ಟ್ರಾವೆಲ್‌ ಮಾಡೋದು ಇಷ್ಟ ಆಗತ್ತ?

ಸದ್ಯಕ್ಕೆ ಕೆಲಸದ ನಿಮಿತ್ತ ಟ್ರಾವೆಲ್‌ ಮಾಡೋದೇ ಆಗಿದೆ. ಆದರೆ, ಕೆಲಸದ ನಡುವೆಯೂ ಹೊಸ ಹೊಸ ಜಾಗಗಳಿಗೆ ಭೇಟಿ ನೀಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಇತ್ತೀಚೆಗೆ ಒಂದು ಚಿತ್ರದ ಶೂಟಿಂಗ್‌ಗಾಗಿ ಧಾರವಾಡದ ಬಳಿ ಹೋಗಿದ್ದೆ. ಹಾಗೇ ಅಲ್ಲಿಂದ ಎಲ್ಲೋ ಒಳಗಿರುವ ಹಳ್ಳಿಯಲ್ಲಿ ಎರಡು ದಿನಗಳ ಕಾಲ ಉಳಿದಿದ್ದೆ. ಅಲ್ಲಿನ ಜನರ ಜತೆ ಬೆರೆಯುವುದು, ಅವರ ಕಥೆ ಕೇಳುವುದು ಹೊಸ ಅನುಭವ ಕೊಡುತ್ತದೆ. ಅವರ ಜೂವನ ಶೈಲಿ ತಿಳಿಯುವುದು ಎಂದರೆ ಹೆಚ್ಚು ಖುಷಿ.

ಯಾವ ಜಾಗಕ್ಕೆ ಹೋಗಲು ಹೆಚ್ಚು ಇಷ್ಟ ಪಡುತ್ತೀರಿ?

ನನಗೆ ಕಾಡು ಬಹಳ ಇಷ್ಟ. ಯಾವುದೇ ಸಣ್ಣ ಅವಕಾಶ ಸಿಕ್ಕರೂ ಗೆಳೆಯರ ಜತೆಗೆ ಕಾಡಿಗೆ ಹೋಗಿ ಉಳಿದುಕೊಳ್ಳಲು ಪ್ಲಾನ್‌ ಮಾಡುತ್ತೇನೆ.

ಐಕಾನಿಕ್‌ ನಟಿಯ ಟ್ರಾವೆಲ್‌ ಕಹಾನಿ

ಪ್ರಯಾಣ ಅನ್ನೋದು ನಿಮ್ಮ ಕೆಲಸದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?

ಹಾಗೆ ನೋಡಿದರೆ ಪ್ರಯಾಣ ಮತ್ತು ಸಿನಿಮಾ ಎರಡೂ ಜತೆ ಜತೆಯಾಗಿಯೇ ಸಾಗುತ್ತದೆ. ಹೊಸ ಜಾಗವನ್ನು ಹುಡುಕುವುದು, ಅಲ್ಲಿ ಶೂಟ್‌ ಮಾಡುವುದು ಎಲ್ಲವೂ ನಮ್ಮ ಕೆಲಸದ ಭಾಗ. “ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎನ್ನುವ ಹಾಗೆ ಓದು ಮತ್ತು ಪ್ರವಾಸ ಎರಡೂ ಮುಖ್ಯ. ನನಗೆ ಬರವಣಿಗೆಯಲ್ಲೂ ಹೆಚ್ಚು ಆಸಕ್ತಿ ಇರುವುದರಿಂದ, ಒಂದಿಷ್ಟು ಹೊಸ ಯೋಚನೆಗಳು ಹುಟ್ಟುವುದೇ ಪ್ರಯಾಣದಿಂದ. ಹೊಸ ಜಾಗ ನೋಡಿದಾಗ ಅಥವಾ ಡ್ರೈವ್‌ ಮಾಡಿದಾಗ ಮನಸ್ಸು ತೆರೆದುಕೊಳ್ಳುತ್ತದೆ. ಪ್ರಪಂಚ ನೋಡಿದಾಗ ಹಾಗೂ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಕಥೆಗಳು ಸೃಷ್ಟಿಯಾಗುತ್ತವೆ.

