುಹೋಗಿ ನೆಮ್ಮದಿಗಾಗಿ ಹಪಹಪಿಸುತ್ತಿದ್ದರೆ, ಈ ಕ್ಯಾಂಪ್ ನಿಮಗೆ ಒಳ್ಳೆಯ ಮತ್ತು ಆರಾಮದಾಯಕವಾಗಿ ಪ್ರಕೃತಿಯ ಜತೆ ಬೆರೆಯಲು ನಿಮಗೆ ಸಹಾಯ ಮಾಡುತ್ತದೆ. ಕಚೇರಿ ಅಂದ ತಕ್ಷಣ ಕಾರ್ಪೋರೇಟ್ ಆಫೀಸಿನ ಎಸಿ ರೂಂ ಅಥವಾ ಬೋರ್ಡ್ ರೂಂ ಗಳಷ್ಟೇ ಅಲ್ಲ, ಕಚೇರಿಯ ಮೀಟಿಂಗ್ ಗಳು ಕೂಡ ಇಲ್ಲಿಗೆ ಶಿಫ್ಟ್ ಮಾಡಿಕೊಳ್ಳಬಹುದು. ಸರಕಾರ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸುವಂತೆ, ನೀವು ನಿಮ್ಮ ಆಫೀಸ್ ಮೀಟಿಂಗನ್ನು ಬನ್ನೇರುಘಟ್ಟದ ಪ್ರಕೃತಿ ಮಡಿಲಲ್ಲಿ ನಡೆಸಬಹುದು. ಅದಕ್ಕಾಗಿಯೇ ಇಲ್ಲಿ ಗೋಲ್ಘರ್ ಎಂಬ ಸುಂದರ ಜಾಗವಿದೆ. ಇಲ್ಲಿ ನಿಮ್ಮ ಕಚೇರಿಯ ಹಲವಾರು ಸಭೆಗಳನ್ನು ಮಾಡಬಹುದು. ಕಾರ್ಪೋರೇಟ್ ವ್ಯವಸ್ಥೆಯ ಟೀಂ ಔಟಿಂಗ್ ಮಾಡಲು ಇದು ಹೇಳಿ ಮಾಡಿಸಿದ ಸ್ಥಳ.

gol ghar bannerghat nature camp

ಇಲ್ಲಿನ ಹಲವಾರು ಚಟುವಟಿಕೆಗಳನ್ನು ಮಾಡಿದ ನಂತರ ನೀವು ವಾಪಸ್ ನಿಮ್ಮೂರಿಗೆ ಹೋಗುವುದೇನೂ ಬೇಕಾಗಿಲ್ಲ. ಏಕೆಂದರೆ, ಏಷ್ಯಾದ ಅತಿದೊಡ್ಡ ಚಿಟ್ಟೆ ಉದ್ಯಾನವೂ ಸಹ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದೊಳಗೇ ಇದೆ. ಉತ್ತಮ ಟ್ರೆಕ್ ನಂತರ, ದೇಹ ಮತ್ತು ಮನಸ್ಸು ಒಳ್ಳೆಯ ಊಟ ಬಯಸುತ್ತದೆ. ಗೋಲ್ ಘರ್ ನಿಮಗೆ ಈ ಆತಿಥ್ಯವನ್ನೂ ನೀಡುತ್ತದೆ., ಟಿಪಿಕಲ್ ಜೆಎಲ್ಆರ್ ಶೈಲಿಯಲ್ಲಿ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ಅದ್ಭುತ ರುಚಿ ನೀಡುತ್ತದೆ. ಸ್ಥಳೀಯ ಪಾಕಪದ್ಧತಿ ಇಲ್ಲಿಯ ಒಂದು ವಿಶೇಷತೆಯಾಗಿದ್ದರೂ, ಕಾಂಟಿನೆಂಟಲ್ ಮತ್ತು ಚೈನೀಸ್ ಆಹಾರವನ್ನು ವಿನಂತಿಯ ಮೇರೆಗೆ ನೀಡಲಾಗುತ್ತದೆ.

ಯಾವ ಋತು ಬೆಸ್ಟ್?

