ಇದು ವನ್ಯ ಮೃಗಗಳ ಲೋಕವೋ… ಈ ಭೂಮಿಗೆ ಇಳಿದ ನಾಕವೋ…
ನಾಗರಹೊಳೆ ಅರಣ್ಯಕ್ಕೆ ಸಮೀಪದಲ್ಲಿ ಅಲ್ಲಿನ ಪರಿಸರದ ಒಂದು ಸಂಕಿರ್ಣವಾಗಿ ಜೆಎಲ್‌ಆರ್‌ನ ಕಿಂಗ್ಸ್ ಸ್ಯಾಂಚುರಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಮೈಸೂರಿನಿಂದ ಕೇವಲ ಒಂದು ಗಂಟೆಯ ಪ್ರಯಾಣದ ಮೂಲಕ ತಲುಪಬಹುದು. ಒಂದೇ ಒಂದು ಗಂಟೆಯ ಪ್ರಯಾಣದಲ್ಲಿ ಇಲ್ಲಿಗೆ ತಲುಪಿದರೆ ಒಂದು ಮರೆಯಲಾಗದ ಅನುಭವ ನಿಮ್ಮದಾಗುತ್ತದೆ. ನಾಗರಹೋಳೆ ಕಾನನದಲ್ಲಿ ಅಡ್ಡಾಡಬಹುದು. ಸಫಾರಿ ಮಾಡಬಹುದು, ಇಲ್ಲಿ ನೀವು ನಿಮ್ಮ ಬೆಳಗ್ಗೆಯನ್ನು ಆರಂಭಿಸುವುದು ಅಲಾರಾಂ ಸದ್ದಿನಿಂದಲ್ಲ; ಬದಲಿಗೆ ಖಗ-ಮಿಗಗಳ ಕಿಚಿಪಿಚಿ ಸದ್ದಿನಿಂದ. ಒಟ್ಟು ಕಾಡಿನ ಮಾಹಿತಿಯನ್ನು ಮೇಲೋಗರ ಮಾಡಿ ನೀಡಲು ಜೆಎಲ್‌ಆರ್ ಸಜ್ಜಾಗಿರುತ್ತದೆ.
ಕಾಡು ಎಂದಾಗ ಅಲ್ಲಿನ ವನ್ಯಜೀವಿ ಸಂಪತ್ತು ನಮ್ಮ ಮನಃಪಟಲಗಳನ್ನು ಕಾಡುತ್ತದೆ. ಅದು ಒಂದು ಸೌಂದರ್ಯದ ಖನಿ. ನೋಡುವುದೆಲ್ಲಾ ಚೆಂದ ಅನಿಸುವುದು ಕಾಡಿನಲ್ಲಿ ಮಾತ್ರ. ಈ ಸಂಪತ್ತನ್ನು ನೋಡುವ ಆಸೆ ಎಲ್ಲರಿಗೂ ಇರುವುದು ಸಹಜ. ಆದರೆ ಸುತ್ತಾಡಿಸುವವರು ಬೇಕಲ್ಲ? ಹಾಗೇ ಕಾಡನ್ನು ಸುತ್ತಾಡಿಸಿ ಪರಿಚಯಿಸಿ, ಸುಂದರ ವಾಸ್ತವ್ಯವನ್ನೂ ನೀಡಿ ನೋಡಿಕೊಳ್ಳಲು ಕಾರ್ಯ ನಿರ್ವಹಿಸುತ್ತಿವೆ ಜೆಎಲ್‌ಆರ್‌ನ ಕ್ಯಾಂಪ್‌ಗಳು.
