ಇಂದಿನ ಜೀವನವೇ ನಿಲ್ಲದ ಓಟದಂತಾಗಿಬಿಟ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗ್ಯಾಜೆಟ್‌ಗಳ ಸಂಗ, ಕೆಲಸದ ಒತ್ತಡ, ಅಸ್ಥಿರ ದಿನಚರಿ-ಇವೆಲ್ಲ ನಮ್ಮ ದೇಹ ಮತ್ತು ಮನಸ್ಸನ್ನು ನಿರಂತರವಾಗಿ ಬಿಗಿದಿಡುತ್ತಿವೆ. ಇದರ ಫಲವಾಗಿ, ನಿದ್ರೆ ಎನ್ನುವ ಅಮೂಲ್ಯವಾದ ವರವೇ ನಮ್ಮ ಕೈತಪ್ಪುತ್ತಿದೆ. ʼಲೋಕಲ್‌ ಸರ್ಕಲ್ಸ್ʼ ಸಮೀಕ್ಷೆಯ ಪ್ರಕಾರ, ಭಾರತದ ಜನರಲ್ಲಿ 61% ಜನರು ದಿನಕ್ಕೆ ಆರು ಗಂಟೆಗಳೂ ಗಾಢ ನಿದ್ರೆಗೆ ಜಾರುವುದಿಲ್ಲ. ನಿದ್ರೆ ಹಾಳಾದಾಗ ದೇಹ ಮಾತ್ರವಲ್ಲ, ಮನಸ್ಸು ಕೂಡ ಹುಮ್ಮಸ್ಸು ಕಳೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಪ್ರವಾಸೋದ್ಯಮ ಕ್ಷೇತ್ರ ತನ್ನ ಹೊಸ ಇನಿಷೇಯಿಟಿವ್ ಮೂಲಕ ಪರಿಹಾರ ಒದಗಿಸುವ ಪ್ರಯತ್ನ ಮಾಡಿದೆ. ಅದುವೇ “ಸ್ಲೀಪ್ ಟೂರಿಸಂ”. ಇದು ಕೇವಲ ಪ್ರವಾಸವಲ್ಲ, ಆರೋಗ್ಯ ಮತ್ತು ನೆಮ್ಮದಿಯ ಸಂಗಮ.

ಹಿಮಾಲಯದ ಆನಂದ (ಋಷಿಕೇಶ್):

ಹಿಮಾಲಯದ ನಿಶ್ಶಬ್ದತೆ, ಗಾಳಿಯ ತಂಪು, ಪ್ರಕೃತಿಯ ಮೌನ, all combine to calm the restless mind ಎನ್ನುವ ಹಾಗೆ ಇಲ್ಲಿ ಯೋಗನಿದ್ರೆ, ಶಿರೋಧಾರಾ, ಸ್ಪಾ ಚಿಕಿತ್ಸೆಗಳು ದೇಹದ ಗಡಿಯಾರವನ್ನು ಸರಿಪಡಿಸಿ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ. ಇಲ್ಲಿ ಒಂದು ದಿನ ಕಳೆಯುವುದರಿಂದ ಮನಸ್ಸು ಹಗುರವಾಗಿ ಹೊಸ ಚೈತನ್ಯ ತುಂಬುತ್ತದೆ.

atmantan resort

ಆತ್ಮನ್ತನ್, ಮುಲ್ಶಿ (ಮಹಾರಾಷ್ಟ್ರ):

ಇಲ್ಲಿನ “ರೆಸ್ಟ್ ಅಂಡ್ ರಿಜುವನೆಷನ್” ಕಾರ್ಯಕ್ರಮ ನಿದ್ರೆಯ ಗುಣಮಟ್ಟವನ್ನು ವೃಧ್ದಿಸಲು ರೂಪಿಸಲಾಗಿದೆ. ಉಸಿರಾಟಾಭ್ಯಾಸ, ಯೋಗ, ಮ್ಯಾಗ್ನೀಷಿಯಂ ಸಮೃದ್ಧ ಆಹಾರ, ಸ್ಪಾ ಮುಂತಾದ ಸೌಲಭ್ಯಗಳು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ವಿಶೇಷವೆಂದರೆ, ಇಲ್ಲಿಗೆ ಬರುವ ಅತಿಥಿಗಳು ತಮ್ಮ ನಿದ್ರೆಯ ಸುಧಾರಣೆಯನ್ನು ತಾವು ಧರಿಸುವ ಸ್ಮಾರ್ಟ್ ಸಾಧನಗಳ ಮೂಲಕ ಟ್ರ್ಯಾಕ್ ಮಾಡಿಕೊಳ್ಳಬಹುದಾಗಿದೆ. ಪ್ರಕೃತಿಯ ಮಧ್ಯೆ ಆರೋಗ್ಯ ಮತ್ತು ತಂತ್ರಜ್ಞಾನ ಮೇಳೈಸುವ ಅಪೂರ್ವ ಅನುಭವ ಇದು.

swaswara

ಸ್ವಸ್ವರ, ಗೋಕರ್ಣ (ಕರ್ನಾಟಕ):

