ಹಿಂದಿನ ಕಾಲದವರು ಆರೋಗ್ಯವಾಗಿ ಬದುಕುವುದಕ್ಕೆ ಅವರ ಆಹಾರವೂ ಒಂದು ಕಾರಣ ಎಂಬುದು ನಾವು ಮರೆಯಬಾರದು. ಆದರೆ, ಈಗಿನ ಕಾಲಮಾನದಲ್ಲಿ ಒಳ್ಳೆಯ ಆಹಾರ ಸಿಗೋದಾದರೂ ಎಲ್ಲಿ ಹೇಳಿ? ಫಾಸ್ಟ್‌ ಫುಡ್‌, ಹೊಟೇಲ್‌ ಫುಡ್‌ ಎಂದುಕೊಂಡು ಈಗಾಗಲೇ ನಮ್ಮ ಆರೋಗ್ಯವನ್ನು ಹಾನಿ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ. ಅದನ್ನು ಸರಿಯಾದ ಮಾರ್ಗಕ್ಕೆ ತರುವುದು ಹೇಗೆ? ಊಟವನ್ನು ಔಷಧದಂತೆ ಮಾಡಬೇಕು. ಇಲ್ಲದಿದ್ದರೆ ಔಷಧಗಳೇ ಊಟವಾಗುತ್ತೆ ಎಂಬುದು ಹಿರಿಯರು ಆಗಾಗ ಹೇಳಿಕೊಂಡು ಬರುತ್ತಾರೆ. ಅದರ ಜತೆಗೆ ʼಅಕ್ಕಿಯನ್ನು ಉಂಬುವನು ಹಕ್ಕಿಯಂತಾಗುವನು, ಸಿಕ್ಕ ರೋಗದಲಿ ರೊಕ್ಕವನು ವೈದ್ಯನಿಗೆ ಇಕ್ಕುತಲಿರುವ ಸರ್ವಜ್ಞʼ ಎಂಬ ತ್ರಿಪದಿಯಂತೆ ಒಳ್ಳೆಯ ಆಹಾರ ಬೇಕೇ ಬೇಕು!

ಇದನ್ನೂ ಓದಿ: ʻರಸಧಾರೆʼ-ಫುಲ್ ನಾಟಿ.. ಬಲು ಟೇಸ್ಟಿ!

ಇಂದಿನ ಕಾಲಘಟ್ಟದಲ್ಲಿ ಮನುಷ್ಯನಿಗೆ ಬೇಕಾದ ಬೇಸಿಕ್‌ ಆಹಾರಗಳೂ ಕಲುಷಿತವಾಗಿವೆ. ಏನನ್ನು ತಿಂದರೂ ಒಂದು ರೋಗವನ್ನು ಮೈಮೇಲೆ ಎಳೆದುಕೊಂಡಂತೆ ಎಂಬಂತಾಗಿದೆ. ಇಂಥ ಕಾಲಘಟ್ಟದಲ್ಲಿ ಜನರು ಆರ್ಗ್ಯಾನಿಕ್‌ ಆಹಾರದ ಕಡೆಗೆ, ವೀಗನ್‌ ಪದ್ಧತಿಯನ್ನು ಅಳವಡಿಸಿಕೊಂಡರೂ, ಅದರಲ್ಲೂ ಅಥೆಂಟಿಕ್‌ ಎಂಬುದು ಸಿಗುವುದಿಲ್ಲ. ಆದರೂ ಕೆಲವೊಂದಿಷ್ಟು ಸಂಸ್ಥೆಗಳು ಜನರಿಗೆ ಒಳ್ಳೆಯ, ರುಚಿ-ಶುಚಿಯಾದ ಆರ್ಗ್ಯಾನಿಕ್‌ ಆಹಾರವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಅಂಥ ಆತಿಥ್ಯ ತಾಣಗಳಲ್ಲಿ ಗೋ ನೇಟಿವ್‌ ಸಹ ಒಂದು!