ಇದನ್ನೂ ಓದಿ: ಗೋಪಿನಾಥಂನಲ್ಲಿ ಓಡಾಟ.. ಜೆಎಲ್‌ಆರ್ ಫುಲ್ ಊಟ
ರಾಜೀವ್‌ಗಾಂಧಿ ನ್ಯಾಷನಲ್ ಪಾರ್ಕ್
ರಾಜೀವ್‌ಗಾಂಧಿ ನ್ಯಾಷನಲ್ ಪಾರ್ಕ್, ಇಲ್ಲಿ ನಾಗರಹಾವಿನ ಆಕಾರದಲ್ಲಿ ಹರಿಯುವ ಹೊಳೆ (ನದಿ) ಇದ್ದು, ಅದರಿಂದ ಈ ತಾಣಕ್ಕೆ ನಾಗರಹೊಳೆ ಎನ್ನುವ ಹೆಸರು ಬಂದಿದೆ. ಇದು ಕರ್ನಾಟಕದಲ್ಲಿನ ರಾಷ್ಟ್ರೀಯ ಉದ್ಯಾನ. ಹುಲಿ ಸಂರಕ್ಷಿತ ಪ್ರದೇಶವೂ ಹೌದು. ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಹರಡಿಕೊಂಡಿದ್ದು, 843.96 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಹುಲಿ ಸಂರಕ್ಷಿತ ಅರಣ್ಯ ಎಂದಮೇಲೆ ಕೇಳಬೇಕೇ? ಇಲ್ಲಿ ಮಾಂಸಾಹಾರಿಗಳಾದ ಹುಲಿ, ವೇಗದ ಬೇಟೆಗಾರ ಚಿರತೆ, ಸೀಳು ನಾಯಿ, ಕರಡಿ, ಕಾಟಿ, ಕಾಡು ಹಂದಿ, ಕಾಡು ಕುರಿ, ಏಷ್ಯಾಟಿಕ್ ಆನೆಗಳು, ಜಿಂಕೆ, 182 ಪ್ರಭೇದದ ಮರಗಳು, 167 ಪ್ರಭೇದದ ಚಿಟ್ಟೆಗಳು, 270 ಪ್ರಭೇದದ ಪಕ್ಷಿಗಳು, 31 ಪ್ರಭೇದ ಹಾವುಗಳು, 32 ಪ್ರಭೇದದ ಸಸ್ತನಿಗಳು ಇನ್ನೂ ಸಾಕಷ್ಟು ಪ್ರಭೇದದ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲ ಅಲ್ಲಿ ಬೀಡು ಬಿಟ್ಟಿದೆ. ಆ ಪರಿಸರದ ಸೌಂದರ್ಯವನ್ನು ಹೆಚ್ಚಿಸಿದೆ. ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶ ಎಂದಮೇಲೆ ಅಲ್ಲಿನ ಪರಿಸರ ಸೌಂದರ್ಯವನ್ನು ಅಂದಾಜಿಸಬಹುದು. ಅಲ್ಲಿ ಅಳಿವಿನಂಚಿನ ಸಾಕಷ್ಟು ವನ್ಯ ಸಂಪತ್ತು ಅಡಕವಾಗಿದೆ. ಪ್ರವಾಸಿ ಕಣ್ಣುಗಳಿಗಿಂತ ಒಬ್ಬ ಪರಿಸರ ಪ್ರೇಮಿಗೆ ಇದಕ್ಕಿಂತ ಸ್ವರ್ಗ ಇನ್ನೊಂದಿಲ್ಲ ಎನ್ನಬಹುದು.

ಜೆಎಲ್‌ಆರ್ ಕಿಂಗ್ಸ್ ಸ್ಯಾಂಚುರಿ
ನಾಗರಹೊಳೆ ಅರಣ್ಯಕ್ಕೆ ಸಮೀಪದಲ್ಲಿ ಅಲ್ಲಿನ ಪರಿಸರದ ಒಂದು ಸಂಕಿರ್ಣವಾಗಿ ಜೆಎಲ್‌ಆರ್‌ನ ಕಿಂಗ್ಸ್ ಸ್ಯಾಂಚುರಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಮೈಸೂರಿನಿಂದ ಕೇವಲ ಒಂದು ಗಂಟೆಯ ಪ್ರಯಾಣದ ಮೂಲಕ ತಲುಪಬಹುದು. ಒಂದೇ ಒಂದು ಗಂಟೆಯ ಪ್ರಯಾಣದಲ್ಲಿ ಇಲ್ಲಿಗೆ ತಲುಪಿದರೆ ಒಂದು ಮರೆಯಲಾಗದ ಅನುಭವ ನಿಮ್ಮದಾಗುತ್ತದೆ. ನಾಗರಹೋಳೆ ಕಾನನದಲ್ಲಿ ಅಡ್ಡಾಡಬಹುದು. ಸಫಾರಿ ಮಾಡಬಹುದು, ಇಲ್ಲಿ ನೀವು ನಿಮ್ಮ ಬೆಳಗ್ಗೆಯನ್ನು ಆರಂಭಿಸುವುದು ಅಲಾರಾಂ ಸದ್ದಿನಿಂದಲ್ಲ; ಬದಲಿಗೆ ಖಗ-ಮಿಗಗಳ ಕಿಚಿಪಿಚಿ ಸದ್ದಿನಿಂದ. ಒಟ್ಟು ಕಾಡಿನ ಮಾಹಿತಿಯನ್ನು ಮೇಲೋಗರ ಮಾಡಿ ನೀಡಲು ಜೆಎಲ್‌ಆರ್ ಸಜ್ಜಾಗಿರುತ್ತದೆ. ಇಲ್ಲಿನ ಸಿಬ್ಬಂದಿ ಸದಾ ನಿಮ್ಮನ್ನು ಕಾಡಿಗೆ ಬಂದಿರುವ ಅತಿಥಿಯಂತೆ ನೋಡಿಕೊಳ್ಳುತ್ತಾರೆ. ಅವರಿಗೆ ಗೊತ್ತಿರುವ ಎಲ್ಲಾ ಮಾಹಿತಿ ಬೆಳಗಾಗುವ ಹೊತ್ತಿಗೆ ನಿಮ್ಮ ಸ್ಮೃತಿಯಲ್ಲಿರುತ್ತದೆ.

ಇಲ್ಲಿ ಇನ್ನೂ ಏನೇನಿದೆ
ಪಕ್ಷಿ ವೀಕ್ಷಣೆ: ಜೆಎಲ್‌ಆರ್‌ನ ಕಿಂಗ್ಸ್ ಸ್ಯಾಂಚುರಿ ಬರ್ಡ್ ವಾಚಿಂಗ್‌ಗೆ ಹೇಳಿ ಮಾಡಿಸಿದ ತಾಣ. ನದಿಯ ಪಕ್ಕದಲ್ಲಿ ನೂರಾರು ಜಾತಿಯ ಪಕ್ಷಿಗಳು ಮನೆಮಾಡಿರುತ್ತವೆ. ಪ್ರವಾಸಿ ಹಕ್ಕಿಗಳನ್ನೂ ಪ್ರವಾಸಿಗರು ಇಲ್ಲಿ ಕಾಣಬಹುದು. ಇದು ಪಕ್ಷಿ ಪ್ರೇಮಿಗಳ ಸ್ವರ್ಗ ಸದೃಶ ಲೋಕ.
ನೇಚರ್ ವಾಕ್ : ನೇಚರ್ ವಾಕ್ ಜೆಎಲ್‌ಆರ್‌ನ ಪ್ರಮುಖ ಆಕರ್ಷಣೆ. ಇಲ್ಲಿ ಬರೀ ಕಾಡಿನ ಮಧ್ಯೆ ನಡೆಯುವುದು ಮಾತ್ರವಲ್ಲ; ಅಲ್ಲಿನ ಹಲವು ವಿಷಯಗಳನ್ನು ಮಾರ್ಗದರ್ಶಿಗಳಿಂದ ತಿಳಿಯಲೂಬಹುದು. ಈ ವಾಕ್ ಥೇಟ್ ಕಾಂತಾರದ ಮಡಿಲಲ್ಲಿ ಎನ್ನುವ ಫೀಲ್ ನೀಡುತ್ತದೆ. ಈ ವಾಕ್ ವೇಳೆ ನೀವು ಆ ಕಾಡಿನ ಸಸ್ಯ ಸಂಪತ್ತು, ವನ್ಯ ವೃಗಗಳು, ಬಾನಾಡಿಗಳು ಸೇರಿ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಫೊಟೋ ಕ್ಲಿಕ್ಕಿಸಿಕೊಳ್ಳುತ್ತಾ ಆ ರಸನಿಮಿಷಗಳನ್ನು ನೀವು ಕ್ಯಾಮೆರಾ ಮತ್ತು ನೆನಪುಗಳಲ್ಲಿ ಭರ್ತಿ ಮಾಡಿಕೊಳ್ಳುತ್ತೀರಿ. ನೆನಪಿರಲಿ ಈ ಕಿಂಗ್ಸ್ ಸ್ಯಾಂಚುರಿ ಫೆಮಸ್ ಆಗಿರುವುದು ಅಲ್ಲಿನ ಬಿಗ್ ಕ್ಯಾಟ್ ಸಂತತಿ, ಏಷ್ಯಾಟಿಕ್ ಆನೆಗಳು, ಗೌರ್‌ಗಳು, ಸರಿಸೃಪಗಳ ಸಂಖ್ಯಾತ್ಮಕ ಬಲದಿಂದಾಗಿ. ಹಾಗಾಗಿ ನಿಮ್ಮ ಕ್ಯಾಮೆರಾದ ಕ್ಯಾಪ್ ಸದಾ ಓಪನ್ ಆಗಿಯೇ ಇರಲಿ. ಯಾವ ಸಮಯದಲ್ಲಿ ಯಾವ ಪ್ರಾಣಿ-ಪಕ್ಷಿ ಕಣ್ಣಿಗೆ ಬೀಳುವುದೋ ಯಾರಿಗೂ ಗೊತ್ತಿಲ್ಲ.
ವನ್ಯಜೀವಿ ಚಿತ್ರ ವೀಕ್ಷಣೆ: ಕ್ಯಾಂಪ್‌ನಲ್ಲಿ ಪ್ರತಿ ರಾತ್ರಿ ಕ್ಯಾಂಪ್ ಫೈರ್‌ಗೆ ಮೈಯೊಡ್ಡಿ ಕುಳಿತು ಸಹ ಅತಿಥಿಗಳೊಂದಿಗೆ ವನ್ಯಜೀವಿಗಳ ಸಿನಿಮಾ ಮತ್ತು ಡಾಕ್ಯುಮೆಂಟರಿ ವೀಕ್ಷಿಸಬಹುದು. ಈ ಮೂಲಕ ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬಹುದು.
ಫೈರ್‌ಕ್ಯಾಂಪ್: ರೆಸಾರ್ಟ್ ಎಂದಮೇಲೆ ಫೈರ್ ಕ್ಯಾಂಪ್ ಇದ್ದೇ ಇರುತ್ತದೆ. ರಾತ್ರಿ ಸಮಯದಲ್ಲಿ ಎಲ್ಲ ಅತಿಥಿಗಳು ಫೈರ್ ಕ್ಯಾಂಪ್ ಸುತ್ತ ಕುಳಿತು ಹರಟೆ ಹೊಡೆಯಬಹುದು. ಕಾಡಿನಲ್ಲಿ ಆದ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ವಾಸ್ತವ್ಯ
ಜೆಎಲ್‌ಆರ್ ಕಿಂಗ್ಸ್ ಸ್ಯಾಂಚುರಿಗೆ ಬರು ಅತಿಥಿಗಳಗಳ ವಾಸ್ತವ್ಯದ ಆಯ್ಕೆಗೆ ಆರಾಮದಾಯಕವಾದ ಕಾಟೇಜ್‌ಗಳು ಮತ್ತು ಸುಸಜ್ಜಿತ ಸೂಟ್ ರೂಮ್‌ಗಳ ಆಯ್ಕೆಗಳಿವೆ. ಕೊಠಡಿಗಳು ಸ್ವಚ್ಛವಾಗಿದ್ದು, ಸಾಕಷ್ಟು ಸೌಕರ್ಯಗಳಿವೆ. ಕ್ಯಾಂಪ್‌ನ ವಾತಾವರಣವು ಫ್ರೆಂಡ್ಲಿಯಾಗಿದ್ದು ನಿಶ್ಚಿಂತೆಯಿಂದ ಉಳಿದುಕೊಳ್ಳಬಹುದು. ಕಾಡಿನ ನಡುವೆ ಉಳಿದುಕೊಂಡು ಮೃಗ ಖಗಗಳ ಸದ್ದಿಗೆ ಬೆಳಗ್ಗೆ ಎಚ್ಚರಾಗುವುದು ಅದ್ಭುತ ಅನುಭೂತಿ ನೀಡುತ್ತದೆ. ಅವುಗಳ ಸದ್ದು ಆಲಿಸುತ್ತ ಅವುಗಳ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಆನಂದಿಸಬಹುದು. ಜೆಎಲ್‌ಆರ್‌ನ ಪ್ರತಿ ಸಿಬ್ಬಂದಿಯೂ ನಿಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಪಚರಿಸುತ್ತಾರೆ. ಉಪಾಹಾರ, ಊಟ ಮತ್ತು ರಾತ್ರಿಯ ಭೋಜನವನ್ನು ಪ್ಯಾಕೇಜ್‌ನಲ್ಲಿಯೇ ಸೇರಿಸಲಾಗಿರುತ್ತದೆ. ಹಾಗಾಗಿ ಊಟಕ್ಕೊಮ್ಮೆ, ಆಟಕ್ಕೊಮ್ಮೆ ಎಂದು ನೀವು ಪದೆಪದೆ ಜೇಬು ನೋಡುವ ಉಸಾಬರಿಗೆ ಹೋಗಬೇಕಿಲ್ಲ. ಒಮ್ಮೆಲೆ ಪೇ ಮಾಡಿ ಫುಲ್ ಕಾಡು