ಲವ್‌ ಎಟ್‌ ಫಸ್ಟ್‌ ಸೈಟ್‌ ಅಂತಾರಲ್ಲ. ಹಾಗೆ ಈ ರೆಸಾರ್ಟ್‌ ನೋಡಿದ ಮಂದಿ ಮೊದಲ ನೋಟಕ್ಕೆ ಲವ್ವಾಗೋಯ್ತು ಎನ್ನದೇ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ರೆಸಾರ್ಟ್‌ ಬಜೆಟ್‌ ಫ್ರೆಂಡ್ಲೀ ಲಿಸ್ಟ್‌ ನಲ್ಲಿದ್ದರೂ ಲಕ್ಷುರಿ ಲುಕ್‌ ನಲ್ಲೇ ಎಲ್ಲರ ಹೃದಯಕ್ಕೆ ಲಗ್ಗೆ ಇಡುತ್ತದೆ. ಇಲ್ಲಿ ಸಿಗುವ ಆತಿಥ್ಯ, ರೆಸಾರ್ಟ್‌ನ ನಾಲ್ಕು ಗೋಡೆಗಳಾಚೆಗೆ ಪರಿಸರದ ನಡುವೆ ಕೂತು ಕಾಲ ಕಳೆಯುವ ಅವಕಾಶವಂತೂ ರೆಸಾರ್ಟ್‌ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ. ಬಜೆಟ್‌ ಫ್ರೆಂಡ್ಲಿಯಾಗಿದ್ದು, ಅಡ್ವೆಂಚರಸ್‌ ಆಗಿರುವ ಡೇ ಔಟ್‌ ಪ್ಯಾಕೇಜಸ್‌ ಹಾಗೂ ಲಕ್ಸೂರಿಯಸ್ ನೇಚರ್‌ ಸ್ಟೇ ಯಾವುದಿದೆಯೆಂದು ನೀವು ಹುಡುಕುತ್ತಿದ್ದರೆ ಬೆಂಚ್ಕಲ್‌ ರೆಸಾರ್ಟ್‌ ಬಗ್ಗೆ ಮೊದಲು ತಿಳಿಯಲೇ ಬೇಕು.

benchkal resort 2

ಹೌದು..ರೆಸಾರ್ಟ್‌ ಗಳೆಂದರೆ ಬರಿಯ ಕೂರ್ಗ್‌, ವಯನಾಡು ಅಂತೆಲ್ಲಾ ದೂರದ ಊರುಗಳನ್ನು ಹುಡುಕಾಡುತ್ತಲೇ ಹೋಗುವವರು ಅವೆಲ್ಲವನ್ನೂ ಮರೆತು ಒಮ್ಮೆ ಬರಬೇಕಿರುವುದು ಬೆಂಗಳೂರಿನಿಂದ ಕೇವಲ ಎರಡ್ಮೂರು ಗಂಟೆಯ ದೂರದಲ್ಲಿರುವ ಬೆಂಚ್ಕಲ್‌ ರೆಸಾರ್ಟ್‌ನತ್ತ. ತುಮಕೂರಿನಿಂದ ಸುಮಾರು 18 ಕಿಮೀ ದೂರದಲ್ಲಿರುವ ಬೆಂಚ್ಕಲ್‌ ರೆಸಾರ್ಟ್‌, ಶಿವಗಂಗೆ ಬೆಟ್ಟದ ಅನತಿ ದೂರದಲ್ಲೇ ಇದ್ದು, ಸದ್ಯ ಬಲು ಬೇಡಿಕೆ ಹೊಂದಿದೆ.

ಡಾರ್ಮೆಟ್ರಿ, ಫ್ಯಾಮಿಲಿ ರೂಮ್ಸ್‌, ಕಪಲ್‌ ರೂಮ್ಸ್‌ ಹೀಗೆ ನಿಮ್ಮ ಆಯ್ಕೆಯನ್ನು ಮುಂಚಿತವಾಗಿ ಬುಕಿಂಗ್‌ ಮಾಡಿಕೊಂಡು ಇಲ್ಲಿ ಭೇಟಿ ನೀಡಿದರೆ ಸಾಕು, ತೊಟ್ಟಿಮನೆ ವಿನ್ಯಾಸದ ಇಲ್ಲಿನ ರಿಸೆಪ್ಶನ್‌ ಸೆಂಟರ್‌ ಮೊದಲಿಗೆ ನಿಮ್ಮನ್ನು ಆಕರ್ಷಿಸುತ್ತದೆ. ನಂತರ, ಇಲ್ಲಿ ಲಭ್ಯವಾಗುವ ವೆಲ್‌ಕಮ್‌ ಡ್ರಿಂಕ್‌ ಹೀರಿಕೊಂಡು ಚೆಕ್‌ ಇನ್‌ ಮಾಡಿ ರೂಮ್‌ ಸೇರಿ, ಒಂದಷ್ಟು ಹೊತ್ತು ರೆಸ್ಟ್‌ ಮಾಡಿಕೊಂಡರೆ ಫ್ರೆಶ್‌ ಆಗಿಯೇ ಫುಡ್‌, ಫನ್‌ ಗೇಮ್ಸ್‌ ಎಂದು ಮಜಾ ಮಾಡಬಹುದು.