ಬನ್ನೇರುಘಟ್ಟದ ಹವಾಮಾನ ಬೇರೆ ಅಲ್ಲ ಬೆಂಗಳೂರಿನ ಹವಾಮಾನ ಬೇರೆ ಅಲ್ಲ. ಆದರೆ ಗಿಡಮರಗಳ ಹಸಿರು ಇಲ್ಲಿನ ವಾತಾವರಣವನ್ನು ಹೆಚ್ಚು ಆಹ್ಲಾದಕರವಾಗಿಸುತ್ತದೆ. ಜೂನ್, ಜುಲೈ ಮತ್ತು ಆಗಸ್ಟ್ ಮಳೆಗಾಲದಲ್ಲಿ ಮರಗಳು, ನಿಮಗೆ ಛತ್ರಿಯಾಗಿಯೂ ಸೂರು ನೀಡಬಹುದು. ಊರಲ್ಲಿ ಕೊಚ್ಚೆ ಅಥವಾ ಪ್ರವಾಹವನ್ನು ತರುತ್ತಿದ್ದ ಮಳೆ, ಇಲ್ಲಿ ನಿಮಗೆ ಹೊಸ ಅನುಭೂತಿಯನ್ನೂ ನೀಡಬಹುದು. ಆದರೆ ಮಾರ್ಚ್, ಏಪ್ರಿಲ್ ಮತ್ತು ಮೇ ಅತ್ಯಂತ ಶುಷ್ಕ ತಿಂಗಳುಗಳು. ಆಗ ತಾಪಮಾನವು 28°C ವರೆಗೆ ಇರುತ್ತದೆ.

ಆರಾಮದಾಯಕ ಸ್ಟೇಯಿಂಗ್

ಕ್ಯಾಂಪ್ನಲ್ಲಿ ಎಂಟು ಲಕ್ಸುರಿ ಟೆಂಟೆಡ್ ಕಾಟೇಜ್ಗಳು, ಸ್ವಿಸ್ ಟೆಂಟ್ಗಳು ಮತ್ತು ಸ್ಥಳೀಯ ಮರಗಳಿಂದ ನಿರ್ಮಿಸಲಾದ ಎರಡು ಸ್ಟಿಲ್ಟೆಡ್ ಲಾಗ್ ಹಟ್ಗಳಿವೆ. ಪ್ರತಿಯೊಂದಕ್ಕೂ ಬಾತ್ರೂಮ್, ಆರಾಮದಾಯಕ ಹಾಸಿಗೆ ಮತ್ತುನ್ ಪಾರ್ಕ್ ವ್ಯೂ ಸೌಲಭ್ಯವಿದೆ. ಬಜೆಟ್ ಪ್ರಯಾಣಿಕರಿಗೆ ಒಂದು ಸ್ವಚ್ಛವಾದ ಡಾರ್ಮೆಟರಿ ಸೌಲಭ್ಯವೂ ಲಭ್ಯ.

jlr 2

ಕಾನ್ಫರೆನ್ಸ್ ಹಾಲ್ ಮತ್ತು ಡೈನಿಂಗ್

30 ಜನರಷ್ಟು ಸಾಮರ್ಥ್ಯವಿರುವ ಸಭಾಂಗಣದಲ್ಲಿ ಆಡಿಯೋ-ವಿಷುವಲ್ ಸಾಧನಗಳ ಜತೆಗೆ ಮತ್ತು ಮಲ್ಟಿಮೀಡಿಯಾ ಪ್ರೊಜೆಕ್ಟರ್ ಕೂಡ ಇದೆ. "ಗೋಲ್ ಘರ್" ಎಂಬ ತೆರೆದ ಊಟದ ಮನೆಯಲ್ಲಿ ಊಟ ಮಾಡುವಾಗ ಸುತ್ತಲಿನ ಕಾಡಿನ ನೋಟ ನಿಮಗೆ ಕೊಡುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ವನ್ಯಜೀವಿ ಜತೆ ಸಮಯ

ಬನ್ನೇರುಘಟ್ಟದ ದಟ್ಟ ಕಾಡುಗಳಲ್ಲಿ ಆನೆಗಳು, ಸಾಂಬಾರ್, ಚಿತ್ತಾಲ್, ಗೌರ್, ಕಾಡುಹಂದಿ, ಸ್ಲಾತ್ ಬೇರ್ ಮತ್ತು ಕೆಂಪು ನಾಯಿಗಳನ್ನು ನೋಡಬಹುದು. ಅದೃಷ್ಟವಿದ್ದರೆ, ಹುಲಿ ಅಥವಾ ಚಿರತೆಯ ದರ್ಶನವೂ ಸಿಗಬಹುದು! ಕಂಡ ಪ್ರಾಣಿ ಪಕ್ಷಿಗಳನ್ನು ನಾವು ಶೂಟ್ ಮಾಡಬಹುದು, ಗನ್ನಿಂದ ಅಲ್ಲ ಸ್ವಾಮಿ ಕ್ಯಾಮೆರಾದಿಂದ.