New Project (49)

ನಿಮ್ಮ ಪ್ರಕಾರ ಪ್ರವಾಸ ಅಂದ್ರೇನು?

ನನ್ನ ಪ್ರಕಾರ ನಾವು ಭೂಮಿಗೆ ಬಂದಿದ್ದೇ ಒಂದು ಪ್ರಯಾಣ. ಭೂಮಿಗೆ ಬಂದ ಮೇಲೆ ಭೂಮಿಯನ್ನೇ ಸರಿಯಾಗಿ ನೋಡಿಲ್ಲ ಎಂದರೆ ಹೇಗೆ? ಇದೊಂದು ರೀತಿ ಪ್ರವಾಸಕ್ಕೆಂದು ಯಾವುದೋ ಸುಂದರ ಜಾಗಕ್ಕೆ ಹೋಗಿ ಹೊಟೇಲ್‌ ರೂಮ್‌ ಅಲ್ಲಿ ಕುಳಿತ ಹಾಗಾಗುತ್ತದೆ. ಭೂಮಿಗೆ ಬಂದು ಮನೆಯಲ್ಲಿ ಕೂರಬಾರದು. ವಾಪಸ್‌ ಹೋಗುವ ಮುನ್ನ ಭೂಮಿಯನ್ನು ಆದಷ್ಟು ನೋಡಬೇಕು. ಹೆಚ್ಚೆಚ್ಚು ಜಾಗಗಳಿಗೆ ತಿರುಗಬೇಕು.

ನಿಮ್ಮ ಪ್ರೊಫೆಷನ್‌ ಕೂಡ ಇದಕ್ಕೆ ಪೂರಕ ಅಲ್ಲವೆ?

ಹೌದು, ನನ್ನ ಕೆಲಸ ಇದಕ್ಕೆ ಬಹಳ ಸಹಾಯ ಮಾಡುತ್ತದೆ. ಯಾವುದೋ ಸಿನಿಮಾ ಚಿತ್ರೀಕರಣಕ್ಕೆ ಯಾವುದೋ ಹಳ್ಳಿಗೆ ಹೋಗುತ್ತೇವೆ. ಅಲ್ಲಿ ಯಾರದ್ದೋ ಮನೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಅಲ್ಲಿಯ ವ್ಯಕ್ತಿಗಳ ಹಾಗೂ ಜಾಗಗಳ ಪರಿಚಯವಾಗುತ್ತದೆ. ಅವರನ್ನು ಪರಿಚಯ ಮಾಡಿಕೊಂಡು ಅವರ ಜತೆ ತಿರುಗಳೂ ಹೋಗಿದ್ದಿದೆ.

ಯಾವುದಾದರು ಅನುಭವ ಹಂಚಿಕೊಳ್ಳಬಹುದಾ?