1199 ಗೆ ಡೇ ಔಟಿಂಗ್‌

ಟೀಂ ಔಟಿಂಗ್‌, ಕಾರ್ಪೊರೇಟ್‌ ಔಟಿಂಗ್‌ ಗೆ ಇದು ಪರ್ಫೆಕ್ಟ್‌ ಜಾಗವಾಗಿದ್ದು, ಇಲ್ಲಿ ಲಭ್ಯವಾಗುವ ಸೌಕರ್ಯಗಳು, ಆಹಾರ ವಿಹಾರಕ್ಕಿರುವ ಅವಕಾಶಗಳನ್ನು ನೋಡಿ ಇದು ಬಲು ದುಬಾರಿ ರೆಸಾರ್ಟ್‌ ಎಂದುಕೊಳ್ಳಬೇಡಿ. ಯಾಕೆಂದರೆ ಇಲ್ಲಿ ಡೇ ಔಟ್‌ ಪ್ಯಾಕೇಜ್‌ ಗೆ ಬರೀ 1199 ರು. ಕೊಟ್ಟರೆ ಸಾಕು. ಉಳಿದಂತೆ ಯಾವರೀತಿಯ ಸ್ಟೇ ಯನ್ನು ನೀವು ಆಯ್ಕೆ ಮಾಡಿದ್ದೀರೆಂಬುದರ ಮೇಲೆ ಕೊಡುವ ಮೊತ್ತದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾಗಬಹುದಷ್ಟೇ.

benchkal resort

20ಕ್ಕೂ ಹೆಚ್ಚು ಗೇಮ್ಸ್‌

ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌ ಗಳಿಗಂತೂ ಇಲ್ಲಿ ಅನೇಕ ಅವಕಾಶಗಳಿವೆ. 200 ಮೀಟರ್‌ಗಳ ಝಿಪ್‌ ಲೈನ್‌, ಸ್ಕೈ ಸೈಕ್ಲಿಂಗ್‌, ಸ್ಕೈ ವಾಕರ್‌, ರೋಪ್‌ ಆಕ್ಟಿವಿಟಿ, ಔಟ್‌ ಡೋರ್‌ ಗೇಮ್ಸ್‌ 10-15 ಬಗೆಯ ರೋಪ್‌ ಆಕ್ಟಿವಿಟೀಸ್‌, ಕ್ರೇಜಿ ಅನುಭವಗಳನ್ನು ನೀಡುವ ಓಪನ್‌ ಸ್ವಿಂಗ್‌ ಮೆಚ್ಚಿಕೊಳ್ಳದವರಿಲ್ಲ. ಇದರೊಂದಿಗೆ ಮಕ್ಕಳ ಜತೆಗೆ ಇಲ್ಲಿಗೆ ಭೇಟಿಕೊಡುವುದಿದ್ದರೆ ಚಿಂತೆ ಬೇಕಾಗಿಲ್ಲ. ಕಿಡ್ಸ್‌ ಪ್ಲೇ ಏರಿಯಾದಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಯ್ಕೆಗಳಿವೆ.

ಇಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ ಬಹಳ ವಿಸ್ತಾರವಾಗಿದ್ದು, ಮಕ್ಕಳಿಗೂ ಪ್ರತ್ಯೇಕ ಜಾಗವನ್ನು ಕಲ್ಪಿಸಲಾಗಿದೆ. ರೇನ್‌ ಡ್ಯಾನ್‌ ಇಲ್ವೇ ಅಂತ ಕೇಳೋದೇ ಬೇಡ. ಮಸ್ತ್‌ ಮ್ಯೂಸಿಕ್‌ ಜತೆಗೆ ರೇನ್‌ ಡ್ಯಾನ್ಸ್‌ ಮಾಡುವ ಮಜವನ್ನೂ ನೀವೊಮ್ಮೆ ಅನುಭವಿಸಿಯೇ ತಿಳಿಯಬೇಕು.

