ಆಮೆಗುಂಡಿ ರೆಸಾರ್ಟ್
ಬೆಂಗಳೂರು ಸುತ್ತಮುತ್ತಲಿನ ಪರಿಸರದಲ್ಲಿ ಈಗಂತೂ ರೆಸಾರ್ಟ್‌ಗಳದ್ದೇ ದರ್ಬಾರು. ಒಂದಕ್ಕಿಂತ ಒಂದು ವಿಶೇಷ ಸೌಲಭ್ಯವನ್ನು ನೀಡುವ ಮೂಲಕ ಅತಿಥಿಗಳನ್ನು ಆಕರ್ಷಿಸುತ್ತಿರುವ ರೆಸಾರ್ಟ್‌ಗಳು ಹಲವಿದ್ದರೂ, ಹಸಿರಿನ ಸುಂದರ ಲೋಕದ ನಡುವೆ ನೆಮ್ಮದಿಯಿಂದ ಒಂದೆರಡು ದಿನ ಕಳೆಯಲು ಬಯಸುವವರು ಆಮೆಗುಂಡಿ ರೆಸಾರ್ಟನ್ನು ಮಿಸ್ ಮಾಡಿಕೊಳ್ಳಬೇಡಿ.
ಬೆಂಗಳೂರು ನಗರದ ದಿನನಿತ್ಯದ ಒತ್ತಡ, ವಾಹನಗಳ ಗದ್ದಲ ಮತ್ತು ಕೆಲಸದ ಜಂಜಾಟದಿಂದ ಸ್ವಲ್ಪ ವಿರಾಮ ಪಡೆದು, ಹಸುರಿನ ವಾತಾವರಣದಲ್ಲಿ ಒಂದೆರಡು ದಿನಗಳ ಹಾಯಾಗಿರಬೇಕು..ಆದರೆ ಬೆಂಗಳೂರು ಬಿಟ್ಟು ದೂರ ಹೋಗುವುದಂತೂ ಕಷ್ಟವಾಗುತ್ತದೆ ಎನ್ನುವವರು ಅನೇಕ ಮಂದಿ. ಅರೆರೆ! ಬೆಂಗಳೂರಿನಲ್ಲಿ ಹಸಿರಿನ ನಡುವೆ ವಾಸ್ತವ್ಯ ತಾಣಗಳನ್ನು ಹುಡುಕುವುದೆಲ್ಲಿಂದ ಎಂದು ಪ್ರಶ್ನಿಸಬೇಡಿ. ಯಾಕೆಂದರೆ ಕನಕಪುರ ರಸ್ತೆಯ ಸಮೀಪದಲ್ಲಿರುವ ಆಮೆಗುಂಡಿ ರೆಸಾರ್ಟ್ ನಿಮ್ಮ ಎಲ್ಲ ಬೇಡಿಕೆಗಳಿಗೆ ಹೊಂದುವಂಥ ವಸತಿ ಸೌಲಭ್ಯದೊಂದಿಗೆ ಅತಿಥಿಗಳನ್ನು ಸ್ವಾಗತಿಸುತ್ತಿದೆ.
ಇದನ್ನೂ ಓದಿ: ಕೋಕೋನೆಸ್ಟ್ - ಇದು ಚಿಪ್ ರೆಸಾರ್ಟ್
ಹಸಿರು ಪರಿಸರ, ಅರ್ಕಾವತಿ ನದಿಯ ಸಮೀಪದ ವಾತಾವರಣ, ಸಾಹಸಮಯ ಚಟುವಟಿಕೆಗಳು ಮತ್ತು ಆರಾಮದಾಯಕ ವಸತಿ ಸೌಲಭ್ಯಗಳನ್ನು ಒಟ್ಟಿಗೆ ಒದಗಿಸುವ ಈ ರೆಸಾರ್ಟ್, ಕುಟುಂಬ, ಸ್ನೇಹಿತರು ಹಾಗೂ ಕಾರ್ಪೊರೇಟ್ ತಂಡಗಳ ಪ್ರವಾಸಕ್ಕೆ ಸೂಕ್ತ ತಾಣವಾಗಿದೆ.
