ದಾಂಡೇಲಿ ಅಂದರೆ ಬರೀ ನಿಸರ್ಗವಷ್ಟೇನಾ ? ಖಂಡಿತಾ ಅಲ್ಲ. ನಿಸರ್ಗ ಜತೆಗೆ ಅಡ್ವೆಂಚರ್‌ ಹಾಗೂ ಲಕ್ಸುರಿ ಬೆರೆತರೆ ಮಾತ್ರವೇ ದಾಂಡೇಲಿ ಎಂಬ ಪರಿಸರಕ್ಕೊಂದು ಅರ್ಥ ಬರುವುದು, ಪ್ರವಾಸಿಗರ ನೆಚ್ಚಿನ ತಾಣವಾಗುವುದು. ‌ಇಂಥ ಅದ್ಭುತ ಪರಿಸರದ ನಡುವೆ ಒಂದು ಹೊತ್ತಾದರೂ ಕಳೆಯಬೇಕು ಎಂದುಕೊಳ್ಳದವರೇ ಇಲ್ಲ. ಒಂದಷ್ಟು ದಿನಗಳ ಕಾಲ ಕಳೆಯುವ ಅವಕಾಶ ಸಿಕ್ಕಿದರಂತೂ ಖುಷಿಗೆ ಪಾರವೇ ಇರದು. ಅಂಥ ಪ್ರಕೃತಿ ಪ್ರಿಯರಿಗಾಗಿ ದಾಂಡೇಲಿಯ ಕಾಡುಗಳ ನಡುವೆ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಮನೋಮಯ ರೆಸಾರ್ಟ್.

ಮನೋಮಯ ಹೆಸರೇ ಹೇಳುವಂತೆ, ಮನಸ್ಸಿಗೆ ಸಂಬಂಧಪಟ್ಟದ್ದು ಎಂಬ ಅರ್ಥವನ್ನು ಹೊಂದಿದ್ದು, ಪಕ್ಕಾ ಮನಸ್ಸನ್ನು ತಿಳಿಗೊಳಿಸುವ, ಖುಷಿಪಡಿಸುವ ವಾತಾವರಣವನ್ನು ಹೊಂದಿದೆ. ಇಲ್ಲಿನ ವಾತಾವರಣವನ್ನು ಆನಂದಿಸಲು ಬರುವ ಪ್ರವಾಸಿಗರಿಗಾಗಿ ಸುಸಜ್ಜಿತವಾದ ರೂಮುಗಳು, ವಿಶೇಷವಾದ ಇಂಟೀರಿಯರ್‌ ಕೈಬೀಸಿ ಕರೆಯುತ್ತದೆ. ವಿಶೇಷ ಭೋಜನವಿದು ಎನ್ನುವಂತೆ ಮೆಚ್ಚಿಕೊಳ್ಳುವ ರುಚಿಕರ ಆಹಾರ, ಮನಸ್ಸಿನ ಜತೆಗೆ ದೇಹಕ್ಕೂ ಕೆಲಸ ನೀಡಬೇಕೆಂದರೆ ಇಂಡೋರ್‌ ಹಾಗೂ ಔಟ್‌ ಡೋರ್‌ ಆಕ್ಟಿವಿಟೀಸ್ ಇಲ್ಲಿವೆ.

Swimming pool in Manomaya

ಏನ್‌ ಸ್ಪೆಷಲ್ಲು..?

