Tuesday, October 28, 2025
Tuesday, October 28, 2025

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೖತ್ತಿಯನ್ನು ಆಸ್ವಾದಿಸಿ, ನಿಮ್ಮೊಳಗಿನ ಆನಂದವನ್ನು ಕಂಡುಕೊಳ್ಳಲು ಎವರ್ ಗ್ರೀನ್ ಕೌಂಟಿಗೆ ಭೇಟಿ ಕೊಡಿ. ಇದು ಕೇವಲ ಪ್ರವಾಸಿ ಆಶ್ರಯ ತಾಣ ಮಾತ್ರವೇ ಅಲ್ಲ, ನಿಮ್ಮ ಸುಂದರ ನೆನಪುಗಳ ತಾಣವೂ ಹೌದು....

ಎವರ್ ಗ್ರೀನ್ ಕೌಂಟಿ...ಹೆಸರೇ ಹೇಳುವಂತೆ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಸುಂದರ ತಾಣವಿರುವಿರುವುದು ದಕ್ಷಿಣದ ಕಾಶ್ಮೀರ ಹೆಗ್ಗಳಿಕೆಯ ಕೊಡಗು ಜಿಲ್ಲೆಯಲ್ಲಿ...

ಇದು ಭಾರತದ ಮೊದಲ ಪ್ರಕೃತಿ ಆಧಾರಿತ ಸಾಹಸ ತಾಣ ಎಂಬ ಖ್ಯಾತಿಯನ್ನೂ ಹೊಂದಿದೆ. ಮನಸ್ಸಿಗೆ ಹಾಯ್ ಎನಿಸುವ ಸುಂದರ ಪರಿಸರದ ಮಧ್ಯೆಯಿರುವ ಎವರ್ ಗ್ರೀನ್ ಕೌಂಟಿ, ಸಾಹಸಿಗಳಿಗೆ ಹೇಗೆ ಇಷ್ಯವಾಗಬಲ್ಲದೋ ಧ್ಯಾನಾಸಕ್ತ ಪರಿಸರ ಪ್ರೇಮಿಗಳನ್ನೂ ಕೈಬೀಸಿ ಕರೆಯುವಂತಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಬಳಿಯಿರುವ ಎವರ್ ಗ್ರೀನ್ ಕೌಂಟಿ, ಹಸಿರು ಕಾನನದ ನಡುವಿದ್ದು, ಪ್ರಾಕೖತ್ತಿಕ ಸೌಂದರ್ಯವನ್ನು ತನ್ನ ಸುತ್ತಲಲ್ಲಿ ಹೊಂದಿದೆ. ಎವರ್ ಗ್ರೀನ್ ಕೌಂಟಿಯು ವೈವಿಧ್ಯಮಯ ಸಾಹಸ ಕ್ರೀಡೆಗಳನ್ನು ತನ್ನ ಅತಿಥಿಗಳಿಗಾಗಿ ಹೊಂದಿದೆ. ನಿಸರ್ಗದ ನಡುವೆ ಹಲವಾರು ಮನಸೆಳೆಯುವ ಮನರಂಜನಾತ್ಮಕ ಕ್ರೀಡೆಗಳು, ಪ್ರಕೖತ್ತಿ ಸಂರಕ್ಷಣೆಯ ಮಹತ್ವ ತಿಳಿಸುವ ಕಾರ್ಯಕ್ರಮಗಳು ಎವರ್ ಗ್ರೀನ್ ಕೌಂಟಿಯ ವಿಶೇಷತೆ.

ever green county new

ಎವರ್ ಗ್ರೀನ್ ಕೌಂಟಿಗೆ ಭೇಟಿ ನೀಡುವ ಪ್ರವಾಸಿ ಅತಿಥಿಗಳು ಸನಿಹದ ಗಿರಿಶ್ರೇಣಿಯಲ್ಲಿ ಚಾರಣಕ್ಕೆ ತೆರಳಬಹುದು. ಜಿಪ್ ಲೈನ್ ಕೂಡ ಮಾಡಬಹುದು. ಸಾಹಸ ಪರೀಕ್ಷೆಗೂ ಇಲ್ಲಿ ಅನೇಕ ಅವಕಾಶ ನೀಡುವ ಕ್ರೀಡೆಗಳಿದೆ. ಮಡ್ ಗೇಮ್, ಸವಾಲಿನ ಕ್ರೀಡಾಕಾರ್ಯಕ್ರಮಗಳು ಕೂಡ ಎವರ್ ಗ್ರೀನ್ ಕೌಂಟಿಯ ವಿಶೇಷತೆಗಳಲ್ಲೊಂದಾಗಿದೆ.