ಪ್ರಕೃತಿಯೊಂದಿಗೆ ಬೆರೆಯುವ ಅನುಭವ
ಕನಕಪುರದ ಕೆರಳಾಳುಸಂದ್ರ ಪ್ರದೇಶದಲ್ಲಿರುವ ಆಮೆಗುಂಡಿ ರೆಸಾರ್ಟ್ ಬೆಂಗಳೂರಿನ ಕೇಂದ್ರ ಭಾಗದಿಂದ ಸುಮಾರು 55–60 ಕಿಮೀ. ದೂರದಲ್ಲಿದೆ. ರಸ್ತೆ ಮಾರ್ಗವಾಗಿ ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾದ ಈ ತಾಣ, ವಾರಾಂತ್ಯದ ಪ್ರವಾಸಕ್ಕೆ ಅನುಕೂಲಕರವಾಗಿದೆ. ನಗರದ ಗದ್ದಲದಿಂದ ದೂರವಾಗಿ ಹಸಿರು ಪರಿಸರದಲ್ಲಿ ಸಮಯ ಕಳೆಯಲು ಬಯಸುವವರಿಗೆ ಇಲ್ಲಿನ ವಾತಾವರಣ ಮೆಚ್ಚುಗೆಯಾಗುವುದು ಖಚಿತ.
ಅರ್ಕಾವತಿ ನದಿಯ ಸಮೀಪದಲ್ಲಿರುವ ಈ ರೆಸಾರ್ಟ್‌ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ವಿಶ್ರಾಂತಿ ಪಡೆಯಬಹುದು. ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಹೊರಾಂಗಣದಲ್ಲಿ ಕಾಲ ಕಳೆಯುವುದು, ಹಸಿರು ಪರಿಸರದಲ್ಲಿ ಫೊಟೋಗಳನ್ನು ತೆಗೆದುಕೊಳ್ಳುವುದು ಹಾಗೂ ದಿನನಿತ್ಯದ ಒತ್ತಡವನ್ನು ಮರೆತು ನೆಮ್ಮದಿಯ ಕ್ಷಣಗಳನ್ನು ಅನುಭವಿಸುವುದು ಇಲ್ಲಿನ ಪ್ರವಾಸ ಹಾಗೂ ವಾಸ್ತವ್ಯದ ವಿಶೇಷತೆಗಳಾಗಿವೆ.

ಸಾಹಸ ಚಟುವಟಿಕೆಗಳ ಲೋಕ
ಆಮೆಗುಂಡಿ ರೆಸಾರ್ಟ್‌ನ ಪ್ರಮುಖ ಆಕರ್ಷಣೆಗಳಲ್ಲಿ ಸಾಹಸ ಚಟುವಟಿಕೆಗಳ ಬಗ್ಗೆ ತಿಳಿಯಳೇ ಬೇಕು. ಸಾಹಸಪ್ರಿಯರು ತಮ್ಮ ಧೈರ್ಯ ಮತ್ತು ಕೌಶಲವನ್ನು ಪರೀಕ್ಷಿಸಿಕೊಳ್ಳಲು ಇಲ್ಲಿ ಹಲವು ಅವಕಾಶಗಳಿವೆ. ಸ್ಲ್ಯಾಕ್‌ಲೈನ್, ಬರ್ಮಾ ಬ್ರಿಡ್ಜ್, ಬಿದಿರಿನ ನಡಿಗೆ, ಜಿ಼ಗ್‌ಜಾ಼ಗ್ ವಾಕ್ ಮತ್ತು ಬರ್ಮಾ ಲೂಪ್‌ನಂಥ ರೋಪ್ ಚಟುವಟಿಕೆಗಳು ಪ್ರವಾಸಕ್ಕೆ ಹೊಸ ಅನುಭವವನ್ನು ನೀಡುತ್ತವೆ.
ಇವುಗಳ ಜತೆಗೆ ಜಿ಼ಪ್‌ಲೈನ್, ಆರ್ಚರಿ, ಟಾರ್ಗೆಟ್ ಶೂಟಿಂಗ್, ವಾಟರ್ ಝೋರ್ಬಿಂಗ್, ಸ್ಕೈ ಸೈಕ್ಲಿಂಗ್ ಮತ್ತು 360 ಡಿಗ್ರಿ ಸೈಕ್ಲಿಂಗ್‌ನಂಥ ಚಟುವಟಿಕೆಗಳೂ ಲಭ್ಯವಿವೆ. ಕೆಲವು ಚಟುವಟಿಕೆಗಳಿಗೆ ಹೆಚ್ಚುವರಿ ಶುಲ್ಕ ಅನ್ವಯಿಸಬಹುದು. ಆದ್ದರಿಂದ ಬುಕಿಂಗ್ ಮಾಡುವಾಗ ಪ್ಯಾಕೇಜ್‌ನಲ್ಲಿ ಯಾವ ಚಟುವಟಿಕೆಗಳು ಸೇರಿವೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.
