ನೀವು ಬೀಚ್‌ ಪರ್ಸನ್ನಾ ಅಥವಾ ಮೌಂಟೇನ್‌ ಪರ್ಸನ್ನಾ ಅಂತ ಕೇಳಿದರೆ, ಬೆಟ್ಟದ ಮೇಲೆ ನಿಂತ್ಕೊಂಡು ಸಮುದ್ರ ನೋಡಬೇಕು ಅಂತ ಹೇಳಿದ್ರಂತೆ! ಬೀಚ್‌ ಎಂದಾಕ್ಷಣ ತಬಿಳಿ ಮರಳ ಮೇಲೆ ಉರುಳಾಡಿ, ಉಪ್ಪು ನೀರಿನಲ್ಲಿ ಈಜಾಡಿ, ಆಟವಾಡಿ, ಬೀಚ್ ನ ದಂಡೆಯ ಮೇಲೆ ಘಂಟೆಗಟ್ಟಲೆ ದಿಗಂತವನ್ನು ದಿಟ್ಟಿಸುತ್ತ. ಕೂಲಿಂಗ್‌ ಗ್ಲಾಸ್‌ ಹಾಕಿ ಆರಾಮ ಮಾಡುವವರು ಒಂದು ಕಡೆಯಾದರೆ, ಬೆಟ್ಟಗುಡ್ಡಗಳಲ್ಲಿ ಓಡಾಡಿ, ನಡೆದು, ಸುಸ್ತಾಗಿ, ಉಂಬಳ ಕಚ್ಚಿಸಿಕೊಂಡು ರಕ್ತ ಸುರಿಸಿ, ಅಲ್ಲೆಲ್ಲೋ ಕ್ಯಾಂಪ್‌ ಹಾಕಿ, ಸೂರ್ಯೋದಯಕ್ಕಿಂತ ಮುಂಚೆ ವ್ಯೂ ಪಾಯಿಂಟ್‌ನಲ್ಲಿ ನಿಂತು, ಸಿಗರೇಟ್‌ ಥರ ಬಾಯಲ್ಲಿ ಹೊಗೆ ಬರಿಸಿಕೊಂಡು, ಮೋಡವೇ ಆಯ ತಪ್ಪಿ ಕೆಳಗೆ ಬಂದಾಗ ಯಾವುದೋ ಬೆಟ್ಟದ ಮೇಲೆ ಕೂತು ದಿಗಂತವನ್ನು ದಿಟ್ಟಿಸಿ ನೋಡುವುದು ಇನ್ನೊಂದು ಕಡೆ. ಇದೆಲ್ಲ ಅವರವರ ಚಾಯ್ಸ್‌. ಆದರೆ, ಕೆಲವೊಂದಿಷ್ಟು ಜನಕ್ಕೆ ಎರಡೂ ಖುಷಿಯೂ ಬೇಕೆನಿಸುತ್ತೆ. ಎರಡನ್ನೂ ಒಟ್ಟಿಗೇ ಅನುಭವಿಸಬೇಕು ಎಂದನಿಸುತ್ತದೆ. ಅಂಥವರಿಗಾಗಿ ಒಂದು ಸ್ಥಳ ಹೇಳುತ್ತೇವೆ.

