- ಅನಿಲ್ ಹೆಚ್.ಟಿ.

ಪರಿಸರ ಸೌಂದರ್ಯ ಕಂಗೊಳಿಸುವ ಕೊಡಗು ಜಿಲ್ಲೆಯ ಪ್ರಮುಖ ಕಾಟೇಜ್ ಆಗಿ ಗಮನ ಸೆಳೆಯುತ್ತಿರುವುದು ಕಾಫಿ ತೋಟದ ಮಧ್ಯೆಯಿರುವ ಕಾವೇರಿ ಎಸ್ಟೇಟ್ ಸ್ಟೇ.

ಮಡಿಕೇರಿಯಿಂದ 30ಕಿ.ಮೀ ಮತ್ತು ನಾಪೋಕ್ಲುವಿನಿಂದ 4ಕಿ.ಮೀ. ದೂರದಲ್ಲಿ ಇರುವ ಕೊಳಕೇರಿ ಗ್ರಾಮದ ಕಾವೇರಿ ಎಸ್ಟೇಟ್ ಹೆಸರಿನ ಈ ಕಾಟೇಜ್ ಸಂದರ್ಶಕರ ಪಾಲಿಗೆ ಅವಿಸ್ಮರಣೀಯ ಅನುಭವ ನೀಡಬಲ್ಲದು.

2006ರಲ್ಲಿ ಅಪ್ಪಚ್ಚಿರ ಕುಟುಂಬದ ರೀನಾ ಮತ್ತು ರೆಮ್ಮಿ ನಾಣಯ್ಯ ದಂಪತಿಯ ಆಸಕ್ತಿಯಿಂದ ರೂಪುಗೊಂಡ ಕಾವೇರಿ ಎಸ್ಟೇಟ್ ಸ್ಟೇ ಇಂದು ದೇಶವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕೇವಲ ಎರಡು ಕೋಣೆಗಳೊಂದಿಗೆ ಹೋಮ್ ಸ್ಟೇ ಮಾದರಿಯಲ್ಲಿ ಆರಂಭವಾದ ಪ್ರವಾಸೋದ್ಯಮ ಈಗ ಮಿನಿ ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ.

Kaveri resort


ಎಲ್ಲೆಲ್ಲೂ ಹಸಿರಿನ ಹೊದಿಕೆಯೊಂದಿಗೆ ಆಧುನಿಕ ಸೌಲಭ್ಯಗಳ ಜತೆಯಲ್ಲಿಯೇ ಕೊಡವ ಸಾಂಪ್ರದಾಯಿಕತೆಯ ಪರಿಚಯವನ್ನೂ ಕಾವೇರಿ ಎಸ್ಟೇಟ್ ಸ್ಟೇ ಮಾಡಿಕೊಡುತ್ತದೆ. ಕಾಫಿ ತೋಟ, ಹಸಿರು ಪರಿಸರ, ಕೊಡವ ಸಂಪ್ರದಾಯದ ಬೆಸುಗೆಗೆ ಅತ್ಯುತ್ತಮ ಉದಾಹರಣೆ ಎಂಬಂತೆ ಕಾವೇರಿ ಎಸ್ಟೇಟ್ ಸ್ಟೇ ರೂಪುಗೊಂಡಿದೆ. ಸ್ವಿಸ್ ಕಾಟೇಜ್ ಟೆಂಟ್‌ಗಳು, ನದಿ ತೀರದಲ್ಲಿರುವ ಕಾಟೇಜ್‌ಗಳು ಇಲ್ಲಿನ ವಿಶೇಷತೆ. ಕಾಫಿ ತೋಟ ಎಂದ ಮೇಲೆ ಪಕ್ಷಿಗಳಿಗೇನು ಕೊರತೆ. ಹೀಗಾಗಿಯೇ ಸಂದರ್ಶಕರಿಗೆ ಬಗೆ ಬಗೆಯ ಪಕ್ಷಿಗಳ ಇಂಚರ ಎಲ್ಲಾ ಸಮಯದಲ್ಲಿಯೂ ಮಧುರ ನಿನಾದವಾಗಿ ಕೇಳಿಬರುತ್ತಲೇ ಇರುತ್ತದೆ.

ಸೌಲಭ್ಯಗಳು

ಕಾವೇರಿ ಎಸ್ಟೇಟ್ ಸ್ಟೇನಲ್ಲಿ ಪ್ರೀಮಿಯರ್, ಪ್ರೀಮಿಯಂ ಸೂಟ್ ಟೆಂಟ್, ಸೆಮಿ ಪ್ರೀಮಿಯಮ್ ಮತ್ತು ಸ್ಟಾಂಡರ್ಡ್ ಕಾಟೇಜ್‌ಗಳು ಲಭ್ಯವಿದೆ. ವೈಫೈ ಸೌಲಭ್ಯ ಸೇರಿದಂತೆ ಉತ್ತಮ ಗುಣಮಟ್ಟದ ಡೈನಿಂಗ್ ಹಾಲ್ ಕೂಡ ಇಲ್ಲಿದೆ.

