ಪ್ರಕೃತಿಯ ಚಿತ್ತಾರಗಳು, ವಿನ್ಯಾಸಗಳು ಅನೇಕ ಬಾರಿ ನಮ್ಮನ್ನು ಬೆರಗಾಗುವಂತೆ ಮಾಡುತ್ತದೆ. ಅಂತಹ ಅಚ್ಚರಿಗಳ ಪೈಕಿ ಪೋರ್ಚುಗಲ್‌ ನ ಅಲ್ಗಾರ್ವೆಯ ಕ್ಯಾಸ್ಟ್ರೋ ಮಾರಿಮ್ ಪುರಸಭೆಯಲ್ಲಿರುವ ಒಡೆಲೈಟ್ ನದಿ (Odeleite River)ಗೆ ಕಟ್ಟಲಾದ ಈ ಅಣೆಕಟ್ಟು ಎಲ್ಲರನ್ನೂ ತಿರುಗಿ ನೋಡುವಂತೆ ಮಾಡಿದೆ.

ಅಚ್ಚರಿಯ ʻಬ್ಲೂ ಡ್ರ್ಯಾಗನ್‌ ನದಿʼ

ಚೀನಿ ಪುರಾಣಗಳಲ್ಲಿ ಡ್ರ್ಯಾಗನನ್ನು ಪವಿತ್ರವಾದುದೆಂದು ಪರಿಗಣಿಸಲಾಗಿದೆ. ಅಲ್ಲದೆ ಚೀನಿ ಸಂಸ್ಕೃತಿಯಲ್ಲಿ ಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ ಡ್ರ್ಯಾಗನ್‌ ಗಳನ್ನು ಬಿಂಬಿಸಲಾಗುತ್ತದೆ. ಅಂತಹ ಡ್ರ್ಯಾಗನ್‌ ರೂಪದ ಅಣೆಕಟ್ಟೊಂದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

Blue Dragon

ಪೋರ್ಚುಗಲ್‌ ನ ಅಲ್ಗಾರ್ವೆಯ ಕ್ಯಾಸ್ಟ್ರೋ ಮಾರಿಮ್ ಪುರಸಭೆಯ ಸಮೀಪದ ಹಾದು ಹೋಗುವ ಒಡೆಲೈಟ್ ನದಿಗೆ ಕಟ್ಟಲಾದ ಅಣೆಕಟ್ಟು ಮೇಲಿನಿಂದ ನೋಡಿದಾಗ ಸುಂದರವಾದ 'ಡ್ರ್ಯಾಗನ್' ಆಕಾರವನ್ನು ಹೊಂದಿದೆ. ಅಲ್ಲದೆ ಅದರ ಕಡು ನೀಲಿ ಬಣ್ಣದಿಂದಾಗಿ, ನದಿಯನ್ನು 'ಬ್ಲೂ ಡ್ರ್ಯಾಗನ್ ನದಿ' ಎಂದೂ ಕರೆಯಲಾಗುತ್ತದೆ. ಕ್ಯಾಸ್ಟ್ರೋ ಮಾರಿಮ್‌ ಮೂಲಕ ಹರಿದುಹೋಗುವ ಈ ನದಿ ಅಂತಿಮವಾಗಿ ಗ್ವಾಡಿಯಾನಾ ನದಿಯನ್ನು ಸೇರುತ್ತವೆ. ಇದು ಪೋರ್ಚುಗಲ್‌ ಮತ್ತು ಸ್ಪೇನ್‌ ನಡುವಿನ ಗಡಿಯನ್ನು ರೂಪಿಸುತ್ತದೆ.

blue-dragon-river-ou-rio-do-dragao-azul-saiba-onde-fica-e-o-porque-de-um-nome-que-faz-alusao-a-criatura-mitologica-geografia-1723419122859_1280

ಅಂತಾರಾಷ್ಟ್ರೀಯ ಗಮನ ಸೆಳೆದ ಡ್ರ್ಯಾಗನ್‌ ಆಕಾರ:

ಈ ಭವ್ಯ ನದಿಯ ಇತಿಹಾಸದ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೆ 2010ರಲ್ಲಿ ಅಲ್ಗಾರ್ವೆ ಪ್ರದೇಶದ ಮೇಲೆ ವಿಮಾನ ಯಾನದಲ್ಲಿದ್ದಾಗ ಬ್ರಿಟೀಷ್‌ ಛಾಯಾಗ್ರಾಹಕ ಸ್ಟೀವ್‌ ರಿಚರ್ಡ್‌ ಎಂಬಾತ ಈ ವಿಶೇಷ ಆಕಾರವನ್ನು ಸೆರೆಹಿಡಿದಿದ್ದಾರೆ. ಅವರು ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ವೈಮಾನಿಕ ಛಾಯಾಚಿತ್ರವು ನದಿಯ ಡ್ರಾಗನ್‌ ತರಹದ ಆಕಾರವನ್ನು ತೋರಿಸಿದ ನಂತರ ಈ ನದಿಯು ಅಂತಾರಾಷ್ಟ್ರೀಯ ಗಮನ ಸೆಳೆಯಿತು. ವಿಶೇಷವಾಗಿ ಚೀನಿ ಪ್ರವಾಸಿಗರ ಮನ ಸೆಳೆದಿದೆ.