ಇತ್ತೀಚೆಗೆ ಗುಜರಾತ್‌ನ ದಿವ್‌ ಅಲ್ಲಿ ಶೂಟ್‌ ಮಾಡುತ್ತಿದ್ದೆ. ಆಗ ನನಗೆ ಸಿಕ್ಕ ಚಾಲಕರೆಲ್ಲ ಸ್ಥಳೀಯರು. ಅವರನ್ನು ಪರಿಚಯ ಮಾಡಿಕೊಂಡು ಅವರ ಜತೆಗೆ ತಿರುಗಾಟಕ್ಕೆ ಹೋಗಿದ್ದೆ. ಶೂಟ್‌ ಮುಗಿದ ಬಳಿಕವೂ ಮೂರ್ನಾಲ್ಕು ದಿನ ಅದೇ ಹಳ್ಳಿಯಲ್ಲಿ ಉಳಿದುಕೊಂಡಿದ್ದೆ. ನಾಗತಿಹಳ್ಳಿ ಸರ್‌ ಜತೆ ಅಮೆರಿಕಕ್ಕೆ ಚಿತ್ರೀಕರಣಕ್ಕೆ ಹೋದಾಗ ಅಮೆರಿಕ ಸುತ್ತುವ ಅವಕಾಶ ಸಿಕ್ಕಿತು. 45-50 ದಿನಗಳ ಕಾಲ ಅಲ್ಲೇ ಉಳೀದುಕೊಂಡಿದ್ದೆ. ನನಗೊಂದು ಕಾರ್‌ ಕೊಟ್ಟಿದ್ದರು. ಆ ಕಾರನ್ನೇ ಸಿನಿಮಾದಲ್ಲೂ ಬಳಸಿದ್ದು. ನಾನು ಆ ಕಾರ್‌ ತಗೊಂಡು ತಿರುಗಾಡಕ್ಕೆ ಹೋಗಿದ್ದೆ. ಅಲ್ಲಿ ಡ್ರೈವ್‌ ಮಾಡುವುದು ವಿಶೇಷ ಅನುಭವವಾಗಿತ್ತು. ಮೌಂಟ್‌ ರೇನಿಯರ್‌ ಅಂತ ಒಂದು ಆಕ್ಟಿವ್‌ ವಾಲ್ಕೆನೊ ಇರುವ ಜಾಗ, ಮೌಂಟ್‌ ಬೇಕರ್‌ ಎಂಬ ಹಿಮ ತುಂಬಿರುವ ಪ್ರದೇಶ ಸೇರಿದಂತೆ ಹಲವು ಸ್ಥಳಗಳನ್ನು ನೋಡಿದೆ. ಅಲ್ಲೆಲ್ಲ ಡ್ರೈವ್‌ ಮಾಡಿದೆ. ಆಗೆಲ್ಲ, ನಾವು ನೋಡಬೇಕಾದ ಸ್ಥಳಗಳು ಎಷ್ಟಿದೆಯಲ್ಲ ಅನಿಸುತ್ತಿತ್ತು!

New Project (48)

ಕರ್ನಾಟಕದಲ್ಲಿ ಏನೆಲ್ಲ ಇಷ್ಟ?

ಕರ್ನಾಟಕದಲ್ಲಿರುವಷ್ಟು ವೈವಿಧ್ಯ ಪ್ರದೇಶಗಳು ಬೇರೆಲ್ಲೂ ಇಲ್ಲ ಅನಿಸುತ್ತದೆ. ಎಲ್ಲಾ ಥರದ ಜಾಗಗಳು ಇಲ್ಲಿವೆ. ಬಯಲು ಪ್ರದೇಶಕ್ಕೆ ಹೋದರೆ ಉತ್ತರ ಭಾರತಕ್ಕೆ ಹೋದ ಅನುಭವ ಆಗುತ್ತದೆ. ಪಶ್ಚಿಮ ಘಟ್ಟದ ಹಸಿರು ನೋಡಿದಾಗ ಕೇರಳಕ್ಕೆ ಹೋದ ಅನುಭವ ಆಗುತ್ತದೆ. ಚಿಕ್ಕಮಗಳೂರು, ಮಡಿಕೇರಿ ಕಾಶ್ಮೀರದಂತನಿಸುತ್ತದೆ. ಹೊನ್ನಾವರ, ಮಲ್ಪೆ, ಕುಂದಾಪುರದಲ್ಲಿರುವಂಥ ಬೀಚ್‌ಗಳು ಗೋವಾದಲ್ಲೂ ಇಲ್ಲ. ಈಗ ಉಡುಪಿ ಕಡಲು ತೀರ ಎಲ್ಲ ಬಹಳ ಅಭಿವೃದ್ಧಿಯಾಗಿದೆ. ಬಹಳ ದಿನಗಳ ನಂತರ ಬೀಚ್‌ ಹೋಗಿ ನೋಡಿ ಶಾಕ್‌ ಆಗಿದ್ದೆ. ಬುಕ್‌ ಓದುವಷ್ಟೇ ಪ್ರಯಾಣ ಕೂಡ ಮುಖ್ಯ. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಂತಾಗುತ್ತೇವೆ.

