ಬೆಂಗಳೂರು ದಕ್ಷಿಣ ಪ್ರದೇಶ ಆಹಾರ ಪ್ರಿಯರ ನೆಚ್ಚಿನ ತಾಣ. ಇಲ್ಲಿ ಸಸ್ಯಾಹಾರಿಗಳಿಗಷ್ಟೇ ಅಲ್ಲದೆ, ಮಾಂಸಾಹಾರವನ್ನು ಇಷ್ಟಪಡುವವರಿಗೂ ಲೆಕ್ಕವಿಲ್ಲದಷ್ಟು ಆಯ್ಕೆಗಳಿವೆ. ಅದರಲ್ಲೂ ಚಾಮರಾಜಪೇಟೆ-ಬಸವನಗುಡಿ ಭಾಗಗಳಲ್ಲಂತೂ ವರ್ಷಗಳ ಹಳೆಯ ಹೊಟೇಲ್‌ಗಳು ಇಂದಿಗೂ ಇದ್ದು ಅದೇ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಇಂಥ ಆಹಾರ ತಾಣದಲ್ಲಿ ಹೊಸ ತಲೆಮಾರಿಗೆ ಹೊಂದುವಂಥ ಹೊಟೇಲ್‌ ಹುಟ್ಟುಹಾಕಿ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು ಸಾಮಾನ್ಯ ವಿಚಾರವಲ್ಲ. ಆದರೆ ಅಂಥ ಸಾಹಸದಲ್ಲಿ ಯಶಸ್ಸು ಕಂಡಿರುವುದು ಓಟಿಪಿ ರೆಸ್ಟೋರೆಂಟ್. ಕೇಳುವುದಕ್ಕೆ ಹುಬ್ಬೇರಿಸುವಂಥ ಹೆಸರಾದರೂ ಓಟಿಪಿ ಅಂದರೆ ʻಓವನ್ ತವಾ ಪ್ಯಾನ್‌ʼ ಸಸ್ಯಾಹಾರಿಗಳಿಗೆ ವಿಭಿನ್ನ ಆಹಾರಗಳ ರುಚಿ ಸವಿಯಲು ಉತ್ತಮ ಆಯ್ಕೆಯಾಗಿದೆ. ಭಾರತೀಯ ಖಾದ್ಯಗಳಿಂದ ಹಿಡಿದು ಚೈನೀಸ್‌, ಇಟಾಲಿಯನ್‌ ಹಾಗೂ ತಾಂಡೂರಿ ತಿನಿಸುಗಳವರೆಗೆ ಹಲವು ಬಗೆಯ ಆಹಾರಗಳನ್ನು ಒಂದೇ ಸೂರಿನಡಿ ಪರಿಚಯಿಸುವುದು ಈ ರೆಸ್ಟೋರೆಂಟ್‌ನ ವಿಶೇಷತೆ.

ಇದನ್ನೂ ಓದಿ: ಥಾಯ್ ರೆಸ್ಟೋರೆಂಟ್‌ನಲ್ಲಿ ಜಿಪ್ ಲೈನ್ ಫುಡ್‌ ಸರ್ವಿಸ್…!

ಆಹಾರಗಳ ಸಂಗಮ

ಓಟಿಪಿಯ ಮೆನು ವಿವಿಧ ಆಹಾರ ಸಂಸ್ಕೃತಿಗಳ ರುಚಿಗಳನ್ನು ಒಳಗೊಂಡಿದೆ. ಉತ್ತರ ಭಾರತೀಯ ಖಾದ್ಯಗಳನ್ನು ಇಷ್ಟಪಡುವವರಿಗೆ ಪನೀರ್‌ ಟಿಕ್ಕಾ ಮಸಾಲಾ, ಶಾಹಿ ಪನೀರ್‌, ವೆಜ್‌ ಕಡಾಯಿ ಸೇರಿದಂತೆ ಹಲವು ಆಯ್ಕೆಗಳಿವೆ. ರೋಟಿ, ಫುಲ್ಕಾ ಮತ್ತು ವಿವಿಧ ಬಗೆಯ ಭಾರತೀಯ ಬ್ರೆಡ್‌ಗಳೊಂದಿಗೆ ಈ ಖಾದ್ಯಗಳನ್ನು ಸವಿಯಬಹುದು.

