ಪೂಜ್ಯ ತಂದೆ ಚಂದ್ರಶೇಖರ ಉಡುಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಜಗತ್ತಿನಾದ್ಯಂತ ಪಸರಿಸಬೇಕು ಮತ್ತು ಆರೋಗ್ಯ ಕ್ಷೇತ್ರಕ್ಕೂ ಅವರ ಆದರ್ಶಗಳನ್ನು ಅಳವಡಿಸಬೇಕು ಎಂಬ ಹಿರಿದಾಸೆಯ ಫಲವೇ ಇಂದು ಜನಪ್ರಿಯವಾಗಿರುವ ಯೋಗಬನ ಮತ್ತು ಡಿವೈನ್ ಪಾರ್ಕ್ ಎಂಬ ಅಪೂರ್ವ ಸಂಸ್ಥೆಗಳು.

ಡಾ. ವಿವೇಕ್ ಉಡುಪ, ಹುದ್ದೆಯ ವಿಚಾರಕ್ಕೆ ಬಂದರೆ ಎಸ್ ಎಚ್ ಆರ್ ಎಫ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಯೋಗಬನ ಮತ್ತು ಡಿವೈನ್ ಪಾರ್ಕ್ ನ ಕೇಂದ್ರಬಿಂದು ಇವರೇ. ಚಿಕಿತ್ಸೆಗೆಂದು ಬರುವವರ ಅಚ್ಚುಮೆಚ್ಚಿನ ವೈದ್ಯರು, ಸಲಹೆಗಾರರು ಮತ್ತು ಅಧ್ಯಾತ್ಮ ಗುರು, ವ್ಯಕ್ತಿತ್ವ ವಿಕಸನದ ಮಾರ್ಗದರ್ಶಿ ಏನು ಬೇಕಾದರೂ ಹೇಳಿ, ವಿವೇಕ್ ಉಡುಪ ಅವರು ಅವೆಲ್ಲ ಸ್ಥಾನಗಳಲ್ಲೂ ನಿಲ್ಲುತ್ತಾರೆ. ಸ್ವಾಮಿ ವಿವೇಕಾನಂದರ ತತ್ತ್ವಗಳನ್ನು, ಅವರು ಹೇಳಿಕೊಟ್ಟ ಜೀವನಕ್ರಮಗಳನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತಲೇ ಅದನ್ನು ಆರೋಗ್ಯಕ್ರಮಕ್ಕೂ ಕನೆಕ್ಟ್ ಮಾಡುವ ವಿಶೇಷ ವಿಧಾನ ಡಾ. ವಿವೇಕ್ ಉಡುಪರಿಗೆ ಸಿದ್ಧಿಸಿದೆ.

ಎಸ್ ಡಿ ಎಂ ಕಾಲೇಜ್ ನಲ್ಲಿ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ನಲ್ಲಿ ವೈದ್ಯ ಪದವಿ ಪಡೆದು ನಂತರ ಯೋಗ ಮತ್ತು ರಿಹ್ಯಾಬಿಲಿಟೇಶನ್ ನಲ್ಲಿ ಎಂಡಿ ಕೂಡ ಪಡೆದವರು ಡಾ.ವಿವೇಕ್. ಈ ವಿಭಾಗದಲ್ಲಿ ಎಂಡಿ ಪದವಿ ಪಡೆದ ಮೊದಲ ವ್ಯಕ್ತಿ ಅಂದರೆ ಅದು ಡಾ.ವಿವೇಕ್ ಉಡುಪ. ರಾಜೀವ್ ಗಾಂಧಿ ಹೆಲ್ತ್ ಸೈನ್ಸಸ್ ಯೂನಿವರ್ಸಿಟಿಯಲ್ಲಿ ಬಿಎನ್ ವೈ ಎಸ್ ಮಾಡುತ್ತಾ ನಾಲ್ಕೂ ವರ್ಷಗಳೂ ಟಾಪರ್ ಆಗಿದ್ದು ಇವರ ಹೆಗ್ಗಳಿಕೆ. ಇದಕ್ಕಾಗಿ ಇವರಿಗೆ ಜಿಂದಾಲ್ ಗೋಲ್ಡ್ ಮೆಡಲ್ ಕೂಡ ನೀಡಲಾಯಿತು. ಚಿಕಿತ್ಸೆಯ ಜತೆಗೆ ಅತ್ಯುತ್ತಮ ಉಪನ್ಯಾಸಕಾರರೂ ಆಗಿರುವ ಇವರ ಮಾತುಗಳಿಂದ ಪ್ರಭಾವಿತರಾದವರು, ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಂಡವರು ಸಾವಿರಾರು ಮಂದಿ. ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತ ಇವರು ಬೇಡಿಕೆಯ ಮೇರೆಗೆ ಶಿಬಿರಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಅರವತ್ತೈದು ಸಾವಿರಕ್ಕೂ ಹೆಚ್ಚು ಮಂದಿಗೆ ಆರೋಗ್ಯ ಸೇವೆ ನೀಡಿದ ಹಿರಿಮೆ ಇವರದ್ದು. ಟೈಮ್ಸ್ ಹೆಲ್ತ್ ಎಕ್ಸೆಲೆನ್ಸ್ ಅವಾರ್ಡ್, ಟೈಮ್ಸ್ ಪವರ್ ಐಕಾನ್ ಸೇರಿದಂತೆ ಹತ್ತು ಹಲವು ಗೌರವಗಳಿಗೆ ಭಾಜನರಾಗಿರುವ ಡಾ.ವಿವೇಕ್ ಅವರದು ಪ್ರಶಸ್ತಿ ಮತ್ತು ಹೆಸರಿಗಿಂತ ಸೇವಾಕಾರ್ಯದಲ್ಲೇ ಹೆಚ್ಚು ತೃಪ್ತಿ ಕಾಣುತ್ತಿರುವ ಅಪರೂಪದ ವ್ಯಕ್ತಿತ್ವ.