ಪಕ್ಷಿ ಪ್ರೇಮಿಗಳ ಸ್ವರ್ಗ

200ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಇಲ್ಲಿವೆ – ಹನಿ ಬಜಾರ್ಡ್, ಗ್ರೇಟ್ ಹಾರ್ನ್ಡ್ ಆಲ್, ಪರ್ಪಲ್ ಸನ್ ಬರ್ಡ್, ಪ್ಯಾರಡೈಸ್ ಫ್ಲೈಕ್ಯಾಚರ್ ಮುಂತಾದವುಗಳ ದರ್ಶನಕ್ಕೆ ಪಕ್ಷಿ ಪ್ರೇಮಿಗಳು ಆಗಾಗ ಬರುತ್ತಲಿದ್ದರೆ ಪಕ್ಷಿಗಳ ಜತೆ ಸ್ನೇಹವನ್ನು ಮಾಡಬಹುದು.

jlr 1

ಗ್ರ್ಯಾಂಡ್ ಸಫಾರಿ ಮತ್ತು ನೇಚರ್ ಟ್ರೆಕ್

ಈ ಕ್ಯಾಂಪ್ನ ಪ್ರಮುಖ ಆಕರ್ಷಣೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ವಿಶೇಷ ಜೀಪ್ ಸಫಾರಿ. ಸಿಂಹ, ಹುಲಿ ಮತ್ತು ಕರಡಿಗಳ ಬಳಿ ಹೋಗುವ ಈ ಸವಾರಿ ನೆನಪಿನಲ್ಲಿರುತ್ತದೆ. ಕಾಡಿನ ಪ್ರದೇಶದಲ್ಲಿ ಅಲ್ಲಿನ ಎಲ್ಲ ಮಾಹಿತಿಯುಳ್ಳ ಮಾರ್ಗದರ್ಶಿಯ ಜತೆ ನೇಚರ್ ಟ್ರೆಕ್ ಮಾಡಿ, ಕಾಡಿನ ಬಗ್ಗೆ ಬಹಳಷ್ಟು ತಿಳಿಯಬಹುದು. ಹಾಂ, ಇದೆಲ್ಲ ಚಾಟ್ ಜಿಪಿಟಿ, ವಿಕಿಪಿಡೀಯಾದಲ್ಲಿ ಸಿಗುವುದಿಲ್ಲ.

ಲಾಗ್ ಹಟ್ ಪ್ಯಾಕೇಜ್

ಪ್ಯಾಕೇಜಲ್ಲಿ ಏನಿದೆ:

  • ನಿಮ್ಮ ಆಯ್ಕೆಯ ವಾಸ್ತವ್ಯದ ಸ್ಥಳ
  • ಲಂಚ್, ಡಿನ್ನರ್, ಬ್ರೇಕ್ ಫಾಸ್ಟ್
  • ಸಫಾರಿ, ಸಿಂಹ-ಹುಲಿ-ಕರಡಿ ಸಫಾರಿ
  • ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯ ಮತ್ತು ಬಟರ್‌ಫ್ಲೈ ಪಾರ್ಕ್ ವೀಕ್ಷಣೆ
  • ಮಂಗಳವಾರ ಬನ್ನೇರುಘಟ್ಟ ಪಕ್ಷಿ ಪ್ರಾಣಿ ಉದ್ಯಾನವನ ಮುಚ್ಚಿರುತ್ತದೆ. ಆ ದಿನದ ಸಫಾರಿ ಬುಧವಾರದಂದು ನೀಡಲಾಗುತ್ತದೆ.

ವುಡನ್ ಕಾಟೇಜ್ ಪ್ಯಾಕೇಜ್

ವಾಸ್ತವ್ಯದ ರೂಪ: ವುಡನ್ ಕಾಟೇಜ್ (1)

ಟೆಂಟ್ ಕಾಟೇಜ್ ಪ್ಯಾಕೇಜ್

ವಾಸ್ತವ್ಯದ ರೂಪ: ಟೆಂಟ್ ಕಾಟೇಜ್ (4)

ಪ್ಯಾಕೇಲ್ಲಿ ಏನೇನಿದೆ?

