ಮಂಗಳೂರಿನ ಆಹಾರದ ರುಚಿಗೆ ಮನಸೋಲದವರೇ ಇಲ್ಲ. ಅದರಲ್ಲೂ ನಾನ್‌ ವೆಜ್‌ ಪ್ರಿಯರು ನೀವಾದರೆ ಮಂಗಳೂರಿನಲ್ಲಿ ಲಭ್ಯವಾಗುವ ಬಹು ಬಗೆಯ ಫಿಶ್, ಚಿಕನ್‌, ಹಾಗೂ ಪ್ರಾನ್ಸ್ ಖಾದ್ಯಗಳ ರುಚಿಗೆ ಮಾರುಹೋಗಿರುತ್ತೀರಿ. ಮಂಗಳೂರಿನ ಫೇಮಸ್‌ ನಾನ್ ವೆಜ್‌ ಆಹಾರ ಬೆಂಗಳೂರಿನ ಯಾವೆಲ್ಲಾ ಭಾಗಗಳಲ್ಲಿ ಸಿಗುತ್ತವೆ ಎಂದು ಗೂಗಲ್‌ ಮಾಡುವ ಕೈಗಳಿಗೇನೂ ಕಡಿಮೆಯಿಲ್ಲ. ಅಂಥವರಿಗಾಗಿಯೇ ನಾರ್ತ್‌ ಬೆಂಗಳೂರಿನಲ್ಲಿ ಒಂದು ಒಳ್ಳೆಯ ಕೋಸ್ಟಲ್‌ ರೆಸ್ಟೋರೆಂಟ್‌ ತಲೆ ಎತ್ತಿದೆ.

ಇದನ್ನೂ ಓದಿ: ಅದ್ವಯ : ಹೆಸರಿನಂತೆಯೇ ನಂಬರ್ ಒನ್

ಹೊಟೇಲ್‌ ಒಳಗೆ ಬರುತ್ತಲೇ ಉಡುಪಿ, ಮಂಗಳೂರಿಗೆ ಬಂದಿರುವ ಅನುಭವ, ಪೀಠೋಪಕರಣಗಳು, ಗೋಡೆಯ ಮೇಲಿನ ಚಿತ್ತಾರ, ಕರಾವಳಿ ಭಾಗದಲ್ಲಿ ಅಡುಗೆ ಮನೆಗಳಲ್ಲಿ ಬಳಕೆಯಾಗುವ ವಸ್ತುಗಳು ಸೇರಿದಂತೆ ಒಟ್ಟಾರೆ ವಾತಾವರಣವೇ ಮನಸಿಗೆ ಹೊಸತನವನ್ನು ನೀಡುತ್ತದೆ. ಇಲ್ಲಿನ ಸಿಬ್ಬಂದಿಯ ಅದರಾತಿಥ್ಯ, ಉಡುಗೆ ತೊಡುಗೆಗಳನ್ನು ನೋಡಿದರಂತೂ ಉಡುಪಿ ಮಂಗಳೂರು ಭಾಗಕ್ಕೆ ಪ್ರವಾಸ ಬಂದ ಅನುಭವ ನೀಡುತ್ತದೆ.

Untitled design (61)

ಕರಾವಳಿಯ ಖಾದ್ಯಗಳ ರುಚಿಯನ್ನು ಬಲ್ಲಿರಾ..?

ವಿದ್ಯಾಭ್ಯಾಸ, ಉದ್ಯೋಗ, ಕುಟುಂಬದ ಜತೆಗೂ ಮಂಗಳೂರು ಬಿಟ್ಟು ಬೆಂಗಳೂರು ಸೇರಿರುವವರ ಸಂಖ್ಯೆ ಬಹುಪಾಲು. ಇವರ ಹೊರತಾಗಿಯೂ ಮಂಗಳೂರು ಆಹಾರದ ರುಚಿಗೆ ಮಾರು ಹೋದ ಅನ್ಯ ರಾಜ್ಯದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರಿಗಾಗಿಯೂ ಕರಾವಳಿಯ ಆಹಾರ ಪರಂಪರೆಯನ್ನು ಪರಿಚಯಿಸುವತ್ತ ಸಹಕಾರ ನಗರದಲ್ಲಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಮತ್ಸ್ಯ ರೆಸ್ಟೋರೆಂಟ್‌ ಗಮನಹರಿಸಿದೆ.

ಮರುವಾಯಿ ಸುಕ್ಕ ರುಚಿಗೆ ಮನಸೋಲುವಿರಿ

ನಾನ್‌ ವೆಜ್‌ ಪ್ರಿಯರಿಗೆ ಮಂಗಳೂರಿನಲ್ಲಿ ಹೆಚ್ಚು ಆಯ್ಕೆಯಿರುವುದು ಫಿಶ್‌, ಕ್ರಾಬ್‌ ಹಾಗೂ ಚಿಕನ್‌ ಖಾದ್ಯಗಳಲ್ಲಿ. ನೀರ್‌ ದೋಸೆ, ಕಡುಬಿಗೆ ಕಾಂಬಿನೇಷನ್‌ ಎಂಬಂತೆ ತಯಾರಿಸುವ ಫಿಶ್‌ ಕರಿ, ಪ್ರಾನ್ಸ್‌ ಘೀ ರೋಸ್ಟ್‌, ಚಿಕನ್‌ ಸುಕ್ಕಾಗೆ ಇಲ್ಲಿ ಬಲು ಬೇಡಿಕೆಯಿದೆ. ಅಲ್ಲದೆ ಕಾಣೆ ಫಿಶ್‌ ತವಾ ಫ್ರೈ, ಏಡಿ ಕಾಯಿ ಪೆಪ್ಪರ್‌ ಫ್ರೈ, ಮರವಾಯಿ ಸುಕ್ಕಾ, ಚಿಕನ್‌ ಘೀ ರೋಸ್ಟ್‌ ಹೀಗೆ ಒಂದಕ್ಕಿಂತ ಒಂದು ರುಚಿಕರ ಖಾದ್ಯಗಳು ನಿಮಗಿಲ್ಲಿ ಲಭ್ಯವಿದೆ.

