Wednesday, February 4, 2026
Wednesday, February 4, 2026

ಪೂಂಪುಹಾರ್ ಪ್ರವಾಸಿ ಕೇಂದ್ರಕ್ಕೆ ಹೊಸ ರೂಪ!

1973ರಲ್ಲಿ ಸ್ಥಾಪಿತಗೊಂಡ ಈ ಪ್ರವಾಸಿ ಕಾಂಪ್ಲೆಕ್ಸ್‌ ‘ಶಿಲಪ್ಪತಿಕಾರಂ’ ಕಲಾ ಗ್ಯಾಲರಿ, ಇಳಂಜಿ ಮಂದಿರಂ, ಪಾವೈ ಮಂದಿರಂ, ನೇಡುಂಗಲ್ ಮಂದಿರಂ ಸೇರಿದಂತೆ ಹಲವು ಪ್ರಮುಖ ಸಾಂಸ್ಕೃತಿಕ ಸೌಕರ್ಯಗಳನ್ನು ಒಳಗೊಂಡಿದೆ. ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಕಾಂಪ್ಲೆಕ್ಸ್‌ ಅನ್ನು ತಮಿಳುನಾಡು ಸರಕಾರವು ಸಮಗ್ರವಾಗಿ ನವೀಕರಿಸಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡಿನ ಮಯಿಲಾಡುತ್ತುರೈ ಜಿಲ್ಲೆಯ ಪೂಂಪುಹಾರ್‌ನಲ್ಲಿ ನವೀಕರಿಸಲಾದ ಪ್ರವಾಸಿ ಕಾಂಪ್ಲೆಕ್ಸ್‌ ಅನ್ನು ಸೋಮವಾರ ವಿಡಿಯೋ ಸಂವಾದದ ಮೂಲಕ ಉದ್ಘಾಟಿಸಿದರು.

1973ರಲ್ಲಿ ಸ್ಥಾಪಿತಗೊಂಡ ಈ ಪ್ರವಾಸಿ ಕಾಂಪ್ಲೆಕ್ಸ್‌ ‘ಶಿಲಪ್ಪತಿಕಾರಂ’ ಕಲಾ ಗ್ಯಾಲರಿ, ಇಳಂಜಿ ಮಂದಿರಂ, ಪಾವೈ ಮಂದಿರಂ, ನೇಡುಂಗಲ್ ಮಂದಿರಂ ಸೇರಿದಂತೆ ಹಲವು ಪ್ರಮುಖ ಸಾಂಸ್ಕೃತಿಕ ಸೌಕರ್ಯಗಳನ್ನು ಒಳಗೊಂಡಿದೆ. ಕಳೆದ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಕಾಂಪ್ಲೆಕ್ಸ್‌ ಅನ್ನು ತಮಿಳುನಾಡು ಸರಕಾರವು ಸಮಗ್ರವಾಗಿ ನವೀಕರಿಸಿದೆ.

ಸುಮಾರು 23.6 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾದ ನವೀಕರಣ ಕಾಮಗಾರಿಯಲ್ಲಿ ಪ್ರವೇಶ ದ್ವಾರ, ವಾಹನ ನಿಲುಗಡೆ ವ್ಯವಸ್ಥೆ, ಮಾಹಿತಿ ಕೇಂದ್ರ, ಪ್ರವಾಸಿಗರ ವಿಶ್ರಾಂತಿ ಸೌಲಭ್ಯಗಳು, ವಿದ್ಯುತ್ ವ್ಯವಸ್ಥೆ, ಶೌಚಾಲಯಗಳು ಹಾಗೂ ಮೂಲಸೌಕರ್ಯಗಳ ಸುಧಾರಣೆ ಮಾಡಲಾಗಿದೆ.

ಈ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಸ್ಥಳೀಯ ಆರ್ಥಿಕತೆಗೆ ಸಹ ಉತ್ತೇಜನ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಸ್ಟಾಲಿನ್ ಅವರು ತಿರುಕ್ಕಡೈಯೂರಿನ ಹೊಟೇಲ್ ತಮಿಳುನಾಡು ನವೀಕರಣ ಯೋಜನೆ ಹಾಗೂ ತಾರಂಗಂಬಾಡಿಯ ಡ್ಯಾನಿಷ್ ಕೋಟೆ ಸಮೀಪದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನೂ ಉದ್ಘಾಟಿಸಿದರು.

ಪೂಂಪುಹಾರ್‌ನಂಥ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!