ಎಲ್ಲ ಮೂಲ ಸೌಲಭ್ಯಗಳು, ಸಫಾರಿ, ಜೂ ವೀಕ್ಷಣೆ, ಊಟ, GST ಸೇರಿ.

ಎಕ್ಸಿಕ್ಯೂಟಿವ್ ಟೆಂಟ್ ಪ್ಯಾಕೇಜ್

ವಾಸ್ತವ್ಯದ ರೂಪ: ಎಕ್ಸಿಕ್ಯೂಟಿವ್ ಟೆಂಟ್ ಕಾಟೇಜ್ (4)

ಡಾರ್ಮೆಟರಿ ಪ್ಯಾಕೇಜ್

ವಾಸ್ತವ್ಯದ ರೂಪ: ಹಂಚಿಕೆ ವಾಸ್ತವ್ಯ (Shared Accommodation - 5)

ಡೇ ವಿಸಿಟ್ ಪ್ಯಾಕೇಜ್ (Day Visit)

ಇದರಲ್ಲಿ ಏನೇನು ಸಿಗುತ್ತದೆ:

  • ವೆಲ್ಕಮ್ ಡ್ರಿಂಕ್
  • ಲಂಚ್ (ಬಫೆ), ಸಂಜೆ ಚಹಾ/ಕಾಫಿ
  • ಸಫಾರಿ (ಕಾಡಿನಲ್ಲಿ+ ಹುಲಿ-ಸಿಂಹ-ಕರಡಿ)
  • ಪ್ರಾಣಿಸಂಗ್ರಹಾಲಯ ಮತ್ತು ಬಟರ್‌ಫ್ಲೈ ಪಾರ್ಕ್

ನಿಮ್ಮ ಜೆಎಲ್ಆರ್ ಡೈರಿ ಹೇಗಿರುತ್ತದೆ?

ದಿನ 1

1:00 pm – ರೆಸಾರ್ಟ್‌ಗೆ ಚೆಕ್-ಇನ್, ಫ್ರೆಶ್ ಆಗಿ ವಿಶ್ರಾಂತಿ.

1:30 – 2:30 pm – ಗೋಲ್ ಘರ್‌ನಲ್ಲಿ ರುಚಿಕರವಾದ ಊಟ

2:45 – 3:00 pm – ರಿಸೆಪ್ಷನ್ ನಲ್ಲಿ ಚಹಾ/ಕಾಫಿ ಜತೆ ಸಫಾರಿ ಬಗ್ಗೆ ಮಾತುಕತೆ.

2:30 – 6:30 pm – ಜೀಪ್ ಸಫಾರಿ: ಜುಲ್ಲುಗಾಡು ಪ್ರದೇಶ, ಹುಲಿ-ಸಿಂಹ-ಕರಡಿ ವೀಕ್ಷಣೆ ಮತ್ತು ಬಟರ್‌ಫ್ಲೈ ಪಾರ್ಕ್ ಭೇಟಿ.

6:30 – 7:00 pm – ಗೋಲ್ ಘರ್‌ನಲ್ಲಿ ಕಾಫಿ/ಚಹಾ ಸಮಯ

7:30 – 8:00 pm – ವನ್ಯಜೀವಿ ಸಿನಿಮಾ ಪ್ರದರ್ಶನ ಕಾನ್ಫರೆನ್ಸ್ ಹಾಲ್‌ನಲ್ಲಿ.

8:30 – 10:00 pm – ಕ್ಯಾಂಪ್‌ ಫೈರ್ ಬಳಿ ಕಥೆ ಹೇಳುತ್ತಾ ರುಚಿಕರವಾದ ಭೋಜನ.

ದಿನ 2:

ಪ್ರಕೃತಿಯೊಂದಿಗೆ ಹೊಸ ಬೆಳಗು

5:45 – 6:15 am – ವೇಕಪ್ ಕಾಲ್, ರಿಸೆಪ್ಷನ್‌ನಲ್ಲಿ ಬಿಸಿ ಕಾಫಿ/ಚಹಾ

6:15 – 8:30 am – ತಜ್ಞರ ಜೊತೆ ನಡಿಗೆ, ಕಾಡಿನ ಕಥೆಗಳು.

9:30 – 10:15 am – ಲಾಡ್ಜ್‌ಗೆ ಹಿಂದಿರುಗಿ ಬ್ರೇಕ್ ಫಾಸ್ಟ್.

10:30 am – ಜೆ ಎಲ್ ಆರ್ ನಿಂದ ಶುಭನಿರ್ಗಮನ