ಮಣಿಪುರದಲ್ಲಿ ʼಫ್ಯಾಷನ್ ಟೂರಿಸಂ 2026ʼ
ಪ್ರಸಿದ್ಧ ಫ್ಯಾಷನ್ ವಿನ್ಯಾಸಕ ರಾಬರ್ಟ್ ನೋರೆಮ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಲೋಕ್ಟಾಕ್ ಸರೋವರದ ಸಮೀಪದ ಮೈರಾಂಗ್‌ನ ಲೋಕ್ಟಾಕ್ ಡೆವಲಪ್‌ಮೆಂಟ್ ಅಥಾರಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು 40 ಪುರುಷ ಮಾಡಲ್‌ಗಳು(ರೂಪದರ್ಶಿಗಳು) ಪಾಲ್ಗೊಂಡಿದ್ದು, ಮಣಿಪುರದ ಪಾರಂಪರಿಕ ಹ್ಯಾಂಡ್ಲೂಮ್ ಉಡುಪುಗಳನ್ನು ಪ್ರದರ್ಶಿಸಿದರು.
ಮಣಿಪುರದ ಸಮೃದ್ಧ ಹ್ಯಾಂಡ್ಲೂಮ್ ಮತ್ತು ಟೆಕ್ಸ್‌ಟೈಲ್ ಪರಂಪರೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ ‘ಫ್ಯಾಷನ್ ಟೂರಿಸಂ 2026’ ಎಂಬ ವಿಶೇಷ ಕಾರ್ಯಕ್ರಮವನ್ನು ಮಣಿಪುರದಲ್ಲಿ ಆಯೋಜಿಸಲಾಯಿತು.
ಪ್ರಸಿದ್ಧ ಫ್ಯಾಷನ್ ವಿನ್ಯಾಸಕ ರಾಬರ್ಟ್ ನೋರೆಮ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಲೋಕ್ಟಾಕ್ ಸರೋವರದ ಸಮೀಪದ ಮೈರಾಂಗ್‌ನ ಲೋಕ್ಟಾಕ್ ಡೆವಲಪ್‌ಮೆಂಟ್ ಅಥಾರಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು 40 ರೂಪದರ್ಶಿಗಳು ಪಾಲ್ಗೊಂಡಿದ್ದು, ಮಣಿಪುರದ ಪಾರಂಪರಿಕ ಹ್ಯಾಂಡ್ಲೂಮ್ ಉಡುಪುಗಳನ್ನು ಪ್ರದರ್ಶಿಸಿದರು.

ಮಣಿಪುರದ ಹ್ಯಾಂಡ್ಲೂಮ್ ಮತ್ತು ಟೆಕ್ಸ್‌ಟೈಲ್ ಪರಂಪರೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದರ ಜತೆಗೆ, ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿದ ರಾಬರ್ಟ್ ನೋರೆಮ್, ಸ್ಥಳೀಯ ನೇಕಾರರು ಮತ್ತು ಕೈಗಾರಿಕಾಗಾರರಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು. ಜತೆಗೆ ಯುವಜನರನ್ನು ಫ್ಯಾಷನ್ ಕ್ಷೇತ್ರದತ್ತ ಆಕರ್ಷಿಸುವುದೂ ಇದರ ಪ್ರಮುಖ ಗುರಿ ಎಂದು ಅವರು ಹೇಳಿದರು.
‘ಫ್ಯಾಷನ್ ಟೂರಿಸಂ 2026’ ಕಾರ್ಯಕ್ರಮವು ಮಣಿಪುರದ ಸಾಂಸ್ಕೃತಿಕ ಪರಂಪರೆಯನ್ನು ಆಧುನಿಕ ದೃಷ್ಟಿಕೋನದಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿದ್ದು, ರಾಜ್ಯದ ಪ್ರವಾಸೋದ್ಯಮ ಮತ್ತು ಸೃಜನಾತ್ಮಕ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.