ಅದರ ಹೆಸರು ಕಾರವಾರ! ಉತ್ತರ ಕನ್ನಡ ಜಿಲ್ಲೆ ಒಂಥರಾ ಪ್ರಕೃತಿಯ ವರದಾನ ಅನ್ನಬಹುದು. ಏಕೆಂದರೆ, ಒಂದು ಕಡೆಯಲ್ಲಿ ಒಳ್ಳೊಳ್ಳೆ ಬೀಚ್‌ಗಳಿದ್ದರೆ, ಇನ್ನೊಂದು ಕಡೆ ಪಶ್ಚಿಮ ಘಟ್ಟ ಮತ್ತು ಕಾಡುಗಳು. ಇಂಥ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೀಚ್‌ ಗೆ ಕವಿ ಲೇಖಕ ರವೀಂದ್ರನಾಥ ಟ್ಯಾಗೋರ್‌ ಅವರ ಹೆಸರಿನ್ನಿಟ್ಟಿದ್ದಾರೆ. ಏಕೆ ಗೊತ್ತಾ? ಒಂದು ಹುಣ್ಣಿಮೆ ಮಧ್ಯರಾತ್ರಿ, ಯುವಕರಾಗಿದ್ದ ರವೀಂದ್ರನಾಥ್‌ ಟ್ಯಾಗೋರ್‌ ಮತ್ತವರ ಸ್ನೇಹಿತರು, ಕಾರವಾರದ ಸಮುದ್ರದಲ್ಲಿ ಬೋಟ್‌ ರೈಡ್‌ ಮಾಡಿ, ಬಿಳಿ ಮರಳ ಮೇಲೆ ಪಾದಯಾತ್ರೆ ಮಾಡಿಕೊಂಡು ಅವತ್ತಿನ ರಾತ್ರಿ ಒಂದು ನಾಟಕ ಬರೆಯುತ್ತಾರೆ. ಅದರ ಹೆಸರು ಪ್ರಕೃತಿರ್‌ ಪ್ರತಿಶೂತ ಅಥವಾ ಪ್ರಕೃತಿಯ ಪ್ರತೀಕಾರ. ಅದು ಅಂದಿನ ಆ ಯುವ ಲೇಖಕನನ್ನು ವಿಶ್ವದ ಪ್ರಸಿದ್ಧ ಕವಿ ಮತ್ತು ಲೇಖಕನನ್ನಾಗಿ ರೂಪಿಸಲು ತುಂಬಾ ಸಹಾಯ ಮಾಡುತ್ತದೆ. ಇಂಥ ಕಾರವಾರ ಬರೀ ಒಂದು ಪ್ರವಾಸಿ ಸ್ಥಳವಾಗದೆ, ನಮ್ಮೊಳಗಿನ ನಮ್ಮನ್ನು ಹೊರಗಡೆ ತರುವ ಶಕ್ತಿಯೂ ಆಗಿರಬಹುದು. ಯಾರಿಗೆ ಗೊತ್ತು ನೀವು ಭೇಟಿ ಕೊಟ್ಟಾಗ ನಿಮ್ಮೊಳಗಿಂದ ಗೊತ್ತಿರದ ಯಾವುದೋ ಕಲೆ ಅಥವಾ ಯಾವುದೋ ಐಡಿಯಾ ಹೊರಬಿದ್ದು ನೀವು ಇಡೀ ವಿಶ್ವವೇ ಪ್ರೀತಿಸುವ ಮನುಷ್ಯರಾಗಬಹುದು.

ಅಂಥದೊಂದು ಜಾಗ ಕಾರವಾರದ ಬಳಿಯ ದೇವಬಾಗ್‌. ದೇವ್‌ಬಾಗ್ ಎಂಬುದು ಬೀಚ್ ಪ್ರಿಯರಿಗೆ ಒಂದು ವಿಶಿಷ್ಟ ಸ್ಟಾಪ್‌. ಸೂರ್ಯ, ಮರಳು, ಸರ್ಫ್, ಸಮುದ್ರ ಮತ್ತು ಕಂಡಷ್ಟೂ ದೂರ ನೀಲಿ ನೀರೇ ಇರುವ ಸ್ಥಳ . ದೇವ್‌ಬಾಗ್ ಸಾರ್ವಜನಿಕ ಬೀಚ್‌ ಆಗಿರದೇ ನಮ್ಮದೇ ಸ್ವಂತ ಬೀಚ್‌ ಎಂಬಂತೆ ಭಾಸವಾಗುತ್ತದೆ. ಮರಳು ಕೋಟೆಗಳನ್ನು ನಿರ್ಮಿಸುವುದು, ಸಮುದ್ರ ಚಿಪ್ಪುಗಳಿಗಾಗಿ ದಡವನ್ನು ಶೋಧಿಸುವುದು, ತುದಿಕಾಣದ ಬೀಚ್ನಲ್ಲಿ ವಾಲಿಬಾಲ್ ಆಡುವುದು, ಸ್ನಾರ್ಕೆಲಿಂಗ್ ಮತ್ತು ವಿಶ್ರಾಂತಿ ಪಡೆಯುವುದು ಹೀಗೆ ಎಲ್ಲ ಬಗೆಯ ಭಾವಗಳಿಗೂ ನಿಲ್ದಾಣವಿದು. ಸಮುದ್ರವು ಎಲ್ಲ ಚಿಂತೆಗಳನ್ನು ತನ್ನ ಅಲೆಗಳಲ್ಲಿ ಹೊತ್ತುಕೊಂಡು ಹೋಗುತ್ತದೆ ಅನ್ನುತ್ತಾರೆ. ದೇವ್‌ಬಾಗ್ ನ ಪ್ರಶಾಂತತೆ ನೋಡಿದರೆ ಅದು ಸತ್ಯವೆನಿಸುತ್ತದೆ. ಅನ್ವೇಷಕರಿಗೂ ಅಲ್ಲೊಂದು ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನೀವು ಇಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಸ್ನಾರ್ಕೆಲಿಂಗ್, ಸ್ಪೀಡ್ ಬೋಟ್ ಕ್ರೂಸಸ್, ಬನಾನಾಬೋಟ್ ಸವಾರಿಗಳು ಮತ್ತು ಪ್ಯಾರಾ-ಸೇಲಿಂಗ್ ಇವೆ.