ಸ್ವಿಮ್ಮಿಂಗ್‌ ಪೂಲ್‌

ರೇನ್‌ ಡ್ಯಾನ್ಸ್‌

ಇಂಡೋರ್‌ ಹಾಗೂ ಔಟ್‌ ಡೋರ್‌ ಗೇಮ್ಸ್‌

ವಾಟರ್‌ ಸ್ಪೋರ್ಟ್ಸ್‌

ಪೈಸಾ ವಸೂಲ್‌ ಫುಡ್‌

ಕ್ಯಾಂಪ್‌ ಫೈರ್‌

ಪ್ರವಾಸಿಗರು, ರೆಸಾರ್ಟ್‌ ಪ್ರಿಯರ ಆಯ್ಕೆಗೆ ಅನುಸಾರವಾಗಿ ಡಾರ್ಮೆಟರಿ ಟೆಂಟ್‌, ಡಾರ್ಮೆಟರಿ ರೂಮ್‌, ಕಪಲ್‌ ರೂಮ್‌, ಡಿಲಕ್ಸ್‌ ರೂಮ್‌, ಎ ಫ್ರೇಮ್‌ ಲಕ್ಸುರಿ ಕಾಟೇಜ್‌ಗಳು ಇಲ್ಲಿದ್ದು, ಫುಡ್‌ ಬಗ್ಗೆ ಮೆಚ್ಚಿಕೊಳ್ಳಲೇ ಬೇಕು. ವೆಜ್‌ ಹಾಗೂ ನಾನ್‌ ವೆಜ್‌ ‌ಎರಡೂ ವಿಭಾಗಗಳಲ್ಲಿ ಅನ್‌ ಲಿಮಿಡೆಟ್ ಬ್ರೇಕ್‌ ಫಾಸ್ಟ್‌, ಲಂಚ್‌, ಡಿನ್ನರ್‌ ವ್ಯವಸ್ಥೆಯನ್ನು ಪ್ಯಾಕೇಜ್‌ ಒಳಗೆಯೇ ನೀಡುವ ಮೂಲಕ ಮತ್ತೆ ಮತ್ತೆ ಮನೋಮಯ ರೆಸಾರ್ಟ್‌ ಅನ್ನೇ ಹುಡುಕಿಕೊಂಡು ಬರುವಂತೆ ಮಾಡುತ್ತಾರೆ.

ಇಲ್ಲಿ ವಿವಿಧ ರೀತಿಯ ಪ್ಯಾಕೇಜ್‌ಗಳು ಲಭ್ಯವಿದ್ದು, ಯಾರೇ ಬಂದರೂ ಚೆನ್ನಾಗಿ ಕಾಲ ಕಳೆದು ತೃಪ್ತಿಯಿಂದ ಮರಳುತ್ತಾರೆ. ಅತಿಥಿಗಳ ಆದ್ಯತೆಗಳು, ವೇಳಾಪಟ್ಟಿ ಮತ್ತು ಬಜೆಟ್‌ಗೆ ಅನುಗುಣವಾಗಿ ರಜಾ ಪ್ಯಾಕೇಜ್‌ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಗಳಿಗೆ, ಬ್ಯುಸಿನೆಸ್ ಗ್ರೂಪ್‌ಗಳಿಗೆ ಮಾತ್ರವಲ್ಲದೆ ಯಾರೇ ಬಂದರೂ ವಾರದ ದಿನಗಳ ಅದ್ಭುತ ರಿಯಾಯಿತಿ ಪಡೆದುಕೊಳ್ಳಬಹುದು. ಹೆಚ್ಚುವರಿ ಮಾಹಿತಿಗಾಗಿ ಮನೋಮಯ ಸಂಪರ್ಕ ಸಂಖ್ಯೆಗೆ ಕರೆ ಮಾಡುವ ಮೂಲಕ ಇಲ್ಲವೇ ನಿಮ್ಮ ಆಯ್ಕೆಯ ಪ್ಯಾಕೇಜನ್ನು ಆನ್‌ಲೈನ್‌ನ ಮೂಲಕವೂ ಸುಲಭವಾಗಿ ಬುಕ್ ಮಾಡಬಹುದು.

Cottages at Manomaya

ರೂಮ್‌ ಫೆಸಿಲಿಟೀಸ್‌

ಎಸಿ ಲಕ್ಸುರಿ ಕ್ಯಾಬಿನ್ಸ್‌ - 2800 ರು.

ಎಸಿ ರೆಡ್‌ ಸ್ಟೋನ್‌ ಕಾಟೇಜಸ್‌ - 2600 ರು.

ಕಮಾಂಡೋ ಕಾಟೇಜಸ್‌ - 2200 ರು.

ಕ್ಯಾಂಪಿಂಗ್‌ ಟೆಂಟ್ಸ್‌- 1800‌ ರು.

ಸ್ಪೆಷಲ್‌ ಆಫರ್

ವೀಕ್‌ ಡೇ ಗ್ರೂಪ್‌ ಪ್ಯಾಕೇಜ್‌ - 1649 ರು.

ಸ್ಟುಡೆಂಟ್‌ ಹಾಗೂ ಕಾರ್ಪೊರೇಟ್‌ ಗ್ರೂಪ್‌ - 1749 ರು.

ವೀಕ್‌ ಡೇ ಪ್ಯಾಕೇಜ್‌ - 1799 ರು.

