ಥಾಯ್ ರೆಸ್ಟೋರೆಂಟ್‌ನಲ್ಲಿ ಜಿಪ್ ಲೈನ್ ಫುಡ್ ಸರ್ವಿಸ್…!
ಆಹಾರ ಪ್ರಿಯರ ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳೊಂದಿಗೆ ಬೆಸೆದುಕೊಂಡು ಆತಿಥ್ಯಕ್ಷೇತ್ರ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡಿದೆ. ಅಂಥ ಬದಲಾವಣೆಗೆ ಸಾಕ್ಷಿಯೆಂಬಂತೆ ವಿಶೇಷ ರೆಸ್ಟೋರೆಂಟ್ ಒಂದು ಇಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.
ಆತಿಥ್ಯ ಕ್ಷೇತ್ರ, ಆಹಾರ ಉದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಲೇ ಇದೆ. ದಿನಕ್ಕೊಂದರಂತೆ ಹುಟ್ಟಿಕೊಳುತ್ತಿರುವ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳ ನಡುವೆ ಪೈಪೋಟಿ ನಿರ್ಮಾಣವಾಗಿದ್ದು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ರುಚಿಕರ ಆಹಾರವನ್ನು ಒದಗಿಸುವುದರ ಜತೆಗೆ ವಿಶೇಷ ವಿನ್ಯಾಸಗಳು, ಹೊಚ್ಚ ಹೊಸ ಯೋಜನೆ, ಪರಿಕಲ್ಪನೆಯೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಇಂಥ ಗಿಮಿಕ್ ಗಳಿಗೆ ಮಾರು ಹೋಗುವ ಗ್ರಾಹಕರು ಟೇಸ್ಟೀ ಫುಡ್ ಜತೆಗೆ ಕಣ್ಮನ ಸೆಳೆಯುವ ವಾತಾವರಣವೂ ಇದ್ದರೆ ಚೆನ್ನ ಎನ್ನುತ್ತಾರೆ.
ಆಹಾರ ಪ್ರಿಯರ ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳೊಂದಿಗೆ ಬೆಸೆದುಕೊಂಡು ಆತಿಥ್ಯಕ್ಷೇತ್ರ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡಿದೆ. ಅಂಥ ಬದಲಾವಣೆಗೆ ಸಾಕ್ಷಿಯೆಂಬಂತೆ ವಿಶೇಷ ರೆಸ್ಟೋರೆಂಟ್ ಒಂದು ಇಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನಲ್ಲಿ ವರ್ಷಗಳ ಹಿಂದೆಯೇ ತಲೆ ಎತ್ತಿದ್ದ ʼದಿ ರಾಯಲ್ ಡ್ರ್ಯಾಗನ್ʼ ಒಂದು ಕಾಲಕ್ಕೆ ವಿಶ್ವದ ಅತಿದೊಡ್ಡ ರೆಸ್ಟೋರೆಂಟ್ ಎಂಬ ಗಿನ್ನಿಸ್ ದಾಖಲೆಯನ್ನು ಬರೆದಿತ್ತು. ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದಿದ್ದು, ಇತರರಿಗಿಂತ ಭಿನ್ನವೆನಿಸಿಕೊಂಡಿತ್ತು ಸಾಮಾನ್ಯ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಆಹಾರಗಳನ್ನು ಟೇಬಲ್ ಗಳಿಗೆ ತಲುಪಿಸಲು ರೆಸ್ಟೋರೆಂಟ್ ಸಿಬ್ಬಂದಿ ನೇರವಾಗಿ ಬರುವುದು ರೂಢಿ. ಆದರೆ ಈ ರೆಸ್ಟೋರೆಂಟ್ ನಲ್ಲಿ ಹಾಗಲ್ಲ..ಎಲ್ಲದಕ್ಕೂ ತಂತ್ರಜ್ಞಾನವನ್ನೇ ಬಳಕೆ ಮಾಡಲಾಗುತ್ತದೆ. ಹಾಂಗಂತ ರೋಬೋಟ್ ಸೇವೆಯನ್ನು ಪಡೆದುಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ಇದು ಅದಕ್ಕಿಂತಲೂ ವಿಭಿನ್ನ.
ರೆಸ್ಟೋರೆಂಟ್ ನಲ್ಲಿದೆ ಜಿಪ್‌ಲೈನ್ ಸೇವೆ
ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದೊಂದಿಗೆ, ʼದಿ ರಾಯಲ್ ಡ್ರ್ಯಾಗನ್ʼ ರೆಸ್ಟೋರೆಂಟ್ ಜಿಪ್‌ಲೈನ್ ಸೇವೆಯನ್ನು ಒದಗಿಸುತ್ತಿತ್ತು. ಅಂದರೆ ಅತಿ ವೇಗವಾಗಿ ಟೇಬಲ್ ಗಳಿಗೆ ಆಹಾರವನ್ನು ತಲುಪಿಸಲು ರೆಸ್ಟೋರೆಂಟ್ ನ ಸಿಬ್ಬಂದಿ ಜಿಪ್ ಲೈನ್ ಬಳಕೆ ಮಾಡುವ ರೂಢಿಯಿತ್ತು. ಅದರಲ್ಲೂ ಥಾಯ್ ಸಾಂಪ್ರದಾಯಿಕ ಕೆಂಪು ಉಡುಗೆಯನ್ನು ಧರಿಸಿ, ಕೈಯಲ್ಲಿ ಟ್ರೇ ಇರಿಸಿಕೊಂಡು ಜಿಪ್ ಲೈನ್ ನಲ್ಲಿ ಟೇಬಲ್ ಬಳಿ ತೆರಳುವ ಸಿಬ್ಬಂದಿಯ ಚಾಕಚಕ್ಯತೆಗೆ ಎಲ್ಲರೂ ಬೆರಗಾಗಿದ್ದಾರೆ. ಈ ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆದರೆ ಅನೇಕ ಕಾರಣಗಳಿಂದಾಗಿ 2022ರ ವೇಳೆಗೆ ಈ ರೆಸ್ಟೋರೆಂಟ್ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಅದೇನೇ ಆದರೂ, ರೆಸ್ಟೋರೆಂಟ್ ಒಂದು ಆಹಾರ ಸೇವೆಯನ್ನು ನೀಡುವಲ್ಲಿ ಜಿಪ್‌ಲೈನ್ ಬಳಕೆ ಮಾಡುವ ಮೂಲಕ ಆಹಾರ ವಿತರಣೆಯನ್ನು ಸಾಹಸವನ್ನಾಗಿ ಪರಿವರ್ತಿಸಿರುವುದು ಆಹಾರ ಪ್ರಿಯರಲ್ಲೂ ಸಂತಸ ಮೂಡಿಸಿತ್ತು. ಇಂಥ ವಿಭಿನ್ನ ಪ್ರಯತ್ನಗಳು ನಮ್ಮ ದೇಶದಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಹುಟ್ಟುಹಾಕಿರುವುದಂತೂ ಸುಳ್ಳಲ್ಲ.