ಓಂ ಬೀಚ್‌ನ ಸಮುದ್ರ ಅಲೆಗಳ ಮಧ್ಯೆ ಇರುವ ಈ ರೆಸಾರ್ಟ್ ನಿದ್ರೆಗೆ ಹೊಸ ಭಾಷ್ಯ ಬರೆಯುತ್ತದೆ. ತಂತ್ರಜ್ಞಾನದಿಂದ ದೂರವಿರುವ ಜೀವನ, ಆಯುರ್ವೇದ ಮಸಾಜ್, ಕಲೆ ಚಿಕಿತ್ಸಾ ಚಟುವಟಿಕೆಗಳ ಮೂಲಕ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಲು ಈ ರೆಸಾರ್ಟ್‌ ಸಹಕಾರಿಯಾಗಿದೆ. ಇಲ್ಲಿ ಪ್ರವಾಸಿಗರು ಕೇವಲ ವಿಶ್ರಾಂತಿಗಷ್ಟೇ ಅಲ್ಲ, ಸಂಪೂರ್ಣ ಮರುಹುಟ್ಟಿನ ಅನುಭವಕ್ಕೂ ಸಾಕ್ಷಿಯಾಗುತ್ತಾರೆ.

vana

ವನ, ಡೆಹ್ರಾಡೂನ್:

ಅರಣ್ಯ ಸ್ಪೂರ್ತಿಯ ವಾಸ್ತುಶಿಲ್ಪದ ಮಧ್ಯೆ ಇರುವ ವನ, ಮನಸ್ಸಿಗೆ ಶಾಂತಿ ತುಂಬುವ ತಾಣ. ಇಲ್ಲಿ ದೊರೆಯುವ ಟಿಬೇಟಿಯನ್ ಶಬ್ದ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆಗಳು ನಿದ್ರಾಹೀನತೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈದ್ಯರ ವೈಯಕ್ತಿಕ ಸಲಹೆಗಳಿಂದ ಪ್ರತಿ ಅತಿಥಿಗೆ ಅವಶ್ಯವಿರುವ ನಿದ್ರಾ ಕಾರ್ಯಕ್ರಮ ರೂಪಿಸಲಾಗುತ್ತದೆ. ಪ್ರಕೃತಿಯ ಹೃದಯದಲ್ಲೇ ನೆಮ್ಮದಿ ನೀಡುವ ಈ ಅನುಭವ ಪ್ರವಾಸಿಗರನ್ನು ಪುನಸ್ಚೇತನಗೊಳಿಸುತ್ತದೆ.

ಸ್ಲೀಪ್‌ ಟೂರಿಸಂ – ಇದು ಖರ್ಚಲ್ಲ, ಹೂಡಿಕೆ

ಸ್ಲೀಪ್‌ ಟೂರಿಸಂ ಎಂಬುದು ಐಷಾರಾಮಿ ಪ್ರವಾಸವಲ್ಲ, ಅದು ದೀರ್ಘಕಾಲಿಕ ಆರೋಗ್ಯ ಹೂಡಿಕೆ. ಭಾರತದ ವೆಲ್‌ನೆಸ್ ಪ್ರವಾಸೋದ್ಯಮ ಮಾರುಕಟ್ಟೆ ಪ್ರತಿ ವರ್ಷ 6.3% ದರದಲ್ಲಿ ಬೆಳೆಯುತ್ತಿದೆ. ಪ್ರಕೃತಿಯ ಮಡಿಲಲ್ಲಿ, ಸಂಪ್ರದಾಯ ಮತ್ತು ವಿಜ್ಞಾನ ಮೇಳೈಸಿದ ಚಿಕಿತ್ಸೆಗಳೊಂದಿಗೆ, ಪ್ರವಾಸಿಗರು ವಿಶ್ರಾಂತಿ, ಚೈತನ್ಯ ಮತ್ತು ಉತ್ತಮ ಆರೋಗ್ಯ ಪಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ.

ಇಂದಿನ ಜಗತ್ತಿನಲ್ಲಿ “ಆರೋಗ್ಯ” ಎಂದರೆ ಕೇವಲ ರೋಗವಿಲ್ಲದಿರುವುದಲ್ಲ—ಮನಸ್ಸಿನ ನೆಮ್ಮದಿ, ದೇಹದ ಶಕ್ತಿ, ಜೀವನದ ಸಮತೋಲನ ಕಾಪಾಡಿಕೊಳ್ಳುವುದೂ ಆರೋಗ್ಯದ ಬಹುಮುಖ್ಯ ಭಾಗ. ಸ್ಲೀಪ್‌ ಟೂರಿಸಂ ಇದೆಲ್ಲವನ್ನೂ ಒಟ್ಟಿಗೆ ನೀಡುತ್ತಿದೆ. ಹೀಗಾಗಿ, ಸ್ಲೀಪ್‌ ಟೂರಿಸಂ ಅನ್ನು ಪ್ರವಾಸೋದ್ಯಮದ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಬಹುದು.