ವಿಶ್ವ ಸಂತೋಷ ವರದಿ ಪ್ರಕಟ :ಎಷ್ಟನೆಯ ಸ್ಥಾನದಲ್ಲಿದೆ ಭಾರತ?
ಪಶ್ಚಿಮ ಏಷ್ಯಾ ಯುದ್ಧದಲ್ಲಿ ಮುಳುಗಿರುವ ಈ ಸಮಯದಲ್ಲೇ ವಿಶ್ವ ಸಂತೋಷ ವರದಿ -2026 ಬಿಡುಗಡೆಯಾಗಿದೆ. ಯುರೋಪ್‌ನ ರಾಷ್ಟ್ರಗಳೇ ಅಗ್ರ ಪಂಥಿಯಲ್ಲಿರುವುದನ್ನು ಈ ವರದಿ ಸ್ಪಷ್ಟಪಡಿಸಿದೆ. ಮೊದಲನೆಯ ಸ್ಥಾನದಲ್ಲಿ ಯಾವ ರಾಷ್ಟ್ರವಿದೆ. ಭಾರತ ಯಾವ ಸ್ಥಾನದಲ್ಲಿದೆ ಎಂಬ ಕುರಿತು ಮಾಹಿತಿ ಹೀಗಿದೆ.
ಪಶ್ಚಿಮ ಏಷ್ಯಾ ಯುದ್ಧದಲ್ಲಿ ಮುಳುಗಿರುವ ಈ ಸಮಯದಲ್ಲೇ ವಿಶ್ವ ಸಂತೋಷ ವರದಿ -2026 ಬಿಡುಗಡೆಯಾಗಿದೆ. ಯುರೋಪ್‌ನ ರಾಷ್ಟ್ರಗಳೇ ಅಗ್ರ ಪಂಥಿಯಲ್ಲಿರುವುದನ್ನು ಈ ವರದಿ ಸ್ಪಷ್ಟಪಡಿಸಿದೆ. ಮೊದಲನೆಯ ಸ್ಥಾನದಲ್ಲಿ ಯಾವ ರಾಷ್ಟ್ರವಿದೆ. ಭಾರತ ಯಾವ ಸ್ಥಾನದಲ್ಲಿದೆ ಎಂಬ ಕುರಿತು ಮಾಹಿತಿ ಹೀಗಿದೆ.
ಸತತ ಒಂಬತ್ತನೆಯ ಬಾರಿಯೂ ಫಿನ್‌ಲ್ಯಾಂಡ್ ಪ್ರಥಮ ಸ್ಥಾನ
ವಿಶ್ವ ಸಂತೋಷ ವರದಿಯ ಪ್ರಕಾರ ಸತತ ಒಂಬತ್ತನೆಯ ವರ್ಷವೂ ಫಿನ್‌ಲ್ಯಾಂಡ್ ಮೊದಲನೆಯ ಸ್ಥಾನವನ್ನು ಭದ್ರವಾಗಿಸಿಕೊಂಡಿದೆ. ಸ್ಥಿರತೆ, ಜನ-ಜೀವನ, ಜೀವನ ಮೌಲ್ಯಗಳು, ಸಾಮಾಜಿಕ ಸಮಾನತೆ ಮತ್ತಿತರ ಮೌಲ್ಯಗಳಿಂದ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರವಾಗಿ ಮತ್ತೊಮ್ಮೆ ಗುರುತಿಸಿಕೊಂಡಿದೆ.
ಟಾಪ್‌ಟೆನ್ ಸ್ಥಾನದಲ್ಲಿನ ದೇಶಗಳು
ವರದಿಯ ಪ್ರಕಾರ ಈ ಬಾರಿಯೂ ಫಿನ್‌ಲ್ಯಾಂಡ್ ಮೊದಲನೆಯ ಸ್ಥಾನದಲ್ಲಿದ್ದು, ಕಳೆದ ವರದಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದ ಐಸ್‌ಲ್ಯಾಂಡ್ ಎರಡನೆಯ ಸ್ಥಾನಕ್ಕೇರಿದ್ದು, ಡೆನ್ಮಾರ್ಕ್ ಮೂರನೆಯ ಸ್ಥಾನಕ್ಕಿಳಿದಿದೆ. ಕೋಸ್ಟಾರಿಕಾ, ಸ್ವೀಡನ್, ನಾರ್ವೆ, ನೆದರ್‌ಲ್ಯಾಂಡ್, ಇಸ್ರೇಲ್, ಲಕ್ಸೆಂಬರ್ಗ್, ಸ್ವಿಟ್ಜರ್‌ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ.
ನಾಲ್ಕಕ್ಕೇರಿದ ಕೋಸ್ಟಾರಿಕಾ
2023ರಲ್ಲಿ 23ನೆಯ ಸ್ಥಾನದಲ್ಲಿದ್ದ ಕೋಸ್ಟಾರಿಕಾ 2024ರಲ್ಲಿ 12ನೆಯ ಸ್ಥಾನಕ್ಕೆ ಮತ್ತು 2025ರಲ್ಲಿ 6ನೆಯ ಸ್ಥಾನಕ್ಕೆ ಜಿಗಿದಿತ್ತು ಪ್ರಸ್ತುತ ವರದಿಯಲ್ಲಿ 4ನೆಯ ಸ್ಥಾನವನ್ನು ಅಲಂಕರಿಸಿದೆ. ಈ ಏರಿಕೆಯು ದೇಶವು ಸಮುದಾಯ ಜೀವನ, ಪ್ರಕೃತಿಯ ಜತೆಗೆ ಹೊಂದಾಣಿಕೆ ಮತ್ತು ಜನರ ಯೋಗಕ್ಷೇಮವನ್ನು ಸುಧಾರಿಸುವುದರ ಮೇಲೆ ತ್ತು ನೀಡುತ್ತಿರು ಬಗೆಯನ್ನು ಸೂಚಿಸುತ್ತದೆ.
ಎರಡು ಸ್ಥಾನ ಮೇಲೇರಿದ ಭಾರತ
ಈ ಬಾರಿಯೂ ಭಾರತ ನೂರರ ನಂತರದ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ, ಕಳೆದ ವರದಿಯಲ್ಲಿ 118ನೆಯ ಸ್ಥಾನದ್ದ ಭಾರತ, ಈ ಬಾರಿ ಎರಡು ಸ್ಥಾನ ಮೇಲಕ್ಕೇರಿದ್ದು, 116ನೆಯ ಸ್ಥಾನ ಅಲಂಕರಿಸಿದೆ.