ಅಡ್ಡಾಡಿ, ಇನ್ ಡೋರ್-ಔಟ್ ಡೋರ್ ಆಟವಾಡಿ, ಬೇಕಾದ ಫುಡ್ ಸ್ವಾಹಾ ಮಾಡಿ, ವಾಸ್ತವ್ಯವನ್ನು ಎಂಜಾಯ್ ಮಾಡಿ ಬರಬಹುದು. ಇಲ್ಲಿನ ಮೆನು ಸರಳವಾಗಿದ್ದರೂ ರುಚಿಕರವಾಗಿರುತ್ತದೆ. ವೆಜ್, ನಾನ್‌ವೆಜ್ ಆಹಾರದ ಆಯ್ಕೆಗಳಿರುತ್ತವೆ. ಹೆಚ್ಚಾಗಿ ಸ್ಥಳೀಯ ಆಹಾರವನ್ನು ತಯಾರಿಸಿ ಪ್ರೀತಿಯಿಂದ ಬಡಿಸುತ್ತಾರೆ. ಗೋಲ್‌ಘರ್‌ನ ಬಫೆ ಊಟಕ್ಕೂ ಜೆಎಲ್‌ಆರ್ ಫುಲ್ ಫೇಮಸ್ ಆಗಿದೆ. ಊಟದ ನಂತರ ನೇಚರ್ ವಾಕ್‌ಗೆ ಹೋಗಬಹುದು. ರೆಸಾರ್ಟ್‌ನಿಂದ ಆಚೆಗೆ ಬಂದು ತಂಪಾದ ಗಾಳಿಯಲ್ಲಿ ರಿಲ್ಯಾಕ್ಸ್ ಆಗಬಹುದು.

ಸೀಸನ್
ಮಳೆಗಾಲದ ನಂತರ, ಆಗಸ್ಟ್ ಮತ್ತು ಫೆಬ್ರವರಿ ತಿಂಗಳುಗಳ ನಡುವಿನ ಸಮಯ ಈ ಜೆಎಲ್‌ಆರ್ ಕ್ಯಾಂಪ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ನದಿಯ ನೋಟ ಅದ್ಭುತವಾಗಿರುತ್ತದೆ. ಕಾಡು ದಟ್ಟವಾಗಿ ಮತ್ತು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಪಕ್ಷಿ ವೀಕ್ಷಣೆಗೂ ಇದು ಅತ್ಯುತ್ತಮ ಸಮಯ. ರಿವರ್ ಟರ್ನ್ ಪಕ್ಷಿಗಳು, ಮೀನು ಹಿಡಿಯುವ ಹದ್ದುಗಳು, ವುಡ್ ಪೀಕರ್‌ಗಳು, ಕಿಂಗ್‌ಫಿಷರ್‌ಗಳು ಮತ್ತು ಇತರ ಜಲಪಕ್ಷಿಗಳು ಇಲ್ಲಿ ಇರುತ್ತವೆ. ಇತರ ಸಮಯದಲ್ಲಿ ಇಲ್ಲಿನ ವಾತಾವರಣ ಪೂರಾ ಬದಲಾಗಿರುತ್ತದೆ. ಆಗ ಇಲ್ಲಿನ ನದಿಯ ವಿಶಾಲ ಮರಳಿನ ಪ್ರದೇಶ ಕಣ್ಣಿಗೆ ರಾಚುತ್ತದೆ. ಸಂಜೆಯ ವೇಳೆಗೆ ಇಲ್ಲಿನ ನೋಟ ಅದ್ಭುತವಾಗಿರುತ್ತದೆ. ಸಂಜೆ ವೇಳೆ ವಿಶ್ರಾಂತಿ ಪಡೆಯಲು ಉತ್ತಮವಾಗಿರುತ್ತದೆ. ಬೇಸಗೆ ತಿಂಗಳುಗಳಲ್ಲಿ ಬಿಸಿಲಿನ ತಾಪ ಇಲ್ಲಿರುವುದಿಲ್ಲ. ಬದಲಿಗೆ ತಂಪಗಿನ ವಾತಾವರಣ ಇರುತ್ತದೆ. ಹಾಗಾಗಿ ಯಾವುದೇ ಸೀಸನ್‌ನಲ್ಲಿ ಪ್ರವಾಸಿಗರು ಈ ಜೆಎಲ್‌ಆರ್‌ಗೆ ಭೇಟಿ ನೀಡಿದರೂ ಒಂದು ವಿಶೇಷ ಅನುಭವವನ್ನು ಪಡೆಯುತ್ತಾರೆ.