ಮಕ್ಕಳಿಗಾಗಿ ಪ್ರತ್ಯೇಕ ಕಿಡ್ಸ್ ಏರಿಯಾ ಇಲ್ಲಿದ್ದು, ಕುಟುಂಬದ ಸದಸ್ಯರು ತಮ್ಮ ಆಸಕ್ತಿಗೆ ತಕ್ಕಂತೆ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು. ಔಡ್‌ಡೋರ್ ಗೇಮ್ಸ್ ಪ್ರಿಯರಿಗಾಗಿಯೇ ಈಜುಕೊಳವಿದ್ದು, ಇನ್‌ಡೋರ್ ಗೇಮ್ಸ್ ಆಯ್ಕೆಗಳನ್ನು ನೋಡಿದರೆ ಬೆರಗಾಗುವುದು ಪಕ್ಕಾ!
ಆರಾಮದಾಯಕ ವಸತಿ
ಪ್ರವಾಸದ ಅನುಭವವನ್ನು ಮತ್ತಷ್ಟು ವಿಶೇಷವಾಗಿಸುವುದು ವಸತಿ ಸೌಲಭ್ಯಗಳು. ಆಮೆಗುಂಡಿಯಲ್ಲಿ ಹವಾನಿಯಂತ್ರಿತ ಕೊಠಡಿಗಳು, ಕಾಟೇಜ್‌ಗಳು, ಇಕೋ ಕಾಟೇಜ್‌ಗಳು, ಕ್ಯಾಂಪಿಂಗ್ ಟೆಂಟ್‌ಗಳು ಮತ್ತು ಐಷಾರಾಮಿ ವಿಲ್ಲಾದಂಥ ವಸತಿ ಆಯ್ಕೆಗಳಿವೆ. ಪ್ರವಾಸಿಗರ ಸಂಖ್ಯೆ, ಬಜೆಟ್ ಮತ್ತು ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ವಸತಿಯನ್ನು ಆಯ್ಕೆ ಮಾಡಬಹುದು.
ಈಜುಕೊಳದಲ್ಲಿ ಸಮಯ ಕಳೆಯುವುದು, ಟೇಬಲ್ ಟೆನಿಸ್, ಕ್ಯಾರಂ, ಚೆಸ್ ಮತ್ತು ಮಿನಿ ಗಾಲ್ಫ್‌ನಂಥ ಒಳಾಂಗಣ ಆಟಗಳಲ್ಲಿ ಭಾಗವಹಿಸುವುದು, ವಾಲಿಬಾಲ್, ಕ್ರಿಕೆಟ್, ಫುಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ನಂಥ ಹೊರಾಂಗಣ ಆಟಗಳನ್ನು ಆಡುವುದು ಪ್ರವಾಸಿಗರಿಗೆ ಮನರಂಜನೆ ಒದಗಿಸುತ್ತದೆ. ಕೆಲವು ಪ್ಯಾಕೇಜ್‌ಗಳಲ್ಲಿ ಮಿಸ್ಟ್ ಡ್ಯಾನ್ಸ್, ಡಿಜೆ ಕಾರ್ಯಕ್ರಮ ಮತ್ತು ಕ್ಯಾಂಪ್‌ಫೈರ್ ಸೌಲಭ್ಯಗಳೂ ಲಭ್ಯವಿರುತ್ತವೆ. ಹವಾಮಾನ ಹಾಗೂ ಪ್ಯಾಕೇಜ್‌ನ ನಿಯಮಗಳಿಗೆ ಅನುಗುಣವಾಗಿ ಕೆಲವು ಚಟುವಟಿಕೆಗಳು ಬದಲಾಗಬಹುದು.