ಕ್ಯಾಂಡಲ್‌ ಲೈಟ್‌ ಡಿನ್ನರ್‌ ಮಾಡಬಯಸುವ ಮಂದಿಗೆ ಪೂಲ್‌ ಸೈಡ್‌ ನಲ್ಲೇ ಜಾಗವನ್ನು ಕಾಯ್ದಿರಿಸಲಾಗಿದೆ. ಬಾನ್‌ ಫೈರ್‌ ಅಥವಾ ಕ್ಯಾಂಪ್‌ ಫೈರ್‌ ಬೇಕೆನ್ನುವರಿಗೂ ಮಸ್ತ್‌ ಸಾಂಗ್‌ ಜತೆಗೆ ಚಳಿ ಕಾಯಿಸುತ್ತಾ ಸ್ಟೆಪ್‌ ಹಾಕುವ ಅವಕಾಶವಿದೆ. ಅಡಿಶನಲ್‌ ಆಗಿ ಬೇಕೆಂದರೆ ಬಾರ್ಬೆಕ್ಯೂ ವ್ಯವಸ್ಥೆಯೂ ಇದ್ದು, ಅದಕ್ಕೆ ಹೆಚ್ಚುವರಿ ಮೊತ್ತ ತೆರಬೇಕಷ್ಟೇ.

ಮನರಂಜನೆಗೆ ಆಂಫಿಥಿಯೇಟರ್‌

ಇಲ್ಲಿನ ಪ್ರಮುಖ ಆಕರ್ಷಣೆಗಳ ಪೈಕಿ ಆಂಫಿಥಿಯೇಟರ್‌ ಸಹ ಒಂದು. ಕುಟುಂಬದ ಜತೆ ಇಲ್ಲವೇ ಆಫೀಸ್‌ ಟೀಂ ಜತೆ ಇಲ್ಲಿಗೆ ಬಂದರೆ ಸಂಜೆಯ ಸಮಯದಲ್ಲಿ ಆಂಫಿಥಿಯೇಟರ್‌ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೂ ಅವಕಾಶವಿದೆ. ಇಲ್ಲಿವೆ ಬರ್ತ್‌ ಡೇ ಪಾರ್ಟಿ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ, ಸೆಲೆಬ್ರೇಷನ್‌ಗಳಿಗಿದು ಸೂಕ್ತ ಜಾಗ. ಈ ರೆಸಾರ್ಟ್‌ ಫೊಟೋಜೆನಿಕ್‌ ಆಗಿದ್ದು, ವಿಡಿಯೋ ಮಾಡಲು, ಫೊಟೋಗಳನ್ನು ಕ್ಲಿಕ್ಕಿಸಲು ಸೂಪರ್‌ ಜಾಗ.

benchkal resort 4

ಸ್ಪೆಷಲ್‌ ರೂಮ್ಸ್‌ ಗೆ ಸ್ಪೆಷಲ್‌ ಪ್ಯಾಕೇಜಸ್‌

ಹಾಲೋ ಎಸ್ಕೇಪ್‌ ಫಾರ್‌ ಕಪಲ್ಸ್‌

ರಸ್ಟಿಕ್‌ ವುಡನ್‌ ಫ್ಲೋರಿಂಗ್‌ ರೂಮ್ಸ್‌ ಫಾರ್‌ ಫ್ರೆಂಡ್ಸ್‌ ಆಂಡ್‌ ಫ್ಯಾಮಿಲಿ

ಕಾಸೀ ಕ್ಯೂಬ್‌ ರೂಮ್ಸ್‌

ಡಾರ್ಮೆಟ್ರಿ ಫಾರ್‌ ಲಾರ್ಜ್‌ ಗ್ರೂಪ್ಸ್‌

ದೂರವೇನಲ್ಲ !

ತುಮಕೂರಿನಿಂದ 18 ಕಿಮೀ

ಬೆಂಗಳೂರಿನಿಂದ 97 ಕಿಮೀ

ಮೈಸೂರಿನಿಂದ 152 ಕಿಮೀ

ವಿಳಾಸ:

ಬೆಂಚ್ಕಲ್‌ ರೆಸಾರ್ಟ್‌, ಶ್ರೀ ಮುರುದ್ದು ಬಸವಣ್ಣ ದೇವಾಲಯದ ಹತ್ತಿರ, ಸಿದ್ದಾಪುರ, ಕರ್ನಾಟಕ- 572122

ಮೊಬೈಲ್:‌ 9606488058‌