ಪ್ಯಾಕೇಜ್‌ಗಳು
ಸ್ಟಾಂಡರ್ಡ್ ಪ್ಯಾಕೇಜ್
ಮಹಾರಾಜ ಪ್ಯಾಕೇಜ್
ಸ್ಟಾಂಡರ್ಡ್ ಪ್ಯಾಕೇಜ್ ಮತ್ತು ಮಹಾರಾಜ ಪ್ಯಾಕೇಜ್ ಎರಡರಲ್ಲೂ ವೆಲ್‌ಕಮ್ ಡ್ರಿಂಕ್, ಸ್ನಾನಗೃಹದೊಂದಿಗೆ ವಾಸ್ತವ್ಯ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ (ವೆಜ್ ಅಥವಾ ನಾನ್‌ವೆಜ್), ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಸಫಾರಿ, ಮಾರ್ಗದರ್ಶಿಗಳೊಂದಿಗೆ ಪ್ರಕೃತಿ ನಡಿಗೆ, ಬಿಸಿನೀರಿನ ಸ್ನಾನ, ಬಾನ್ ಫೈರ್, ಇನ್ ಡೋರ್ ಮತ್ತು ಔಟ್ ಡೋರ್ ಗೇಮ್ಸ್, ನೇಚರ್ ವಾಕ್, ಪಕ್ಷಿ ವೀಕ್ಷಣೆ ಎಲ್ಲವೂ ಒಳಗೊಂಡಿರುತ್ತವೆ. ಸ್ಟಾಂಡರ್ಡ್ ಪ್ಯಾಕೇಜ್‌ನಲ್ಲಿ ವಾಸ್ತವ್ಯಕ್ಕಾಗಿ 9 ಕಾಟೇಜ್‌ಗಳ ಆಯ್ಕೆ ಮತ್ತು ಮಹಾರಾಜ ಪ್ಯಾಕೇಜ್‌ನಲ್ಲಿ ವಾಸ್ತವ್ಯಕ್ಕಾಗಿ 13 ಸೂಟ್ ರೂಮ್‌ಗಳ ಆಯ್ಕೆ ಇದೆ.
ದಿನಚರಿ
ದಿನ - 01
ಮಧ್ಯಾಹ್ನ 1:00 – ಚೆಕ್-ಇನ್ ಮಾಡಿ. ಕುಳಿತು ಫ್ರೆಶ್ ಅಪ್ ಆಗಿ
ಮಧ್ಯಾಹ್ನ 1:30 - 2:30 – ಗೋಲ್‌ಘರ್‌ನಲ್ಲಿ ಭರ್ಜರಿ ಊಟ ಸವಿಯಿರಿ
ಮಧ್ಯಾಹ್ನ 3:00 - 3:30 - ಉದ್ಯಾನವನಕ್ಕೆ ಸವಾರಿ ಮಾಡಲು ಸಿದ್ಧರಾಗಿ.
ಮಧ್ಯಾಹ್ನ 3:30 - ಸಂಜೆ 6:15 - ಪ್ರಕೃತಿಶಾಸ್ತ್ರಜ್ಞರು ನಿಮ್ಮನ್ನು ವಾಹನದಲ್ಲಿ ವನ್ಯಜೀವಿ ಸಫಾರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯುತ್ತಾರೆ. ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.