ತವಾ ಪುಲಾವ್‌, ವೆಜ್‌ ಬಿರಿಯಾನಿ, ಪನೀರ್‌ ತವಾ ಪುಲಾವ್‌ ಹಾಗೂ ರೈಸ್‌ ಖಾದ್ಯಗಳು ಅನ್ನಪ್ರಿಯರಿಗೆ ಇಷ್ಟವಾಗುವ ಆಯ್ಕೆಗಳಾಗಿವೆ. ಊಟಕ್ಕೆ ರುಚಿಕರವಾದ ಆರಂಭ ನೀಡಲು ಮಂಚೂರಿಯನ್‌, ಚಿಲ್ಲಿ ಪೊಟಾಟೋ, ವಿವಿಧ ಪನೀರ್‌ ಸ್ಟಾರ್ಟರ್‌ಗಳು ಮತ್ತು ತಾಂಡೂರಿ ಖಾದ್ಯಗಳನ್ನೂ ಮೆನುವಿನಲ್ಲಿ ಕಾಣಬಹುದು.

ಇಟಾಲಿಯನ್‌ ಆಹಾರವನ್ನು ಇಷ್ಟಪಡುವವರಿಗೆ ಆಲ್ಫ್ರೆಡೊ ಪಾಸ್ತಾ, ಪಿಜ್ಜಾ ಮತ್ತು ಇತರ ಖಾದ್ಯಗಳಿವೆ. ಚೈನೀಸ್‌ ಆಹಾರದಿಂದ ಭಾರತೀಯ ಸಾಂಪ್ರದಾಯಿಕ ರುಚಿಗಳವರೆಗೆ ಆಯ್ಕೆಗಳಿರುವುದರಿಂದ ವಿಭಿನ್ನ ಆಹಾರಾಭಿರುಚಿ ಹೊಂದಿರುವವರು ಒಟ್ಟಿಗೆ ಬಂದಾಗಲೂ ತಮ್ಮ ಇಷ್ಟದ ಖಾದ್ಯವನ್ನು ಆರಿಸಿಕೊಳ್ಳಬಹುದು.

Untitled Design - 2026-11-03T142416.359

ಎಲ್ಲರಿಗೂ ಹೊಂದುವ ಆಹಾರ ಅನುಭವ

ಒಟಿಪಿಯ ಮತ್ತೊಂದು ವಿಶೇಷವೆಂದರೆ ಜೈನ್‌ ಶೈಲಿಯ ಆಹಾರವನ್ನು ಬಯಸುವವರಿಗೂ ಇಲ್ಲಿ ಅನೇಕ ಆಯ್ಕೆಗಳಿರುವುದು. ಬೆಳ್ಳುಳ್ಳಿ, ನೀರುಳ್ಳಿಯಂಥ ವಸ್ತುಗಳನ್ನು ಬಳಸದೆಯೂ ರುಚಿಕರ ಆಹಾರವನ್ನು ಉಣಬಡಿಸುವ ಇಲ್ಲಿನ ಶೆಫ್‌ಗಳ ಕೈರುಚಿಗೆ ಮನಸೋಲುವಿರಿ. ಅಲ್ಲದೆ, ಎಲ್ಲೂ ಸಿಗದಿರುವ ಸಿಹಿತಿನಿಸುಗಳು, ಬ್ರ್ಯಾಂಡ್‌ ಸೃಷ್ಟಿಸಿರುವ ಪಾನೀಯಗಳ ರುಚಿ ನೋಡದಿದ್ದರೆ ಓಟಿಪಿ ವಿಸಿಟ್‌ ಪರಿಪೂರ್ಣವಾಗದು.