Come to JLR... Immerse yourself in a beach resort! 1

ನೀವು ಕೊನೆಯ ಬಾರಿ ನಿಮ್ಮನ್ನೇ ಮರೆತು ಇಡೀ ಪ್ರಕೃತಿಯ ಮತ್ತದರ ಅನಂತತೆಯ ಜತೆ ಒಂದಾಗಿ ಕಾಲ ಕಳೆದದ್ದು ಯಾವಾಗ? ನಿಮಗೆ ಉತ್ತರ ಥಟ್ಟನೆ ಬರದಿದ್ದರೆ, ನೀವು ದೇವ್‌ಬಾಗ್‌ಗೆ ಬರಲೇಬೇಕು! ಇಲ್ಲಿನ ಹತ್ತಿರದ ಮೀನುಗಾರಿಕಾ ಗ್ರಾಮಕ್ಕೂ ಒಮ್ಮೆ ಭೇಟಿ ನೀಡಲೇಬೇಕು. ಅಲ್ಲಿಗೆ ಮೀನುಗಾರರು ತಮ್ಮ ತಾಜಾ ಮೀನುಗಳೊಂದಿಗೆ ಬರುತ್ತಾರೆ. ʼಇದೇನ್‌ ಕ್ಲಾಸೋ ಅಥವಾ ಫಿಶ್‌ ಮಾರ್ಕೆಟ್ಟೋʼ ಅಂತ ಶಾಲೆಯ ಟೀಚರ್‌ಗಳು ಕೇಳುತ್ತಾರಲ್ವಾ? ಆ ಫಿಶ್‌ ಮಾರ್ಕೆಟ್‌ನ್ನೂ ನೀವು ನೋಡಬಹುದು. ಹಡಗು ಅಥವಾ ಕ್ಯಾಟಮರನ್ ಸಮುದ್ರದಲ್ಲಿ ತೇಲುವುದನ್ನು ನೋಡುವುದಷ್ಟೇ ಅಲ್ಲ, ಅದರ ಮೇಲಿದ್ದು ಸಮುದ್ರದ ಮೇಲೆ ನೀವೂ ತೇಲಾಡಬಹುದು. ಹಡಗಿನಿಂದ ಮೀನುಗಾರರು ತಮ್ಮ ಬಲೆಗಳನ್ನು ಸಮುದ್ರಕ್ಕೆ ಬಿಡುತ್ತಾರಲ್ಲ, ಅದನ್ನೆಲ್ಲ ಕಣ್ಣಿಗಿಳಿಸಿಕೊಳ್ಳಬಹುದು. ಇಬ್ಬರು ವ್ಯಕ್ತಿಗಳಿರುವ ಮೀನು ಹಿಡಿಯುವ ಬೋಟ್‌ನಲ್ಲಿ ನೀವೂ ಹೋಗಿ ಮೀನುಗಾರರ ಜತೆ ಮೀನು ಹಿಡಿಯಲು ಪ್ರಯತ್ನಿಸಿ. ಕೆಲವೊಮ್ಮೆ ಯಾರ ಗಾಳಕ್ಕೂ ಬೀಳದ ಮೀನು ನಿಮ್ಮ ಬಲೆಗೆ ಬೀಳಬಹುದು. ಬಂದರಿನಲ್ಲಿರುವ ಟ್ರಾಲರ್‌ಗಳಲ್ಲಿ ಮೀನು ತುಂಬಿಸಿಕೊಂಡು ನೀವು ವಾಪಸ್‌ ಹೋಗಬಹುದು.