Kodagu resort

ರುಚಿಕರ ಕೊಡವ ಆಹಾರ

ಕಾವೇರಿ ಎಸ್ಟೇಟ್ ಸ್ಟೇ - ತನ್ನ ಪರಿಸರ ಸೌಂದರ್ಯದ ಮೂಲಕ ಸಂದರ್ಶಕರ ಗಮನ ಸೆಳೆದರೆ ಮತ್ತೊಂದೆಡೆ, ಕೊಡವ ಸಾಂಪ್ರದಾಯಿಕ ಖಾದ್ಯ ವೈವಿಧ್ಯಗಳು ಖಂಡಿತವಾಗಿಯೂ ಆಹಾರಪ್ರಿಯರ ಹೊಟ್ಟೆ ತುಂಬಿಸುತ್ತದೆ. ಕೊಡವ ಖಾದ್ಯ ವಿಶೇಷವಾದ ಪಂದಿಕ್ಕರಿ, ಅಕ್ಕಿರೊಟ್ಟಿ, ಬ್ಯಾಂಬು ಕರಿ, ನೂಪುಟ್ಟು, ಅಕ್ಕಿ ಪುಟ್ಟು, ಹೀಗೆ ಅನೇಕ ವೈವಿಧ್ಯಮಯ ರುಚಿಕರ ಖಾದ್ಯಗಳು ಇಲ್ಲಿನ ಭೋಜನಾಲಯದಲ್ಲಿ ಲಭ್ಯ.

ಹತ್ತಿರದಲ್ಲಿ ಏನೇನಿದೆ?

ಸಾಹಸ ಪ್ರಿಯರಿಗೆ ಕಾವೇರಿ ಎಸ್ಟೇಟ್ ಸ್ಟೇ ಸನಿಹದಲ್ಲಿಯೇ ಕೊಡಗಿನ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಇದೆ. ಇದು ಚಾರಣಕ್ಕೆ ಕೈಬೀಸಿ ಕರೆಯುವಂತಿದೆ. ಚೇಲಾವರ ಫಾಲ್ಸ್ ಕೂಡ ಸನಿಹದಲ್ಲಿಯೇ ಇದೆ. ಕೊಡವರ ಕುಲದೈವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ, ಐತಿಹಾಸಿಕ ನಾಲ್ಕುನಾಡು ಅರಮನೆ ಕೂಡ ಕಾವೇರಿ ಎಸ್ಟೇಟ್ ಸ್ಟೇಯಿಂದ ಹತ್ತಿರದಲ್ಲಿಯೇ ಇರುವುದು ಪ್ರವಾಸಿಗರಿಗೆ ಉಪಯುಕ್ತ.

Koopattu hole Kodagu


ಕೂಪಟ್ಟು ಹೊಳೆ ನೋಡಿ

ಕಾವೇರಿ ಉಪನದಿಯಾದ ಕೂಪಟ್ಟು ಹೊಳೆ ಇಲ್ಲಿ ಪಕ್ಕದಲ್ಲಿಯೇ ಹರಿಯುತ್ತಾ ಸಾಗುತ್ತದೆ. ಪಕ್ಕದಲ್ಲಿನ ಕಾಡಿನೊಳಕ್ಕೆ ಪರಿಸರಪ್ರೇಮಿಯಾಗಿ ಹೆಜ್ಜೆ ಹಾಕಿದರೆ ವನ್ಯಜೀವಿಗಳು ಹಾಯ್, ಹಲೋ ಎನ್ನುವ ಸಾಧ್ಯತೆಯೂ ಇದೆ.! ರಾತ್ರಿಯ ಕತ್ತಲಲ್ಲಿ ಅಗ್ನಿಕುಂಡದ ಮುಂದೆ ಹಾಡು ಹೇಳಿ, ಡಾನ್ಸ್ ಕೂಡ ಮಾಡಲು ಸಾಧ್ಯವಿದೆ. ಬಾನಿನಲ್ಲಿ ಮಿನುಗುವ ನಕ್ಷತ್ರಗಳು ನಿಮ್ಮ ರಾತ್ರಿಯನ್ನು ಮತ್ತಷ್ಟು ಸುಂದರಗೊಳಿಸುವುದರಲ್ಲಿ ಸಂಶಯವಿಲ್ಲ.

ಪ್ರಶಾಂತ ಪರಿಸರದಲ್ಲಿ ಕೆಲಕಾಲ, ಕೆಲದಿನಗಳು ಹಾಯಾಗಿ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಎನ್ನಲು ಬಯಸುವಿರಾದರೆ ಕಾವೇರಿ ಎಸ್ಟೇಟ್ ಸ್ಟೇ ಸೂಕ್ತ ಆಯ್ಕೆಯಾಗಬಲ್ಲದು. ರೀನಾ ಮತ್ತು ಅವರ ಪತಿ ರೆಮಿ ನಾಣಯ್ಯ ಅತ್ಯುತ್ತಮ ಆತಿಥ್ಯ ನೀಡುವುದಂತೂ ಖಂಡಿತ.

ಮಾಹಿತಿಗೆ ಸಂಪರ್ಕ- 9448124650, 9448721360