Untitled design (18)

ಪ್ರಪಂಚಕ್ಕೆ ಯಾವುದೆಲ್ಲ ಒಳ್ಳೆಯದು; ಅದು ನಿಮಗೂ ಒಳ್ಳೆಯದು (What’s good for the world, is good for you) ಎಂಬ ಧ್ಯೇಯ ವಾಕ್ಯದಡಿಯಲ್ಲಿ ಗೋ ನೇಟಿವ್‌ ಶುರುವಾಯಿತು. ಮೊದಲಿಗೆ, ಜಯನಗರದಲ್ಲಿ ಫಾರ್ಮ್‌ -ಟು-ಟೇಬಲ್‌ ಕೆಫೆ ಮತ್ತು ಸಸ್ಟೇನೆಬಿಲಿಟಿ ವಸ್ತುಗಳು ಸಿಗುವ ಅಂಗಡಿಯನ್ನು ಮಾಡಿದ್ದರು. ಅದರ ನಂತರ ಅತ್ಯಂತ ವೇಗವಾಗಿ, ಈ ಕೆಫೆ ಸದಾಶಿವ ನಗರ, ಎಚ್‌ಎಸ್‌ಆರ್‌, ಹೀಗೆ ಬೆಂಗಳೂರಿನ ಹಲವಾರು ಏರಿಯಾಗಳಿಗೆ ಹರಡಿಕೊಂಡಿತು. ಗೋ ನೇಟಿವ್‌ನ ಮತ್ತೊಂದು ಹಿರಿಮೆ ಎಂದರೆ, ಇವರು ಅಡುಗೆಗೆ ಬಳಸುವ ಎಲ್ಲ ಪದಾರ್ಥಗಳನ್ನು 500 ಕಿಮೀ ಅಂತರದಲ್ಲಿರುವಾ ಸಾವಯವ ರೈತರು ಮತ್ತು ಸಾವಯವ ಸೊಸೈಟಿಗಳಿಂದಲೇ ತರಿಸಿಕೊಳ್ಳುತ್ತಾರೆ. ಇಲ್ಲಿ ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಶೇ.80ರಷ್ಟು ತರಕಾರಿಗಳು ಮತ್ತು ಶೇ.90ರಷ್ಟು ಧಾನ್ಯಗಳೆಲ್ಲವೂ ಸರ್ಟಿಫೈಡ್‌ ಆರ್ಗ್ಯಾನಿಕ್‌ ಸಾಮಗ್ರಿಗಳೇ.

Untitled design (16)

ಇವರದ್ದು ಒಟ್ಟು 6 ಶಾಖೆಗಳಿವೆ. ಜಯನಗರ, ಲೆವೆಲ್ಲೆ ರೋಡ್‌, ವೈಟ್‌ಫೀಲ್ಡ್‌, ಸದಾಶಿವನಗರ, ಎಚ್ಎಸ್‌ಆರ್‌ ಲೇಔಟ್‌, ಚೆನ್ನೈ ಅಲ್ವಾರ್‌ ಪೇಟ್‌ ಈ ಎಲ್ಲ ಜಾಗಗಳಲ್ಲೂ ಗೋ ನೇಟಿವ್‌ನ ಹೊಟೇಲ್‌ಗಳಿವೆ. ಇವರ ಹೊಟೇಲ್‌ಗಳ ಆಂಬಿಯೆನ್ಸ್‌ ಒಂದಕ್ಕಿಂತ ಒಂದು ವಿಭಿನ್ನ. ಸಂಪೂರ್ಣ ದೇಶೀಯತೆ ಹಾಗೂ ಸಸ್ಟೇನೆಬಲ್‌ ಆಗಿ ರೂಪಿಸಿದ್ದಾರೆ. ಸ್ಟೀಲ್‌ ಪಾತ್ರೆಗಳನ್ನು ಬಳಸದೇ, ತಾಮ್ರ ಮತ್ತು ಕಟ್ಟಿಗೆಯಲ್ಲಿ ಅಡುಗೆ ಮಾಡುವುದು. ಅಂಥ ಪಾತ್ರೆಗಳಲ್ಲೇ ಸರ್ವ್‌ ಮಾಡುವುದು. ವೀಗನ್‌ ರೀತಿಯ ಅಡುಗೆ, ಪ್ರೋಟೀನ್‌ಯುಕ್ತ, ಗ್ಲುಟೆನ್‌ ಫ್ರೀ, ಮತ್ತು ಜೈನ್‌ ಫುಡ್‌ ಇವೆಲ್ಲ ಆರೋಗ್ಯಕ್ಕೆ ಒಳ್ಳೆಯದೇ ಅಲ್ವಾ? ಅದರ ಜತೆಗೆ ಹಾಲಿನಿಂದ ಮಾಡುವ ಎಲ್ಲ ಪದಾರ್ಥಗಳಿಗೂ ಅಕ್ಷಯಕಲ್ಪ ಆರ್ಗ್ಯಾನಿಕ್‌ ಹಾಲನ್ನೇ ಬಳಸುವುದು. ಒಂದು ಮಟ್ಟಕ್ಕೆ ಇದು, ಬರೀ ಹೆಸರಿನಿಂದಷ್ಟೇ ಆರ್ಗ್ಯಾನಿಕ್‌ ಅಲ್ಲ. ಇಲ್ಲಿನ ಪಾತ್ರೆಗಳಿಂದ ಹಿಡಿದು, ನೀರಿನವರೆಗೂ ಎಲ್ಲವೂ ಆರ್ಗ್ಯಾನಿಕ್‌.