ವಾಟರ್‌ ಆ್ಯಕ್ಟಿವಿಟೀಸ್‌

ದಾಂಡೇಲಿಯ ಪರಿಸರದಲ್ಲಿ ವಾಟರ್‌ ಆ್ಯಕ್ಟಿವಿಟೀಸ್‌ ಇಲ್ಲವೆಂದರೆ ಹೇಗೆ? ನಿಸರ್ಗದ ನಡುವೆ ಜಲಕ್ರೀಡೆಗಳಿಗೆ ಹೆಸರು ಮಾಡಿರುವ ದಾಂಡೇಲಿಯಲ್ಲಿ ಪ್ರವಾಸಿಗರು ಕಯಾಕಿಂಗ್‌, ಝಾರ್ಬಿಂಗ್‌, ಬೋಟಿಂಗ್‌, ಸ್ವಿಮ್ಮಿಂಗ್‌ ಸೇರಿದಂತೆ ಅನೇಕ ಅವಕಾಶಗಳನ್ನು ಬಳಸಿಕೊಳ್ಳಬಹುದು. ದಣಿವಾರುವಷ್ಟು ಹೊತ್ತು ನೀರಾಟವಾಡುವ ಮೂಲಕ ಖುಷಿ ಕಂಡುಕೊಳ್ಳಬಹುದು.

Rooms at Manomaya

ಇನ್‌ ಹೌಸ್‌ ಆ್ಯಕ್ಟಿವಿಟೀಸ್‌

ಹೊರಗೆ ಸುತ್ತಾಟ ಬೇಕಾಗಿಲ್ಲ..ರೆಸಾರ್ಟ್‌ನಲ್ಲೇ ಉತ್ತಮ ಸಮಯವನ್ನು ಕಳೆಯುತ್ತೇನೆ ಎಂದುಕೊಳ್ಳುವವರಿಗಾಗಿ ಇಲ್ಲಿ ಅನೇಕ ಇನ್‌ ಹೌಸ್‌ ಆ್ಯಕ್ಟಿವಿಟೀಸ್‌ ಇವೆ. ಮುಖ್ಯವಾಗಿ ಆರ್ಚೆರಿ, ಸೈಕ್ಲಿಂಗ್‌, ಕ್ಯಾಂಪ್‌ ಫೈರ್‌ ಹೀಗೆ ಪ್ರವಾಸಿಗರನ್ನು ಖುಷಿ ಪಡಿಸುವುದಕ್ಕಾಗಿ ಮನೋಮಯ ಅನೇಕ ಆಯ್ಕೆಗಳನ್ನು ನೀಡಿದೆ.

ಸೈಟ್‌ ಸೀಯಿಂಗ್‌

ರೆಸಾರ್ಟ್‌ ಉಳಿದುಕೊಳ್ಳುವುದಕ್ಕಾಗಿ, ಮೂರು ಹೊತ್ತು ಶುಚಿ, ರುಚಿಯಾದ ಆಹಾರ ಸೇವನೆಗಾಗಿ. ಉಳಿದಂತೆ ಸಮಯದ ಸದ್ವಿನಿಯೋಗಕ್ಕಾಗಿ ರೆಸಾರ್ಟ್‌ ಪಕ್ಕದಲ್ಲೇ ಇರುವ ತಾಣಗಳಿಗೆ ಭೇಟಿ ನೀಡುತ್ತೇನೆ ಎನ್ನುವವರು ನೀವಾದರೇ ಚಿಂತಿಸಲೇಬೇಡಿ. ಮನೋಮಯ ಪಕ್ಕದಲ್ಲೇ ಅನೇಕ ಪ್ರವಾಸಿ ತಾಣಗಳಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಸೂಪಾ ಡ್ಯಾಮ್‌, ಬ್ಯಾಕ್‌ ವಾಟರ್‌, ಡಿಸ್ನೀ ಪಾರ್ಕ್‌, ಕ್ರೊಕೊಡೈಲ್‌ ಪಾರ್ಕ್‌ ಹೀಗೆ ಎಲ್ಲವೂ ಮನೋಮಯ ಪಕ್ಕದಲ್ಲೇ ಇದ್ದು ಎಂಜಾಯ್‌ ಮಾಡಲು ಮರೆಯಬೇಡಿ.

ವಿಳಾಸ:

ಹಳಿಯಾಳ - ದಾಂಡೇಲಿ ರಸ್ತೆ, ಕೆರವಾಡ, ದಾಂಡೇಲಿ, ಕರ್ನಾಟಕ 581325

ಸಂಪರ್ಕ ಸಂಖ್ಯೆ:

+919019264867