ಎವರ್ ಗ್ರೀನ್ ಕೌಂಟಿ ಹೇಗೆ ಭಿನ್ನ?

ಖಂಡಿತಾ ಬೇರೆ ರೆಸಾರ್ಟ್ ಗಳಂತೆ ನಮ್ಮ ತಾಣ ಅಲ್ಲವೇ ಅಲ್ಲ. ನಮ್ಮದು ಜನಮೆಚ್ಚುವಂಥ ಸರಳತೆ, ನಮ್ಮದೇ ಸಂಸ್ಕೖತಿಯ ಅಂಶಗಳನ್ನೊಳಗೊಂಡ, ನಮ್ಮದೇ ಸಾಹಸ ಕ್ರೀಡೆಗಳನ್ನು ಪ್ರೋತ್ಸಾಹಿಸುವ ರಿಟ್ರೀಟ್ ಆಗಿದೆ. ನಮ್ಮ ರೆಟ್ರೀಟ್ ನ ಹೊರಾಂಗಣವೇ ಪ್ರವಾಸಿಗರ ಕ್ರೀಡಾಂಗಣವಾಗಿದ್ದರೆ ರೆಟ್ರೀಟ್ ನ ಒಳಾಂಗಣ ಪ್ರವಾಸಿಗನ ನೆಮ್ಮದಿಯ ತಾಣವಾಗಿದೆ ಎನ್ನುತ್ತಾರೆ ಎವರ್ ಗ್ರೀನ್ ಕೌಂಟಿಯ ಮಾಲೀಕ ಭಜನ್ ಬೋಪಣ್ಣ.

ಲಕ್ಸುರಿಗಿಂತ ಅತಿಥಿಯ ನೆಮ್ಮದಿ, ಪ್ರಶಾಂತತೆಗೆ ಆದ್ಯತೆ

ಬೆಳಗ್ಗೆ ಕೊಡಗಿನ ಸವಿ ಕಾಫಿಯೊಂದಿಗೆ ದಿನ ಪ್ರಾರಂಭಿಸಬಹುದಾದ ಪ್ರವಾಸಿ, ಯೋಗ, ಧ್ಯಾನ ಶಿಬಿರದಲ್ಲಿ ನೀಲಿಬಾನಿನಡಿಯಲ್ಲಿ ಪ್ರಶಾಂತ ವಾತಾವರಣವನ್ನು ಸೂರ್ಯೋದಯದ ಹೊತ್ತಿನಲ್ಲಿ ಕಂಡುಕೊಳ್ಳಬಹುದು. ಹಕ್ಕಿಗಳ ಇಂಚರ ಈ ಸಂದರ್ಭ ಹಿನ್ನೆಲೆ ಸಂಗೀತದಂತೆ ಕಂಗೊಳಿಸುವ ವಿಶೇಷತೆಯೂ ಎವರ್ ಗ್ರೀನ್ ಕೌಂಟಿಯಲ್ಲಿದೆ. ದೇಹ, ಮನಸ್ಸು ಮತ್ತು ಪ್ರಕೖತಿಯ ಸಮಚಿತ್ತತೆಯ ಸಮತೋಲನಕ್ಕೆ ಎವರ್ ಗ್ರೀನ್ ಕೌಂಟಿ ತನ್ನ ವಿಶೇಷ ಕಾರ್ಯಕ್ರಮಗಳ ಮೂಲಕ ಕಾರಣವಾಗುತ್ತದೆ. ಗಮನಿಸಬೇಕಿರುವ ಅಂಶವೆಂದರೆ ಬೇರೆ ರೆಸಾರ್ಟ್ ನಲ್ಲಿ ಸಿಗುವಂತೆ ಇಲ್ಲಿ ಮದ್ಯಪಾನ, ನಾನ್ ವೆಜ್ ಸಿಗುವುದಿಲ್ಲ. ಪ್ರಕೃತಿ ಮಧ್ಯೆ ಮಾಂಸಹಾರ ಸೇವನೆ ಹೇಗೆ ಸಾಧ್ಯ? ಹೀಗಾಗಿ ಇದು ಶುದ್ಧ ಸಸ್ಯಾಹಾರಿ ಮತ್ತು ನಾನ್ ಆಲ್ಕೋ ಹಾಲಿಕ್ ರಿಟ್ರೀಟ್..