ಮೀಲ್ಸ್‌ ನಲ್ಲೂ ವೆಜ್‌ ಮೀಲ್ಸ್‌, ಚಿಕನ್‌ ಮೀಲ್ಸ್‌, ಫಿಶ್‌ ಮೀಲ್ಸ್‌ ಎಂಬಂತೆ ನಿಮ್ಮಷ್ಟದ ಕಾಂಬಿನೇಷನ್‌ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಫಿಶ್‌ ಥಾಲಿಯನ್ನು ಆರ್ಡರ್‌ ಮಾಡಿದರಂತೂ ಫಿಶ್‌ ಕರಿ, ಫಿಶ್‌ ಫ್ರೈ, ನೀರ್‌ ದೋಸೆ, ಕುಸಲಕ್ಕಿ ಅನ್ನ, ಕಡುಬು ಹೀಗೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿ ಸವಿಯಬಹುದು. ಏಂಜಲ್‌ ಪುಲಿಮುಂಚಿ ಹಾಗೂ ಬಾಂಗ್ಡಾ ಪುಳಿಮುಂಚವಂತೂ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಊಟದ ಕೊನೆಯಲ್ಲಿ ಮಂಗಳೂರಿನ ಪ್ರಮುಖ ಸಿಹಿ ತಿನಿಸುಗಳಾದ ಎಳನೀರ್‌ ಪಾಯಸಂ, ಸಿಹಿ ಕಡುಬು, ತಾಜ್‌ ಹಲ್ವಾ ಹಾಗೂ ಮ್ಯಾಂಗೋ ಮಲಾಯ್‌ ರುಚಿ ನೋಡಲು ಮರೆಯಲೇಬೇಡಿ.

ಒಟ್ಟಿನಲ್ಲಿ ಬಿಡುವಿಲ್ಲದ ಜೀವನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಅಲ್ಲಿನ ಆಹಾರ ರುಚಿ ನೋಡುವುದಕ್ಕೆ ಸಮಯ ಸಿಗುವುದೇ ಇಲ್ಲ ಎನ್ನುವವರಿಗಾಗಿಯೇ ಮತ್ಸ್ಯ ರೆಸ್ಟೋರೆಂಟ್‌ ತರಹೇವಾರಿ ಆಯ್ಕೆಗಳೊಂದಿಗೆ ನಿಮ್ಮ ಮುಂದೆ ಬಂದಿದೆ. ನೇರ ರೆಸ್ಟೋರೆಂಟ್‌ ಅನುಭವ ಪಡೆಯುವುದು ಕಷ್ಟವೆನ್ನುವವರಿಗಾಗಿ ಸ್ವಿಗ್ಗಿ ಸೇರಿದಂತೆ ಆನ್‌ ಲೈನ್‌ ಫುಡ್‌ ಡೆಲಿವರಿಗೂ ಅವಕಾಶವಿದ್ದರೂ, ಒಮ್ಮೆಯಾದರೂ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟು ಮಂಗಳೂರು ಆಂಬಿಯನ್ಸ್‌ನಲ್ಲೇ ರುಚಿಕರ ಆಹಾರ ಸೇವಿಸಿ ಬನ್ನಿ.

Untitled design (63)

ಗುಂಡಿನ ಮತ್ತೇ ಗಮ್ಮತ್ತು

ಊಟಕ್ಕೂ ಮುನ್ನವೇ ಡ್ರಿಂಕ್ಸ್‌ ಇರದಿದ್ದರೆ ಹೇಗೆ ಎನ್ನುವವರಿಗಾಗಿ ಇಲ್ಲಿ ಪ್ರತ್ಯೇಕ ಬಾರ್‌ ವ್ಯವಸ್ಥೆಯಿದೆ. ಅಲ್ಲದೆ ಕಾಕ್‌ಟೇಲ್‌ ಇಲ್ಲವೇ ಮಾಕ್‌ಟೇಲ್‌ ಬೇಕೆಂದರೂ ಬಗೆ ಬಗೆಯ ಆಯ್ಕೆಗಳಿವೆ.

ಬಹು ಬಗೆಯ ಬಿರಿಯಾನಿ

ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ವೆಜ್‌ ಬಿರಿಯಾನಿ, ಪ್ರಾನ್‌ ಘೀ ರೋಸ್ಟ್‌ ಬಿರಿಯಾನಿ ಹೀಗೆ ಬಿರಿಯಾನಿಗಳ ಹಬ್ಬವೇ ನಿಮಗಾಗಿ ಕಾದಿರುತ್ತದೆ.

ವಿಳಾಸ:

ಮತ್ಸ್ಯ, 14ನೇ ಇ ಎಕ್ಸ್‌ಟೆನ್ಶನ್, # 31 32, 33, 92, 2ನೇ ಅಡ್ಡರಸ್ತೆ, ಸಹಕಾರ ನಗರ, ಬೆಂಗಳೂರು, ಕರ್ನಾಟಕ 560092

ದೂರವಾಣಿ: 099000 13444