ಅಡುಗೆಗೂ ತಾಜಾ ತರಕಾರಿಗಳನ್ನೇ ಬಳಸುತ್ತಾರೆ. ಸೀಸನ್‌ಗೆ ತಕ್ಕಂತೆ ಮೆನುವೂ ಬದಲಾಗುತ್ತದೆ. ಹಲಸಿನ ಹಣ್ಣಿನ ಸೀಸನ್‌ ಇದ್ದಾಗ ಜ್ಯಾಕ್‌ಫ್ರೂಟ್‌ ಬಿರ್ಯಾನಿ ಸಿಗುತ್ತದೆ. ಅದೇ ಸರ್ಸೋನ್‌ ಕಾ ಸಾಗ್‌ 6 ವಾರಗಳಿಗಷ್ಟೇ ಮೀಸಲಾಗಿದ್ದರೆ. ಮಾವಿನ ಥಾಲಿ 2 ತಿಂಗಳಿಗಷ್ಟೇ ಸಿಗುತ್ತದೆ. ಗುರ್‌ ರಸಗುಲ್ಲಾ 3 ತಿಂಗಳವರೆಗೆ ಮಾತ್ರ. ಕೆಮಿಕಲ್‌ನಿಂದ ಸಂಗ್ರಹಿಸಲಾದ ಪದಾರ್ಥಗಳನ್ನು ಇಲ್ಲಿ ಬಳಸದಿರುವ ಕಾರಣ, ಸೀಸನ್‌ನಲ್ಲೇ ಎಲ್ಲ.

Untitled design (19)

ಇಲ್ಲಿ ಬೂಸ್ಟರ್‌ ಜ್ಯೂಸ್‌ಗಳು, ಡ್ರಿಂಕಿಂಗ್‌ ಚಾಕೊಲೆಟ್‌ಗಳು, ಮಿಲ್ಕ್‌ಶೇಕ್‌ ಗಳು, ಸ್ಮೂಥೀಗಳು, ಸ್ಟೇಪಲ್‌ ಕಾಫಿ, ಕೋಲ್ಡ್‌ ಬ್ರಿವ್‌ ಮತ್ತು ಕೋಲ್ಡ್‌ ಕಾಫಿ ಗಳು, ದಾಸವಾಳ, , ಅರಿಶಿಣ ಹೀಗೆ ಹಲವಾರು ವಿಧದ ಚಹಾಗಳು, ಬೆವರೇಜ್‌ಗಳು, ಕೊಂಬುಚಾ, ಸಾಲಾಡ್‌ಗಳು, ಸೂಪ್‌ಗಳು, ಚಾಟ್ಸ್‌, ದೇಶದ ಅತ್ಯುತ್ತಮ ವಿನ್‌ಯಾರ್ಡ್‌ಗಳಿಂದ ತರಿಸಿದ ವೈನ್‌ಗಳು, ಕಾಕ್‌ಟೇಲ್‌ಗಳು, ಪಿಜ್ಜಾಗಳು, ಹಲವಾರು ವಿಧದ ಥಾಲಿಗಳು.. ಉಫ್‌, ಆರ್ಗ್ಯಾನಿಕ್‌ ಆಗಿ ಮಾಡಿರುವ ಆಹಾರವೆಂದರೆ, ಅಲ್ಲಿ ಕಡಿಮೆ ಚಾಯ್ಸ್‌ ಇರುತ್ತೆ; ಟೇಸ್ಟ್‌ ಇರಲ್ಲ ಹಾಗೇ ಹೀಗೆ ಅಂತ ಹೀಗಳೆಯುವವರು ಒಂದು ಸಲ ಗೋ ನೇಟಿವ್‌ಗೆ ಹೋಗಿ ಬರೀ ಮೆನುವನ್ನೇ ನೋಡಿ, ಏನ್‌ ಆರ್ಡರ್‌ ಮಾಡೋದು ಎಂಬ ಕನ್ಫ್ಯೂಷನ್‌ ಉಂಟಾಗದಿದ್ದರೆ ಹೇಳಿ.