ಈಗಷ್ಟೇ ಮದುವೆಯಾದ ನವ ಜೋಡಿಗಳು ಹನಿಮೂನ್‌ಗೆ ಹೋಗುವ ಪ್ಲ್ಯಾನ್‌ನಲ್ಲಿದ್ದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಯುರೋಪ್‌ನ ಈ ಕೆಲವು ಜಾಗಗಳಿಗೆ ಹೋಗಿ ಬರಬಹುದು. ಹನಿಮೂನ್‌ ಮೂಡ್‌ನಲ್ಲಿರುವವರಿಗೆ ಈ ತಾಣಗಳು ಮಧುರಾನುಭೂತಿಯನ್ನು ನೀಡುತ್ತವೆ. ಹಾಗಿದ್ದರೆ ದಿ ಬೆಸ್ಟ್‌ ಹನಿಮೂನ್‌ ತಾಣಗಳು ಯಾವುವು? ತಿಳಿದುಕೊಳ್ಳೋಣ ಬನ್ನಿ. ಹೊಸದಾಗಿ ವಿವಾಹವಾದ ಜೋಡಿಗಳು ವಿದೇಶದಲ್ಲಿ ಹನಿಮೂನ್‌ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿದ್ದರೆ ಈ ಹನಿಮೂನ್‌ ಸ್ಪಾಟ್‌ಗಳಿಗೆ ಹೋಗಬಹುದು

ಸ್ಯಾಂಟೊರಿನಿ, ಗ್ರೀಸ್
ಗ್ರೀಸ್‌ ದೇಶದಲ್ಲಿರುವ ಸ್ಯಾಂಟೋರಿ ಪ್ರಸಿದ್ಧವಾದ ದ್ವೀಪವಾಗಿದೆ. ಇಲ್ಲಿನ ಕಡಲತೀರಗಳಲ್ಲಿ ನಿಂತು ಸೂರ್ಯಾಸ್ತಗಳನ್ನು ನೋಡುವುದೇ ಒಂದು ರೀತಿಯ ಅನುಭವ. ಅನನ್ಯವಾದ ವಾಸ್ತುಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲಿನ ವಾತಾವರಣವು ಅಲ್ಲಿನ ಹನಿಮೂನ್‌ ಮೂಡ್‌ನಲ್ಲಿರುವ ಜೋಡಿಗಳಿಗೆ ಹೇಳಿ ಮಾಡಿಸಿದಂತಿದೆ. ಫೆಬ್ರವರಿಯಿಂದ ಮೇ ವರೆಗೆ ಸ್ಯಾಂಟೊರಿನಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಅಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತಮ ಎರಡೂ ಅತ್ಯದ್ಭುತ! ಅಲ್ಲಿ ಮಾನ್ಸೂನ್‌ ಸಮಯದಲ್ಲಿ ಬೀಳುವ ಹಿಮ ಹಿತವಾದ ಅನುಭವವನ್ನು ನೀಡುತ್ತದೆ.

santoreni

ಅಮಾಲ್ಫಿ ಕೋಸ್ಟ್‌, ಇಟಲಿ
ಇಟಲಿ ಅಮಾಲ್ಪಿ ಕೋಸ್ಟ್ ಯುರೋಪಿನ ಆಕರ್ಷಕ ತಾಣವಾಗಿದೆ. ಇಲ್ಲಿ ಕ್ಯಾಪ್ರಿಯನ್ನು ದೋಣಿಯಲ್ಲಿ ಎಂಜಾಯ್‌ ಮಾಡಬಹುದು. ಅಲ್ಲಿನ ನೈಸರ್ಗಿಕ ಸೌಂದರ್ಯ, ಬ್ಲೂ ಗ್ರೊಟ್ಟೊ ಹೆಸರುವಾಸಿಯಾಗಿದೆ. ಅನಾಕಾಪ್ರಿ ಮತ್ತು ಕ್ಯಾಪ್ರಿ ಟೌನ್‌ನಂತಹ ದ್ವೀಪದ ಸುಂದರವಾದ ಪಟ್ಟಣಗಳು ​​ಸೊಗಸಾದ ಬೂಟೀಕ್‌ಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಮಧುಚಂದ್ರದ ಜೋಡಿಗಳಿಗೆ ಇದು ದಿ ಬೆಸ್ಟ್‌ ತಾಣ ಎಂದೇ ಹೇಳಬಹುದು. ಇಟಲಿಯ ಹತ್ತಾರು ತಾಣಗಳಲ್ಲಿ ಅಮಾಲ್ಫಿ ಎಲ್ಲರನ್ನೂ ತನ್ನತ್ತ ಸೆಳೆಯುವ ವಿಶೇಷವಾದ ತಾಣ. ಆಗಸ್ಟ್‌ನಿಂದ ಅಕ್ಟೋಬರ್‌ ತಿಂಗಳ ಅವಧಿಯಲ್ಲಿ ಈ ತಾಣಕ್ಕೆ ಭೇಟಿ ನೀಡುವುದು ಉತ್ತಮ.

amalfi

ಮಡೈರಾ,ಪೋರ್ಚುಗಲ್
ಪೋರ್ಚುಗಲ್‌ನ ಮಡೈರಾ ದ್ವೀಪವನ್ನು "ಐಲ್ಯಾಂಡ್ ಆಫ್ ಎಟರ್ನಲ್ ಸ್ಪ್ರಿಂಗ್" ಎಂದು ಪ್ರವಾಸಿಗರು ಕರೆಯುತ್ತಾರೆ. ಸುಂದರವಾದ ನೈಸರ್ಗಿಕ ವಾತಾವರಣಕ್ಕೆ ಈ ತಾಣ ಹೆಸರುವಾಸಿಯಾಗಿದೆ. ಆಫ್ರಿಕಾದ ವಾಯುವ್ಯ ಕರಾವಳಿಯಲ್ಲಿ ನೆಲೆಗೊಂಡಿರುವ ಈ ಪೋರ್ಚುಗೀಸ್ ದ್ವೀಪವು ಹಚ್ಚ ಹಸುರಿನ ಅರಣ್ಯದೊಂದಿಗೆ ಕಂಗೊಳಿಸುತ್ತದೆ. ಚಾರಣ ಪ್ರಿಯರಿಗೂ ಬೆಸ್ಟ್‌ ಫೀಲ್‌ ಕೊಡುತ್ತದೆ. ಹನಿಮೂನ್‌ ಜೋಡಿಗಳ ಫೋಟೊ ಶೂಟ್‌ಗೆ ಹತ್ತಾರು ಫೋಟೊ ಸ್ಪಾಟ್‌ಗಳು ಇಲ್ಲಿವೆ. ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

Madeira