YOGABANA 2

ಭಾರತದಲ್ಲಿ ಯೋಗ ಮತ್ತು ರಿಹ್ಯಾಬಿಟೇಷನ್‌ ವಿಷಯದಲ್ಲಿ MD ಪದವಿ ಪಡೆದವರಲ್ಲಿ ಡಾ. ಎ.ವಿವೇಕ ಉಡುಪ ಅವರು ಮೊದಲಿಗರು. ಡಿವೈನ್‌ ಪ್ರಾರ್ಕ್‌ ಪ್ರತಿಷ್ಠಾನದ ಆರೋಗ್ಯ ವಿಭಾಗವಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತದ್ದಾರೆ. ದೇಶ ವಿದೇಶಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕುರಿತು ತಿಳಿಸಲು ಉಚಿತ ಶಿಬಿರಗಳನ್ನು ಮಾಡಿದ್ದಾರೆ.

ಡಾ,ಚಂದ್ರಶೇಖರ ಉಡುಪರ ಎಪ್ಪತ್ತೈದು ವರ್ಷಗಳ ಸಾರ್ಥಕ ಜೀವನ

ಶ್ರೀ ಗುರೂಜಿ ಅನ್ನುವಂಥದ್ದು ಸ್ವಾಮಿ ವಿವೇಕಾನಂದರ ಜಾಗೃತ ಚೇತನ. ಅದನ್ನು ಡಿವೈನ್ ಪಾರ್ಕ್ ನಲ್ಲಿ ಬಹಳ ಗೌರವದಿಂದ ಶ್ರೀ ಗುರೂಜಿ ಎಂದು ಸಂಬೋಧಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವಲ್ಲಿ ಕಳೆದ ಸುಮಾರು ನಲವತ್ತೈದು ವರ್ಷಗಳಿಂದ ಡಿವೈನ್ ಪಾರ್ಕ್ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಎಪ್ಪತ್ತರ ದಶಕದಲ್ಲಿ ಡಾ. ಚಂದ್ರಶೇಖರ ಉಡುಪರು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ಅವರ ಜೀವನದ ಮೇಲೆ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾದವರು. ಅದರ ಫಲವೇ ಡಿವೈನ್ ಪಾರ್ಕ್ ಎಂಬ ಪರಿಕಲ್ಪನೆ. ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆಯಲ್ಲಿ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಒಳಿತು ಮಾಡುವ ನಿಟ್ಟಿನಿಂದ ಪ್ರಾರಂಭಿಸಿದ ಡಿವೈನ್ ಪಾರ್ಕ್ ಗೆ ಈಗ ಸುವರ್ಣ ಸಂಭ್ರಮ. ಅಂದರೆ ಐವತ್ತು ವರ್ಷಗಳು ತುಂಬುತ್ತಿದೆ. ಡಾ. ಚಂದ್ರಶೇಖರ ಉಡುಪ ಅವರು ಎಪ್ಪತ್ತೈದರ ತುಂಬುಸಾರ್ಥಕತೆಯ ಸಂತೃಪ್ತಿ ಕಾಣುತ್ತಿದ್ದಾರೆ. ತಾವು ನೆಟ್ಟ ಸಸಿಯೊಂದು ಬೃಹತ್ತಾಗಿ ಬೆಳೆದು ಟಿಸಿಲೊಡೆದು ಯೋಗಬನವೆಂಬ ಹೆಸರಿನ ಸಂಸ್ಥೆಯಾಗಿ ಅದನ್ನು ತಮ್ಮ ಹೆಮ್ಮೆಯ ಪುತ್ರ ಡಾ. ವಿವೇಕ್ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಕಂಡಿದ್ದಾರೆ.

ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಂಪೂರ್ಣ ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಿಕೊಂಡವರು ಚಂದ್ರಶೇಖರ ಉಡುಪ ಅವರು. ಇಲ್ಲಿಗೆ ಬರುವ ಜನರಿಗೆ ಸ್ಮಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವ ಮೂಲಕ ಚಿಕಿತ್ಸಕ ಮನಸಿನಿಂದ ಮಾತನಾಡಿಸುವ ಶ್ರೀಯುತರಿಗೆ ಜನರು ಗೌರವ ಮತ್ತು ಅಕ್ಕರೆಯಿಂದ ಡಾಕ್ಟರ್‌ಜೀ ಎಂದೇ ಕರೆಯುತ್ತಾರೆ. God is nowhere ಅಲ್ಲ god is now here ಎನ್ನುವ ಆಧ್ಯಾತ್ಮಿಕ ಚಿಂತನೆ ಹಂಚುತ್ತಾ ತಮ್ಮಲ್ಲಿಗೆ ಬರುವ ಪ್ರತಿ ಮನಸುಗಳಲ್ಲೂ ಶಕ್ತಿ ತುಂಬುವ ಪ್ರೇರಣಾದಾಯಕ ವ್ಯಕ್ತಿತ್ವ ಇವರದು. ಆಧ್ಯಾತ್ಮದ ಮೂಲಕ ಜನರ ಆರೋಗ್ಯವನ್ನು ಸುಧಾರಿಸಬಹುದು ಎನ್ನುವ ಚಿಂತನೆಯಿಂದ ಡಿವೈನ್‌ ಪಾರ್ಕ್‌ನ ಮುಂದುವರೆದ ಭಾಗವಾಗಿ ಎಸ್‌ಎಚ್‌ಆರ್‌ಎಫ್‌ (ಯೋಗಬನ) ಸ್ಥಾಪಿಸಿದರು. ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದ ಅವರ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಶ್ರೀಯುತರ ಕನಸಿನ ಕೂಸಾಗಿ ಇಂದಿಗೆ ಸಾಕಷ್ಟು ಜನರನ್ನು ತನ್ನತ್ತ ಸೆಳೆಯುತ್ತಿದೆ. ಸಂಸ್ಥೆಗೆ ಐವತ್ತು ತುಂಬುತ್ತಿರುವ ಸಂದರ್ಭದಲ್ಲಿ ಹಾಗೆಯೇ ಚಂದ್ರಶೇಖರ ಉಡುಪ ಅವರು ಅಮೃತಮಹೋತ್ಸವ ವರ್ಷದಲ್ಲಿರುವ ಸಮಯದಲ್ಲಿ ಯೋಗಬನ ಮತ್ತು ಡಿವೈನ್ ಪಾರ್ಕ್ ಗಳ ಹಿರಿಮೆ ತಿಳಿಸುವುದು ಸಕಾಲಿಕವೂ ಹೌದು ಅರ್ಥಪೂರ್ಣವೂ ಹೌದು.

YOGABANA 1

ಕುಟುಂಬವೇ ಆರೋಗ್ಯ ಕ್ಷೇತ್ರಕ್ಕೆ ಮುಡಿಪು

ಬಹಳ ಗಮನಾರ್ಹ ಸಂಗತಿ ಏನೆಂದರೆ ಡಾ.ವಿವೇಕ್ ಎ. ಉಡುಪ ಅವರ ಇಡೀ ಕುಟುಂಬವೇ ಆಯುರ್ವೇದ ಮತ್ತು ಅಧ್ಯಾತ್ಮದ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ನಿಂತಿರುವುದು. ಡಾ. ಚಂದ್ರಶೇಖರ ಉಡುಪ ಅವರ ಪುತ್ರನಾಗಿ ಡಾ.ವಿವೇಕ್ ಉಡುಪ ರವರು ಈ ಲೆಗೆಸಿಯನ್ನು ಹಿರಿದಾಗಿಸುತ್ತಾ ಹೊರಟಿರುವ ಸಂದರ್ಭದಲ್ಲಿ ವಿವೇಕ್ ಅವರ ಧರ್ಮಪತ್ನಿಯೂ ಈ ಕಾಯಕದಲ್ಲಿ ಕೈ ಜೋಡಿಸುತ್ತಾರೆ. ಹೌದು, ಶ್ರೀಮತಿ ಡಾ. ಮಾನಸಾ ಉಡುಪ ಕೂಡ ಯೋಗಬನದ ಪ್ರಮುಖ ಆಧಾರಸ್ತಂಭವೇ. ಯೋಗಬನದ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇರುವ ಶ್ರೀಮತಿ ಮಾನಸಾ ಉಡುಪ ಆಯುರ್ವೇದದಲ್ಲಿ ಎಂಡಿ ಪದವಿ ಪಡೆದವರು. ಅಪಾರ ಅನುಭವವನ್ನು ಕೂಡ ಹೊಂದಿದವರು. ಯೋಗಬನದಲ್ಲಿ ಆವರು ಆಯುರ್ವೇದ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ವಿವೇಕ್ ಅವರ ಎಲ್ಲ ಸಾಧನೆಗೆ, ಸಮಾಜಮುಖಿ ಕಾರ್ಯಗಳಿಗೆ ಸಹಧರ್ಮಿಣಿಯಾಗಿಯೂ, ಸಹೋದ್ಯೋಗಿಯಾಗಿಯೂ ಜತೆ ನಿಂತಿದ್ದಾರೆ.