ಸಂಜೆ 6:30 - ರಾತ್ರಿ 7:00 – ಗೋಲ್‌ಘರ್‌ನಲ್ಲಿ ಚಹಾ/ಕಾಫಿ ಜತೆಗೆ ತಿಂಡಿಗಳನ್ನು ನೀಡಲಾಗುತ್ತದೆ.
ರಾತ್ರಿ 7:30 - 8:20 - ಕ್ಯಾಂಪ್‌ಫೈರ್‌ನೊಂದಿಗೆ ವನ್ಯಜೀವಿ ಚಲನಚಿತ್ರವನ್ನು ವೀಕ್ಷಿಸಿ
ರಾತ್ರಿ 8:30 - 10:00 ಗೋಲ್‌ಘರ್‌ನಲ್ಲಿ ಭೋಜನ. ಇತರ ಅತಿಥಿಗಳು ಮತ್ತು ಜೆಎಲ್‌ಆರ್ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳುವುದು.
ದಿನ – 02
ಬೆಳಗ್ಗೆ 5:30 - ಎಚ್ಚರಗೊಳಿಸುವ ಕರೆ
ಬೆಳಗ್ಗೆ 5:45 - 6:00 - ಗೋಲ್‌ಘರ್‌ನಲ್ಲಿ ಚಹಾ ಮತ್ತು ಕಾಫಿ
ಬೆಳಗ್ಗೆ 7:00 - 8:00 - ಮಾರ್ಗದರ್ಶಿಗಳೊಂದಿಗೆ ಪ್ರಕೃತಿ ನಡಿಗೆ (ಆವರಣದ ಒಳಗೆ)
ಬೆಳಗ್ಗೆ 6:00 - 9:00 - ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ವಾಹನದಲ್ಲಿ ವನ್ಯಜೀವಿ ಸಫಾರಿ (ಪ್ಯಾಕೇಜ್‌ನಲ್ಲಿ ಒಂದು ಸಫಾರಿ ಸೇರಿಸಲಾಗಿದೆ, ವಯಸ್ಕರಿಗೆ ಹೆಚ್ಚುವರಿ ಸಫಾರಿ ರು.1,770 ಮತ್ತು ಮಕ್ಕಳಿಗೆ ರು.1,416 ಹೆಚ್ಚುವರಿ).
ಬೆಳಗ್ಗೆ 8:30 - 9:30 – ಗೋಲ್‌ಘರ್‌ನಲ್ಲಿ ನಿಮ್ಮ ಉಪಾಹಾರವನ್ನು ಆನಂದಿಸಿ
ಬೆಳಗ್ಗೆ 10:30 - ಸಿಹಿ ನೆನಪುಗಳೊಂದಿಗೆ ಚೆಕ್-ಔಟ್ ಆಗಿ
ರೆಸಾರ್ಟ್ ಸಂಪರ್ಕ ಮಾಹಿತಿ:
ವೀರನ ಹೊಸಹಳ್ಳಿ, ನಾಗರಹೊಳೆ,
ಹುಣಸೂರು ತಾಲೂಕು, ಮೈಸೂರು ಜಿಲ್ಲೆ – 571105
ಕರ್ನಾಟಕ, ಭಾರತ
ಮ್ಯಾನೇಜರ್: ಶ್ರೀ ಸಿದ್ದರಾಜು,
ಸಂಪರ್ಕ ಸಂಖ್ಯೆ : 9591139114 / 9449599796
ಕಾರ್ಪೊರೇಟ್ ಮಾರಾಟ: 9480887199
ಇಮೇಲ್ ಐಡಿ: info@junglelodges.com
ದಾರಿ ಹೇಗೆ?
ರಸ್ತೆ ಮೂಲಕ ಈ ಶಿಬಿರವು ಬೆಂಗಳೂರಿನಿಂದ ಸುಮಾರು 196 ಕಿಲೋಮೀಟರ್ ದೂರದಲ್ಲಿದೆ. ಮೈಸೂರಿನ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳು ಜೆಎಲ್‌ಆರ್ ಕಿಂಗ್ಸ್ ಸ್ಯಾಂಚುರಿಗೆ ಹತ್ತಿರದಲ್ಲಿವೆ.