ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಾಂಕ 2026ರ ಪಟ್ಟಿಯಲ್ಲಿ ಭಾರತ 80ನೆಯ ಸ್ಥಾನಕ್ಕೆ ಜಿಗಿದಿದೆ. ಕಳೆದ ಬಾರಿ ಅಂದರೆ 2025ರಲ್ಲಿ 85ನೆಯ ಸ್ಥಾನದಲ್ಲಿದ್ದ ಭಾರತದ ಪಾಸ್‌ಪೋರ್ಟ್‌ ಐದು ಸ್ಥಾನಗಳ ಏರಿಕೆ ಕಂಡಿದೆ. ಇದು ಜಾಗತಿಕವಾಗಿ ಹೆಚ್ಚುತ್ತಿರುವ ಭಾರತದ ರಾಜತಾಂತ್ರಿಕ ಪ್ರಭಾವವನ್ನು ಸೂಚಿಸುತ್ತದೆ. ಈ ಮೂಲಕ ಭಾರತೀಯ ನಾಗರಿಕರಿಗೆ ಒಟ್ಟು 55 ದೇಶಗಳಿಗೆ ವಿಸಾ ರಹಿತ ಅಥವಾ ವಿಸಾ ಆನ್‌ ಅರೈವಲ್‌ ಮೂಲಕ ವಿದೇಶ ಪ್ರಯಾಣ ಮಾಡಲು ಅವಕಾಶ ಸಿಕ್ಕಿದೆ.

ಪಾಸ್‌ಪೋರ್ಟ್ ಇದ್ದು, ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಪ್ರವೇಶಿಸಬಹುದು ಎಂಬ ಆಧಾರದ ಈ ಪಟ್ಟಿ ಸಿದ್ಧವಾಗುತ್ತದೆ. ಈ ಶ್ರೇಣಿಯನ್ನು ಐಎಟಿಎ ನಿಂದ ಮಾಹಿತಿ ಪಡೆದು ಹೆನ್ಲಿ ಆಂಡ್‌ ಪಾರ್ಟ್ನರ್ಸ್ ಸಂಸ್ಥೆಯ ಸಂಶೋಧನೆಯ ಆಧಾರದಲ್ಲಿ ಸಿದ್ಧಪಡಿಸಲಾಗಿದೆ.

ಹೆನ್ಲಿ ಸೂಚ್ಯಾಂಕದಲ್ಲಿ ಸಿಂಗಾಪೂರ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಸತತ ಮೂರನೆಯ ಬಾರಿಯಾಗಿದೆ. ಇದರಿಂದ ಸಿಂಗಾಪೂರ ಪಾಸ್‌ಪೋರ್ಟ್‌ ಹೊಂದಿರುವವರು ಜಾಗತಿಕ ಒಟ್ಟು 227 ದೇಶಗಳಲ್ಲಿ 192 ದೇಶಗಳಿಗೆ ವೀಸಾ ರಹಿತ ಸಂಚಾರ ಮಾಡಬಹುದಾಗಿದೆ.

ಟಾಪ್ 10 ಸ್ಥಾನಗಳಲ್ಲಿರುವ ಪಾಸ್‌ಪೋರ್ಟ್‌ಗಳು

  1. ಸಿಂಗಾಪೂರ - 192 ದೇಶಗಳಿಗೆ ವೀಸಾ-ರಹಿತ ಪ್ರವೇಶ
  2. ಜಪಾನ್ ಮತ್ತು ದಕ್ಷಿಣ ಕೊರಿಯಾ - 188 ದೇಶಗಳು ವೀಸಾ-ರಹಿತ ಪ್ರವೇಶ
  3. ಡೆನ್ಮಾರ್ಕ್, ಸ್ಪಿಟ್ಟರ್‌ಲ್ಯಾಂಡ್, ಸ್ವೀಡನ್, ಸ್ಪೇನ್, ಲಕ್ಸಂಬರ್ಗ್ - 186 ದೇಶಗಳಿಗೆ ವೀಸಾ-ರಹಿತ ಪ್ರವೇಶ
  4. ಆಸ್ಟ್ರಿಯಾ, ಬೆಲ್ಕಿಯಂ, ಫಿನ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ – 185 ದೇಶಗಳಿಗೆ ವೀಸಾ-ರಹಿತ ಪ್ರವೇಶ
  5. ಯುಎಇ (UAE), ಹಂಗೇರಿ, ಪೋರ್ಚುಗಲ್ -184 ದೇಶಗಳಿಗೆ ವೀಸಾ-ರಹಿತ ಪ್ರವೇಶ
  6. ನ್ಯೂಜಿಲೆಂಡ್, ಪೋಲೆಂಡ್, ಜೆಕ್ ಗಣರಾಜ್ಯ -183 ದೇಶಗಳಿಗೆ ವೀಸಾ-ರಹಿತ ಪ್ರವೇಶ
  7. ಯುನೈಟೆಡ್ ಕಿಂಗ್‌ಡಮ್ (UK), ಆಸ್ಟ್ರೇಲಿಯಾ -182 ದೇಶಗಳಿಗೆ ವೀಸಾ-ರಹಿತ ಪ್ರವೇಶ
  8. ಕೆನಡಾ, ಐಸ್‌ಲ್ಯಾಂಡ್‌ -181 ದೇಶಗಳಿಗೆ ವೀಸಾ-ರಹಿತ ಪ್ರವೇಶ
  9. ಮಲೇಷ್ಯಾ -180 ದೇಶಗಳಿಗೆ ವೀಸಾ-ರಹಿತ ಪ್ರವೇಶ
  10. ಅಮೆರಿಕ ಸಂಯುಕ್ತ ಸಂಸ್ಥಾನ (USA) -179 ದೇಶಗಳಿಗೆ ವೀಸಾ-ರಹಿತ ಪ್ರವೇಶ