ನಿಮಗೆ ಪ್ರಾಣಿ ಹಿಂಸೆ ಮಾಡುವುದು ಇಷ್ಟವಿಲ್ಲವೆಂದರೆ, ಟ್ಯಾಗೋರ್‌ ಅವರ ನಡೆಯನ್ನು ಅನುಸರಿಸಬಹುದು. ಕಾಳಿ ನದಿಯು ಸಮುದ್ರವನ್ನು ಸೇರುವ ಸ್ಥಳದಿಂದ ವಿಹಾರ ಮಾಡಿ, ಡಾಲ್ಫಿನ್‌ಗಳನ್ನು ನೋಡುವ ಮೂಲಕ ನೀವು ವಿಶಿಷ್ಟ ಅನುಭವವನ್ನು ಪಡೆಯಬಹುದು. ಅದರ ಜತೆಗೆ ನದಿ ಹೇಗೆ ಸಮುದ್ರದಲ್ಲಿ ಲೀನವಾಗುತ್ತದೆ ಎಂಬ ಸಣ್ಣ ಕುತೂಹಲವಿದ್ದರೆ, ಅದನ್ನು ತಿಳಿಯಲು ನೀವು ದಪ್ಪ ದಪ್ಪ ಪುಸ್ತಕಗಳನ್ನು ಓದಿ ಹಲವಾರು ರಿಸರ್ಚ್‌ಗಳನ್ನು ಮಾಡದೇ ಆರಾಮವಾಗಿ ಬೋಟ್‌ನಲ್ಲಿ ಕುಳಿತು ಅದನ್ನೆಲ್ಲ ನೋಡಬಹುದು. ಹತ್ತಿರದ ಮ್ಯಾಂಗ್ರೋವ್ ಪೊದೆಗಳಲ್ಲಿ ಪಕ್ಷಿ ವೀಕ್ಷಣೆಗೆ ಹೋಗಬಹುದು, ಹಕ್ಕಿಗೆ ಕಾಳು ಹಾಕಬಹುದು. ಕಾರವಾರ ಕರಾವಳಿಯಲ್ಲಿರುವ ಕುಮಾರಗಢ, ಆಯ್ಸ್ಟರ್-ರಾಕ್, ಅಂಜುದೀಪ್ ಮತ್ತು ದ್ವೀಪಗಳು ಪುರಾಣ, ಅಚ್ಚರಿಗಳು ಮತ್ತು ಮಾಯಾಜಾಲಗಳು ಇವೆಲ್ಲದಕ್ಕೂ ಸಾಕ್ಷಿಯಾಗಬಹುದು. ದಂತಕಥೆಯ ಪ್ರಕಾರ, ಸನ್ಯಾಸಿ ಬಂಡೆಯಲ್ಲಿ ಒಬ್ಬ ಸನ್ಯಾಸಿ ತನ್ನ ತಪಸ್ಸು ಮಾಡಲು ಆರಂಭಿಸಿದನು. ಅದು ಮಾನವರು ಇರುತ್ತಿದ್ದ ಸ್ಥಳದಿಂದ ಸಂಪೂರ್ಣವಾಗಿ ದೂರವಾಗಿದ್ದರೂ, ಆತ ವೃದ್ಧಾಪ್ಯದವರೆಗೆ ಬದುಕಿದನಂತೆ. ಅದಕ್ಕೆ ಆತ ಕೂತಿದ್ದ ಬಂಡೆಗೆ ಸನ್ಯಾಸಿ ಬಂಡೆ ಎಂಬ ಹೆಸರು ಬಂತು. ನೀವು ರಾಬಿನ್ಸನ್ ಕ್ರೂಸೋ ಮನಸ್ಥಿತಿಯಲ್ಲಿದ್ದರೆ, ಆತನನ್ನೂ ಆವಾಹನೆ ಮಾಡಿಕೊಳ್ಳಬಹುದು. ಆಯ್ಸ್ಟರ್-ರಾಕ್‌ನಲ್ಲಿ, ಬ್ರಿಟಿಷ್ ರಾಜ್ ಯುಗದ ಅತ್ಯಂತ ಹಳೆಯ ಮತ್ತು ಭಾರೀ ಎನ್ನಿಸುವಂಥ ಲೈಟ್‌ಹೌಸ್‌ಗಳಲ್ಲಿ ಒಂದಾಗಿದೆ. ನೀವು ಲೈಟ್‌ಹೌಸ್ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಪ್ರತ್ಯಕ್ಷವಾಗಿ ಪಡೆಯಬಹುದು.