ಅದಿತಿ ಪ್ರಭುದೇವ ಟ್ರಾವೆಲ್‌ ಲೈಫ್‌

ಹೋಗಲೇಬೇಕು ಅಂದುಕೊಂಡಿರುವ ಜಾಗ ಯಾವುದಾದ್ರೂ ಇದ್ಯಾ?

ಹಿಮಾಲಯಕ್ಕೆ ಹೋಗಿ ಒಂದೆರಡು ತಿಂಗಳು ಸುಮ್ಮನೆ ಇರಬೇಕು ಎಂಬ ಆಸೆಯಿದೆ. ಅದು ನನ್ನ ಬಹುದೊಡ್ಡ ಕನಸು. ಉತ್ತರಾಖಂಡ, ರಿಷಿಕೇಶ್, ಡೆಹರಾಡುನ್‌ ಎಲ್ಲ ಹೋಗಿದ್ದೇನೆ. ಆದರೆ, ಹಿಮಾಲಯಕ್ಕೆ ಹೋಗಿಲ್ಲ. ಇಲ್ಲಿ ಯಾವುದೇ ಕೆಲಸ, ಯೋಚನೆ ಇಲ್ಲದೇ ಅಲ್ಲಿ ಹೋಗಿ ಇರುವ ಆಸೆಯಿದೆ.

New Project (50)

ಯಾವ ರೀತಿ ಟ್ರಾವೆಲ್‌ ಇಷ್ಟಪಡ್ತೀರಿ? ಪ್ಲಾನ್ಡ್‌ ಅಥವಾ ಅನ್‌ಪ್ಲಾನ್ಡ್‌?

ಅನ್‌ಪ್ಲಾನ್ಡ್‌ ಟ್ರಿಪ್‌ ಬಹಳ ಇಷ್ಟ. ನಾನು ಬಹಳ ಸಮಯ ಒಬ್ಬನೇ ಟ್ರಾವೆಲ್‌ ಮಾಡುತ್ತೇನೆ. ಒಬ್ಬನೇ ಟ್ರೈವ್‌ ಮಾಡುವುದು ಇಷ್ಟ. ಎಲ್ಲೇ ದೂರ ಶೂಟ್‌ ಇದ್ದರೂ ವಿಮಾನದಲ್ಲಿ ಹೋಗಲು ಇಷ್ಟಪಡುವುದಿಲ್ಲ. ಡ್ರೈವ್‌ ಮಾಡಿಕೊಂಡು ಹೋಗುವದು ಖುಷಿ. ದಾರಿಯಲ್ಲಿ ಒಂದಿಷ್ಟು ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್‌ ಮಾಡಲು ಅವಕಾಶ ಇರುತ್ತದೆ. ಸೋಲೋ ಟ್ರಾವೆಲ್‌ ಕೂಡ ಬಹಳ ಇಷ್ಟ. ಇನ್ನು ಫ್ಯಾಮಿಲಿ ಜತೆ ಹೋಗುವಾಗ ಮಾತ್ರ ಎಲ್ಲವನ್ನೂ ಪ್ಲಾನ್‌ ಮಾಡಿ ಹೋಗಬೇಕಾಗುತ್ತದೆ.

ಹೊಸ ಫುಡ್‌ ಟ್ರೈ ಮಾಡ್ತೀರಾ?

ಆಹಾರ ಹೆಚ್ಚು ಇಷ್ಟಪಡುವ ಫುಡೀ ಏನಲ್ಲ ನಾನು. ಅದರಲ್ಲೂ ಡಯಟ್‌ ಎಲ್ಲ ಮಾಡಬೇಕಾಗಿದ್ದರಿಂದ ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವ ಅವಕಾಶವೂ ಇಲ್ಲ. ಮಂಗಳೂರು ಶೈಲಿಯ ಆಹಾರ ಬಹಳ ಇಷ್ಟ ನನಗೆ.