ಆಹಾರದ ಜತೆಗೆ ಅನುಭವ

ಯಾವುದೇ ಹೊಟೇಲ್‌ಗೆ ಹೋದರೂ ಗ್ರಾಹಕರು ಆಹಾರದ ಜತೆಗೆ ಹೊಟೇಲ್‌ನ ವಾತಾವರಣ,ಶುಚಿತ್ವದ ಕಡೆಗೂ ಗಮನಹರಿಸುತ್ತಾರೆ. ಲೈಂಟಿಂಗ್‌ ಸೇರಿದಂತೆ ಅಲಂಕಾರಿ ವಸ್ತುಗಳ ಜೋಡಣೆಗೂ ಅದರದೇ ಆದ ಪ್ರಾಮುಖ್ಯತೆಯಿರುತ್ತದೆ. ಓಟಿಪಿಗೆ ಭೇಟಿ ನೀಡಿದವರು ಇಲ್ಲಿನ ಆಂಬಿಯನ್ಸ್‌ಗೆ ಫುಲ್‌ ಮಾರ್ಕ್ಸ್‌ ಕೊಡದಿರಲು ಸಾಧ್ಯವೇ ಇಲ್ಲ. ಗ್ರಾಹಕರನ್ನು ಅತಿಥಿಗಳಂತೆ ಕಂಡು, ಉತ್ತಮ ಸೇವೆ ಒದಗಿಸುವ ಇಲ್ಲಿನ ಸಿಬ್ಬಂದಿ ಈ ರೆಸ್ಟೋರೆಂಟ್‌ನ ಪ್ರಮುಖ ಆಕರ್ಷಣೆ.

ಉಂಡು ಹೋಗುವ ಜತೆಗೆ ಕೊಂಡು ಹೋಗುವಿರಿ

ಓಟಿಪಿಯಲ್ಲಿ ಕುಳಿತು ಊಟ ಮಾಡುವುದರ ಜತೆಗೆ ಮನೆಗೆ ಕೊಂಡೊಯ್ಯುವ ವ್ಯವಸ್ಥೆಯೂ ಲಭ್ಯವಿದೆ. ಆನ್‌ಲೈನ್‌ ಮೂಲಕ ಮೆನು ವೀಕ್ಷಿಸಿ ಆಹಾರವನ್ನು ಆರ್ಡರ್‌ ಮಾಡುವ ಅವಕಾಶವೂ ಇದೆ. ಸರಳ ವಾತಾವರಣದಲ್ಲಿ ವಿವಿಧ ಬಗೆಯ ಸಸ್ಯಾಹಾರಿ ಖಾದ್ಯಗಳನ್ನು ಸವಿಯಲು ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಲಿದೆ.

ಒಟ್ಟಿನಲ್ಲಿ ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ವಿವಿಧ ರಾಜ್ಯಗಳ ಮತ್ತು ದೇಶಗಳ ಖಾದ್ಯಗಳು ಒಂದೇ ಮೆನುವಿನಲ್ಲಿ ಕಾಣಿಸಿಕೊಳ್ಳುವುದು ವಿಶೇಷ. ಭಾರತೀಯ ಊಟದ ಸೊಗಡಿನಿಂದ ಹಿಡಿದು ಪಾಸ್ತಾ, ಪಿಜ್ಜಾ ಹಾಗೂ ತಾಂಡೂರಿ ಖಾದ್ಯಗಳವರೆಗೆ ರುಚಿಯಲ್ಲಿ ಹೊಸ ಆಯ್ಕೆಗಳನ್ನು ಬಯಸುವವರು ನೀವಾದರೆ ತಪ್ಪದೆಯೇ ಓಟಿಪಿಗೆ ಭೇಟಿ ನೀಡಬಹುದು.

ವಿಳಾಸ: 49, 5ನೇ ಮುಖ್ಯ ರಸ್ತೆ, ಶಂಕರಪುರಂ, ಬಸವನಗುಡಿ, ಬೆಂಗಳೂರು – 560004.

ಸಂಪರ್ಕ: 80503 59369