ಇದನ್ನೆಲ್ಲ ಅನುಭವಿಸಲು ನಿಮಗೊಂದು ಸ್ಥಳ ಬೇಕು. ಇರಲು ರೂಮ್‌ಗಳು, ಹೊಟ್ಟೆಗೆ ಊಟ, ನಿದ್ದೆಗೆ ಸ್ಥಳ ಎಲ್ಲವೂ ಬೇಕೇಬೇಕು ಅಲ್ಲವೇ? ಅದೆಲ್ಲ ಸಿಗೋದು ರಾಜ್ಯದ ಪ್ರಮುಖ ರೆಸಾರ್ಟ್‌ಗಳಲ್ಲೊಂದು ಮತ್ತು ಅತ್ಯಂತ ಪ್ರೀತಿಗಳಿಸಿದ ಜೆಎಲ್‌ಆರ್‌ನಲ್ಲಿ! ಊಟದ ಹಾಲ್ ಗೋಲ್ ಘರ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪಾಕಪದ್ಧತಿಯ ರುಚಿಕರವಾದ ಬಫೆಯನ್ನು ಒದಗಿಸುತ್ತದೆ. ಒಳ್ಳೆಯ ರೂಮ್‌ಗಳು, ವಿಶ್ರಾಂತಿಯನ್ನು ಅನುಭವಿಸಲು ಸ್ಥಳ, ಬೇಕಾದಾಗ ಸಹಾಯ ಮಾಡಲು ಸಿಬ್ಬಂದಿ! ಎಲ್ಲದಕ್ಕಿಂತ ಹೆಚ್ಚಾಗಿ ಈ ರೆಸಾರ್ಟ್‌ ಇರೋದು ಬೀಚ್‌ ಪಕ್ಕ ಕಣ್ರೀ! ಬೇರೆ ರೆಸಾರ್ಟ್‌ಗಳ ರೀತಿಯಲ್ಲಿ ಬೀಚ್‌ಗೆ ಅಂದರೆ ಕೆಲವು ಕಿಲೋಮೀಟರ್‌ ದೂರಕ್ಕೆ ಹೋಗಬೇಕೆಂದೇನೂ ಇಲ್ಲ. ನಿಮಗೆ ರಾತ್ರಿ ರೂಮ್‌ನಲ್ಲಿ ಬೋರ್‌ ಆದರೆ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಬೀಚ್‌ಮುಂದೆ ಕೂತು ಮಾತನಾಡಬಹುದು! ಇಂಥ ಹಲವಾರು ವಿವಿಧತೆಗಳಿಂದ ಈ ದೇವಬಾಗ್‌ ರೆಸಾರ್ಟ್‌ ಕೂಡಿದೆ! ಗುಡ್‌ ವೈಬ್ಸ್‌ ಬೇಕು ಅಂದರೆ ಇಲ್ಲಿಗೆ ಬರಲೇಬೇಕು!

Come to JLR... Immerse yourself in a beach resort!

ಜೆಎಲ್‌ಆರ್‌ ಯಾಕೆ?

*ದಾಂಡೇಲಿಯಲ್ಲಿರುವ ಕಾಳಿ ಅಡ್ವೆಂಚರ್ ರೆಸಾರ್ಟ್‌ನಲ್ಲಿ ಪರ್ವತಗಳು, ಕಣಿವೆಗಳು ಮತ್ತು ಹೊರಾಂಗಣ ಶಿಬಿರಗಳು ನಿಮಗಾಗಿ ಕಾಯುತ್ತಿವೆ

*ಗೋವಾ ಕಾರವಾರದಿಂದ ಕೇವಲ 8 ಕಿಮೀ ದೂರದಲ್ಲಿದೆ

*ಅದ್ಭುತ ಶ್ರೀಗಂಧದ ಕರಕುಶಲತೆಗಾಗಿ ಕುಮಟಾಗೆ ಭೇಟಿ ನೀಡಿ

*ಯಾಣದ ದಿಗಂತವನ್ನು ಅಲಂಕರಿಸುವ ಭವ್ಯವಾದ ಶಿಲಾ ರಚನೆಗಳು ಭೇಟಿ ನೀಡಲು ಯೋಗ್ಯವಾಗಿವೆ

*ರಾಮಾಯಣ ಯುಗದಷ್ಟು ಹಿಂದಿನ ಮತ್ತು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ.