ever green 3

ಕಾರ್ಪೊರೇಟ್ ಕಂಪನಿಗಳ ಪ್ರವಾಸಿಗರಿಗೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿ ಪ್ರವಾಸಿಗರಿಗೆ, ಕುಟುಂಬ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರ ಪ್ರವಾಸಕ್ಕೆ ಎವರ್ ಗ್ರೀನ್ ಕೌಂಟಿ ಕೊಡಗಿನಲ್ಲಿ ಹೇಳಿ ಮಾಡಿಸಿದ ತಾಣ. ಯಾಕೆಂದರೆ, ಒಮ್ಮ ಎವರ್ ಗ್ರೀನ್ ಕೌಂಟಿ ಪ್ರವೇಶಿಸಿದರೆ ಇಲ್ಲಿಯೇ ಸಾಹಸ ಕ್ರೀಡೆ, ಪ್ರಕೖತ್ತಿ ಸೌಂದರ್ಯ, ಸ್ವಾದಿಷ್ಟ ತಿನಿಸು ಎಲ್ಲವೂ ಒಟ್ಟಿಗೇ ಲಭಿಸಿದಂತಾಗುತ್ತದೆ. ಸಮೂಹ ಸಂಸ್ಥೆಗಳ ಸದಸ್ಯರಿಗೆ ಗ್ರೂಪ್ ಸ್ಪೋಟ್ಸ್ ನ್ನು ಕೂಡ ಇಲ್ಲಿ ಆನಂದದಾಯಕ ರೀತಿಯಲ್ಲಿ ಆಯೋಜಿಸಲಾಗುತ್ತದೆ. ಸಂಜೆ ಸಾಂಸ್ಕೖತಿಕ ಕಾರ್ಯಕ್ರಮಗಳನ್ನೂ ಕೂಡ ಅವಶ್ಯವಿದ್ದರೆ ಆಯೋಜಿಸಲಾಗುತ್ತದೆ.

ಸ್ಥಳೀಯ ಸಂಸ್ಕೃತಿ ಸಂರಕ್ಷಣೆಯ ಬದ್ದತೆಯೊಂದಿಗೆ, ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಎವರ್ ಗ್ರೀನ್ ಕೌಂಟಿ ಹೆಸರಾಗಿದೆ.

ಎವರ್ ಗ್ರೀನ್ ಕೌಂಟಿ - ಪ್ರಕೖತ್ತಿಯನ್ನು ಆಸ್ವಾದಿಸಿ... ನಿಮ್ಮೊಳಗಿನ ಆನಂದವನ್ನು ಕಂಡುಕೊಳ್ಳಿ. ಎವರ್ ಗ್ರೀನ್ ಕೌಂಟಿ - ಕೇವಲ ಪ್ರವಾಸಿ ಆಶ್ರಯ ತಾಣ ಮಾತ್ರವೇ ಅಲ್ಲ... ಇದು ನಿಮ್ಮ ಸುಂದರ ನೆನಪುಗಳ ತಾಣವೂ ಹೌದು.

ಸಂಪಕ೯ ಸಂಖ್ಯೆ - 9880940198 / 9742368143

ವೆಬ್ ಸೈಟ್ - www.evergreencounty.com

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..