ರುಚಿಯಾದ ಖಾದ್ಯಗಳನ್ನು ಮಿಸ್ ಮಾಡಬೇಡಿ
ಪ್ರವಾಸದಲ್ಲಿ ಆಹಾರಕ್ಕೂ ವಿಶೇಷ ಸ್ಥಾನವಿದೆ. ಆಮೆಗುಂಡಿ ರೆಸಾರ್ಟ್‌ನ ವಸತಿ ಮತ್ತು ಡೇಔಟ್ ಪ್ಯಾಕೇಜ್‌ಗಳಲ್ಲಿ ಆಯ್ಕೆಗೆ ಅನುಗುಣವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ-ತಿಂಡಿ ಮತ್ತು ರಾತ್ರಿ ಊಟದ ವ್ಯವಸ್ಥೆಯಿದೆ. ಪ್ರಕೃತಿಯ ನಡುವೆ ದಿನವಿಡೀ ಚಟುವಟಿಕೆಗಳಲ್ಲಿ ಪಾಲ್ಗೊಂಡ ಬಳಿಕ ಒಟ್ಟಿಗೆ ಕುಳಿತು ಊಟ ಮಾಡುವ ಅನುಭವ ಪ್ರವಾಸದ ಸಂಭ್ರಮವನ್ನು ಹೆಚ್ಚಿಸುತ್ತದೆ.
ಕಚೇರಿ ಸಹೋದ್ಯೋಗಿಗಳೊಂದಿಗೆ ತಂಡದ ಪ್ರವಾಸ, ಸಂಸ್ಥೆಗಳ ಟೀಮ್ ಬಿಲ್ಡಿಂಗ್ ಕಾರ್ಯಕ್ರಮಗಳು, ಶಾಲಾ ಪ್ರವಾಸಗಳು ಹಾಗೂ ಸ್ನೇಹಿತರ ಜತೆಗಿನ ಪ್ರವಾಸಗಳಿಗೂ ಈ ರೆಸಾರ್ಟ್ ಸೂಕ್ತವಾಗಿದೆ. ಸಭೆ ಮತ್ತು ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನೂ ರೆಸಾರ್ಟ್ ಒದಗಿಸುತ್ತದೆ. ಬರ್ತ್‌ಡೇ ಪಾರ್ಟಿ, ಡೆಸ್ಟಿನೇಷನ್ ವೆಡ್ಡಿಂಗ್ ತಾಣಗಳಿಗಾಗಿ ನೀವು ಹುಡುಕಾಡುತ್ತಿದ್ದರೆ ಆಮೆಗುಂಡಿ ರೆಸಾರ್ಟ್‌ಗೆ ಭೇಟಿ ಕೊಡಲು ಮರೆಯಬೇಡಿ.
ವಾರಾಂತ್ಯದ ಪ್ರವಾಸಕ್ಕೆ ಉತ್ತಮ ಆಯ್ಕೆ
ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಆಮೆಗುಂಡಿ ರೆಸಾರ್ಟ್‌ನಲ್ಲಿ ಒಂದು ದಿನದ ಪ್ರವಾಸವನ್ನೂ ಪ್ಲ್ಯಾನ್ ಮಾಡಿಕೊಳ್ಳಬಹುದು, ಇಲ್ಲವೇ ರಾತ್ರಿ ವಾಸ್ತವ್ಯದೊಂದಿಗೆ ಎರಡು ದಿನಗಳ ವಿರಾಮವನ್ನೂ ಆನಂದಿಸಬಹುದು. ಕನಕಪುರದ ಸುತ್ತಮುತ್ತಲಿನ ಪ್ರಕೃತಿ ತಾಣಗಳನ್ನು ನೋಡಲು ಬಯಸುವವರಾದರೆ ನಡುವೆ ವಾಸ್ತವ್ಯದ ತಾಣವನ್ನಾಗಿಯೂ ಆಯ್ಕೆ ಮಾಡಿಕೊಳ್ಳಬಹುದು.
ಒಟ್ಟಿನಲ್ಲಿ ಹಸಿರೇ ಮರೆಯಾಗುತ್ತಿರುವ ಬೆಂಗಳೂರಿನ ಆಸುಪಾಸಿನಲ್ಲಿಯೇ ಹಸಿರಿನ ಲೋಕದ ನಡುವೆ ವಾಸ್ತವ್ಯ ಹೂಡಿ, ಸಾಹಸದ ಜತೆಗೆ ಮನರಂಜನೆಯನ್ನೂ ಪಡೆಯಲು ಆಮೆಗುಂಡಿ ರೆಸಾರ್ಟ್ ದಿ ಬೆಸ್ಟ್ ಆಯ್ಕೆ.
ವಿಳಾಸ:
ಆಮೆಗುಂಡಿ ರೆಸಾರ್ಟ್, 117/3, ಕೆರಳಾಳುಸಂದ್ರ, ಕನಕಪುರ, ಬೆಂಗಳೂರು, ಕರ್ನಾಟಕ – 562117