*ದೇವಬಾಗ್ ಬಳಿಯ ಕಾಡುಗಳು ಜೀವಂತಿಕೆಯಿಂದ ತುಂಬಿವೆ. ಚಾರಣವು ಯಾವಾಗಲೂ ಸ್ಮರಣೀಯವಾಗಿರುತ್ತವೆ.

ಸೀಸನ್‌

ದೇವ್‌ಬಾಗ್ ಅಕ್ಟೋಬರ್ ನಿಂದ ಮೇ ವರೆಗೆ ಅತ್ಯಂತ ಸುಂದರವಾಗಿರುತ್ತದೆ. ಈ ರೆಸಾರ್ಟ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಲ ಕ್ರೀಡೆಗಳಿಗೆ ಬೇಸಿಗೆ ಅತ್ಯುತ್ತಮ ಸಮಯ. ಕರಾವಳಿಯಲ್ಲಿ ಡಾಲ್ಫಿನ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಮೀನು ಮತ್ತು ಹವಳಗಳು ಎಂದಿಗಿಂತಲೂ ಹೆಚ್ಚು ಹೊಳೆಯುತ್ತಿರುತ್ತವೆ.

ಜೆಎಲ್‌ಆರ್‌ನಲ್ಲಿನ ದಿನಚರಿ

ದಿನ 1

ಮಧ್ಯಾಹ್ನ 1:00- ಚೆಕ್ ಇನ್ ಮಾಡಿ. ಕುಳಿತು ಫ್ರೆಶ್ ಅಪ್ ಆಗಿ

ಮಧ್ಯಾಹ್ನ 1:30 - 3:00- ಗೋಲ್ ಘರ್‌ನಲ್ಲಿ ಭರ್ಜರಿ ಊಟ ಮಾಡಿ

ಮಧ್ಯಾಹ್ನ 3:30 - 5:30- ಬನಾನಾ ರೈಡ್‌, ಜೆಟ್ ಸ್ಕೀಯಿಂಗ್, ಸ್ಪೀಡ್ ಬೋಟ್ನಂಥ ಚಟುವಟಿಕೆಗಳಿಗೆ ಸಿದ್ಧರಾಗಿ.

ಸಂಜೆ 5:00 - 6:30- ಟೀ ಮತ್ತು ಕಾಫಿ, ವಾಲಿಬಾಲ್, ಬ್ಯಾಡ್ಮಿಂಟನ್ ಜತೆಗೆ ಬೀಚ್‌ನಲ್ಲಿ ಸಮಯ ಕಳೆಯಿರಿ,

ಸಂಜೆ 7:00 - 8:30-ಸಸ್ಯಾಹಾರಿ ಮತ್ತು ಮಾಂಸಾಹಾರಿ ತಿಂಡಿಗಳೊಂದಿಗೆ ಬೀಚ್‌ನಲ್ಲಿ ಕ್ಯಾಂಪ್‌ಫೈರ್ ಮಾಡಿ (ಬಾರ್‌ ಇದೆ. ಭಾರೀ ಗುಂಡೂ ಹಾಕಬಹುದು)

ಸಂಜೆ 8:30 - 10:00: ಬೀಚ್‌ನಲ್ಲಿ ಕ್ಯಾಂಡಲ್ ಲೈಟ್ ಬಫೆ ಡಿನ್ನರ್.

ದಿನ 2

ಬೆಳಗ್ಗೆ 6:30 – ಗೋಲ್ಮ್ ಘರ್‌ನಲ್ಲಿ ಚಹಾ / ಕಾಫಿ

ಬೆಳಗ್ಗೆ 7:00 - 8:00- ಪಕ್ಷಿ ವೀಕ್ಷಣೆಯೊಂದಿಗೆ ಪ್ರಕೃತಿ ನಡಿಗೆ

ಬೆಳಗ್ಗೆ 8:00 - 9:00- ಗೋಲ್ ಘರ್‌ನಲ್ಲಿ ಉಪಾಹಾರ

ಬೆಳಗ್ಗೆ 9:00 - 10:00- ನದೀಮುಖದಲ್ಲಿ ದೋಣಿ ವಿಹಾರ (ಡಾಲ್ಫಿನ್ ವೀಕ್ಷಣೆಗಾಗಿ ಸಮುದ್ರದ ಕಡೆಗೆ ದೋಣಿ ವಿಹಾರ ಅಥವಾ ಕಾಳಿಕಾಮಠ ದ್ವೀಪ ಭೇಟಿಯನ್ನು ಅವಲಂಬಿಸಿ)

ಬೆಳಗ್ಗೆ 10:30 -ಚೆಕ್ ಔಟ್

ಇಲ್ಲಿನ ಚಟುವಟಿಕೆಗಳು

ಬನಾನಾ ರೈಡ್

ಕಯಾಕಿಂಗ್‌

ಜೆಟ್‌ ಸ್ಕೀ ರೈಡ್ಸ್‌

ಸ್ನಾರ್ಕಲಿಂಗ್‌

ಬಂಪ್‌ ರೈಡ್‌

ಪ್ಯಾಕೇಜ್‌ಗಳು

ಬೀಚ್ ಪ್ಯಾಕೇಜ್

ಪ್ಯಾಕೇಜ್ನಲ್ಲಿ: ವಾಸ್ತವ್ಯ, ಮಧ್ಯಾಹ್ನ ಊಟ, ಕ್ಯಾಂಡಲ್ ಲೈಟ್ ಡಿನ್ನರ್ ಮತ್ತು ಬ್ರೇಕ್‌ಫಾಸ್ಟ್, ತಿಂಡಿಗಳೊಂದಿಗೆ ಕ್ಯಾಂಪ್‌ಫೈರ್, ಪಕ್ಷಿ ವೀಕ್ಷಣೆಯೊಂದಿಗೆ ಪ್ರಕೃತಿ ನಡಿಗೆ, ಕಯಾಕಿಂಗ್, ಈಜು, ಡಾಲ್ಫಿನ್ ವೀಕ್ಷಣೆಯೊಂದಿಗೆ ದೋಣಿ ವಿಹಾರ.

ಆಹಾರ ಮತ್ತು ವಾಸ್ತವ್ಯ ಪ್ಯಾಕೇಜ್

ಪ್ಯಾಕೇಜ್ನಲ್ಲಿ: ವಾಸ್ತವ್ಯ, ಮಧ್ಯಾಹ್ನದ ಊಟ, ಕ್ಯಾಂಡಲ್ ಲೈಟ್ ಡಿನ್ನರ್‌ ಮತ್ತು ಉಪಾಹಾರ, ತಿಂಡಿಗಳೊಂದಿಗೆ ಕ್ಯಾಂಪ್ ಫೈರ್.

ದಿನದ ಭೇಟಿ

ಪ್ಯಾಕೇಜ್‌ನಲ್ಲಿ: ದೇವ್‌ಬಾಗ್‌ಗೆ ಭೇಟಿ, ಸ್ವಾಗತ ಪಾನೀಯಗಳು, ಬಫೆ ಊಟ, ಕಯಾಕಿಂಗ್, ಈಜು, ದೋಣಿ ವಿಹಾರ, ಬೀಚ್‌ನಲ್ಲಿ ಸಂಜೆ ಚಹಾ/ಕಾಫಿ.

ಸಂಪರ್ಕ

ನವೀನ್ ದೇವ್‌ಬಾಗ್,

ಪೋಸ್ಟ್: ಸದಾಶಿವಗಢ, ಕಾರವಾರ-581352

ವ್ಯವಸ್ಥಾಪಕರು: ಶ್ರೀ ಪಿ ಆರ್ ನಾಯಕ್

ಸಂಪರ್ಕ ಸಂಖ್ಯೆ: 9449599778

9449599759

ಲ್ಯಾಂಡ್-ಲೈನ್: 08382-221603

ಇಮೇಲ್ ಐಡಿ: info@junglelodges.com